mail-img print-img

ಉಪವಾಸ ಮತ್ತು ಆರೋಗ್ಯ

ಶನಿವಾರ - ಸೆಪ್ಟೆಂಬರ್ -04-2010

‘ಉಪವಾಸವು ಅತ್ಯುತ್ತಮವಾದ ಕರ್ಮ ವಾಗಿದೆ. ಅದಕ್ಕೆ ಸರಿಸಮಾನವಾದುದು ಯಾವುದೂ ಇಲ್ಲ.’ (ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮ್)
‘ಲಂಘನಂ ಪರವೌಷಧಂ’
‘Fasting Can Save your life’

-ಈ ಅಮೋಘ ಘೋಷಣೆಗಳೆಲ್ಲವೂ ಉಪವಾಸದ ಮಹತ್ವ ಏನೆಂದು ತಿಳಿದು ಕೊಳ್ಳುವವರಲ್ಲಿ ಜಿಜ್ಞಾಸೆ ಹುಟ್ಟುತ್ತದೆ. ಉಪವಾಸದ ನೈಜ ಮಹತ್ವ ತಿಳಿದಿರು ತ್ತಿದ್ದರೆ ನಾವು ಇಂದು ಅನಾರೋಗ್ಯದ ಹಲವು ಸಮಸ್ಯೆಗಳು ಮತ್ತು ಅದರ ದುಷ್ಪರಿ ಣಾಮಗಳನ್ನು ತೀರಾ ಕಷ್ಟಕರವಾಗಿ ಅನುಭ ವಿಸುತ್ತಿರಲಿಲ್ಲ.

ಇಂದು ಮಿತಿಮೀರಿದ ಇಂದ್ರಿಯ ಸುಖ ಭೋಗಗಳಿಗೆ ಬಲಿ ಬೀಳುತ್ತಿರುವ ನಾವು ನಾಲಗೆಯ ಚಪಲತೆ ಹಾಗೂ ಮನಸ್ಸಿನ ಆಸೆ ಆಮಿಷಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಸೋತಿರುವುದ ರಿಂದ ಕಾಯಿಲೆಗಳು ನಮ್ಮನ್ನು ನಿಯಂತ್ರಿ ಸುತ್ತಾ ಇವೆ. ಕಾಯಿಲೆ ಬಂದರೆ ಪರಿಹಾರ ಕ್ಕಾಗಿ ಅನೇಕ ವಿಧದ ಆರೋಗ್ಯ ಜೀವವಿಮೆ (Insurances)  ಗಳನ್ನು ಮಾಡಿ ಕೊಂಡು ಆಸ್ಪತ್ರೆಗಳಿಗೆ ದಾಖಲಾಗಲು ಸಿದ್ಧರಾಗಿ ಕುಳಿತಿ ದ್ದೇವೆ. ನಾವು ಎಷ್ಟು ಮೂರ್ಖರು!

ಪುಣ್ಯಗಳ ಪ್ರವಾಹವನ್ನೇ ತರುತ್ತಿರುವ ‘ರಮಝಾನ್’ತಿಂಗಳು ಆರೋಗ್ಯದ ದಿಗಂತ ವನ್ನೇ ಹೊತ್ತು ತರುತ್ತದೆ ಎಂದರೂ ತಪ್ಪಾಗದು.

ಆರೋಗ್ಯವನ್ನು ಕಾಪಾಡಿಕೊಂಡು ಸಂತಸದ ಜೀವನ ನಡೆಸಿ ಪರರ ಕಷ್ಟಕ್ಕೆ ನೆರವಾಗಿ ಇಹ ಲೋಕದ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸುವ ಮೂಲ ಸಂದೇಶವನ್ನು ಸಾರುವ ಉಪವಾಸವನ್ನು ನಾವು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಉಪವಾಸ ಎಂದರೆ ದೇವರ ಸಾನಿಧ್ಯದಲ್ಲಿ ಇರುವಿಕೆ ಎಂದರ್ಥ.

ಇಲ್ಲಿ ದೇವರ ಸಾನಿಧ್ಯವೆಂದರೆ ದೇವರ ನಿರ್ದೇಶನ ಗಳನ್ನು ನಾವು ಸಂಪೂರ್ಣ ಪಾಲಿಸುವುದೇ ಆಗಿದೆ. ಇದು ಒಳಿತಿನ ನೈಜ ಕರೆಯಾಗಿದೆ. ಆತ್ಮ ಸಂಸ್ಕಾರಕ್ಕೆ ನಾಂದಿಯಾಗಿದೆ. ಸಂಸ್ಕರಿ ಸಲ್ಪಟ್ಟ ಜೀವನ ಪರರನ್ನೂ ಆಕರ್ಷಿಸಿ ಅವರ ಜೀವನಕ್ಕೂ ಒಳಿತಿನ ಸ್ಪರ್ಶವನ್ನು ನೀಡುತ್ತದೆ.

ಆರೋಗ್ಯಕ್ಕೂ ಉಪವಾಸವಕ್ಕೂ ಏನು ಸಂಬಂಧ? ಉಪವಾಸದಿಂದ ಆರೋಗ್ಯ ಹೇಗೆ ವೃದ್ಧಿಯಾಗುತ್ತದೆ? ಇಂದಿನ ವೈದ್ಯರು ಉಪ ವಾಸ ಮಾಡಬೇಡಿ ಎನ್ನುತ್ತಾರಲ್ಲ! ಇತ್ಯಾದಿ ದ್ವಂದ್ವಗಳು ನಮ್ಮ ಮನಸ್ಸಿನಲ್ಲಿ ಸುಳಿಯುವುದು ಸಾಮಾನ್ಯ. ಹಲವಾರು ಕಾಯಿಲೆಗಳಿಗೆ ಉಪ ವಾಸ ಒಂದು ದಿವ್ಯ ಔಷಧಿಯಾಗಿದೆ. ಎಲ್ಲಾ ಔಷಧಿಗಳು, ಶಸ್ತ್ರ ಚಿಕಿತ್ಸೆ, ಹೊಸ ಹೊಸ ಆವಿಷ್ಕಾರಗಳು ಈ ಉಪವಾಸ ಚಿಕಿತ್ಸೆಯ ಎದುರು ವಿಸ್ಮಯಕ್ಕೊಳಗಾಗಿದೆ.

ಉಪವಾಸ ಚಿಕಿತ್ಸೆ ಅನ್ನುವುದು ತೀರಾ ಇತ್ತೀಚಿನ ವೈದ್ಯ ಕೀಯ ಬೆಳವಣಿಗೆಯಾಗಿದೆ. ಈ ಚಿಕಿತ್ಸಾ ಪದ್ಧತಿಯಲ್ಲಿ ಅನೇಕ ತಜ್ಞ ಪರಿಣಿತರು ಇಂದು ಚಿಕಿತ್ಸಾ ನೈಪುಣ್ಯತೆಯನ್ನು ಹೊಂದಿ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಇದರಿಂದ ನಮಗೆ ತಿಳಿಯುವು ದೇನೆಂದರೆ ಈ ‘ಉಪವಾಸ ಎನ್ನುವುದು ಧಾರ್ಮಿಕ- ಆರಾಧನಾ ಪದ್ಧತಿ ಮಾತ್ರವಲ್ಲ ವೈಜ್ಞಾನಿಕ ಚಿಕಿತ್ಸಾ ಪದ್ಧತಿಯೂ ಆಗಿದೆ’.

ಉಪವಾಸದಿಂದ ನಮ್ಮ ಮಿದುಳಿನ ಜೀವ ಕೋಶಗಳು ಅತೀವ ಚೈತನ್ಯವನ್ನೂ ಪಡೆಯು ತ್ತವೆ. ಬುದ್ಧಿಶಕ್ತಿ ಹೆಚ್ಚಾಗುತ್ತದೆ. ನೆನಪಿನ ಶಕ್ತಿ ಮತ್ತು ಚಿಂತನಾ ಶಕ್ತಿ ವೃದ್ಧಿಸುತ್ತದೆ. ಹಾಗೂ ಮಿದುಳಿನ ಜೀವಕೋಶಗಳ ನಶಿಸುವಿಕೆ ಅಥವಾ ದುರ್ಬಲಗೊಳ್ಳುವಿಕೆಯ ಸಂದರ್ಭದಲ್ಲಿ ಪ್ರತಿಬಂಧಕವನ್ನೂ ಹೊಂದಿ ಜೀವಕೋಶಗಳ ಆರೋಗ್ಯ ಕ್ಷಮತೆ ಹೆಚ್ಚಾಗುವುದು. ಆದ್ದರಿಂದ ಕ್ರಮಬದ್ಧವಾದ ಉಪವಾಸವು ಇಂದಿನ ಯುಗದ ಮಿದುಳಿಗೆ ಸಂಬಂಧಪಟ್ಟ ಮಾದಕ ಕಾಯಿಲೆಗಳಾದ ಪಾರ್ಕಿನ್ಸ್ ಕಾಯಿಲೆ, ಅಲ್ಜಿಮರ್ಸ್‌ ಕಾಯಿಲೆ, ಮಿದುಳಿನ ರಕ್ತಸ್ರಾವ, ಮೈಗ್ರೇನ್, ಮಿದುಳಿನ ಕ್ಯಾನ್ಸರ್, ಪಕ್ಷಪಾತ, ನಿರ್ನಾಳ ಗ್ರಂಥಿಗಳ ಹಿಡಿತ ತಪ್ಪಿ ಉಂಟಾ ಗುವ ಅನೇಕ ದುಷ್ಪರಿಣಾಮಗಳು ತೀವ್ರವಾದ ಮನಸ್ಸಿನ ವಿಕಾರ ಮತ್ತು ಉದ್ವೇಗ ಇತ್ಯಾದಿ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ.

ಇಂದಿನ ಅತಿಯಾದ ಮಾನಸಿಕ ಒತ್ತಡ, ಮೊಬೈಲ್ ಫೋನ್‌ಗಳ ಅತಿಯಾದ ಉಪಯೋಗ, ಅತಿಯಾದ ರಾಸಾಯನಿಕ ಅಹಾರ ಪದಾರ್ಥ, ಮನಸಿನ ದುರಾಸೆ, ದ್ವೇಷ, ಅಸೂಯೆ ಎಲ್ಲವೂ ನಮ್ಮ ಮಿದುಳಿನ ಜೀವ ಕೋಶಗಳನ್ನೂ ಅತಿ ಬೇಗನೇ ಕ್ಷಯಿಸುವಂತೆ ಮಾಡಿ ಮಿದುಳಿನ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಇಂತಹ ಸಮಸ್ಯೆಗಳಿಗೆ ಉಪವಾಸ ಸೂಕ್ತ ಪರಿಹಾರವಾಗಿದೆ. ಪವಿತ್ರ ರಮಝಾನ್‌ನ ಜೀವನ ಕ್ರಮದ ಪಾಲನೆಯಿಂದ ಉತ್ತಮವಾದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಲಭ್ಯವಾಗುವು ದರಲ್ಲಿ ಯಾವುದೇ ಸಂಶಯವಿಲ್ಲ.

ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಭಾರತೀಯರಾದ ನಾವು ಇಂದು ಪ್ರಪಂಚದಲ್ಲಿ ಅತೀ ಮುಂದಿದ್ದೇವೆ. ಉಪವಾಸವು ಚಿಕಿತ್ಸೆಯ ರೂಪದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಉತ್ತಮವಾದ ಪರಿಣಾಮವನ್ನೂ ಬೀರುತ್ತದೆ. ಅಧಿಕ ರಕ್ತದ ಒತ್ತಡ ಹಾಗೂ ಎಲ್ಲಾ ಹೃದಯ ಸಂಬಂಧಿ ಕಾಯಿಲೆಗಳಿಗೆ ಮೂಲವಾದ ಅಧಿಕವಾದ ಕೊಬ್ಬಿನಂಶಕ್ಕೆ ಉಪವಾಸ ಉತ್ತಮ ಚಿಕಿತ್ಸೆ. ಹಿಂದಿನ ಕಾಲದಲ್ಲಿ ಆಹಾರವಿಲ್ಲದೇ ಜನರು ಸಾಯುತ್ತಿದ್ದರೆ ಈಗ ನಮ್ಮಲ್ಲಿ ಅತಿ ಯಾದ ಆಹಾರ ಸೇವನೆಯ ಕಾರಣದಿಂದ ಕಾಯಿಲೆ ಪೀಡಿತರಾಗಿ ಸಾಯುತ್ತಿದ್ದಾರೆ.

ಇಂದಿನ ದಿನಗಳಲ್ಲಿ ಮೂತ್ರಕೋಶ ಕಾಯಿ ಲೆಗಳು ಹೇರಳವಾಗಿ ಹೆಚ್ಚುತ್ತಾ ಇದೆ. ಇದಕ್ಕೆ ಮುಖ್ಯ ಕಾರಣ ರಾಸಾಯನಿಕ ಅಂಶಗಳು ನಮ್ಮ ಆಹಾರದಲ್ಲಿ ತೀರಾ ಹೆಚ್ಚಾಗಿರುವುದೇ ಆಗಿದೆ. ಮತ್ತು ಮಾನಸಿಕ ಉದ್ವಿಗ್ನತೆಯೂ ಕಾರಣ ವಾಗಿದೆ. ಉಪವಾಸ ವೃತ ಮತ್ತು ಪವಿತ್ರ ರಮಝಾನ್‌ನ ಸಂದೇಶದ ಪ್ರಕಾರ ನಮ್ಮ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಜೀವನವನ್ನು ನಡೆಸಿದಲ್ಲಿ ನಮ್ಮ ಮೂತ್ರಕೋಶದ ಕಾರ್ಯಕ್ಷಮತೆ ಹೆಚ್ಚುತ್ತದೆ ಹಾಗೂ ಇತರ ಮೂತ್ರ ಕೋಶ ಸಂಬಂಧಿ ಕಾಯಿಲೆಗಳಿಂದ ರಕ್ಷಣೆಯನ್ನು ಪಡೆದು ಕೊಳ್ಳಬಹುದು.

ದೇಹದ ರೋಗನಿರೋಧಕ ಶಕ್ತಿ ನಮ್ಮಲ್ಲಿ ಇಂದು ತೀರಾ ಕಡಿಮೆಯಾಗು ತ್ತಿದೆ. ಇದರ ಪರಿಣಾಮವಾಗಿ ಅನೇಕ ಹೊಸ ಹೊಸ ಕಾಯಿಲೆಗಳು, ಹೊಸ ಹೊಸ ವೈರಸ್, ಬ್ಯಾಕ್ಟೀರಿಯಾ, ಪ್ಯಾರ ಸೈಟ್‌ಗಳು ಇಂದು ಧಾಳಿ ಮಾಡುತ್ತಿವೆ. ಇಂದಿನ ಆಹಾರ, ಪರಿಸರ, ನಮ್ಮ ಜೀವನ ಶೈಲಿಯಿಂದಾಗಿ ನಾವು ದುರ್ಬಲವಾಗುತ್ತಾ ಇದ್ದೇವೆ. ವಿಷಕಾರಿ ಅಂಶಗಳನ್ನು ನಾವು ನಿತ್ಯ ಸೇವಿಸುತ್ತಿದ್ದು ನಮ್ಮ ದೇಹದಲ್ಲಿ ಹಲವು ರೀತಿಯ ವಿಷಮಯ ಪದಾರ್ಥಗಳು ಉತ್ಪತ್ತಿಯಾಗುತ್ತದೆ.

ಉಪವಾಸ ಚಿಕಿತ್ಸೆಯು ನಮ್ಮ ದೇಹದ ನೈಸರ್ಗಿಕ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಅನೇಕ ಸಂಶೋಧನೆಗಳು ಇದನ್ನು ಸಾಬೀ ತುಗೊಳಿಸಿದೆ. ದೇಹದಲ್ಲಿ ಉತ್ಪತ್ತಿಯಾಗುವ ವಿಷಮಯ ಅಂಶಗಳನ್ನು ಉಪವಾಸದಿಂದ ಸುಲಭವಾಗಿ ವಿಸರ್ಜನಾಂಗಗಳು ಹೊರಕ್ಕೆ ವಿಸರ್ಜಿಸುತ್ತವೆ. ಜೀವಕೋಶ ಗಳಿಗೆ ಚೈತನ್ಯ ದೊರಕಿಸುತ್ತವೆೆ. ಕ್ಯಾನ್ಸರ್ ಕಾಯಿಲೆ ಇಂದು ನಮ್ಮ ದೇಶದಲ್ಲಿ ಅತಿ ಯಾಗಿ ಕಾಣಿಸಿಕೊಳ್ಳುತ್ತಲಿದೆ.

ಎಲ್ಲಾ ವಿಧದ ಕ್ಯಾನ್ಸರ್ ಸಮಸ್ಯೆಯ ಕೊನೆ ಬಹಳ ಭಯಾನಕ ಯಾತನಾಮಯವಾಗಿರುತ್ತದೆ. ಉಪವಾಸ ಮಾಡುವುದರಿಂದ ಕ್ಯಾನ್ಸರ್ ಜೀವಕೋಶಗಳಲ್ಲಿ ಪರಿಣಾಮಕಾರಿಯಾ ದ ಬದಲಾವಣೆಯು ಕಂಡು ಬರುವುದನ್ನು ಅನೇಕ ಸಂಶೋಧಕರು ದೃಢ ಪಡಿಸಿರುತ್ತಾರೆ.

ಯಕೃತ್ ಅಥವಾ ಲಿವರ್‌ನ ಸಮಸ್ಯೆ ಇಂದು ತೀರಾ ಸಾಮಾನ್ಯವಾಗಿದೆ. ಯಕೃ ತ್‌ನ ಕಾರ್ಯದಕ್ಷತೆ ಇಂದಿನ ಅನೇಕ ಕಾಯಿಲೆಗಳಿಗೆ ಕಾರಣವಾಗಿದೆ. ಉಪವಾ ಸದಿಂದ ಯಕೃತ್ ಬಲಗೊಳ್ಳುತ್ತದೆ. ಯಕೃತ್‌ನ ಎಲ್ಲಾ ಮುಖ್ಯ ವಾದ ಸ್ರಾವ ಉತ್ತಮ ಪ್ರಮಾಣದಲ್ಲಿ ಸ್ರವಿಸಿ ನಮ್ಮ ಜೀರ್ಣ ಕ್ರಿಯೆ ಹಾಗೂ ರಕ್ತಶೋಧನ ಕ್ರಿಯೆಯು ಚೆನ್ನಾಗಿ ನಡೆಯುತ್ತದೆ. ಉಪವಾಸದ ಬೆಳಗ್ಗೆಯು ನಮ್ಮ ಯಕೃತ್‌ಗೆ ಅತೀ ಉತ್ಕೃಷ್ಟ ಎಂದು ವೈದ್ಯಕೀಯ ವಿಜ್ಞಾನಿಗಳು ಪದೇ ಪದೇ ಸಾರುತ್ತಿದ್ದಾರೆ.

ಉಪವಾಸ ಮತ್ತು ಪವಿತ್ರ ರಮಝಾನ್‌ನ ಜೀವನಶೈಲಿಯು ವ್ಯಕ್ತಿಯಲ್ಲಿ ಸರ್ವತೋ ಮುಖವಾದ ಆರೋಗ್ಯ ಭಾಗ್ಯವನ್ನು ಹೊಂದಲು ಬಹಳ ಸಹಕಾರಿ. ಅಲ್ಲದೇ ದೈಹಿಕ ಮಾನಸಿಕ, ಆಧ್ಯಾತ್ಮಿಕ, ಸಾಮಾಜಿಕ, ಭಾವ ನಾತ್ಮಕ ಮತ್ತು ಬೌದ್ಧಿಕ ಸ್ತರಗಳ ಸಮ ತೋಲನವನ್ನು ಹೊಂದಿ ವ್ಯಕ್ತಿಯು ಶಕ್ತಿಯ ಕೇಂದ್ರವಾಗಬಲ್ಲ ಸಾಧನೆಯನ್ನೂ ಮಾಡ ಬಹುದು.

ಆರೋಗ್ಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆ; ‘ಆರೋಗ್ಯವೆಂದರೆ ಕೇವಲ ಕಾಯಿಲೆ ಇಲ್ಲದೇ ಇರುವುದಲ್ಲ, ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಸ್ತರಗಳ ಉನ್ನತ ಹೊಂದಾಣಿಕೆಯೇ ಆರೋಗ್ಯ’ ಆದ್ದರಿಂದ ಪವಿತ್ರ ರಮಝಾನ್‌ನ ಜೀವನ ಕ್ರಮ ನಾವು ಸಂಪೂರ್ಣ ಆರೋಗ್ಯವನ್ನು ಹೊಂದಲು ಮಾರ್ಗದರ್ಶಿಯಾಗಿದೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್