mail-img print-img

ಕುಷ್ಠ ರೋಗ ನಿವಾರಣೆಯ ಅಗತ್ಯ

- ಜಿ. ಯು. ನಾಯಕ್
ಶನಿವಾರ - ಫೆಬ್ರವರಿ -04-2012

ಮಾ­ನವನನ್ನು ಸಾವಿರಾರು ವರ್ಷಗಳಿಂದ ದೈಹಿಕವಾಗಿ,ಮಾನಸಿಕವಾಗಿ ಹಿಂಸಿಸುತ್ತಲೇ ಬಂದ ಕಾಯಿಲೆಗಳಲ್ಲಿ ಕುಷ್ಠರೋಗವೂ ಒಂದಾಗಿದೆ.ವಿಶ್ವದ ಎಲ್ಲ ರಾಷ್ಟ್ರಗಳು ಈ ರೋಗದ ನಿರ್ಮೂಲನೆಗೆ ಬಹಳಷ್ಟು ಹೋರಾಟ ಮಾಡುತ್ತಲಿದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕೂಡ ಇದರ ನಿರ್ಮೂಲನದ ದೃಷ್ಟಿಯಿಂದ 1991ರ ನವೆಂಬರ್‌ನಲ್ಲಿ ಮಹತ್ವದ ನಿರ್ಣಯವನ್ನು ಕೈಗೊಂಡು ವಿಶ್ವದ ಎಲ್ಲೆಡೆ ಈ ರೋಗದ ನಿವಾರಣೆ ಆಂದೋಲನವನ್ನು ಹಾಕಿಕೊಂಡಿದೆ.ಕುಷ್ಠ ರೋಗ ಸಮಾಜದಲ್ಲಿ ಕಾಣಿಸಿಕೊಂಡಂದಿನಿಂದ ಇದನ್ನು ಗುಣಪಡಿಸುವ ಸಲುವಾಗಿ, ಸರಿಯಾದ ಔಷಯನ್ನು ಕಂಡು ಹಿಡಿಯಲು ಪ್ರಯತ್ನ ನಡೆದಿದೆಯಾದರೂ ಪೂರ್ಣ ಪ್ರಯೋಜನ ಆಗದಿದ್ದರೂ, ಇತ್ತೀಚೆಗೆ ಈ ರೋಗದ ಸಂಪೂರ್ಣ ನಿಯಂತ್ರಣಕ್ಕೆ ಬೇರೆ ಬೇರೆ ಔಷಯನ್ನು ಕಂಡು ಹಿಡಿಯುತ್ತಿದ್ದು, ಕುಷ್ಠ ರೋಗಗಳಿಗೆ ಅವರ ಬಾಳ ಬೆಳಕಿನಲ್ಲಿ ನವ ಚೈತನ್ಯ ಮೂಡಿ ಬಂದ ವಿಷಯ ಅತ್ಯಂತ ಸಂತಸಕರವಾದದ್ದು.ಈ ರೋಗದ ಬಗ್ಗೆ ಮೊದಲು ಮಾಹಿತಿ ಲಭಿಸಿದ್ದು ಕ್ರಿ.ಪೂ. 600ರಲ್ಲಿ. ಆ ನಂತರದಲ್ಲಿ ಈ ರೋಗ, ವಿಶ್ವದಾ ದ್ಯಂತ ಅತ್ಯಂತ ಮಿಂಚು ವೇಗದಲ್ಲಿ ಹರಡಿ ಸಾಮಾನ್ಯ ಜನರನ್ನು ತಲ್ಲಣಗೊಳಿಸಿದೆ. ಕುಷ್ಠ ರೋಗಕ್ಕೆ ಪೀಡಿತರಾದ ವರು ತಮ್ಮ ಮನೆ-ಮಠಗಳನ್ನು ಕಳೆದುಕೊಂಡು, ಸಾಮಾಜಿಕ ಜೀವನದಿಂದ ದೂರವಾಗಿ ಅಸ್ಪಶರಂತೆ ಬದುಕುತ್ತಿರುವ ಅತ್ಯಂತ ಹೇಯಕರವಾದ ರೀತಿಯನ್ನು ಕಂಡಾಗ ಯಾರಿಗೂ ದುಃಖವಾಗದೆ ಇರಲಾರದು.

ಆದರೆ ಕುಷ್ಠ ರೋಗದ ನಿವಾರಣೆಗೆ ವಿಶ್ವ ಆರೋಗ್ಯ ಸಂಸ್ಥೆಯವರು ಕೈಗೊಂಡ ಕಾರ್ಯಕ್ರಮ ಅತ್ಯಂತ ಶ್ಲಾಘನೀಯವಾದುದು.ಬಹು ಔಷಗಳ ಯಶಸ್ವಿ ಚಿಕಿತ್ಸೆಯಿಂದಾಗಿ ಕಳೆದ 20 ವರ್ಷಗಳಲ್ಲಿ ಸುಮಾರು 15 ದಶಲಕ್ಷ ರೋಗಿಗಳಿಗಿಂತ ಹೆಚ್ಚಿನವರು ಗುಣಮುಖರಾಗಿ ದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿರುತ್ತದೆ.ಇತ್ತಿತ್ತಲಾಗಿ ಈ ರೋಗಿಗಳ ಸಂಖ್ಯೆ ಗಣನೀಯವಾಗಿ ಕುಗ್ಗಿರುವುದು ಅತ್ಯಂತ ಸಂತಸಕರವಾದ ವಿಚಾರವಾಗಿದೆ.ಆದರೆ ಕುಷ್ಠ ರೋಗದ ಹರಡುವಿಕೆಯು ರೋಗಿಯ ಎಂಜಲು, ಸಿಂಬಳದಿಂದ, ಶ್ಲೇಷ್ಮ ವಸ್ತುಗಳಲ್ಲಿರುವ ಮೈಕೋ ಬ್ಯಾಕ್ಟೀರಿಯಾ, ಲೆಪ್ರಾಬ್ಯಾಸಿಲೆ ಎಂಬ ವೈರಸ್ ನಿಂದ ಹರಡುತ್ತದೆ.

ಒಬ್ಬ ವ್ಯಕ್ತಿಯಲ್ಲಿ ಈ ರೋಗ ಸರಿಯಾಗಿ ಗೊತ್ತಾಗಲು ಒಂದು ವರ್ಷ ಸಾಕು. ಈ ರೋಗವನ್ನು ಆರಂಭಿಕ ಹಂತದಲ್ಲೇ ಸರಿಯಾದ ಚಿಕಿತ್ಸೆ ಮಾಡಿದರೆ ಗುಣಮುಖವಾಗಬಲ್ಲದು ಎಂಬುದು ಅತಿ ಹೆಚ್ಚು ತಜ್ಞರ ಅಭಿಪ್ರಾಯ. ವಿಶ್ವದಲ್ಲಿ ಸುಮಾರು 12 ರಾಷ್ಟ್ರಗಳಲ್ಲಿ ಅತಿ ಹೆಚ್ಚು ಕುಷ್ಠ ರೋಗಿಗಳ ಸಂಖ್ಯೆ ಕಂಡು ಬಂದಿದೆ. ಅವುಗಳಲ್ಲಿ ಭಾರತವೂ ಒಂದಾಗಿದೆ.ಈ ಭಯಂಕರ ರೋಗ ನಿರ್ಮೂಲನೆ ಮಾಡದಿದ್ದರೆ ರೋಗಿಗಳಿಗೆ ಬದುಕೇ ಇಲ್ಲ. ತಮ್ಮ ಬದುಕಿನಿಂದ ವಂಚಿತ ರಾಗುತ್ತಾರೆ. ಹಾಗಾಗಿ ಈ ರೋಗದ ನಿಯಂತ್ರಣಕ್ಕೆ ಎಲ್ಲ ಹಂತಗಳಲ್ಲೂ ಸುಧಾರಿತ ಗುಣಮಟ್ಟದ ಚಿಕಿತ್ಸೆ ದೊರೆಯು ವಂತಾಗಲು ರೋಗಿಗಳಿಗೆ ಸರಿಯಾದ ಆರೈಕೆ ಮಾಡಲು, ಜಾಗತಿಕ ಮೈತ್ರಿ ಕೂಟಕ್ಕೆ ಜಪಾನಿನ ನಿಪ್ಚೂನ್ ಪ್ರತಿಷ್ಠಾನ ಹಾಗೂ ಸಹ ಕಲಾಸ್ಮಾರಕ ಆರೋಗ್ಯ ಪ್ರತಿಷ್ಠಾನ 1975ರಿಂದ ನಿರಂತರವಾಗಿ ವಿಶೇಷ ಸಹಾಯ ನೀಡುತ್ತಿರುವುದು ಅತೀವ ಸಂತಸಕರವಾದುದು.

ಕುಷ್ಠ ರೋಗಿಗಳನ್ನು ಹೊಂದಿರುವ ಭಾರತದಲ್ಲಿ ಕೂಡ ಈ ರೋಗದ ಬಗ್ಗೆ ಸಮಾಜದ ಜನರಲ್ಲಿ ತುಂಬಿರುವ ಅಜ್ಞಾನ, ಮೂಢನಂಬಿಕೆಗಳಿಂದ ಜನರಲ್ಲಿ ಸರಿಯಾದ ಭಾವನೆಗಳನ್ನು ಮೂಡಿಸಲು ಸಾಧ್ಯವಾಗದಿರುವುದು. ಮಾಡಿರುವ ಪ್ರಯತ್ನಕ್ಕೆ ಸರಿಯಾದ ಫಲ ಸಿಗದೇ ಇರುವಂಥದು ಶೋಚನೀಯ. ಈ ರೋಗಿಗಳು ಕಂಡು ಬಂದರೆ ಅವರನ್ನು ಸಮಾಜದಿಂದ ದೂರ ಓಡಿಸುವ, ಅಥವಾ ನಿರಾಶ್ರಿತರ ಶಿಬಿರಗಳಿಗೆ ನಿರ್ದಯವಾಗಿ ಅಟ್ಟುವವರ ಸಂಖ್ಯೆ ಅಕವಾಗಿದೆ. ಆದರೆ ಈ ರೋಗಿಗಳಿಗೆ ಜನರು ಧೈರ್ಯ, ಸ್ಥೆರ್ಯ, ಆತ್ಮವಿಶ್ವಾಸ ಮೂಡಿಸಿದರೆ ಈ ರೋಗ ಹರಡದಂತೆ ಮಾನಸಿಕವಾಗಿ ಸದೃಢವಾಗುವಂತೆ ಮಾಡಬಹುದು. ಹಾಗೆ ಮಾಡಿದರೆ ಕುಷ್ಠ ರೋಗವನ್ನು ಗುಣಪಡಿಸಲು ಸುಲಭ ಸಾಧ್ಯ.


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್