ಬೆಳೆಯುವ ಸಿರಿ ಮೊಳಕೆಯಲ್ಲಿ...
mail-img print-img

ಬೆಳೆಯುವ ಸಿರಿ ಮೊಳಕೆಯಲ್ಲಿ...

ಮಂಗಳವಾರ - ಆಗಸ್ಟ್ -31-2010

ಯಾವುದೇ ಕಲೆಗಳು ಸುಲಭವಾಗಿ ಒಗ್ಗುವುದಿಲ್ಲ. ನಿರಂತರ ಪ್ರಯತ್ನ, ಪರಿಶ್ರಮ ಏಕಾಗ್ರತೆಯೇ ಕಲೆಯನ್ನು ಒಲಿಸಿಕೊಳ್ಳುವುದಕ್ಕೆ ಮಂತ್ರ. ಇದು ಒಂದು ಬಗೆಯ ತಪಸ್ಸು ಎಂದರೆ ತಪ್ಪಾಗಲಾರದು. ವಾದ್ಯ ಸಂಗೀತದಲ್ಲಿ ನಿಪುಣನಾಗುತ್ತಿರುವ ಪುತ್ತೂರಿನ ಸುಮನ್ ಆರ್. ದೇವಾಡಿಗ ಉದಯೋನ್ಮುಖ ಕಲಾವಿದನಾಗಿ ಬೆಳೆಯುತ್ತಿದ್ದಾರೆ. ಸುಮನ್ ಪುತ್ತೂರಿನ ಖ್ಯಾತ ಕೊಳಲು ವಾದಕ ಪಿ.ರಾಜರತ್ನಂ ದೇವಾಡಿಗ ಮತ್ತು ಭಾರತಿ ದಂಪತಿಯ ಪುತ್ರ. ಪಾಶ್ಚಾತ್ಯ ಸಂಗೀತ ವಾದ್ಯವಾದ ಸ್ಯಾಕ್ಸೋಫೋನ್‌ಅನ್ನು ಕರ್ನಾಟಕ ಶಾಸ್ತ್ರೀಯ ಲೋಕಕ್ಕೆ ಯಶಸ್ವಿಯಾಗಿ ಅಳವಡಿಸಿದ ದಿ.ವೆಂಕಟಪ್ಪ ಡೋಗ್ರರ ಮೊಮ್ಮಗ.

ಮನೆಯ ಕಲಾ ವಾತಾವರಣದ ನಡುವೆ ಬೆಳೆದ ಸುಮನ್‌ಗೆ ಚಿಕ್ಕಂದಿನಿಂದಲೇ ಕಲೆಯ ಬಗ್ಗೆ ಹೆಚ್ಚು ಆಸಕ್ತಿ. ತನ್ನ ಏಳನೇ ವಯಸ್ಸಿನಿಂದಲೇ ಪುತ್ತೂರಿನ ಖ್ಯಾತ ತಬಲಾ ವಿದ್ವಾಂಸ ಎನ್.ವಿ.ಮೂರ್ತಿಯವರಲ್ಲಿ ತಬಲಾ ಅಭ್ಯಾಸ ಮಾಡುತ್ತಿರುವ ಸುಮನ್, ಕಾರವಾರದ ತಬಲಾ ವಿದ್ವಾಂಸ ಚಂದ್ರಕಾಂತ್ ಗಡ್‌ಕರ್‌ರವರಿಂದಲೂ ವಿಶೇಷ ತರಬೇತಿ ಪಡೆದಿದ್ದಾನೆ. ಜೊತೆಗೆ ಕಳೆದ ಮೂರು ವರ್ಷಗಳಿಂದ ಆಕಾಶವಾಣಿ ಕಲಾವಿದರಾದ ಘಟಂ ವಿದ್ವಾನ್ ತಿರುಚ್ಚಿ ಕೆ.ಆರ್.ಕುಮಾರ್‌ರವರಲ್ಲಿ ಮೃದಂಗ ಕಲಿಯುತ್ತಿದ್ದಾರೆ.

ಕೇಂದ್ರ ಸರಕಾರದ ಸಿ.ಸಿ.ಆರ್.ಟಿ. ಶಿಷ್ಯವೇತನ ಹಾಗೂ ಕರ್ನಾಟಕ ಸರಕಾರದ ಸಂಗೀತ ನಾಟಕ ಅಕಾಡಮಿಯ ಶಿಷ್ಯವೇತನಕ್ಕೂ ಭಾಜನರಾದ ಹಿರಿಮೆ ಸುಮನ್ ರದ್ದು. ಗಾಂಧರ್ವ ಮಹಾ ವಿದ್ಯಾಲಯ ಮೀರಜ್, ಇದರ ವಿದ್ವತ್ ಮಟ್ಟದ ವಿಶಾರದ ಪರೀಕ್ಷೆಯನ್ನು ತನ್ನ 16 ರ ಕಿರಿಯ ವಯಸ್ಸಿನಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸು ಮಾಡಿರುವ ಈತ ಪ್ರಸ್ತುತ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿ.

ತಾಳವಾದ್ಯದಲ್ಲಿ ಹ್ಯಾಟ್ರಿಕ್ ಸಾಧನೆ

ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹಲವಾರು ವಾದ್ಯ ಸಂಗೀತ ಸ್ಪರ್ಧೆಯಲ್ಲಿ ಬಹುಮಾನ ಪಡೆದಿರುವ ಸುಮನ್ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಂಗೀತ ಸ್ಪರ್ಧೆಯ ತಾಳವಾದ್ಯ ವಿಭಾಗದಲ್ಲಿ ಸತತವಾಗಿ ಮೂರನೇ ಬಾರಿಗೆ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಕಲಿಕೆಯ ಜೊತೆ ಜೊತೆಗೆ ಜಿಲ್ಲಾದ್ಯಂತ ಹಲವಾರು ಶಾಸ್ತ್ರೀಯ ಸಂಗೀತ, ಭಾವಗೀತಾ ಕಾರ್ಯಕ್ರಮಗಳಲ್ಲಿ ತಬಲ ವಾದಕರಾಗಿಯೂ ಸಾಥ್ ನೀಡಿದ್ದಾರೆ.

ಸುಮನ್‌ನ ಎಲ್ಲಾ ಕಲಾಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿರುವ ಇವನ ಹಂಬಲಕ್ಕೆ ನಿರಂತರ ಬೆಂಬಲ ನೀಡುತ್ತಿರುವ ತಂದೆ ಪಿ.ರಾಜರತ್ನಂ ದೇವಾಡಿಗ ದಂಪತಿ, ಮಗಳು ಮೇಘಾಳ ಕಲಾಸಕ್ತಿಗೂ ಪ್ರೇರಣೆ ನೀಡುತ್ತಿದ್ದಾರೆ. ತಬಲಾ ಹಾಗೂ ಮೃದಂಗದಲ್ಲಿ ಉನ್ನತ ಮಟ್ಟದ ಅಭ್ಯಾಸ ಮಾಡಿ ಒಳ್ಳೆಯ ಕಲಾವಿದ ರಾಗುವ ಆಶಯದೊಂದಿಗೆ ಮುನ್ನಡೆಯುತ್ತಿರುವ ಸುಮನ್‌ರ ಮುಂದಿನ ಕಲಾ ಬದುಕು ಇನ್ನಷ್ಟು ಸುಮಧುರವಾಗಿರಲಿ...

ಮೌನೇಶ್ ವಿಶ್ವಕರ್ಮ

 


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್