
ಭಾರತೀಯ ವಿದ್ಯಾಭವನ ಹಾಗೂ ಇನ್‌ಫೋಸಿಸ್ ಪ್ರತಿಷ್ಠಾನದ ಆಶ್ರಯ ದಲ್ಲಿ ಬೆಂಗಳೂರಿನ ಬಸವನ ಗುಡಿಯ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಕಾಸರಗೋಡಿನ ಶ್ರಿಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದವರಿಂದ ಪ್ರದರ್ಶಿಸಲ್ಪಟ್ಟ ಬೊಂಬೆಯಾಟವು ಜನಮೆಚ್ಚುಗೆ ಪಡೆಯಿತು.ರಂಗದಲ್ಲಿ ವಿಜ್ರಂಭಿಸಿದ ಗಡಿನಾಡ ಬೊಂಬೆಗಳನ್ನು ವೀಕ್ಷಿಸಲು ಜನಸಾಗರವೇ ನೆರೆದಿತ್ತು.
ಇನ್‌ಫೋಸಿಸ್‌ನ ಮುಖ್ಯಸ್ಥೆ ಸುಧಾಮೂರ್ತಿಯವರ ಉಪಸ್ಥಿತಿಯಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಭಾರತೀಯ ವಿದ್ಯಾಭವನದ ಸುರೇಶ್, ಇನ್‌ಫೋಸಿಸ್‌ನ ಆಡಳಿತಾಧಿಕಾರಿ ಗಳಾದ ಪೆಮ್ಮಯ್ಯ, ಸಿ.ಎನ್. ಅಶೋಕ್ ಕುಮಾರ್ ಭಾಗವಹಿಸಿದ್ದರು. ಶ್ರಿಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ಹಾಗೂ ಪ್ರಧಾನ ಸೂತ್ರಧಾರಿ ಕೆ.ವಿ. ರಮೇಶ್ ನೇತೃತ್ವದ ತಂಡದಲ್ಲಿ ಅರವಿಂದ್ ಶಾನುಭೋಗ್, ಪ್ರಸನ್ನ ರಾವ್, ಸುದರ್ಶನ.ಕೆ.ವಿ., ಕುಮಾರಸ್ವಾಮಿ, ಆತ್ಮೀಯಕೃಷ್ಣ, ಗೀತಾ ವೇಣುಗೋಪಾಲ್, ಅನಿತಾ ರವಿಕುಮಾರ್ ಬೊಂಬೆಗಳನ್ನು ಕುಣಿಸುವಲ್ಲಿ ವಿಶೇಷ ಸಾಧನೆ ಮೆರೆದರು.
‘ನರಕಾಸುರ ವಧೆ’,‘ಗರುಡ ಗರ್ವಭಂಗ’ ಪ್ರಸಂಗವನ್ನು ಪೂರ್ತಿ ವೀಕ್ಷಿಸಿದ ಸುಧಾಮೂರ್ತಿಯವರು ಅದ್ಭುತ ಕೈ ಚಳಕದಲ್ಲಿ ಬೊಂಬೆ ಕುಣಿಸುವ ರೀತಿಯನ್ನು ಪ್ರಶಂಸಿಸಿದರು. ಕೆ.ವಿ. ರಮೇಶ್ ಪ್ರಾತ್ಯಕ್ಷಿಕೆ ನೀಡಿದರು. ಭಾರತೀಯ ಕಲೆಗಳಲ್ಲೇ ವಿಶಿಷ್ಟವಾಗಿರುವ ಈ ಕಲೆಯ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದ ಸುಧಾಮೂರ್ತಿಯವರನ್ನು ಶ್ರಿಗೋಪಾಲ ಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಪರವಾಗಿ ಗೀತಾ ವೇಣುಗೋಪಾಲ್ ಸನ್ಮಾನಿಸಿದರು.
ಪ್ರಾಗ್‌ನಲ್ಲಿ ಜರಗಿದ ಜಾಗತಿಕ ಬೊಂಬೆಯಾಟ ಉತ್ಸವದಲ್ಲಿ ಭಾಗವಹಿಸಿ ಸ್ವದೇಶಕ್ಕಾಗಮಿಸಿದ ಬಳಿಕ ಕೆ.ವಿ.ರಮೇಶ್ ಮತ್ತು ತಂಡ ಮೊದಲ ಬಾರಿಗೆ ನೀಡಿದ ಪ್ರದರ್ಶನವಿದಾಗಿದ್ದು,ಸರ್ವರಿಂದಲೂ ಮುಕ್ತ ಕಂಠದಿಂದ ಪ್ರಶಂಸಿಸಲ್ಪಟ್ಟಿತು.
ಪರಂಪರಾಗತವಾಗಿ ಬಂದ ಬೊಂಬೆ ಯಾಟ ಕಲಾ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆ.ವಿ.ರಮೇಶ್ ನೇತೃತ್ವದ ತಂಡ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಯಕ್ಷಗಾನಾಚಾರ್ಯ ಪಾರ್ತಿಸುಬ್ಬನ ವಂಶಜರಾದ ಇವರಿಗೆ ಸಹಜವಾಗಿಯೇ ಈ ಕಲೆ ಸಿದ್ಧಿಸಿದ್ದು, ಕಳೆದ ಮೂವತ್ತು ವರ್ಷಗಳಿಂದ ದೇಶ-ವಿದೇಶಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...