ಭಿನ್ನಭಾಷೆಯ ‘ಗಡಿ’ಯಲ್ಲಿ ನಾಡು-ನುಡಿಯ ಕಂಪು‘‘ಗಡಿನಾಡ ಉತ್ಸವ-2011’’
mail-img print-img

ಭಿನ್ನಭಾಷೆಯ ‘ಗಡಿ’ಯಲ್ಲಿ ನಾಡು-ನುಡಿಯ ಕಂಪು‘‘ಗಡಿನಾಡ ಉತ್ಸವ-2011’’

- -ನಾಗರಾಜ ಹಬ್ಬು
ಮಂಗಳವಾರ - ಜನವರಿ -24-2012

‘ಗಡಿನಾಡು ಇರಲಿ, ಕಡಲ ತಡಿ ಇರಲಿ, ಕನ್ನಡ ನುಡಿ ತೇರು ಸಾಗುತಿರಲಿ ಮುಂದೆ, ಬನವಿರಲಿ, ಬಾನಂಗಳವಿರಲಿ, ಎಲ್ಲೆಡೆ ಕನ್ನಡ ಬಾವುಟ ರಾರಾಜಿಸುತ್ತಿರಲಿ’ ಎನ್ನುವಂತೆ ನಾಡು-ನುಡಿ-ಸಂಸ್ಕೃತಿ-ಗಡಿ ಅಭಿವೃದ್ಧಿಯ ಆಶಯ ಹೊತ್ತು ಆರ್ಥಿಕ, ಸಾಮಾಜಿ, ಶೈಕ್ಷಣಿಕ, ಮೂಲಭೂತ ಸೌಕರ್ಯದಲ್ಲಿ ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲೂಕೆಂಬ ಮೇಲ್ಪಂಕ್ತಿಯಲ್ಲಿರುವ ಜೋಯಿಡಾ ತಾಲೂಕಿನ ‘ಕ್ಯಾಸಲ್‌ರಾಕ್’ನಲ್ಲಿ ನಡೆದ ‘ಗಡಿನಾಡ ಉತ್ಸವ-2011’ ಗಡಿಭಾಗದ ಜನತೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅದ್ದೂರಿಯಾಗಿ ನಡೆಯಿತು.ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ನವೆಂಬರ್ 26 ಮತ್ತು 27 ಎರಡು ದಿನಗಳ ಕಾಲ ನಡೆದ ಗಡಿ ಉತ್ಸವ ಜನಮಾನಸದಲ್ಲಿ ಸದಾ ನೆನಪಿನಲ್ಲಿರುವ ಘಟನೆಯಾಗಿ ದಾಖಲಾಯಿತು.ಉತ್ಸವ ಎರಡು ದಿನಗಳ ಕಾಲ ನಡೆದರೂ ಅದರ ನೆನಪು ವರ್ಷಂಪ್ರತಿ ಉತ್ಸವದ ಯಶಸ್ಸಿಗೆ ನಾಂದಿಯಾಯಿತು.

ತನ್ನ ಒಡಲಲ್ಲಿರುವ ಪ್ರದೇಶಗಳು ಮುಳುಗಡೆಯಾಗಿ ಸಾಲು ಸಾಲು ಅಣೆಕಟ್ಟುಗಳನ್ನು ಕಟ್ಟಿಸಿಕೊಳ್ಳುವ ಮೂಲಕ ಇಡೀ ರಾಜ್ಯಕ್ಕೆ ವಿದ್ಯುತ್ತನ್ನು ನೀಡಿದ ಹೆಮ್ಮೆಯ ಕಾಳಿ ನದಿಯ ತಾಣವಾದ ‘ಜೋಯಿಡಾ’(ಮುಳುಗಡೆ ಮುಂಚೆ ಸುಪಾ) ಗಡಿಭಾಗದಲ್ಲಿ ನಡೆದ ‘ಗಡಿ ಉತ್ಸವ’ ನಿರ್ದಿಷ್ಟ ಉದ್ದೇಶವನ್ನು ಸಾಧಿಸುವಲ್ಲಿ ಯಶಕಂಡಿದೆ ಎಂದರೆ ತಪ್ಪಾಗಲಾರದು. ‘ಕ್ಯಾಸಲ್‌ರಾಕ್’ ಎಂದು ಹೆಸರು ಕೇಳಿದರೆ ಮೈಜುಮ್ಮೆನಿಸುತ್ತದೆ. ಆಗಸವನ್ನು ಚುಂಬಿಸುವ ಪರ್ವತಗಳ ಸಾಲು, ದಟ್ಟಾರಣ್ಯ, ಮಳೆಗಾಲ ಬಂದರಂತೂ ರಾಜ್ಯದ ಚಿರಾಪುಂಜಿ ಎಂದೇ ಕರೆದರೂ ತಪ್ಪಾಗಲಾರದು.

ಚಳಿಗಾಲದಲ್ಲಿಯೂ ಕೂಡ ಅಷ್ಟೇ, ಮೈಕೊರೆವ ಚಳಿ, ಸೌಲಭ್ಯದ ದೃಷ್ಟಿಯಿಂದ ಗ್ರಾಮಕ್ಕೆ ತಲುಪಬೇಕೆಂದರೆ ದಿನಕ್ಕೊಂದು ಬಸ್ಸು ಇಲ್ಲವಾದರೆ ಬರೋಬರಿ ಹನ್ನೆರಡು ಕಿ.ಮೀ. ಪಾದಯಾತ್ರೆ, ಕುಣಬಿ ಸಮುದಾಯದವರೇ ಹೆಚ್ಚಿರುವ ಈ ಭಾಗದಲ್ಲಿ ಸಾಂಸ್ಕೃತಿಕವಾಗಿ ತಮ್ಮದೇ ಆದ ವಿಶಿಷ್ಟತೆಯನ್ನು ಹೊಂದಿದ್ದರೂ, ಭಾಷೆಯ ದೃಷ್ಟಿಯಿಂದ ನೋಡಿದರೆ ಬೆಳಗಾವಿಗೆ ಹೊಂದಿಕೊಂಡಂತೆ ಒಂದೆಡೆ ಮರಾಠಿ, ಇನ್ನೊಂದೆಡೆ ವ್ಯವಾಹಾರಿಕವಾಗಿ, ಹಾಗೂ ಉದ್ಯೋಗದ ದೃಷ್ಟಿಯಿಂದ ಸದಾ ಅವಲಂಬನೆಯಲ್ಲಿರುವ ಗೋವಾ ರಾಜ್ಯ ಮಗ್ಗುಲಲ್ಲಿರುವುದರಿಂದ ಹಿಂದಿ ಹಾಗೂ ಕೊಂಕಣಿ ಭಾಷೆಯ ಪ್ರಾಬಲ್ಯದ ಮಧ್ಯೆ ಅಸ್ಪಷ್ಟ ಕನ್ನಡವನ್ನು ಕೇಳುವ ಈ ತಾಣದಲ್ಲಿ ಎರಡು ದಿನಗಳ ಉತ್ಸವ ಕನ್ನಡದ ಕಂಪನ್ನು ಬೀರುವಲ್ಲಿ ಯಶಸ್ವಿಯಾಯಿತು.

‘ಭಾಷೆ ಭಿನ್ನವಾದರೂ ಭಾವ ಒಂದೆ’: ಎರಡು ದಿನಗಳ ಉತ್ಸವವನ್ನು ಹಿರಿಯ ಇತಿಹಾಸ ಸಂಶೋಧಕ ಡಾ. ಎಂ. ಎಂ.ಕಲಬುರ್ಗಿ ಉದ್ಘಾಟಿಸಿದರು. ಭಾಷೆ ಎನ್ನುವುದು ಬೆಳೆಯೂ ಹೌದು ಬೇಲಿಯೂ ಹೌದು. ಹಾಗಾಗಿ ಗಡಿ ಭಾಗದಲ್ಲಿ ಭಾಷೆ ಮತ್ತು ಸಂಸ್ಕೃತಿ ಸುಭದ್ರಗೊಳ್ಳಬೇಕಾದ ಅಗತ್ಯತೆ ಇದೆ. ‘ಇಂದು ಮರಾಠಿಗರು ಹೆಮ್ಮಪಟ್ಟುಕೊಳ್ಳುವಂತಹ ಶಿವಾಜಿ ಮಹಾರಾಜರ ಮನೆತನವನ್ನು ಹುಡುಕಿದರೆ ಮೂಲ ಕನ್ನಡನಾಡು, ಅವರ ಮನೆತನದ ಹೆಸರೆಲ್ಲವೂ ಕನ್ನಡದ್ದು ಎನ್ನುವುದು ತಿಳಿದುಕೊಂಡರೆ ಹೆಮ್ಮೆ ಎನಿಸುತ್ತದೆ. ದಕ್ಷಿಣ ಮಹಾರಾಷ್ಟ್ರ ಒಂದು ಕಾಲಕ್ಕೆ ಕರ್ನಾಟಕಕ್ಕೆ ಸೇರಿತ್ತು. 13ನೆ ಶತಮಾನದಲ್ಲಿ ಮಹಾರಾಷ್ಟ್ರವನ್ನು ಆಳಿದವರು ಕರ್ನಾಟಕದ ರಾಜರು. ಇದು ಶಾಸನವೇ ಹೇಳುವಂತಹ ಸತ್ಯ. ನಮ್ಮಲ್ಲಿ 25 ಸಾವಿರ ಶಾಸನ ಸಿಕ್ಕರೆ ಅಲ್ಲಿ ಒಂದು ಸಾವಿರ ಶಾಸನ ಮಾತ್ರ ದೊರೆತಿದೆ. ಇದರಿಂದ ಮಹಾರಾಷ್ಟ್ರ ಎನ್ನುವುದು ಕನ್ನಡಿಗರ ಭಾಗವಾಗಿತ್ತು. ಮರಾಠಿಗರು ಇಂದು ಕನ್ನಡ ನಾಡಲ್ಲಿ ಸಂತೃಪ್ತರಾಗಿದ್ದಾರೆ. ಹಾಗಾಗಿ ಭಾಷೆ ಭಿನ್ನವಾದರೂ ಭಾವ ಒಂದೇ’ ಎಂದು ಕಲಬುರ್ಗಿ ಅಭಿಪ್ರಾಯಿಸಿದರು.

ಜೋಯಿಡಾ ಕ್ಷೇತ್ರದ ಶಾಸಕ ಸುನೀಲ್ ಹೆಗಡೆ ಗಡಿ ಭಾಗದ ಮೂಲಭೂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಅಭಿವೃದ್ಧಿ ದೃಷ್ಟಿಯಿಂದ ಗಡಿಭಾಗಕ್ಕೆ ವಿಶೇಷ ಗಮನ ಹರಿಸುವಂತೆ ಮನವಿ ಮಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ವೈಚಾರಿಕ ನೆಲೆಗಟ್ಟಿನಲ್ಲಿ ಅಭಿವೃದ್ಧಿಯ ಕುರಿತು ಚಿಂತನೆಗಳು ನಡೆದರೆ ಮಾತ್ರ ಗಡಿಭಾಗದಲ್ಲಿ ಅಭಿವೃದ್ಧಿಯ ಆಶಾಕಿರಣ ಮೂಡಲು ಸಾಧ್ಯ ಎಂದರು. ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ ರಾಜ್ಯದ ಗಡಿಯ 52 ಪ್ರದೇಶಗಳ ಅಭಿವೃದ್ಧಿಗಾಗಿ ಹತ್ತುಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ತಾವು 10 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರಕಾರದ ಮುಂದೆ ಇಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಸರಕಾರ ಬಿಡುಗಡೆ ಮಾಡುವ ಭರವಸೆಯನ್ನು ಹೊಂದಿದ್ದೇನೆ.ಗಡಿಭಾಗದ ಅಭಿವೃದ್ಧಿಗೆ ಆಯಾ ಭಾಗದ ಸ್ಥಿತಿಗತಿಯನ್ನು ನೋಡಿ ಯೋಜನೆಯನ್ನು ರೂಪಿಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಸಂಸ್ಕೃತಿ

ಬಿಂಬಿಸಿದ ಶೋಭಾಯಾತ್ರೆ:ಗಡಿ ಉತ್ಸವದ ಅಂಗವಾಗಿ ನಡೆದ ಶೋಭಾಯಾತ್ರೆ ಬುಡಕಟ್ಟು ಸಮುದಾಯದ ಜಾನಪದ ಸಂಸ್ಕೃತಿಯನ್ನು ಬಿಂಬಿಸುವಂತಿತ್ತು. ಮುಂಭಾಗದಲ್ಲಿ ಕನ್ನಡಾಂಬೆಯ ಭಾವಚಿತ್ರವನ್ನೊಳಗೊಂಡ ಭವ್ಯತೇರು. ಅದರ ಪೂರ್ಣಕುಂಬ ಹೊತ್ತ ಮಹಿಳೆಯರ ಸಾಲು, ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಸ್ಥಳೀಯ ಕುಣಬಿಗಳ ಕಲಾತಂಡ, ಸಿದ್ದಿಗಳ ಡಮಾಮಿ ನೃತ್ಯ, ಗೌಳಿಗರ ಗೌಳಿ ಕುಣಿತ, ಕುಂದಗೋಳದ ವೀರಗಾಸೆ, ಸುಗ್ಗಿ ಕುಣಿತ, ಚಂಡೆ ವಾದನ, ಡೊಳ್ಳು ಕುಣಿತ ಝಾಂಜ್ ಪಥಕ್ ಜೊತೆಯಲ್ಲಿ ಪೊಲೀಸ್ ಬ್ಯಾಂಡ್, ಶಾಲಾವಿದ್ಯಾರ್ಥಿಗಳ ಲೆಜಿಮ್, ಇತಿಹಾಸ ಪುರುಷರ ವೇಷಧಾರಿಗಳು, ಕನ್ನಡಾಂಬೆಯ ಜಯಘೋಷಗಳು ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಿತ್ತು.

ವಿಚಾರ ಗೋಷ್ಠಿಗಳು: ‘ಗಡಿ ಜನರ ಬದುಕು-ಬವಣೆ’ ಮತ್ತು ‘ಗಡಿ ಹಳ್ಳಿಗಳ ಸಮಸ್ಯೆ-ಪರಿಹಾರದ ಹೆಜ್ಜೆಗಳೂ’ ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಂದ ವಿಚಾರ ಮಂಡನೆ, ಈ ವಿಷಯದ ಕುರಿತಾಗಿ ಗೋಷ್ಠಿಗಳು ನಡೆದವು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಾಹಿತಿ ವಿಷ್ಣು ನಾಯ್ಕ, ಹಿರಿಯ ರಂಗಕರ್ಮಿ ಹೊಲಿಶೇಖರ್, ಸ್ಥಳೀಯ ಪತ್ರಕರ್ತರು, ಚಿಂತಕರು ಗೋಷ್ಠಿಯಲ್ಲಿ ಭಾಗವಹಿಸಿದ್ದರು.ಇಲ್ಲಿ ವಾಸ್ತವ್ಯವಿರುವ ಕುಣಬಿ, ದೇಸಾಯಿ, ದೇವಳಿ ಮತ್ತು ಮರಾಠಿಗರ ಬದುಕಿನ ಚಿತ್ರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟು, ಸೌಲಭ್ಯ ವಂಚಿತ ಗ್ರಾಮದಲ್ಲಿ ಅವರ ಬವಣೆಯ ಮೇಲೆ ಬೆಳಕು ಚೆಲ್ಲುವ ರೀತಿಯಲ್ಲಿ ವಿಚಾರಗೋಷ್ಠಿಯಲ್ಲಿ ವಿಚಾರಗಳು ಚರ್ಚೆಯಾದವು.ಸರಕಾರ ಈ ನಿಟ್ಟಿನಲ್ಲಿ ಗಡಿಭಾಗದ ಅಭಿವೃದ್ಧಿಗೆ ವಿಶೇಷ ಗಮನಹರಿಸಬೇಕೆಂಬ ನಿಟ್ಟಿನಲ್ಲಿ ಗೋಷ್ಠಿಗಳಲ್ಲಿ ವ್ಯಕ್ತವಾದ ವಿಚಾರಗಳು ಸರಕಾರಕ್ಕೆ ಸಲಹೆಯನ್ನು ನೀಡುವಂತಿತ್ತು.

ಸಾಂಸ್ಕೃತಿಕ ಕಾರ್ಯಕ್ರಮಗಳು: ಎರಡು ದಿನಗಳ ಕಾಲ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೇಡರಾಸ, ಒಪ್ಪನಾ, ಬಡಾಯಿ ನೃತ್ಯ, ಬೇಡೆ ನೃತ್ಯ, ತಾಂಗಟಾ, ಜಾನಪದ ಕಲಾನೃತ್ಯ, ರಂಗಗೀತೆಗಳು ಹಾಗೂ ಸ್ಥಳಿಯ ಶಾಲೆಯ ವಿದ್ಯಾರ್ಥಿಗಳ ವೈವಿಧ್ಯಮಯ ಕಾರ್ಯಕ್ರಮಗಳು,ವಿವಿಧ ಸಂಗೀತ ಕಾರ್ಯಕ್ರಮಗಳು ಸ್ಥಳೀಕರಲ್ಲದೆ ಉತ್ಸವಕ್ಕೆ ಹೊರಗಿನಿಂದ ಬಂದ ಕಲಾಸಕ್ತರನ್ನು ಸಾಂಸ್ಕೃತಿಕ ಲೋಕದಲ್ಲಿ ವಿಹರಿಸುವಲ್ಲಿ ಯಶಸ್ವಿಯಾಯಿತು.





Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಕಗ್ಗತ್ತಲ ಕೋಣೆಯಲ್ಲಿ ನರಳುತ್ತಿರುವ ಶಿಕ್ಷಣ

ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಭಾರತ-ಅಮೆರಿಕ ದೇಶದ ನೂತನ ವಸಾಹತು

ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...


- ಶ್ರೀ ರಾಮ್, ಬೆಂಗಳೂರು

ಬಿಜೆಪಿಯ ‘ಟೀಮ್ ಬಿ’

ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...


ಜನ ಚಳವಳಿಗೆಲ್ಲ ಹೀಗೇಕಾಗಿವೆ?

ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...


- ಸನತ್‌ ಕುಮಾರ ಬೆಳಗಲಿ

ಮಾನ ಮರ್ಯಾದೆ ಇಲ್ಲದ ಜನರೆಲ್ಲ ಎಲ್ಲಿ ಹೋದರು?

ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...


ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...


- ಜ್ಯೋತಿ ಗುರುಪ್ರಸಾದ್

ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದ ಭಾರತ

ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...


- ರಘೋತ್ತಮ ಹೊ.ಬ.

ಪಠ್ಯಪುಸ್ತಕಗಳ ಕೇಸರೀಕರಣ ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್

ಪಠ್ಯಪುಸ್ತಕಗಳ ಕೇಸರೀಕರಣ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್