ಸಾವಯವ ಕೃಷಿಯಲ್ಲಿ ಯಶ ಸಾಧಿಸಿದ ಕುಟುಂಬ... 40 ಎಕರೆಗಳಷ್ಟು ಪ್ರದೇಶದಲ್ಲಿ ಭತ್ತದ ಕೃಷಿ
mail-img print-img

ಸಾವಯವ ಕೃಷಿಯಲ್ಲಿ ಯಶ ಸಾಧಿಸಿದ ಕುಟುಂಬ... 40 ಎಕರೆಗಳಷ್ಟು ಪ್ರದೇಶದಲ್ಲಿ ಭತ್ತದ ಕೃಷಿ

ಸೋಮವಾರ - ಆಗಸ್ಟ್ -30-2010

ಪ್ರಕೃತಿ ಇರುವುದು ಮಾನವನ ಅಗತ್ಯಗಳನ್ನು ಪೂರೈಸಲು,ದುರಾಸೆಗಳನ್ನಲ್ಲ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿದ್ದರು. ಕಾಲಚಕ್ರ ಸುತ್ತುತ್ತಿರುತ್ತದೆ. ಮಾನವ ಪ್ರಕೃತಿಯೊಂದಿಗೆ ಪೂರಕ ಬದುಕನ್ನು ನಡೆಸಬೇಕು. ಸಾವಯವ ಕೃಷಿಗೆ ಇಂದು ಕೃಷಿಕರು ಮರಳುತ್ತಿರುವುದು ಇದನ್ನು ಸಾಬೀತುಪಡಿಸುತ್ತಿದೆ. ಹಸಿರು ಕ್ರಾಂತಿಯಿಂದ ಆಹಾರ ಉತ್ಪಾದನೆ ಹೆಚ್ಚಾಯಿತಾದರೂ, ಕೃಷಿ ಭೂಮಿಯ ಮೇಲೆ ದುಷ್ಪರಿಣಾಮಗಳಾದವು. ಮಿತಿಮೀರಿದ ರಾಸಾಯನಿಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಯಿತು. ಕೃಷಿಕರು ಹಲವು ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸಲು ಆರಂಭಿಸಿದರು. ಗೊಬ್ಬರ ಕೊರತೆಯ ಬಿಸಿ ರಾಜ್ಯಾಡಳಿತವನ್ನೇ ಅಲುಗಾಡಿಸಿತು.

ಇಂತಹ ಸಂದರ್ಭದಲ್ಲಿ ಪರ್ಯಾಯ ಮಾರ್ಗವಾಗಿ ಸಾವಯವ ಕೃಷಿ ಜನಪ್ರಿಯವಾಗಲಾರಂಭಿಸಿತು. ಸರಕಾರವು ಇದಕ್ಕೆ ಸಾಕಷ್ಟು ರೀತಿಯಲ್ಲಿ ಪ್ರೋತ್ಸಾಹವನ್ನು ನೀಡಲಾರಂಭಿಸಿತು. ಸಾವಯವ ಕೃಷಿ ಮಿಷನ್ ಸ್ಥಾಪಿಸಿತು. ಸಾವಯವ ಕೃಷಿ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ. ಈ ಕಾಲಘಟ್ಟದಲ್ಲಿ ಇಂತಹ ಯಾವುದೇ ಆಕರ್ಷ ಣೆಗಳಿಗೆ ಒಳಗಾಗದೆ ಕೃಷಿ ವಲಯದ ಎಲ್ಲ ಸವಾಲು ಗಳನ್ನು ಎದುರಿಸಿ ಸಾವಯವ ಬೆಳೆಗಾರರಿಗೆ ಸ್ಫೂರ್ತಿಯಾಗಿ 1972ರಿಂದಲೇ ಸುಳ್ಯದ ಭಾರದ್ವಾಜ ಕುಟುಂಬದವರು ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಿ ಸಾರ್ಥಕ ಬದುಕು ನಡೆಸುತ್ತಿದ್ದಾರೆ. ಸುಳ್ಯದ ಅರಂಬೂರಿನಲ್ಲಿ ಪಯಸ್ವಿನಿ ನದಿ ಮೂರು ದಿಕ್ಕನ್ನು ಸುತ್ತುವರಿದಿರುವ ಪ್ರಕೃತಿ ರಮಣೀಯ ಪರಿಸರದಲ್ಲಿ ಸಹೋದರರು 40 ಎಕರೆಗಳಷ್ಟು ಪ್ರದೇಶದಲ್ಲಿ ಭತ್ತದ ಕೃಷಿ ಮಾಡುತ್ತಿದ್ದಾರೆ. ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸುಳ್ಯದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಅರಂಬೂರಿದೆ.

ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಕಟಾವಿಗೆ, ಉಳುಮೆಗೆ, ಕಳೆ ತೆಗೆಯಲು ಯಂತ್ರಗಳ ಮೊರೆ ಹೋಗಿದ್ದಾರೆ. ಪವರ್ ಟಿಲ್ಲರ್, ರೀಪರ್, ಮಿನಿಟ್ರಾಕ್ಟರ್, ವಿನ್ನೋವರ್ (ಗಾಳಿಯಂತ್ರ), ಪವರ್ ವೀಡ್, ಕೋನೋ ವೀಡರ್‌ಗಳ ಸಹಾಯದಿಂದ ಕಾರ್ಮಿಕ ಸಮಸ್ಯೆಗೆ ಪರಿಹಾರ ಕಂಡು ಕೊಂಡಿದ್ದಾರೆ.ಸಿವಿಲ್ ಎಂಜಿನಿಯರ್ ಸಹೋದರನ ಮಾರ್ಗದರ್ಶನದಲ್ಲಿ ಭತ್ತ ಸಂಗ್ರಹಿಸಲು, ತಲೆಹೊರೆ ಕಷ್ಟ ಕಡಿಮೆ ಮಾಡಿ ನೇರವಾಗಿ ಭತ್ತವನ್ನು ಮನೆಗೆ ತಂದು ಹಾಕಲು, ಚರ್ತು ಭುಜಾಕಾರ ಹಾಗೂ ನಾಲ್ಕು ಬಾಗಿಲಿರುವ ಮಗುಚಿ ಹಾಕಿದ ತೆಂಗಿನ ಸಿಪ್ಪೆ ಮಾದರಿಯ ಸಣ್ಣ ಕಟ್ಟಡ ನಿರ್ಮಿಸಿದ್ದು ಟ್ರ್ಯಾಕ್ಟರ್ ನೇರವಾಗಿ ಇದರೊಳಗೆ ತಂದು ಭತ್ತದ ರಾಶಿ ಹಾಕುವು ದಲ್ಲದೆ ಬೈಹುಲ್ಲು ಮತ್ತು ಭತ್ತವನ್ನು ಬೇರ್ಪಡಿಸುವ ಕೆಲಸವನ್ನು ಮಾಡುತ್ತದೆ.


ಇಲ್ಲಿಂದ ಎಡಕ್ಕೆ ತಿರುಗಿ ಒಂದು ಕಿಲೋಮೀಟರ್ ಒಳರಸ್ತೆಯಲ್ಲಿ ಸಾಗಿದರೆ ಇಡ್ಯಡ್ಕ ಇಲ್ಲೆ ಈ ಕೃಷಿ ಋಷಿಗಳ ವಾಸ. 12 ಜನ ಸಹೋದರರು ಕೃಷಿಯಲ್ಲಿ ತೊಡಗಿದ್ದು, ಇವರಲ್ಲೊಬ್ಬರು ಸಿವಿಲ್ ಎಂಜಿನಿಯರ್. ತೂಗು ಸೇತುವೆ ನಿರ್ಮಾಣದಲ್ಲಿ ಪ್ರಸಿದ್ಧಿಯನ್ನು ಪಡೆದ ದವರು ಗಿರೀಶ್ ಭಾರದ್ವಾಜ. ಇವರಿಗೂ ಇಲ್ಲಿ ಕೃಷಿ ಭೂಮಿ ಇದೆ ಹಾಗೂ ಭೂಮಿಯಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಇವರ ತಂದೆ ಇವರಲ್ಲರಿಗೂ ಮಾದರಿ. ಬ್ರಿಟಿಷ್‌ರ ಆಡಳಿತದಲ್ಲಿ ಆಂಧ್ರ ಪ್ರದೇಶದಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದವರು ಇವರು. ಅನಿವಾರ್ಯ ಕಾರಣದಿಂದ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಾತಂತ್ರ ಪೂರ್ವ 1930-31 ರಲ್ಲಿ ಮಂಗಳೂರಿಗೆ ಆಗಮಿಸಿದ ಇವರು ಪಾವಂಜೆ ಅಣೆಕಟ್ಟು, ಕೂಳೂರು ಸೇತುವೆ, ಮೋಹಿನಿ ವಿಲಾಸ ಹೋಟೆಲ್, ಧರ್ಮಸ್ಥಳದ ಮಂಜಯ್ಯ ಹೆಗಡೆಯವರ ಬೀಡಿನ ಕೆಳ ಅಂತಸ್ತು, ಹೊಳೆ ಮಧ್ಯೆ ಇರುವ ಕಟೀಲು ದೇವ ಸ್ಥಾನದ ಅಡಿ ಅಂತಸ್ತು ಯೋಜನೆ ವಿನ್ಯಾಸ ರೂಪಿಸಿದ ಬಿ.ಕೆ. ಭಟ್ಟರವರು ನಂತರ ಉತ್ತಮ ಕೃಷಿಕರಾದರು.

ಮಕ್ಕಳಲ್ಲೂ ಕೃಷಿಯ ಬಗ್ಗೆ ಪ್ರೀತಿ ಬೆಳೆಸಿದರು. ಎಲ್ಲ ವೃತ್ತಿಗಿಂತಲೂ ಕೃಷಿ ಕೊಡುವ ಖುಷಿಯನ್ನು ಅರಿಯುವ ಬಗ್ಗೆ ಮಾರ್ಗದರ್ಶನ ನೀಡಿದರು. ಅವರ 15 ಜನ ಮಕ್ಕಳಲ್ಲಿ 12 ಗಂಡು ಮಕ್ಕಳು. ಅವರಲ್ಲಿ ಗಿರೀಶ್ ಭಾರದ್ವಾಜರವರು ತಂದೆಯಂತೆ ಎಂಜಿನಿಯರ್ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಉಳಿದವರೆಲ್ಲರೂ ಕೃಷಿ ಋಷಿಗಳು. ಇಲ್ಲಿ ಕೃಷಿ ಮಾಡಲು ನೀರಿನ ತೊಂದರೆ ಇಲ್ಲ. ಆದರೆ ಇತ್ತೀಚೆಗೆ ಕೃಷಿ ಮಾಡಲು ಕೆಲಸದಾಳುಗಳು ದೊರೆಯದಂತಹ ಪರಿಸ್ಥಿತಿ. ಹಾಗಾಗಿ ಕೃಷಿ ಇಲಾಖೆಯಿಂದ ಮಾಹಿತಿ ಪಡೆದು ಕಟಾವು ಸೇರಿದಂತೆ ವಿವಿಧ ಕೆಲಸಗಳಿಗೆ ಯಂತ್ರಗಳನ್ನು ಉಪಯೋಗಿಸಲು ಆರಂಭಿಸಿದರಾದರೂ ಸಾವಯವ ಕೃಷಿ ಪದ್ಧತಿಯನ್ನು ಮುಂದುವರಿಸಿದ್ದೇವೆ ಎನ್ನುತ್ತಾರೆ ರವಿಶಂಕರ್ ಭಾರದ್ವಾಜ.  ಹೂಮಲೆಯ ಬುಡದಲ್ಲಿ ಪ್ರಕೃತಿ ಸಹ್ಯ ಕೃಷಿ ನಡೆಸುತ್ತಿರುವ ಈ ಸಹೋದರರು ತಮಗೆ ಅಗತ್ಯವಿರುವ ಎಲ್ಲ ಧವಸ ಧಾನ್ಯಗಳನ್ನು ಅವರ ಕೃಷಿ ಭೂಮಿಯಲ್ಲೇ ಬೆಳೆಯುತ್ತಾರೆ. ಹುಲ್ಲು ತೆಗೆಯಲು ಜನ ಸಿಗುತ್ತಿಲ.್ಲ ಹಾಗಾಗಿ ಹಸುಗಳನ್ನು ಮೇಯಲು ಬಿಡುತ್ತೇವೆ, ಶ್ರೀ ಪದ್ಧತಿ ಬೆಳೆಯಲ್ಲಿ ಕಳೆ ಜಾಸ್ತಿ. ಅದು ನಮ್ಮ ಪ್ರದೇಶಕ್ಕೆ ಒಗ್ಗದು ಎನ್ನುವ ಇವರು ಸಾಮಾನ್ಯ ನಾಟಿ ಪದ್ದತಿಯನ್ನು ಅನುಸರಿಸುತ್ತಿದ್ದಾರೆ.


ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಕಟಾವಿಗೆ, ಉಳುಮೆಗೆ, ಕಳೆ ತೆಗೆಯಲು ಯಂತ್ರಗಳ ಮೊರೆ ಹೋಗಿದ್ದಾರೆ. ಪವರ್ ಟಿಲ್ಲರ್, ರೀಪರ್, ಮಿನಿಟ್ರಾಕ್ಟರ್, ವಿನ್ನೋವರ್ (ಗಾಳಿಯಂತ್ರ), ಪವರ್ ವೀಡ್, ಕೋನೋ ವೀಡರ್‌ಗಳ ಸಹಾಯದಿಂದ ಕಾರ್ಮಿಕ ಸಮಸ್ಯೆಗೆ ಪರಿಹಾರ ಕಂಡು ಕೊಂಡಿದ್ದಾರೆ.ಸಿವಿಲ್ ಎಂಜಿನಿಯರ್ ಸಹೋದರನ ಮಾರ್ಗದರ್ಶನದಲ್ಲಿ ಭತ್ತ ಸಂಗ್ರಹಿಸಲು, ತಲೆಹೊರೆ ಕಷ್ಟ ಕಡಿಮೆ ಮಾಡಿ ನೇರವಾಗಿ ಭತ್ತವನ್ನು ಮನೆಗೆ ತಂದು ಹಾಕಲು, ಚರ್ತು ಭುಜಾಕಾರ ಹಾಗೂ ನಾಲ್ಕು ಬಾಗಿಲಿರುವ ಮಗುಚಿ ಹಾಕಿದ ತೆಂಗಿನ ಸಿಪ್ಪೆ ಮಾದರಿಯ ಸಣ್ಣ ಕಟ್ಟಡ ನಿರ್ಮಿಸಿದ್ದು ಟ್ರ್ಯಾಕ್ಟರ್ ನೇರವಾಗಿ ಇದರೊಳಗೆ ತಂದು ಭತ್ತದ ರಾಶಿ ಹಾಕುವು ದಲ್ಲದೆ ಬೈಹುಲ್ಲು ಮತ್ತು ಭತ್ತವನ್ನು ಬೇರ್ಪಡಿಸುವ ಕೆಲಸವನ್ನು ಮಾಡುತ್ತದೆ.


ಆದರೆ ಈ ಆವಿಷ್ಕಾರದಲ್ಲಿ ಭತ್ತ ಸೂಡಿ ಕಟ್ಟಲು ಆಗುವುದಿಲ್ಲ ಎಂಬ ಅನಾನುಕೂಲ ಹೊರತುಪಡಿಸಿದರೆ ಉಳಿದಂತೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ. ಭತ್ತದ ಕೃಷಿಯೊಂದಿಗೆ ಅಡಿಕೆ, ತೆಂಗು,ಬಾಳೆ, ನೇಂದ್ರಬಾಳೆ, ಕಾಳು ಮೆಣಸು, ಹಣ್ಣಿನ ಗಿಡಗಳು, ಹೂಗಿಡಗಳನ್ನು ಬೆಳೆಸಿರುವ ಸಹೋದರರು ತಮ್ಮೆಲ್ಲ ಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಂಡಿದ್ದಾರೆ. ವಿದ್ಯಾರ್ಜನೆ ಕೃಷಿಯಿಂದ ನಮ್ಮನ್ನು ದೂರ ಸರಿಸದೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು, ನೂತನ ಆವಿಷ್ಕಾರಗಳನ್ನು ಮಾಡಲು ಪ್ರೇರೇಪಿಸಿದೆ ಎನುತ್ತಾರೆ. ಇವರಲ್ಲಿ ವಿಶ್ವೇಶ್ವ ಭಾರದ್ವಾಜರವರಿಗೆ 200ರಲ್ಲಿ ಅತ್ಯುತ್ತಮ ಕೃಷಿಕ ಪ್ರಶಸ್ತಿ ಲಭಿಸಿದೆ. ಈ ಹೊತ್ತಿನಲ್ಲಿ ಸುಳ್ಯದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೇಶವ ಅವರ ಸಹಕಾರವನ್ನು ರವಿಶಂಕರ್ ಸ್ಮರಿಸುತ್ತಾರೆ.


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಡವರ ಮಕ್ಕಳಿಗೆ ನಿರಾಕರಿಸಲ್ಪಟ್ಟ ಶಿಕ್ಷಣ

ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...


- ಎಸ್.ಬಾಲನ್,ಹೈಕೋರ್ಟ್ ವಕೀಲರು, ಬೆಂಗಳೂರು.

ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ

ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...


- ಗೋಪಾಲ್ ತ್ರಾಸಿ

ಅಂತರ ಜಾತಿಯ ವಿವಾಹ ಮೀಸಲಾತಿಗೆ ಅಡ್ಡಿಯಾಗದು: ಸರ್ವೋಚ್ಚ ನ್ಯಾಯಾಲಯದ ತೀರ್ಪು

ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...


- ಕೆ. ದೇಜಪ್ಪ

ಆರೆಸ್ಸೆಸ್ ಶಿಸ್ತಿನ ಒಳಗುಟ್ಟು

ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...


- ಸನತ್‌ ಕುಮಾರ ಬೆಳಗಲಿ

ನಿನ್ನನ್ನು ಒಳ್ಳೆಯ ಬ್ಯಾರಿ ಅಂತ ಹೇಗೆ ನಂಬುವುದು?

‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...


- ಚೇಳಯ್ಯ

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ-ಪ್ರಗತಿಪರರು

ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...


- ಡಾ ಜಿ. ಭಾಸ್ಕರ ಮಯ್ಯ

ಮನಸ್ಸಿನ ಅಸ್ವಸ್ಥತೆಗೆ ಮೂಲ ಕಾರಣ ಹುಡುಕಬೇಕು

ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...


- ಜ್ಯೋತಿ ಗುರುಪ್ರಸಾದ್

ದೂರಸಂಪರ್ಕ ನೀತಿ ಬೇಕಾಗಿದೆ

ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...


- ಅರವಿಂದ ರಾಜಗೋಪಾಲ