mail-img print-img

ಸ್ವ ಉದ್ಯೋಗಕ್ಕೆ ಯಾವುದು ಅಡ್ಡಿಯಲ್ಲ...

ಸೋಮವಾರ - ಆಗಸ್ಟ್ -30-2010

ನೀವು ಕೊಕ್ಕಡದ ಕಡೆ ಹೋಗುವಾಗ ಪೆರಿಯಶಾಂತಿ ಎಂಬ ಊರು ಸಿಗುತ್ತದೆ. ಆಗ ಹಣ್ಣು ಮಾರುವ ಓರ್ವ ವ್ಯಕ್ತಿ ‘ಪೆಲಕ್ಕಾಯಿ ಬೋಡಾ’ ಅಂತ ತುಳು ಅಥವಾ ಕನ್ನಡ ಭಾಷೆಯಲ್ಲಿ ಕೂಗಿ ಕರೆಯುತ್ತಾನೆ. ಇವರ ಹೆಸರು ಮುಹಮ್ಮದ್. ಹಲಸಿನ ಹಣ್ಣು ಮಾರು ವವ. ಊರು ನೆಲ್ಯಾಡಿ.ಆತನ ಕಾಯಕ ಹಲಸಿನ ಹಣ್ಣು ಮಾರುವುದು. ಜೂನ್‌ನಿಂದ ಸೆಪ್ಟಂಬರ್‌ವರೆಗೆ ಈ ಕೆಲಸ. ಸೂರ್ಯ ಮುಳುಗುವ ಹೊತ್ತಿನವರೆಗೆ ಇವರು ಸಂಪಾದಿಸುವ ಹಣ ಸರಿಸುಮಾರು ಸೀಸನ್ನಲ್ಲಿ 600ರಿಂದ 700 ರೂ.ಗಳವರೆಗೆ ಅಂತೆ.


ಉಳಿದ ಸಮಯದಲ್ಲಿ ಇನ್ಯಾವುದಾದರೂ ಹಣ್ಣುಗಳ ಮಾರಾಟ.ಆದರೆ ಆತನಿಗೆ ಇಂಥದ್ದೇ ಅಂತ ಅಂಗಡಿ ಇಲ್ಲ. ರಸ್ತೆಯೇ ಈತನಿಗೆ ಎಲ್ಲ. ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಧರ್ಮಸ್ಥಳದ ಕ್ರಾಸ್‌ನ ಪೆರಿಯಶಾಂತಿಯಲ್ಲಿ ಈತ ಹಲಸಿನ ಹಣ್ಣುಗಳನ್ನು ರೆಡಿ ಪ್ಯಾಕೆಟ್ ಮಾಡಿ ಮಾರುತ್ತಾರೆ. ಬೆಳಗ್ಗೆ ಸೂರ್ಯ ಉದಯಿಸಿ ಇನ್ನೇನು ನೆತ್ತಿಗೆ ಬರುತ್ತಾನೆ ಅನ್ನುವಷ್ಟರಲ್ಲಿ ಈ ಮಹಮ್ಮದ್ ಪೆರಿಯ ಶಾಂತಿಯಲ್ಲಿ ಕಾಣಿಸಿಕೊಳ್ಳುತ್ತಾನೆ.ಅಲ್ಲಿಂದ ಆತನ ಕಾಯಕ ಶುರು. ಅದೆಲ್ಲಿಂದಲೇ ವಾಹನ ಬರಲಿ ಹಲಸಿನ ಹಣ್ಣಿನ ಪ್ಯಾಕೆಟ್ ತೋರಿಸುತ್ತಾನೆ. ‘ಸಾರ್ ಸ್ವೀಟ್ ಇದೆ’ ಅಂತ ಬೊಬ್ಬಿಡುತ್ತಾನೆ. ದೂರದ ಊರಿನ ಜನ ಗಾಡಿ ನಿಲ್ಲಿಸುತ್ತಾರೆ. ರೇಟ್ ಎಷ್ಟಪ್ಪಾ ಅಂತ ಕೇಳಿ ದಾಗ, ಸಾರ್, ಹತ್ತು ಅಂತಾನೆ. ಏನಪ್ಪಾ ಈ ಚಿಕ್ಕ ಪ್ಯಾಕೇಟ್‌ಗೆ ಹತ್ತು ರೂಪಾಯಿಯ ಅಂತ ಕೇಳಿದರೆ ಅಲ್ಲಾ ಸಾರ್, ಹತ್ತು ರೂಪಾಯಿಗೆ ಎರಡು ಪ್ಯಾಕೆಟ್ ಅನ್ನುತ್ತಾನೆ ಮುಹಮ್ಮದ್. ಇನ್ನು ಊರ ಜನರಿಂದ ಏನಾದರೂ ತಪ್ಪಿ5 ರೂ. ಹೆಚ್ಚು ಬಂದರೂ ಈತನಿಗೆ ಅದೇನೋ ಕಿರಿಕಿರಿ. ಛೇ... ಛೇ ಅವರಿಗೆ ಲಾಸ್ ಆಯ್ತು. ಅವ್ರ ನಮ್ಮ ಊರಿನೋರೇ ಅಂತಾನೆ.

ಮುಹಮ್ಮದ್ ಇದನ್ನು ಹೇಗೆ ತಯಾರು ಮಾಡುತ್ತಾನೆ ಮತ್ತು ಮಾರ್ಕೆಟಿಂಗ್ ಹೇಗೆ ಅಂತ ಆತನಲ್ಲಿ ಕೇಳಿದ್ರೆ ಆತ ಹೇಳುವುದು ಹೀಗೆ... ನೆಲ್ಯಾಡಿಯ ಆಸುಪಾಸಿನ ಕೃಷಿಕರ ತೋಟದಲ್ಲಿ ಹಲಸಿನ ಹಣ್ಣು ಇದೆಯಾ ಅಂತ ವಿಚಾರಿಸಿದ ಬಳಿಕ ಒಂದು ಹಣ್ಣಿಗೆ 30 ರೂಪಾಯಿಯಂತೆ ನೀಡಿ ಅದನ್ನು ಪಡೆಯುತ್ತಾನೆ. ಇನ್ನು ಈ ಹಣ್ಣನ್ನು ಮರದಿಂದ ಕೀಳಲು ಮರವೇರುವ ಕಾರ್ಮಿಕನಿಗೆ ಒಂದು ಹಣ್ಣಿಗೆ 5 ರಿಂದ 10 ರೂಪಾಯಿ ಕೊಡಬೇಕು.ಇದಾದ ನಂತರ ಈ ಎಲ್ಲಾ ಹಣ್ಣು ಗಳನ್ನು ಮನೆಗೆ ಕೊಂಡೊಯ್ದು ಅದನ್ನು ಹದ ಮಾಡಿದ ಬಳಿಕ ಚಿಕ್ಕ ಚಿಕ್ಕ ಪ್ಯಾಕೆಟ್ ಮಾಡಲಾಗುತ್ತದೆ. ಒಂದು ಪ್ಯಾಕೆಟ್‌ನಲ್ಲಿ ಇಷ್ಟೇ ಹಣ್ಣು ಅಂತೇನಿಲ್ಲ. ಪ್ಯಾಕೆಟ್‌ನ ಅರ್ಧದಷ್ಟು. ಇದೆಲ್ಲಾ ಆದ ಮೇಲೆ ಮಾರಾಟಕ್ಕೆ ಸಿದ್ದವಾಗುತ್ತದೆ. ಇದಾಗುವ ವೇಳೆ ಒಂದು ಹಲಸಿನ ಹಣ್ಣಿನ ಅಸಲು 40 ರಿಂದ 50 ರೂಪಾಯಿ ಆಗಿರುತ್ತದೆ.
 

ಬೆಳಗ್ಗೆ 11 ಗಂಟೆಯ ನಂತರ ಪೆರಿಯಶಾಂತಿ ಕ್ರಾಸ್‌ನಲ್ಲಿ ಹಲಸಿನ ಹಣ್ಣಿನ ವ್ಯವಹಾರ ಆರಂಭವಾಗುತ್ತದೆ. ಬೆಳಗ್ಗೆ ಹದ ಮಾಡಿದ ಹಣ್ಣು ಮಧ್ಯಾಹ್ನದ ವೇಳೆಗೆ ಮುಗಿಯಬೇಕು ಎಂಬುವುದು ಗುರಿ. ಯಾಕೆಂದರೆ ಆ ಮೇಲೆ ಹಣ್ಣಿನ ಒರಿಜಿನಲ್ ಸ್ಮೆಲ್ ಹೋಗುತ್ತದೆ. ಒಂದು ಹಣ್ಣಿನಲ್ಲಿ ಸಾಮಾನ್ಯ ದಿನಗಳಲ್ಲಿ 150 ರೂಪಾಯಿಯವರೆಗೂ ಮಾಡುತ್ತಾರಂತೆ. ಮಧ್ಯಾಹ್ನದ ಊಟ ಪೆರಿಯಶಾಂತಿಯಲ್ಲಿನ ಸ್ಥಳೀಯ ಹೊಟೇಲ್‌ನಲ್ಲಿ. ತದನಂತರ ಮತ್ತೆ ವ್ಯಾಪಾರ ಶುರು. ಇನ್ನು ವಾರಾಂತ್ಯದ ದಿನಗಳಲ್ಲಿ ದಿನಕ್ಕೆ 5-6 ಹಲಸಿನ ಹಣ್ಣು ಮುಗಿಯುತ್ತದಂತೆ. ಒಂದು ಪ್ಯಾಕೆಟ್‌ಗೆ 5 ರೂಪಾಯಿಯ ಹಾಗೆ ಮಾರಾಟ. ಹೀಗೆ ಸೀಸನ್‌ನಲ್ಲಿ , ವಾರಾಂತ್ಯದ ಸಮಯದಲ್ಲಿ ದಿನಕ್ಕೆ 600 ರಿಂದ 700 ರೂಪಾಯಿ ಸಿಗುತ್ತದೆಯಂತೆ. ಇನ್ನು ಹಲಸಿನ ಹಣ್ಣು ಹೆಚ್ಚಾಗಿರುವ ಸಂದರ್ಭದಲ್ಲಿ ಇಡೀ ಹಣ್ಣು ಕೂಡಾ ಮಾರಾಟವಾಗುತ್ತದೆ. ಅದಕ್ಕೆ 150 ರುಪಾಯಿ, 200 ರೂಪಾಯಿ ದರ ಇರುತ್ತದೆ. ಬೇಡಿಕೆಗೆ ಅನುಗುಣವಾಗಿ ರೇಟ್ ಕೂಡಾ ಹೆಚ್ಚು ಕಮ್ಮಿ ಆಗುತ್ತದೆ. ಸಂಜೆ ಸುಮಾರು 6 ಗಂಟೆಯವರೆಗೆ ಈ ವ್ಯಾಪಾರ ನಡೆಯುತ್ತದೆ ಆತ ಹೇಳುತ್ತಾರೆ ಮುಹಮ್ಮದ್.
      ಇಲ್ಲಿ ನಾನೊಬ್ಬನೇ ವ್ಯವಹಾರ ಮಾಡೋದಲ್ಲ. ಕೆಲವೊಂದು ದಿನ 4-5 ಜನವೂ ಇರುತ್ತಾರೆ. ಹಾಗಾಗಿ ಒಂದೊಂದು ದಿನ ತುಂಬಾ ಲಾಭವಾಗುತ್ತದೆ.ಇನ್ನೂ ಒಂದೊಂದು ದಿನ ನಷ್ಟವೂ ಆಗುತ್ತದೆ. ಹಲಸಿನ ಹಣ್ಣು ಪ್ಯಾಕೆಟ್ ಉಳಿಯುತ್ತದೆ. ಕೊನೆಗೆ ಅದನ್ನು ಕಾಡಿನ ಮಂಗಗಳಿಗೆ ಎಸೆದು ಹೋಗೋದು ಅನ್ನುತ್ತಾರೆೆ ಮುಹಮ್ಮದ್. ಎಲ್ಲಾದರೂ ಪ್ರವಾಸಿಗರ ವಾಹನ ನಿಲ್ಲಿಸಿದರೆ ಬಂಪರ್ ಎಂದು ಖುಷಿಪಡುತ್ತಾರೆ ಮುಹಮ್ಮದ್. ಇನ್ನು ಪೆರಿಯಶಾಂತಿ ಒಂದು ಕಾಡು ಪ್ರದೇಶವಾದ್ದರಿಂದ ಕೆಲವು ವಾಹನದವರು ನಿಲ್ಲಿಸುವುದೇ ಇಲ್ಲ. ಹೆದರಿಕೆಯೂ ಆಗುತ್ತಲ್ಲ ಅಂತಾನೆ. ಒಟ್ಟಾರೆ ಹೇಳೋದಾದ್ರೆ ಲಾಭ ಇದೆ. ಹಲಸಿನ ಹಣ್ಣು ಮುಗಿದ ಮೇಲೆ ಅನಾನಸು ಇದೆ, ಮತ್ತೆ ಇನ್ಯಾವುದಾದರೂ ಹಣ್ಣು ಸಿಗುತ್ತೆ . ಬೇಸಗೆಯಲ್ಲಾದ್ರೆ ಕಬ್ಬಿನ ಜ್ಯೂಸ್ ಕೂಡಾ ಇಲ್ಲೇ ಮಾಡುತ್ತೀವಿ. ಕಾಡಿನ ನಡುವೆ ಅಲ್ವಾ ಖುಷಿ ಇರುತ್ತೆ ಅಂತಾನೆ.
ಒಂದು ಕೆಲಸದಲ್ಲಿ ಸವಾಲುಗಳು ಇದ್ದೇ ಇರುತ್ತವೆ. ಅದೆಲ್ಲವನ್ನೂ ಮೆಟ್ಟಿ ನಿಂತಾಗಲಷ್ಟೇ ಯಶಸ್ಸು ಸಾಧ್ಯ.ಅಂತಹದ್ದರಲ್ಲಿ ಏನೂ ಕೆಲಸವೇ ಸಿಗುತ್ತಿಲ್ಲ ಅನ್ನೋ ಜನರಿಗೆ, ಇದನ್ನೊಂದು,ಅಂದರೆ ಹಲಸಿನ ಹಣ್ಣು ವ್ಯಾಪಾರ ಮಾಡೋದು ಕೂಡಾ ಒಂದು ಉದ್ಯಮವಾಗಬಹು ದಲ್ವಾ? ಹೀಗೆ ರಸ್ತೆ ಬದಿ ಮಾರಾಟ ಮಾಡಬೇಕೆಂದೆನಿಲ್ಲ. ನಗರದ ಮಾರುಕಟ್ಟೆ ಹಿಡಿಬಹುದಲ್ವಾ? ಮನಸ್ಸಿದ್ದರೆ ಎಲ್ಲವೂ ಸಾಧ್ಯ ಅಲ್ವೇ? ಅದಕ್ಕೆ ಈ ಮುಹಮ್ಮದ್ ಒಬ್ಬ ಸಾಕ್ಷಿ ಅಷ್ಟೆ..

-ಪಿ.ಮಹೇಶ್



ಒಂದು ಹಣ್ಣಿಗೆ 30 ರೂಪಾಯಿಯಂತೆ ನೀಡಿ ಅದನ್ನು ಪಡೆಯುತ್ತಾನೆ. ಇನ್ನು ಈ ಹಣ್ಣನ್ನು ಮರದಿಂದ ಕೀಳಲು ಮರವೇರುವ ಕಾರ್ಮಿಕನಿಗೆ ಒಂದು ಹಣ್ಣಿಗೆ 5 ರಿಂದ 10 ರೂಪಾಯಿ ಕೊಡಬೇಕು.ಇದಾದ ನಂತರ ಈ ಎಲ್ಲಾ ಹಣ್ಣು ಗಳನ್ನು ಮನೆಗೆ ಕೊಂಡೊಯ್ದು ಅದನ್ನು ಹದ ಮಾಡಿದ ಬಳಿಕ ಚಿಕ್ಕ ಚಿಕ್ಕ ಪ್ಯಾಕೆಟ್ ಮಾಡಲಾಗುತ್ತದೆ. ಒಂದು ಪ್ಯಾಕೆಟ್‌ನಲ್ಲಿ ಇಷ್ಟೇ ಹಣ್ಣು ಅಂತೇನಿಲ್ಲ. ಪ್ಯಾಕೆಟ್‌ನ ಅರ್ಧದಷ್ಟು. ಇದೆಲ್ಲಾ ಆದ ಮೇಲೆ ಮಾರಾಟಕ್ಕೆ ಸಿದ್ದವಾಗುತ್ತದೆ. ಇದಾಗುವ ವೇಳೆ ಒಂದು ಹಲಸಿನ ಹಣ್ಣಿನ ಅಸಲು 40 ರಿಂದ 50 ರೂಪಾಯಿ ಆಗಿರುತ್ತದೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್