
ಕೃಷಿ ಕುರಿತ ಎಲ್ಲಾ ಮಾಹಿತಿಯನ್ನು ಅರ್ಥೈಸಿಕೊಂಡಿರುವ 27 ವರ್ಷದ ಈ ಯುವ ರೈತ, ಸಮಗ್ರ ಕೃಷಿಯ ಒಂದು ಸಂಚಾರಿ ಗ್ರಂಥಾಲಯದಂತೆ. ಬಿಕಾಂ ಪದವಿ ಪಡೆದು ಸಿಪ್ಲಾ ಕಂಪೆನಿಯಲ್ಲಿ ಕೆಲ ಕಾಲ ನೌಕರಿ ಮಾಡಿದ ಕುಮಾರ್‌ರ ಮನಸ್ಸು ಸದಾ ಕೃಷಿಯ ಜಪ ಮಾಡುತ್ತಿತ್ತು. ರೈತ ಕುಟುಂಬದಲ್ಲೆ ಜನಿಸಿದ ಕುಮಾರ್ ಸಂಪೂರ್ಣ ಸಾವಯವ ಕೃಷಿ ಅನುಸರಿಸಿ ಸಮಗ್ರ ಕೃಷಿ ಕೈಗೊಳ್ಳುವ ಮೂಲಕ ಅಸಾಧಾರಣ ಸಾಧನೆಗೈಯುವ ಹಂಬಲ, ಹುಮ್ಮಸ್ಸನ್ನು ಹೊಂದಿದ್ದ ಕಾರಣ, ಸುಮಾರು 5 ವರ್ಷಗಳ ಕಾಳ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿ, ಇಂದು ಈ ಮಹತ್ ಸಾಧನೆಯನ್ನು ತನ್ನದಾಗಿಸಿಕೊಂಡಿದ್ದಾರೆ.ಸುಮಾರು 13.5 ಎಕರೆ ಭೂಮಿಯಲ್ಲಿ 3 ಎಕರೆಯಷ್ಟು ಭತ್ತ, 2.5 ಎಕರೆಯಲ್ಲಿ ಮೀನುಗಾರಿಕೆ, 8 ಎಕರೆಯಷ್ಟು ಭೂಮಿಯಲ್ಲಿ ಅಡಿಕೆ, ತೆಂಗು, ಬಾಳೆ ಹಾಗೂ ಸಾಗುವಾನಿಯನ್ನು ಬೆಳೆಯುವಲ್ಲಿ ಸಾವಯವ ಮಾದರಿ ಅನುಸರಿಸುತ್ತಿರುವ ಕುಮಾರ್ ಪ್ರತಿ ವರ್ಷ ಉತ್ತಮ ಲಾಭವನ್ನು ಗಳಿಸುವುದರೊಂದಿಗೆ ಭೂಮಿಯ ಫಲವತ್ತತೆಯನ್ನೂ ಕಾಪಾಡುತ್ತಿದಾರೆ.
ಮಣ್ಣಿನ ಗುಣ ಹಾಗೂ ಹವಾಮಾನಕ್ಕನು ಗುಣವಾಗಿ ಸೂಕ್ತ ಕೃಷಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂಬುದು ಕುಮಾರ್‌ರ ನಂಬಿಕೆ. ಶಿವಮೊಗ್ಗದ ನವುಲೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಅವರು, ಮಣ್ಣಿನ ಫಲವತ್ತತೆ ಹಾಗೂ ಬೆಳೆಯ ಉತ್ತಮ ಇಳುವರಿಗಾಗಿ ಮಣ್ಣು ಮತ್ತು ನೀರಿನ ಪರೀಕ್ಷೆ, ಬೀಜೋಪಚಾರ, ಎರೆ ಗೊಬ್ಬರ ತಯಾರಿಕೆ, ಕಾಂಪೋಸ್ಟ್ ತಯಾರಿಕೆ, ಹಸಿರೆಲೆ ಗೊಬ್ಬರದ ಬಳಕೆ, ಅಜೋಲಾ ತಯಾರಿಕೆ, ಸುಧಾರಿತ ನೀರಾವರಿ ಪದ್ಧತಿಗಳನ್ನು ಅನುಸರಿಸುವುದು ಮಾತ್ರವಲ್ಲ, ಸುಧಾರಿತ ಕೃಷಿ ಉಪಕರಣಗಳನ್ನೂ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ.
ಯಾವುದೇ ರಾಸಾಯಾನಿಕ ವಸ್ತುಗಳನ್ನು ಬಳಸದೇ, ನೈಸರ್ಗಿಕವಾಗಿಯೆ ತಯಾರಿಸುವ ಬೇವಿನ ಹಾಗೂ ಬಿಲ್ವಪತ್ರೆಯ ಕಷಾಯ, ಹುಳಿಮಜ್ಜಿಗೆ ಹಾಗೂ ಅಜ್ಞ ಅಸ್ತ್ರ ಬಳಸಿ ಸಮಗ್ರ ಕೀಟ ಹಾಗೂ ರೋಗ ನಿರ್ವಹಣೆ ಯನ್ನು ಕುಮಾರ್ ಮಾಡಿಕೊಂಡು ಬಂದಿ ದ್ದಾರೆ. ಯಾಂತ್ರೀಕೃತ ಭತ್ತದ ನಾಟಿಯನ್ನು ಮಾಡಿ ಟ್ರಾಕ್ಟರ್ ಬಳಕೆ, ಮಿಸ್ಟ್ ಬ್ಲೊಯರ್ ಬಳಕೆ ಹಾಗೂ ಬೆಳವಣಿಗೆ ವೆಂಚುರಿ ಮೂಲಕ ಜೈವಿಕ ಗೊಬ್ಬರ ಪೂರೈಸುತ್ತಾರೆ.
ಒಂದು ಹೆಕ್ಟೇರು ಪ್ರದೇಶದಲ್ಲಿ ಮೀನುಮರಿ ಪಾಲನೆ ಮತ್ತು ಮೀನು ಸಾಕಣೆ ಮಾಡುತ್ತಿರುವ ಕುಮಾರ್ ಬಂದ ಉತ್ಪನ್ನವನ್ನು ಸ್ವತಃ ತಾವೇ ಮಾರುಕಟ್ಟೆಯಲ್ಲಿ ಮಾರುತ್ತಾರೆ. ವರ್ಷಕ್ಕೆ 2ರಿಂದ 3 ಲಕ್ಷ ರೋಹು, ಕಾಟ್ಲಾ ಹಾಗೂ ಮೃಗಾಲ್ ತಳಿಯ ಮೀನು ಮರಿಗಳನ್ನು ಸರಕಾರಕ್ಕೆ ಮಾರಾಟ ಮಾಡಿ, ಉಳಿದ ಮೀನುಮರಿಗಳನ್ನು ತಾವೇ ಸಾಕಣೆ ಮಾಡಿ ಸುಮಾರು 2 ಟನ್ನಿನಷ್ಟು ಬಲಿತ ಮೀನುಗಳನ್ನು ಉತ್ಪಾದಿಸುತ್ತಾರೆ. ಹೈನುಗಾರಿಕೆಯಿಂದ ಡೈರಿಗೆ ಹಾಲನ್ನು ಒದಗಿಸುವುದಲ್ಲದೇ, ಸಾವಯವ ಕೃಷಿಗಾಗಿ ಅಮೃತ್‌ಮಾಲ್ ತಳಿಯನ್ನು ಸಾಕುತ್ತಿದ್ದಾರೆ.
ಜೇನು ಸಾಕಣೆಯಿಂದ ಬಂದ ಉತ್ಪನ್ನಗಳನ್ನು ಹಾಗೂ ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಮನೆ ಬಳಕೆಗೆ ಉಪಯೋಗಿಸಿ ಉಳದಿದ್ದನ್ನು ಮಾರಾಟ ಮಾಡುತ್ತಾರೆ. ಇದಲ್ಲದೇ ಮನೆ ಬಳಕೆಗೆ ಬೇಕಾಗುವ ತರಕಾರಿ ಹಾಗೂ ಹಣ್ಣುಗಳನ್ನೂ ಸಹ ತೋಟದಲ್ಲಿ ಬೆಳೆದು ಬಳಸುತ್ತಾರೆ. ಹೀಗೆ ಆಹಾರದಲ್ಲಿ ಸಂಪೂರ್ಣ ಸ್ವಾವಲಂಬನೆಯತ್ತ ಕುಮಾರ್ ಇಟ್ಟಿರುವ ಹೆಜ್ಜೆಯಲ್ಲಿ, ಒಂದು ರೀತಿಯ ಸಾಧನೆಯೆ ಸರಿ.
ಭತ್ತದಲ್ಲಿ ಜ್ಯೋತಿ ತಳಿಯನ್ನು ಆರ್ಥಿಕ ಬೆಳೆಯನ್ನಾಗಿ ಆಯ್ದುಕೊಂಡು, ಸಾವಯವ ರೀತಿಯಲ್ಲಿ ಬೆಳೆದು ಉತ್ತಮ ಗುಣಮಟ್ಟದ ಬೀಜವನ್ನು ಕರ್ನಾಟಕ ಬೀಜ ನಿಗಮದಲ್ಲಿ ನೋಂದಾಯಿಸಿ ಒದಗಿಸುವುದಲ್ಲದೇ ಸ್ಥಳೀಯ ರೈತರಿಗೂ ಪ್ರತಿ ವರ್ಷ ಬೀಜಗಳನ್ನು ಒದಗಿಸುತ್ತಾರೆ. ವಿಶೇಷವೆಂದರೆ ಸುಗಂಧ ಯುತ ಗಂಧಸಾಲೆ ಭತ್ತವನ್ನು ಕುಮಾರ್ ಅರ್ಧ ಎಕರೆ ಭೂಮಿಯಲ್ಲಿ ಬೆಳೆದು ಕೆಜಿಗೆ ರೂ.50ರಂತೆ ಮಾರಾಟ ಮಾಡುತ್ತಿದ್ದಾರೆ.
‘‘ಎಲ್ಲಾ ಕೃಷಿ ಚಟುವಟಿಕೆಗಳನ್ನು ಒಂದಕ್ಕೊಂದು ಪೂರಕವಾಗುವಂತೆ ಕೈಗೊಂಡಿದ್ದೇನೆ. ಬೀಜ ನಿಗಮಕ್ಕೆ ಮಾಡಿದ ಭತ್ತದಿಂದ ವಾಪಸು ದೊರೆಯುವ ಜೊಳ್ಳು ಹಾಗೂ ನುಚ್ಚನ್ನು ಮೀನುಗಳಿಗೆ ಆಹಾರವಾಗಿ ಬಳಸುತ್ತೇನೆ. ಸುಧಾರಿತ (ಹನಿ) ನೀರಾವರಿ ಪದ್ಧತಿ ಮೂಲಕ ಜೈವಿಕ ಗೊಬ್ಬರ ಪೂರೈಸು ವುದರಿಂದ ನೈಸರ್ಗಿಕ ಸಂಪನ್ಮೂಲವಾದ ನೀರನ್ನು ಪೋಲಾಗದಂತೆ ನೋಡಿಕೊಳ್ಳುತ್ತಿ ದ್ದೇನೆ. ಹಸಿರೆಲೆ ಗೊಬ್ಬರದ ಬಳಕೆಯಿಂದ ಭತ್ತದ ಇಳುವರಿ ಹೆಚ್ಚಿಸಲಾಗಿದ್ದು, ನೀರಿನ ಮಿತಬಳಕೆಗೆ ಅನುಕೂಲವಾಗಿದೆ. ಅಲ್ಲದೇ ತೋಟಗಾರಿಕೆಯಲ್ಲಿ ಹಸಿರೆಲೆ ಬಳಕೆಯಿಂದ ಸೂಕ್ಷ್ಮ ಜೀವಾಣುಗಳು ವೃದ್ಧಿಯಾಗಿ ಉತ್ತಮ ಫಲಿತಾಂಶ ಪಡೆಯುವುದು ಮಾತ್ರವಲ್ಲದೇ ರೋಗಮುಕ್ತ ಬೆಳೆಗಳನ್ನು ಬೆಳೆಯಲು ಇದು ಅನುಕೂಲವಾಗಿದೆ. ಗದ್ದೆಗಳಲ್ಲಿ ಅಜೋಲಾ (ಆಲ್ಗೆ) ತಯಾರಿಕೆಯಿಂದ ಭತ್ತಕ್ಕೆ ಅಗತ್ಯ ಸಾರಜನಕವನ್ನು ಒದಗಿಸಲಾಗುತ್ತಿದೆ.ಅಲ್ಲದೇ ಅದನ್ನು ಜಾನುವಾರುಗಳಿಗೆ ಮೇವಾಗಿ ಬಳಸುತ್ತಿರುವುದರಿಂದ ಹಾಲಿನ ಗುಣಮಟ್ಟ ವೃದ್ಧಿಯಾಗಿದೆ’’ ಎಂದು ಕುಮಾರ್ ವಿವರಿಸುತ್ತಾರೆ.
ತೋಟಗಾರಿಕೆಯಲ್ಲಿ ಪ್ರಮುಖವಾಗಿ ಅಡಿಕೆಗಳನ್ನು ಬೆಳೆಯುತ್ತಿರುವ ಇವರು ಮಿಶ್ರಬೆಳೆಯಾಗಿ ಬಾಳೆಯನ್ನು ಬೆಳೆದು ಅದರಿಂದ ಅಡಿಕೆಗೆ ಅಗತ್ಯ ಪೊಟ್ಯಾಷ್, ಸಾವಯವ ಹಾಗೂ ತೇವಾಂಶ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೋಟದ ಮಧ್ಯದ ಬದುಗಳಲ್ಲಿ ತೆಂಗನ್ನು ಬೆಳೆಸಿ ಎಳೆನೀರು, ತೆಂಗಿನಕಾಯಿ ಸೇರಿದಂತೆ ವೌಲ್ಯ ವರ್ಧನೆ ಯಿಂದ, ತೆಂಗಿನ ಎಣ್ಣೆಯನ್ನು ತಯಾರಿಸಿ ಮಾರುತ್ತಾರೆ. ಅದರಿಂದ ಬಂದ ಹಿಂಡಿಯನ್ನು ದನ-ಕರುಗಳಿಗೆ ಹಾಗೂ ಮೀನುಗಳಿಗೆ ಬಳಸುತ್ತಾರೆ.
ತೋಟದ ಪೂರ್ವ ಹಾಗೂ ಪಶ್ಚಿಮ ದಿಕ್ಕಿನ ಬದುಗಳ ಮೇಲೆ ಸಾಗುವಾನಿ ಯನ್ನು ಬೆಳೆದು ಮುಖ್ಯ ಬೆಳೆಗಳಿಗೆ ಗಾಳಿತಡೆಯಂತೆ ಅಳವಡಿಸಲಾಗಿದೆ. ನೈಸರ್ಗಿಕ ಆಹಾರ ಉತ್ಪಾದನೆಗೆ ಪೂರಕವಾಗಲು, ಮೀನುಗಳಿಗೆ ಹಿಂಡಿ, ಸೆಗಣಿ ಮುಂತಾದವುಗಳನ್ನು ಒದಗಿಸಲಾಗುತ್ತಿದೆ.ಮೀನು ಹೊಂಡಗಳ ನೀರು ಬದಲಾವಣೆ ಸಮಯದಲ್ಲಿ ಈ ಸಾರಯುಕ್ತ ನೀರನ್ನು ಭತ್ತದ ಪೈರಿಗೆ ಹಾಕಲಾಗುತ್ತದೆ.ಸಾವಯವ ರೀತಿಯಲ್ಲಿ ಪಾಲನೆ ಮಾಡಿದ ಮೀನುಗಳು ಬದುಕುಳಿಯುವ ಪ್ರಮಾಣ ಹೆಚ್ಚು ಎನ್ನುವುದನ್ನು ಅವರು ಈ ಮೂಲಕ ತೋರಿದ್ದಾರೆ. ಹೀಗೆ ಇವರು ಅನುಸರಿಸುವ ಕೃಷಿ ವಿಧಾನಗಳು ಕೊಂಡಿಹಾಕಿಕೊಂಡಂತೆ ಒಂದಕ್ಕೊಂದು ಪೂರಕವಾಗಿವೆ.
ಕೃಷಿ ಹಾಗೂ ಮಾರುಕಟ್ಟೆಯ ಕುರಿತು ದಿನಪತ್ರಿಕೆಗಳಲ್ಲಿ ಕೃಷಿ ಆಧರಿತ ಪತ್ರಿಕೆಗಳು, ದೂರದರ್ಶನದಲ್ಲಿ ಹಾಗೂ ಇ-ಮಾರ್ಕೆಟಿಂಗ್ ಮೂಲಕ ಪಡೆದು ಕೊಂಡು ಮಾಹಿತಿಯನ್ನು ನನ್ನ ಕೃಷಿ ಕಾರ್ಯ ದಲ್ಲಿ ಆಳವಡಿಸಿಕೊಳ್ಳುತ್ತೇನೆ ಎನ್ನುತ್ತಾರೆ ಕುಮಾರ್. ತಿಂಗಳಿಗೆ ಸುಮಾರು 5 ರಿಂದ 8 ಕೃಷಿಕರಿಗೆ ಸಾವಯವ ಕೃಷಿ ಹಾಗೂ ಮೀನು ಕೃಷಿ ಮಾಹಿತಿ ನೀಡುವುದಲ್ಲದೇ ಆಕಾಶವಾಣಿ ಹಾಗೂ ದೂರದರ್ಶನದ ಮೂಲಕ ಕೂಡ ರೈತರಿಗೆ ಅವರು ಮಾಹಿತಿ ಒದಗಿಸಿದ್ದಾರೆ. ಯಶಸ್ವಿ ಮೀನುಮರಿ ಪಾಲನೆ ಕುರಿತು ಕುಮಾರ್‌ರ ತೋಟದಲ್ಲಿ ನಡೆದ ಕ್ಷೇತ್ರೋತ್ಸವದ ಮೂಲಕ ಆಸಕ್ತ ಮೀನು ಕೃಷಿಕರು ಮಾಹಿತಿ ಪಡೆದುಕೊಂಡಿದ್ದಾರೆ.ತಾನು ಕಲಿತು ಅನುಸರಿಸುತ್ತಿರುವ ಸಂಪೂರ್ಣ ಸಾವಯವ ಕೃಷಿಯಲ್ಲಿರುವ ಲಾಭದ ಬಗ್ಗೆ ಇತರರಿಗೂ ತಿಳಿಸುವುದು, ಮುಖ್ಯವಾಗಿ ನಾಡಿನ ಯುವಜನರಲ್ಲಿ ಕೃಷಿಯನ್ನು ಜನಪ್ರಿಯಗೊಳಿಬೇಕೆಂದು ಕುಮಾರ್‌ರ ಆಶಯ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...