
ಇಂಗ್ಲೆಂಡ್, ಕೆನಡಾ ಮತ್ತು ಆಸ್ಟ್ರೇಲಿಯ ದೇಶಗಳ ವಲಸೆ ನೀತಿಗಳು ಇತ್ತೀಚೆಗೆ ಬದಲಾಗಿವೆ. ಇವುಗಳ ಬಗ್ಗೆ ಸ್ವಲ್ಪ ಎಚ್ಚರವಿರುವುದು ಅಗತ್ಯ. ವಿದೇಶಗಳಲ್ಲಿ ಕಲಿಯಲು ಇಚ್ಚಿಸುವವರು ಇಂತಹ ವಿಷಯಗಳನ್ನು ತಿಳಿದಿರುವುದು ಒಳಿತು.
ಮಾರ್ಚ್ ತಿಂಗಳ ಆರಂಭದಲ್ಲೇ, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಕರೆ ತರುವುದಕ್ಕೆ ಇಚ್ಛಿಸುವ ಯಾವುದೇ ಕಾಲೇಜು ಅಥವಾ ವಿ.ವಿ ಗಳು ಮಾನ್ಯತೆ ಹೊಂದಿರಬೇಕು ಮತ್ತು ಅನುಮತಿ ಹೊಂದಿರುವುದನ್ನು ಇಂಗ್ಲೆಂಡ್ ಕಡ್ಡಾಯಗೊಳಿಸಿದೆ.ಎಲ್ಲ ವಿದೇಶಿ ವಿದ್ಯಾರ್ಥಿಗಳು ಯು.ಕೆ ಗಡಿ ಏಜೆನ್ಸಿಯಿಂದ ಅನುಮತಿ ಪಡೆದ ಕಾಲೇಜೊಂದರಿಂದ ಪ್ರಾಯೋಜಿತವಾಗಿರಬೇಕಾದುದನ್ನು ಮತ್ತು ವೀಸಾವೊಂದು ಮಂಜೂರಾಗುವ ಮುಂಚೆ ಅವುಗಳು ಬೆಂಬಲಿಸುವುದನ್ನು ಪ್ರದರ್ಶಿಸಲು ಇಂಗ್ಲೆಂಡ್ ಕಡ್ಡಾಯಗೊಳಿಸಿದೆ.
ವಿದ್ಯಾರ್ಥಿಯ ಪ್ರವೇಶದ ಬೇಷರತ್ತಿನ ಆಹ್ವಾನ ನೀಡುವ ಶಿಕ್ಷಣ ಸಂಸ್ಥೆ ಇಲ್ಲವೇ ವಿಶ್ವವಿದ್ಯಾನಿಲಯ,ಇಂಗ್ಲೆಂಡ್ ಗಡಿ ಘಟಕದ ನಿಯಮಗಳಿಗೆ ಅನುಸಾರವಾಗಿ ‘ಪ್ರಾಯೋಜಕ’ನಾಗಿರಬೇಕು. ವಿದ್ಯಾರ್ಥಿಗಳಿಗೆ ಎಎಸ್‌ಬಿ ಉತ್ತೀರ್ಣವಾಗುವ ಮೂಲಕ ತಮ್ಮ ಆಂಗ್ಲ ಭಾಷಾ ಸಾಮರ್ಥ್ಯ ಪ್ರದರ್ಶಿಸುವುದು ಹೆಚ್ಚುವರಿ ಅವಶ್ಯಕತೆಯಾಗಿದೆ. ಇಂಗ್ಲಿಷ್ ಭಾಷೆಯ ಅಧ್ಯಯನಕ್ಕಾಗಿ ಬರುವವರು ಸೇರಿದಂತೆ ಪದವಿ ಮಟ್ಟಕ್ಕಿಂತ ಕೆಳಗಿನ ವಿದ್ಯಾರ್ಜನೆಗೆ ಎಲ್ಲ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗಲಿದೆ.
2010 ಜನವರಿ 1 ರಿಂದ ಆಸ್ಟ್ರೇಲಿಯಾ ಸರಕಾರ ಕೆಲವು ಬದಲಾವಣೆಗಳನ್ನು ತಂದಿದೆ.ಇ-ವೀಸಾ ಮಾರ್ಗವನ್ನು ತೆಗೆದು ಹಾಕಲಾಗಿದೆ. ಆಸ್ಟ್ರೇಲಿಯಾದ ಹೊರಗಿನಿಂದ ಇ- ವೀಸಾ ಮೂಲಕ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಅರ್ಜಿಗಳು ಕೋರ್ಸುಗಳು ಶುರುವಾಗುವ ಮೂರು ತಿಂಗಳು ಮುಂಚೆ ಸಲ್ಲಿಸಬೇಕು. ಬರಹದ ಮೂಲಕ ವೀಸಾ ಅರ್ಜಿ ಸಲ್ಲಿಸುವವರು ತಮ್ಮ ಕೋರ್ಸುಗಳು ಆರಂಭವಾಗುವ ನಾಲ್ಕು ತಿಂಗಳು ಮೊದಲು ಸಲ್ಲಿಸಬೇಕು.
ನೋಂದಾಯಿತ ಆಸ್ಟ್ರೇಲಿಯನ್ ವಿ.ವಿ ಗಳಿಂದ ಖಚಿತ ಪ್ರವೇಶ ಆಹ್ವಾನ ಪಡೆದ ನಂತರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಈಗ ಸಾಕಷ್ಟು ಸಂಪನ್ಮೂಲಕ್ಕೆ ಯೋಗ್ಯ ಮಾರ್ಗವೊಂದನ್ನು ಹೊಂದಿರುವುದನ್ನು ಪ್ರಸ್ತುತಪಡಿಸಬೇಕಾದ ಅಗತ್ಯವಿದೆ. ವೀಸಾಕ್ಕೆ ಎರಡು ವರ್ಷದ ಅಂಗೀಕಾರಾರ್ಹತೆಯ ಐಉಔಖಸ್ಕೋರನ್ನು ಸಮ್ಮತಿ ನೀಡಲಾಗುವುದು.
ಕೆನಡಾದ ಪೌರತ್ವ ಮತ್ತು ವಲಸೆ ಸಚಿವಾಲಯ,ಉದ್ಯೋಗದ ರೀತಿಯ ಕುರಿತು ನಿರ್ಬಂಧ ರಹಿತವಾಗಿ ಮತ್ತು ಕೆಲಸವೊಂದಕ್ಕೆ ಅಗತ್ಯವಿಲ್ಲವಾದರೂ ಮುಕ್ತ ಅನುಮತಿ ಪಡೆಯಲು ಅಂತಾರಾಷ್ತ್ರೀಯ ವಿದ್ಯಾರ್ಥಿಗಳಿಗೆ ತನ್ನ ಸ್ನಾತಕೋತ್ತರ ಕೆಲಸ ಅನುಮತಿ ಕಾರ್ಯಕ್ರಮದ ಮೂಲಕ ಅನುವು ಮಾಡಿದೆ.ಆದರೆ ಕೆನಡಾದಲ್ಲಿ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ಪ್ರಮಾಣೀಕರಣ ಮತ್ತು ಇತರೆ ಮೂಲ ಪ್ರಕ್ರಿಯೆಗಳ ಅಗತ್ಯವಿದೆ.
ವಿದೇಶಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಕೆನಡಾದ ಶಿಕ್ಷಣ ಸಂಸ್ಥೆಯೊಂದರಲ್ಲಿ ಪ್ರವೇಶ ಪಡೆದುಕೊಂಡಿರಬೇಕು.ವಿದ್ಯಾರ್ಥಿ ಪ್ರಮಾಣೀಕರಣ /ವೀಸಾ ನೀಡುವುದಕ್ಕಾಗಿ ಆ ವಿದ್ಯಾಸಂಸ್ಥೆ ವಲಸೆ ಪ್ರಾಧಿಕಾರದಿಂದ ಪ್ರಮಾಣೀಕೃತವಾಗಿರಬೇಕು.ಒಮ್ಮೆ ಪ್ರವೇಶ ಪಡೆದರೆ ವಿದ್ಯಾರ್ಥಿಯೊಬ್ಬ ಕೆನಡಾ ವಲಸೆ ಕಚೆೇರಿಗೆ ವಿದ್ಯಾರ್ಥಿ ಪ್ರಮಾಣೀಕರಣ/ವೀಸಾಕ್ಕಾಗಿ ಅರ್ಜಿ ಸಲ್ಲಿಸಬೇಕು.ವಿದ್ಯಾರ್ಥಿ ವೀಸಾಗಳಿಗೆ ಕೆನಡಾದಲ್ಲಿ ವಿದ್ಯಾಭ್ಯಾಸ ಮಾಡುವ ಕುರಿತು ದೃಢೀಕೃತ ಆಹ್ವಾನ,ತನ್ನ ಶಿಕ್ಷಣ ಮತ್ತು ವಾಸ ವೆಚ್ಚಗಳಿಗೆ ಸಂಪನ್ಮೂಲ ಹೊಂದಿರುವುದಕ್ಕೆ ಪುರಾವೇ ಇಲ್ಲವೇ ಬ್ಯಾಂಕಿನ ಸಾಲಪತ್ರ ಸೇರಿದಂತೆ ಅನೇಕ ದಾಖಲೆಗಳ ಅಗತ್ಯವಿದೆ.
ವಿದ್ಯಾರ್ಥಿಯೊಬ್ಬ ಕೆನಡಾದೊಳಗೆ ಇಲ್ಲವೇ ಹೊರಗಿನಿಂದ ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲ ದೇಶಗಳು ಗಮನಿಸುವ ಸಾಮಾನ್ಯ ನಿಯಮಗಳು:ಎಲ್ಲ ವಿದ್ಯಾರ್ಥಿ ವೀಸಾ ಅರ್ಜಿದಾರರು,ಆರೋಗ್ಯ ,ನಡತೆ ಮತ್ತು ಸುರಕ್ಷತಾ ಪರಿಶೀಲನೆ ಸೇರಿದಂತೆ ವಲಸೆ ಪರಿಶೀಲನೆಯ ಮಾನದಂಡಕ್ಕೆ ಒಳಪಡಬೇಕು. ವಿದ್ಯಾರ್ಥಿ ವೀಸಾವೊಂದರ ಎಲ್ಲ ಅರ್ಜಿದಾರರು,ವಿದ್ಯಾರ್ಜನೆಯ ಗುರಿಯಾಗಿ ಸಂಬಂಧಿಸಿದ ರಾಷ್ಟ್ರ ಪ್ರವೇಶಿಸುವುದಕ್ಕೆ ಯೋಗ್ಯ ಉದ್ದೇಶ ಹೊಂದಿರುವುದನ್ನು ಪ್ರಸ್ತುತ ಪಡಿಸಬೇಕು.
ಶಿಕ್ಷಣ ಪ್ರವೇಶದ ಬೇಷರತ್ತಿನ ಆಹ್ವಾನವನ್ನು (ಆಸ್ಟ್ರೇಲಿಯಾ ಮತ್ತು ಕೆನಡಾ)ಇಲ್ಲವೇ ವಿದ್ಯಾಭ್ಯಾಸದ ಸಮ್ಮತಿಯ ಖಚಿತತೆಯನ್ನು(ಇಂಗ್ಲೆಂಡ್)ಈ ಪುರಾವೆಗಳು ಸಾಬೀತುಪಡಿಸುವಂತಿರಬೇಕು. ಎಲ್ಲ ವಿದ್ಯಾರ್ಥಿ ವೀಸಾ ಅರ್ಜಿದಾರರು ಆಂಗ್ಲ ಭಾಷಾ ದಕ್ಷತಾ ಪರೀಕ್ಷೆಗಳು ಮತ್ತು ಇತರೆ ವಿದ್ಯಾರ್ಹತೆಗಳ ಅವಶ್ಯಕತೆಗಳನ್ನು ಪೂರೈಸಬೇಕು.
ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...
Click here to post your views ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...
ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...
ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...
ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...
‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...
ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...
ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...
ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...