ಅರಣ್ಯಗಳು ನಮ್ಮ ಆಸ್ತಿ. ಅವು ನಮಗೆ ಕಟ್ಟಿಗೆ, ಮೇವು, ಕೈಗಾರಿಕೆಗಳಿಗೆ ಬೇಕಾದಷ್ಟು ಕಚ್ಛಾವಸ್ತುಗಳು ಹಾಗೂ ಮತ್ತಿತರ ಉಪ ಉತ್ಪನ್ನಗಳನ್ನು ಕೊಡುತ್ತವೆ. ವನ್ಯಮೃಗಗಳಿಗೆ ಅರಣ್ಯಗಳು ವಾಸಸ್ಥಾನವಾಗಿದೆ. ಅಲ್ಲದೇ ಪರಿಸರದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿ. ಅರಣ್ಯಗಳು ಮಣ್ಣಿನ ಸವಕಳಿಯನ್ನು ತಪ್ಪಿಸುತ್ತದೆ. ಕಾಡಿದ್ದರೆ ಕಾರ್ಮೋಡ ಎನ್ನುವಂತೆ ದಟ್ಟವಾದ ಅರಣ್ಯಗಳು ಇದ್ದಲ್ಲಿ ಮಳೆ ಸರಿಯಾದ ಸಮಯಕ್ಕೆ ಬರಲು ಹಾಗೂ ಆರ್ಥಿಕಾಭಿವೃದ್ಧಿಗೂ ಅರಣ್ಯಗಳ ಕೊಡುಗೆ ಅಪಾರ.
ನಮ್ಮ ಅರಣ್ಯಗಳು ಕಡಿಮೆಯಾಗದಂತೆ ಭೂ ವಿಸ್ತೀರ್ಣದ ಶೇ.33 ರಷ್ಟು ಇರುವಂತೆ ನೋಡಿಕೊಳ್ಳಬೇಕು. ಅರಣ್ಯಗಳು ಕಡಿಮೆಯಾದರೆ ಅರಣ್ಯೀಕರಣ ಮಾಡಲು ಅರಣ್ಯ ಸಂಪನ್ಮೂಲಗಳನ್ನು ಕಾಯ್ದುಕೊಂಡು ನಿರ್ವಹಿಸಲು ತರಬೇತಿ ಪಡೆದ ಸಿಬ್ಬಂದಿ ಅಗತ್ಯವಿದೆ. ಹಾಗೂ ತಾಂತ್ರಿಕ ನಿರ್ವಹಣೆಯ ಸಿಬ್ಬಂದಿ, ಸಂರಕ್ಷಣಾಧಿಕಾರಿಗಳು ಬೇಕಾಗುತ್ತಾರೆ. ಇಂದು ಅರಣ್ಯಗಳ ಉತ್ಪನ್ನಗಳನ್ನು ಅವಲಂಬಿಸಿದ ಹಲವಾರು ಉದ್ದಿಮೆಗಳಿವೆ. ಸಂಶೋಧನಾ ಕೇಂದ್ರಗಳಿವೆ. ಅರಣ್ಯಾಭಿವೃದ್ಧಿ ನಿಗಮಗಳಿವೆ.
ಅರಣ್ಯಶಾಸ್ತ್ರ ಅಧ್ಯಯನದ ವಿಷಯವಾಗಿ ಸಾಮಾಜಿಕ ಅರಣ್ಯಗಳನ್ನು ಬೆಳೆಸುವುದೂ ಆಗಬೇಕು. ಅರಣ್ಯಶಾಸ್ತ್ರ ಓದಿ ಉದ್ಯೋಗಾವಕಾಶ ಪಡೆಯುವವರು ಮೂಲತ: ಹೊರವಲಯದಲ್ಲಿ ಕೆಲಸ ಮಾಡುವ ಒಲವು ಹೊಂದಿರಬೇಕು. ಒಳ್ಳೆಯ ಆರೋಗ್ಯವಿರಬೇಕು. ಸಾಂಸ್ಥಕ ಸಾಮರ್ಥ್ಯ ಹಾಗೂ ತಾಳ್ಮೆಯಿರಬೇಕು. ಸಿಬ್ಬಂದಿ ನಿರ್ವಹಣೆ ತಿಳಿದಿರಬೇಕು. ಅರಣ್ಯ ಪರಿಸರವನ್ನು ಸಂರಕ್ಷಿಸುವ ಆಸ್ಥೆ ಇರಬೇಕು.
ಅರಣ್ಯಶಾಸ್ತ್ರದಲ್ಲಿ ಎಂ.ಎಸ್ಸಿ(ಫಾರೆಸ್ಟ್ರಿ)ಕೋರ್ಸ್ ಸುಮಾರು ಹನ್ನೆರಡು ವಿ.ವಿ ಗಳಲ್ಲಿ ಲಭ್ಯವಿದೆ. ಬೆಂಗಳೂರು ಹಾಗೂ ಧಾರವಾಡದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯಗಳಲ್ಲಿ ಬಿ.ಎಸ್ಸಿ (ಫಾರೆಸ್ಟ್ರಿ) ಕೋರ್ಸ್ ಸಹ ಲಭ್ಯವಿದೆ. ಅರ್ಹತೆ ಪ್ಲಸ್ ಟು ಅಥವಾ ಸಮಾನ ಪರೀಕ್ಷೆ (ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಓದಿರಬೇಕು).
ಅರಣ್ಯ ನಿರ್ವಹಣೆ: ಭೋಪಾಲದ ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಲ್ಲಿ ಈ ವಿಷಯ ಅಧ್ಯಯನ ಮಾಡಲು ಅವಕಾಶವಿದೆ. ಎಲ್ಲ ಶಿಸ್ತಿನ ಪದವೀಧರರಿಗೆ ಕೋರ್ಸ್ ಲಭ್ಯ.
ಎರಡು ವರ್ಷದ ಅವಧಿಯ ಫಾರೆಸ್ಟ್ರಿ ಮ್ಯಾನೇಜ್‌ಮೆಂಟ್‌ನಲ್ಲಿ ಪಿ.ಡಿ ಡಿಪ್ಲೊಮಾ ಪ್ರವೇಶಕ್ಕೆ ಅಖಿಲ ಭಾರತ ಆಧಾರದ ಲಿಖಿತ ಪರೀಕ್ಷೆಯಲ್ಲಿ ,ಇಂಗ್ಲಿಷ್‌ನಲ್ಲಿನ ಗ್ರಹಣ ಶಕ್ತಿ ಸಮಸ್ಯೆ ಬಿಡಿಸುವ ಕೌಶಲಗಳು, ಕೊಟ್ಟ ಸಂದರ್ಭಗಳು ವಿಶ್ಲೇಷಿಸುವ ಸಾಮರ್ಥ್ಯ ಹಾಗೂ ಸಾಮಾನ್ಯ ಜಾಗೃತಿ ಈ ವಿಚಾರಗಳು ಒಳಗೊಳ್ಳುತ್ತವೆ.ಪರೀಕ್ಷೆ ಬರೆದವರು ಸಾಮೂಹಿಕ ಚರ್ಚೆ ಮತ್ತು ಸಂದರ್ಶನಕ್ಕೆ ಹಾಜರಾಗಬೇಕು.
ವಿಜ್ಞಾನೇತರ ವಿದ್ಯಾರ್ಥಿಗಳಿಗೆ ಪಿಜಿಡಿಎಫ್‌ಎಮ್ ಅಲ್ಲದೆ ಅರಣ್ಯ ಸಂಬಂಧಿತ ಕೋರ್ಸ್‌ಗಳನ್ನು ಪಾಂಡಿಚೇರಿ ವಿವಿಯ ಸಲೀಂ ಅಲಿ ಸ್ಕೂಲ್ ಆಫ್ ಇಕಾಲಜಿ ಹಾಗೂ ಡೆಹ್ರಾಡೂನಿನ ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ದಲ್ಲಿ ಒದಗಿಸಲಾಗುತ್ತದೆ. ವನ್ಯಜೀವನ ಸಂಬಂಧವಾಗಿ ಸ್ನಾತಕೋತ್ತರ ಪದವಿ ರಾಜ್‌ಕೋಟ್‌ನ ಸೌರಾಷ್ಟ್ರ ವಿವಿ,ಮದ್ರಾಸ್ ವಿವಿ, ತಿರುಚಿಯ ಭಾರತಿದಾಸನ್ ವಿವಿಗಳಲ್ಲಿ ಲಭ್ಯವಿದೆ.
ಐಎಫ್‌ಎಸ್ ಅಥವಾ ಇಂಡಿಯನ್ ಫಾರೆಸ್ಟ್ ಸರ್ವಿಸ್ ಅಖಿಲ ಭಾರತ ಸೇವೆಯದಾಗಿದ್ದು, ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್‌ಸಿ)ವು ಪರೀಕ್ಷೆ ನಡೆಸುತ್ತದೆ.ಲಿಖಿತ ಪರೀಕ್ಷೆ 700 ಅಂಕಗಳಾಗಿದ್ದು ನಾಲ್ಕು ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಬೇಕು.ವಿದ್ಯಾರ್ಹತೆ ಯಾವುದೇ ಪದವಿ (ಕಲೆ/ವಾಣಿಜ್ಯ ಹೊರತಾಗಿ )ವಯೋಮಿತಿ 21 ರಿಂದ 28 ವರ್ಷಗಳು.ಅಂತಿಮ ಆಯ್ಕೆ ಸಂದರ್ಶನದ ಮೂಲಕ.150 ಅಂಕಗಳು.ಐಎಫ್‌ಎಸ್ ಅಧಿಕಾರಿಗಳನ್ನು ತರಬೇತಿ ನಂತರ ಜವಾಬ್ದಾರಿಯುತ ಸ್ಥಾನಕ್ಕೆ ನೇಮಿಸಲಾಗುತ್ತದೆ.
ಪಿ.ಜಿ.ಡಿಪ್ಲೊಮಾ ಆದವರನ್ನು ಸರಕಾರಿ,ಸರಕಾರೇತರ ಸಂಸ್ಥೆಗಳಲ್ಲಿ ಸಂಶೋಧನಾ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ವಲಯದಲ್ಲಿ ತೆಗೆದುಕೊಳ್ಳಲಾಗುತ್ತದೆ.ಒಳ್ಳೆಯ ವರಮಾನವಿರುವ ಅರಣ್ಯ ಸಂಬಂಧಿ ಕೆರಿಯರ್ ಉತ್ತಮವೂ, ಭರವಸೆ ನೀಡುವಂಥವೂ ಆಗಿರುತ್ತದೆ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...