ಬೆರಳಚ್ಚು/ಶೀಘ್ರಲಿಪಿ ತರಬೇತಿ ಪಡೆಯುತ್ತಿರುವ ಮಹಿಳಾ ವಿದ್ಯಾರ್ಥಿಗಳಿಂದ 2010-11ನೆ ಸಾಲಿನಲ್ಲಿ ತರಬೇತಿ ಭತ್ತೆ ಮಂಜೂರಾತಿ ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರಕಾರದಿಂದ ಮಾನ್ಯತೆ ಪಡೆದ ವಾಣಿಜ್ಯ ವಿದ್ಯಾ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿರುವ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದ್ದು, ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಜೇಷ್ಠತೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಕನ್ನಡ ಬೆರಳಚ್ಚು ಮತ್ತು ಕನ್ನಡ ಶೀಘ್ರಲಿಪಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಸೆ.22 ಕೊನೆಯ ದಿನವಾಗಿರುತ್ತದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಧಿಕಾರಿಗಳ ಕಚೇರಿ, ಸಾರಥಿ ಭವನ , ಅಜ್ಜರಕಾಡು, ಜಿಲ್ಲಾ ಕ್ರೀಡಾಂಗಣದ ಬಳಿ, ಉಡುಪಿ ಇವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ತೋಟಗಾರಿಕಾ ಮಿಷನ್ ಯೋಜನೆಗಳಡಿಯಲ್ಲಿ 2010-11ನೆ ಸಾಲಿಗೆ ತೋಟಗಾರಿಕಾ ಅಭಿವೃದ್ಧಿಗೆ ಸಹಾಯಧನವನ್ನು ನೀಡಲಾಗುತ್ತಿದೆ. ಆಸಕ್ತ ರೈತರು ಸಹಾಯಧನಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಯೆಂದು ತೋಟಗಾರಿಕಾ ಉಪನಿರ್ದೇಶಕರು ತಿಳಿಸಿದ್ದಾರೆ. ರೈತರು ಹೆಚ್ಚಿನ ಮಾಹಿತಿಯನ್ನು ಸಂಬಂಧಪಟ್ಟ ತಾಲೂಕು ಅಧಿಕಾರಿಗಳನ್ನು ಸಂಪರ್ಕಿಸಿ ಎಲ್ಲಾ ವಿವರಗಳನ್ನು ಸಲ್ಲಿಸಿ ಅರ್ಜಿಗಳನ್ನು ನೀಡಿ ಸಹಾಯಧನವನ್ನು ಪಡೆದುಕೊಳ್ಳ ಬಹುದಾಗಿದೆ. ರೈತರು ಮಂಗಳೂರಿನ ಬೆಂದೂರ್ ವೆಲ್‌ನಲ್ಲಿರುವ ತೋಟಗಾರಿಕಾ ಉಪನಿರ್ದೇಶಕರನ್ನು ಕೂಡಾ ಭೇಟಿ ಮಾಡಿ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.
***
ಭೂಸೇನೆಗೆ ಭರ್ತಿಮಾಜಿ ಸೈನಿಕರ ಮಕ್ಕಳು ಮತ್ತು ಅವಲಂಬಿತರಿಗೆ ಟಿಆರ್ ಜಿ ಬಿಎನ್ ಪಿಟಿ ಗ್ರೌಂಡ್, ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನಲ್ಲಿ ಅ.4ರಂದು ಯೂನಿಟ್ ಹೆಡ್ ಕ್ವಾರ್ಟರ್ಸ್ ಕೋಟಾದಡಿ ರಿಕ್ರೂಟ್‌ಮೆಂಟ್ ರ್ಯಾಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮಂಗಳೂರು -6 (ದೂ.ಸಂ.:2450933) ಇವರನ್ನ್ನು ಸಂಪರ್ಕಿಸಬಹುದು ಎಂದು ಉಪನಿರ್ದೇಶಕರ ಕಾರ್ಯಾಲಯದ ಪತ್ರಿಕಾ ಪ್ರಕಟನೆ ತಿಳಿಸಿದೆ.
ಕೆನರಾ ಬ್ಯಾಂಕ್‌ನಲ್ಲಿ ಖಾಲಿ ಇರುವ 186 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-09-2010. ಪರೀಕ್ಷಾ ದಿನಾಂಕ: 12-12-2010.
ಹುದ್ದೆ ವಿವರ: 1) ಡಿವಿಷನಲ್ ಮ್ಯಾನೇಜರ್-ಸಿಎ-03 ಹುದ್ದೆ, 2) ಡಿವಿಷನಲ್ ಮ್ಯಾನೇಜರ್-ಎಚ್‌ಆರ್ ಪ್ಲಾನಿಂಗ್-01 ಹುದ್ದೆ, 3) ಡಿವಿಷನ್ ಮ್ಯಾನೇಜರ್- ಟೆಕ್ನಿಕಲ್-05 ಹುದ್ದೆ, 4) ಸೀನಿಯರ್ ಮ್ಯಾನೇಜರ್-ಸಿಎ-08 ಹುದ್ದೆ, 5) ಸೀನಿಯರ್ ಮ್ಯಾನೇಜರ್-ಟೆಕ್ನಿಕಲ್-17 ಹುದ್ದೆ, 6) ಮ್ಯಾನೇಜರ್-ಟೆಕ್ನಿಕಲ್-03 ಹುದ್ದೆ, 7) ಅಗ್ರಿ-ಬ್ಯುಸಿನೆಸ್ ಮಾರ್ಕೆಟಿಂಗ್ ಆಫೀಸರ್-10 ಹುದ್ದೆ, 8) ಕಂಪ್ಯೂಟರ್ ಪ್ರೊಗ್ರಾಮರ್--07 ಹುದ್ದೆ, 9) ಡಾಟಾಬೇಸ್ ಅಡ್ಮಿನಿಸ್ಟ್ರೇಟರ್-01 ಹುದ್ದೆ, 10) ಫೈನಾನ್ಸಿಯಲ್ ಅನಾಲಿಸ್ಟ್-01 ಹುದ್ದೆ, 11) ಜೂನಿಯರ್ ಎಕಾನೊಮಿಸ್ಟ್-14 ಹುದ್ದೆ, 12) ಲಾ ಆಫೀಸರ್-55 ಹುದ್ದೆ, 13) ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್-07 ಹುದ್ದೆ, 14) ಆಫಿಷಿಯಲ್ ಲಾಂಗ್ವೇಜ್ ಆಫೀಸರ್-05 ಹುದ್ದೆ, 15) ಸೆಕ್ಯೂರಿಟಿ ಆಫೀಸರ್-15 ಹುದ್ದೆ, 16) ಎಸ್‌ಎಂಇ ಮಾರ್ಕೆಟಿಂಗ್ ಆಫೀಸರ್-10 ಹುದ್ದೆ, 17) ಸಿಸ್ಟಮ್ ಎಂಜಿನಿಯರ್-01 ಹುದ್ದೆ, 18) ಟೆಕ್ನಿಕಲ್ ಫೀಲ್ಡ್ ಆಫೀಸರ್-ಸಿವಿಲ್-03 ಹುದ್ದೆ, 19) ಟೆಕ್ನಿಕಲ್ ಫೀಲ್ಡ್ ಆಫೀಸರ್-ಎಲೆಕ್ಟ್ರಿಕಲ್-02 ಹುದ್ದೆ, 20) ಟೆಕ್ನಿಕಲ್ ಫೀಲ್ಡ್ ಆಫೀಸರ್-ಮೆಕಾನಿಲ್-18 ಹುದ್ದೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ.
ಅರ್ಜಿ ಶುಲ್ಕ: ರೂ. 300/-
ಹೆಚ್ಚಿನ ಮಾಹಿತಿಗೆ www.canarabank.com ವೆಬ್‌ಸೈಟ್ ಸಂಪರ್ಕಿಸಿ.
ನ್ಯೂ ಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) ನಲ್ಲಿ 37 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸ ಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-09-2010.
ಹುದ್ದೆ : ಸ್ಟೈಪೆಂಡರಿ ಟ್ರೈನಿ (ಕೆಟಗರಿ-1) (ಸೈಂಟಿಫಿಕ್ ಅಸಿಸ್ಟೆಂಟ್/ಬಿ). ಒಟ್ಟು ಹುದ್ದೆಗಳು: 12. ವೇತನ ಶ್ರೇಣಿ: ರೂ. 9300/- (ಸ್ಟೈಪೆಂಡ್)
ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 25 ವರ್ಷ. ಹುದ್ದೆ : ಸ್ಟೈಪೆಂಡರಿ ಟ್ರೈನಿ (ಕೆಟಗರಿ-11) (ಟೆಕ್ನಿಷಿಯನ್/ಬಿ). ಒಟ್ಟು ಹುದ್ದೆಗಳು: 25. ವೇತನ ಶ್ರೇಣಿ: ರೂ. 6200/- (ಸ್ಟೈಪೆಂಡ್). ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 24 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿಳಾಸ: ಅಸಿಸ್ಟೆಂಟ್ ಮ್ಯಾನೇಜರ್ (ಎಚ್‌ಆರ್‌ಎಂ), ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಮದ್ರಾಸ್ ಅಟೊಮಿಕ್ ಪವರ್ ಸ್ಟೇಷನ್, ಕಲ್ಪಕಂ-603102, ಕಾಂಚೀಪುರಂ ಜಿಲ್ಲೆ ತಮಿಳುನಾಡು. ಹೆಚ್ಚಿನ ಮಾಹಿತಿಗೆ www.npcil.nic.in ವೆಬ್‌ಸೈಟ್ ಸಂಪರ್ಕಿಸಿ.
ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 700 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-09-2010. ಪರೀಕ್ಷಾ ದಿನಾಂಕ: 28-11-2010.
ಹುದ್ದೆ : ಕ್ಲರ್ಕ್ಸ್
ಒಟ್ಟು ಹುದ್ದೆಗಳು: 700
ವೇತನ ಶ್ರೇಣಿ: ರೂ. 7200-19300/-
ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾಭ್ಯಾಸ: ಶೇಕಡಾ 60 ಅಂಕಗಳೊಂದಿಗೆ 10+2. ಅಥವಾ ಪದವಿ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ.
ಅರ್ಜಿ ಶುಲ್ಕ: ರೂ. 200/-.
ವಿಳಾಸ: ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಯುಬಿಐ, ಬೆಂಗಳೂರು ಬ್ರಾಂಚ್, 40, ಕೆಂಪೇಗೌಡ ರಸ್ತೆ, ಬೆಂಗಳೂರು-560009. ಹೆಚ್ಚಿನ ಮಾಹಿತಿಗೆ www.unitedbankofindia.com ವೆಬ್‌ಸೈಟ್ ಸಂಪರ್ಕಿಸಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಲು 2010-11ನೆ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯು 35 ವರ್ಷ ವಯೋಮಿತಿಯೊಳಗಿದ್ದು, ಕುಟುಂಬದ ವಾರ್ಷಿಕ ಆದಾಯ ರೂ.18000ದೊಳಗಿರುವ, ಕಾನೂನು ಪದವಿಯನ್ನು ಪಾಸು ಮಾಡಿರಬೇಕು.
ಅರ್ಜಿಯನ್ನು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು, ಸೆ.13ರೊಳಗೆ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳಿಗೆ ಸರಕಾರಿ ವಕೀಲರ ಅಧೀನದಲ್ಲಿ 4 ವರ್ಷಗಳ ಕಾಲ ಉಚಿತ ಕಾನೂನು ತರಬೇತಿ ನೀಡಲಾಗುತ್ತದೆ. ಅಲ್ಲದೆ ಪ್ರತೀ ತಿಂಗಳು 1000ರೂ. ಶಿಷ್ಯವೇತನ ನೀಡಲಾಗುತ್ತದೆ.
ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...
Click here to post your views ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...
ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...
ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...
ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...
‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...
ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...
ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...
ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...