
ಪ್ರತಿಯೊಬ್ಬ ಮನುಷ್ಯನಿಗೂ ಯಾವುದಾದರೂ ಒಂದು ರೀತಿಯ ಅಭ್ಯಾಸ ಇರುತ್ತದೆ. ಅದೊಂದು ರೀತಿ ಹವ್ಯಾಸ. ಅವುಗಳಲ್ಲಿ ಕೆಲವು ಈ ರೀತಿ ಇರುತ್ತವೆ.
* ಸ್ಟಾಂಪ್ ಕಲೆಕ್ಷನ್.
* ಹಳೆಯ ನಾಣ್ಯಗಳ ಸಂಗ್ರಹ
* ಹಳೆಯ ನೋಟುಗಳ ಸಂಗ್ರಹ
* ಕನ್ನಡಕಗಳ ಸಂಗ್ರಹ
* ಪೆನ್ನುಗಳ ಸಂಗ್ರಹ
* ಚಮಚಗಳ ಸಂಗ್ರಹ
ಈ ರೀತಿ ಒಬ್ಬೊಬ್ಬ್ಬರ ಅಭ್ಯಾಸ ಒಂದೊಂದು ರೀತಿ ಇರುತ್ತದೆ.ಕೆಲವರ ಮನೆಯಲ್ಲಿ ಹತ್ತಾರು ದಶಕಗಳ ಹಿಂದಿನ ಸ್ಟಾಂಪ್‌ಗಳಿರಬಹುದು. ಅವುಗಳು ಹಾಳಾಗದಂತೆ ತುಂಬಾ ಜೋಪಾನ ವಾಗಿ ಕಾಪಾಡಿಕೊಂಡು ಬರುವ ಹವ್ಯಾಸಿಗಳಿರುತ್ತಾರೆ. ನಿಜವಾಗಿಯೂ ಇದು ಒಂದು ಒಳ್ಳೆಯ ಅಭ್ಯಾಸ. ಅವುಗಳನ್ನು ನೋಡಿದರೆ ಆ ಕಾಲದಲ್ಲಿ ಇಂತಹ ಸ್ಟಾಂಪ್‌ಗಳು ಇತ್ತಾ ಎಂದು ಆಶ್ಚರ್ಯವಾಗುತ್ತದೆ.
ಆ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳ ಆಕೃತಿ, ಬೆಲೆ ಎಲ್ಲವನ್ನೂ ತಿಳಿದಾಗ ನಿಜವಾಗಿ ಆಶ್ಚರ್ಯವಾಗುತ್ತದೆ. ಇವುಗಳೆಲ್ಲಾ ನಾವು ಹುಟ್ಟುವ ಎಷ್ಟೋ ವರ್ಷಗಳ ಮೊದಲು ಬಳಕೆಯಲ್ಲಿದ್ದ ನಾಣ್ಯಗಳು.
ಕೆಲವರ ಮನೆಗೆ ಹೋದರೆ ಸಂಗ್ರಹಣಾ ಕೇಂದ್ರ ಒಂದು ಅದ್ಭುತವಾದ ಪ್ರಾಚೀನ ವಸ್ತುಗಳ ಸಂಗ್ರಹಾಲಯದಂತೆ ಕಂಡುಬರುತ್ತದೆ. ಅವುಗಳನ್ನೆಲ್ಲ ಸಂಗ್ರಹಿಸಿ ಜೋಪಾನ ಮಾಡುವುದೇನೂ ಸುಲಭವಾದ ವಿಚಾರವಲ್ಲ. ಇಂತಹ ಒಂದು ಪ್ರಯತ್ನ ನಿಜವಾಗಿ ಪ್ರಶಂಸನೀಯ.
ಇಂದಿನ ಯುವ ಸಮೂಹದಲ್ಲಿ ತುಂಬಾ ಮಂದಿ ಅನಗತ್ಯವಾದ ಹರಟೆ,ತಿರುಗಾಟ ಮತ್ತು ಜಾಲಿಯಾಗುವುದರಲ್ಲಿ ಕಾಲ ಕಳೆಯು ತ್ತಾರೆ. ಚೆಲ್ಲು ಚೆಲ್ಲಾಗಿ ಆಡಿಕೊಂಡು ವ್ಯರ್ಥವಾಗಿ ಕಾಲಹರಣ ಮಾಡುವುದರ ಬದಲು ಇಂತಹ ಒಳ್ಳೆ ಯ ಅಭ್ಯಾಸವನ್ನು ಬೆಳೆಸಿಕೊಂಡರೆ ಸಾರ್ಥಕವಾಗುತ್ತದೆ.
ಆದರೆ, ಯುವಕರಲ್ಲಿ ತುಂಬಾ ಕಡಿಮೆ ಮಂದಿ ಪ್ರತಿಶತ ಒಬ್ಬ ಅಥವಾ ಇಬ್ಬರು ಇಂತಹ ಒಂದು ಒಳ್ಳೆಯ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಇನ್ನು ಕೆಲವರು ಇದನ್ನು ಸಮಯ ಪಾಲನೆಗಾಗಿ ರೂಢಿಸಿಕೊಂಡಿದವರಿರುತ್ತಾರೆ. ಯಾರಾದರೂ ಮನೆಗೆ ಬಂದರೆ ಎಲ್ಲವನ್ನು ತೋರಿಸಿ ಸಂತೋಷ ಪಡುತ್ತಾರೆ.
ಅವುಗಳನ್ನು ಯಾವ ರೀತಿ ಎಲ್ಲಿಂದ ಯಾವಾಗ ಎಷ್ಟು ಕಷ್ಟ ಪಟ್ಟು ತಂದೆ ಎಂದು ವಿವರಿಸುತ್ತಾರೆ. ಮನೆಗೆ ಬಂದ ಅತಿಥಿಗಳಿಗೆ ಇಂತಹ ಸಂಗ್ರಹವನ್ನು ನೋಡುವ ಅವಕಾಶ ಅನಿರೀಕ್ಷಿತವಾಗಿರುವ ಸಾಧ್ಯತೆಗಳಿರುತ್ತವೆ. ಈ ರೀತಿ ಸಂಗ್ರಹ ಮಾಡಿ ಜೋಪಾನವಾಗಿ ಕಾಪಾಡಿಕೊಂಡು ಬಂದಿರುವವರಿಗೆ ತಮ್ಮ ಸಾಧನೆಯ ಬಗ್ಗೆ ಹೆಮ್ಮೆ ಇರುತ್ತದೆ.
ತಮ್ಮ ಈ ಶ್ರಮ ಸಾರ್ಥಕವಾಗಬೇಕಾದರೆ ಅದನ್ನು ಬೇರೆಯವರು ನೋಡಬೇಕು ಮತ್ತು ಮೆಚ್ಚಿ ಹೊಗಳಿಕೆಯ ಮಾತಾಡಬೇಕು ಎಂಬ ಹಂಬಲ ಮತ್ತು ಒಳ ಆಸೆ ಇರುತ್ತದೆ. ಇದು ತಪ್ಪು ಅಂತ ಅಲ್ಲ. ಆದರೆ ಯಾವುದೂ ಅತಿಯಾಗಬಾರದು. ಒಂದು ಮಿತಿಯಲ್ಲಿರಬೇಕು ಮತ್ತು ಮನೆಗೆ ಬಂದ ಅತಿಥಿಗಳ ಸ್ವಭಾವ, ಆಸಕ್ತಿ ಗಮನಿಸಿ ನಂತರ ಹಿತಮಿತವಾಗಿ ಅದರ ಬಗ್ಗೆ ತಿಳಿಸಬೇಕು.
ಪ್ರಾಚೀನ ವಸ್ತು ಯಾವುದೇ ಆಗಿದ್ದರೂ ಸಹ ಅವು ಸಂಗ್ರಹ ಯೋಗ್ಯವಾಗಿರುತ್ತದೆ. ಆದ್ದರಿಂದ ನಮಗೆ ಗೊತ್ತಿಲ್ಲದ ಆ ಕಾಲದ ವಿಚಾರದ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಅವುಗಳನ್ನು ಕಾಪಾಡಬೇಕು. ಒಂದು ವೇಳೆ ನಿರಂತರವಾಗಿ ನಮ್ಮಿಂದ ಕಾಪಾಡಲು ಆಗದಿದ್ದರೆ ಅವುಗಳನ್ನು ಪ್ರಾಚೀನ ವಸ್ತು ಸಂಗ್ರಹಾಲಯಕ್ಕೆ ಕೊಡಬೇಕು. ಕೆಲವರ ಮನೆಯಲ್ಲಿ ರೇಡಿಯೋಗಳನ್ನು ಇಟ್ಟಿರುತ್ತಾರೆ.
ಅಂದರೆ ಶತಮಾನಗಳ ಹಿಂದಿನ ರೇಡಿಯೋ ಯಾವ ರೀತಿ ಇತ್ತು ಎಂಬುವುದನ್ನು ಕಂಡಾಗ ಒಂದು ರೀತಿ ಪುಳಕ ಉಂಟಾಗುತ್ತದೆ.ಅದೇ ರೀತಿ ಗ್ರಾಮೋಫೋನ್‌ಗಳು, ದೊಡ್ಡ ಗಡಿಯಾರಗಳು, ಆ ಕಾಲದ ಫ್ಲವರ್ ವಾಝ್‌ಗಳು ಇತ್ಯಾದಿಗಳು.
ಇದರಿಂದ ಒಂದು ವರ್ಗದ ಜನಗಳ ಹವ್ಯಾಸ ಯಾವ ರೀತಿ ಇರುತ್ತದೆ ಎಂದು ತಿಳಿಯುತ್ತದೆ. ಆದರೆ, ವಿಚಿತ್ರ ಅಭಿಲಾಷೆ, ಆಸೆ ಮತ್ತು ಹಂಬಲದ ಇನ್ನು ಕೆಲವರಿರುತ್ತಾರೆ. ಅವರು ಸಂಗ್ರಹಿಸುವ ವಸ್ತುಗಳು ತುಂಬಾ ವಿಚಿತ್ರವಾಗಿರುತ್ತವೆ ಮತ್ತು ಅವರಿಗೆ ಅವುಗಳ ಅಗತ್ಯವಿರುವುದೇ ಎಂದು ಅನಿಸುತ್ತದೆ.
ಆ ವಸ್ತುಗಳ ಸಂಗ್ರಹ ನೋಡಿದಾಗ ಇಂತಹಾ ಒಂದು ಹಂಬಲ ಸಾಮಾನ್ಯರಲ್ಲಿ ಮಾತ್ರ ಅಲ್ಲ, ಬಹುತೇಕ ಶ್ರಿಮಂತರು ಮತ್ತು ಖ್ಯಾತಿ ಪಡೆದಿರುವ ದೊಡ್ಡ ವ್ಯಕ್ತಿಗಳಲ್ಲಿ ಸಹ ಇರುತ್ತದೆ. ಅಲ್ಲದೆ ವಿಶ್ವದಲ್ಲಿ ಇಂತಹ ಅನೇಕರು ಸಂಗ್ರಹಕರಿದ್ದಾರೆ.
ಅಂತಹವರಲ್ಲಿ ಪ್ರಮುಖರೆಂದರೆ:
*ಬ್ಯಾಡ್‌ಮನ್
*ಹಿಲೆರಿ ತಾಜ್(ಉದ್ಯಮಿ)
*ಫ್ಲವರ್ಟ್ ಜಾಂಗ್
*ತಲವೇರಿ
*ವಿಲಿಯಮ್ ಹಾಗ್
*ಫ್ರಾಂಕ್ಲಿನ್‌ಕೀಟ್ಸ್
*ಹೆನ್ರಿ ಡಾಕ್(ಉದ್ಯಮಿ)
*ಕ್ಲೆವೆಂಡರ್(ಈಸ್ಟ್ ಫ್ರಾನ್ಸ್‌ನ ಅಧ್ಯಕ್ಷ)
*ಮಾರ್ಟಿನ್ ಷಾ(ನಟ)
*ಬ್ಲಂಡರಿನ್ ಲಾರ್ಟ್
*ರಾಬರ್ಟ್ ಹೇಲಿಯನ್
*ಬಾರ್ಬಿಲಿನ್ ಲಿಂಡರ್
ಹೀಗೆ ಹತ್ತು ಹಲವಾರು ಮಂದಿ ವಿವಿಧ ರೀತಿಯಾದಂತಹ ಹವ್ಯಾಸಗಳನ್ನು ಹೊಂದಿರುತ್ತಾರೆ ಎಂಬುದಕ್ಕೆ ಇವರೇ ಸಾಕ್ಷಿ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...