ಬ್ಯಾಂಕ್ ಆಫ್ ಬರೋಡಾಕ್ಕೆ ಅರ್ಜಿ ಆಹ್ವಾನ
ಬ್ಯಾಂಕ್ ಆಫ್ ಬರೋಡಾದಲ್ಲಿ 40 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-02-2012. ಹುದ್ದೆ ಹೆಸರು:1) ಚೀಫ್ ಮ್ಯಾನೇಜರ್ (ಫೈನಾನ್ಸ್)- ಚಾರ್ಟರ್ಡ್ ಅಕೌಂಟೆಂಟ್. ಒಟ್ಟು ಹುದ್ದೆ: 15
ಹುದ್ದೆ ಹೆಸರು: 2) ಸೀನಿಯರ್ ಮ್ಯಾನೇಜರ್ (ಫೈನಾನ್ಸ್)- ಚಾರ್ಟರ್ಡ್ ಅಕೌಂಟೆಂಟ್. ಒಟ್ಟು ಹುದ್ದೆ: 25. ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 40 ವರ್ಷ. ಆಯ್ಕೆ ವಿಧಾನ: ಸಂದರ್ಶನ. ಅರ್ಜಿ ಶುಲ್ಕ: ರೂ. 300
ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿದ ಮೇಲೆ ನೋಂದಾಯಿತ ರಶೀತಿ ಪ್ರಿಂಟ್‌ಔಟ್ ತೆಗೆದು ಪೋಸ್ಟ್‌ನಲ್ಲಿ ಕಳುಹಿಸಬೇಕು. ಅದಕ್ಕೆ ಕೊನೆಯ ದಿನಾಂಕ: 21-2-2012
ವಿಳಾಸ: ದಿ ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಚ್‌ಆರ್‌ಎಂ ಆ್ಯಂಡ್ ಅಡ್ಮಿನಿಸ್ಟ್ರೇಷನ್), ಬ್ಯಾಂಕ್ ಆಫ್ ಬರೋಡಾ, ಬರೋಡಾ ಕಾರ್ಪೊರೇಟ್ ಸೆಂಟರ್, ಸಿ-26/ಜಿ ಬ್ಲಾಕ್, ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್, ಬಾಂದ್ರಾ (ಈಸ್ಟ್), ಮುಂಬೈ-400051. ಹೆಚ್ಚಿನ ಮಾಹಿತಿಗೆ www.bankofbaroda.com ವೆಬ್‌ಸೈಟ್ ಸಂಪರ್ಕಿಸಿ.
ಐಐಟಿಎಂನಲ್ಲಿ ಅವಕಾಶ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಫಿಕಲ್ ಮೆಟೆರಾಲಜಿ (ಐಐಟಿಎಂ)ನಲ್ಲಿ 20 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-04-2012.
ಹುದ್ದೆ ಹೆಸರು: ಕ್ಲೈಮೇಟ್ ಸೈನ್ಸಸ್-ಸೈಂಟಿಸ್ಟ್; ಒಟ್ಟು ಹುದ್ದೆ: 20
ವೇತನ ಶ್ರೇಣಿ: ತರಬೇತಿ ಅವಧಿಯಲ್ಲಿ ಸ್ಟೈಪೆಂಡ್ ರೂ. 25000. ಬಳಿಕ ರೂ.15600-39100. ವಯೋಮಿತಿ: 28 ವರ್ಷ ದಾಟಿರಬಾರದು.
ವಿಳಾಸ: ದಿ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟೆರಾಲಜಿ (ಐಐಟಿಎಂ), ಡಾ.ಹೋಮಿ ಬಾಬಾ ರಸ್ತೆ, ಪಾಶನ್, ಪುಣೆ-411008
ವಿದ್ಯಾಭ್ಯಾಸ, ಅರ್ಹತೆ ಹಾಗೂ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ www.tropmet.res.in ಸಂಪರ್ಕಿಸಿ.
ಎಸ್‌ಎಸ್‌ಸಿನಲ್ಲಿ ವಿವಿಧ ಹುದ್ದೆಗಳು
ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ)ನಲ್ಲಿ 742 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-02-2012.
ಹುದ್ದೆ ವಿವರ: 1) ಸಿಪಿಡಬ್ಲ್ಯುಡಿ: ಒಟ್ಟು ಹುದ್ದೆ: 192 (ಜೂನಿಯರ್ ಎಂಜಿನಿಯರ್ಸ್-ಸಿವಿಲ್), 186 (ಜೂನಿಯರ್ ಎಂಜಿನಿಯರ್ಸ್ -ಎಲೆಕ್ಟ್ರಿಕಲ್)
2) ಸಿಡಬ್ಲ್ಯುಸಿ: ಒಟ್ಟು ಹುದ್ದೆ: 82 (ಜೂನಿಯರ್ ಎಂಜಿನಿಯರ್ಸ್ -ಸಿವಿಲ್), 23 (ಜೂನಿಯರ್ ಎಂಜಿನಿಯರ್ಸ್- ಮೆಕ್ಯಾನಿಕಲ್)
3) ಎಂಇಎಸ್: ಒಟ್ಟು ಹುದ್ದೆ: 155 (ಜೂನಿಯರ್ ಎಂಜಿನಿಯರ್ಸ್ -ಸಿವಿಲ್), 91 (ಜೂನಿಯರ್ ಎಂಜಿನಿಯರ್ಸ್ -ಎಲೆಕ್ಟ್ರಿಕಲ್/ಮೆಕ್ಯಾನಿಕಲ್), 13 ಜೂನಿಯರ್ ಎಂಜಿನಿಯರ್ಸ್ (ಕ್ವಾಂಟಿಟಿ ಸರ್ವೇಯಿಂಗ್ ಆ್ಯಂಡ್ ಕಾಂಟ್ರೆಕ್ಟ್ಸ್)
4) ಫರಕ್ಕಾ ಬ್ಯಾರೇಜ್, 5) ಡಿಪಾರ್ಟ್‌ಮೆಂಟ್ ಆಫ್ ಪೋಸ್ಟ್
ವೇತನ ಶ್ರೇಣಿ: ರೂ.9300-34800. ವಿದ್ಯಾರ್ಹತೆ: ಪದವಿ/ಡಿಪ್ಲೊಮಾ (ಸಿವಿಲ್/ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಎಂಜಿನಿಯರಿಂಗ್)
ಅರ್ಜಿ ಶುಲ್ಕ: ರೂ. 100. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
ವಿಳಾಸ: ಪ್ರಾದೇಶಿಕ ನಿರ್ದೇಶಕರು (ಕೆಕೆಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲನೆ ಮಹಡಿ, ‘ಇ’ ವಿಂಗ್, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು-560034
ಹೆಚ್ಚಿನ ಮಾಹಿತಿಗೆ http://ssc.nic.in ವೆಬ್‌ಸೈಟ್ ಸಂಪರ್ಕಿಸಿ.
ಆಂಧ್ರ ಬ್ಯಾಂಕ್‌ನಲ್ಲಿ ಪ್ರೊಬೇಷನರಿ ಆಫೀಸರ್ ಹುದ್ದೆಗಳು
ಆಂಧ್ರ ಬ್ಯಾಂಕ್‌ನಲ್ಲಿ 89 ಹುದ್ದೆಗಳನ್ನು (ವಿಶೇಷ ನೇಮಕಾತಿ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-02-2012.
ಹುದ್ದೆ ಹೆಸರು: ಪ್ರೊಬೇಷನರಿ ಆಫೀಸರ್ (ಓಬಿಸಿಗೆ ಮಾತ್ರ)
ಒಟ್ಟು ಹುದ್ದೆ: 89
ವೇತನ ಶ್ರೇಣಿ: ರೂ.14500-25700. ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ.
ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಪದವಿ ಹಾಗೂ ಸಿಡಬ್ಲ್ಯುಇನಲ್ಲಿ 141 ಅಥವಾ ಅದಕ್ಕಿಂತ ಹೆಚ್ಚು ಅಂಕಗಳು. ಅರ್ಜಿ ಶುಲ್ಕ: ರೂ. 200
ಆಯ್ಕೆ ವಿಧಾನ: ಐಬಿಪಿಎಸ್ ನಡೆಸಿದ ಲಿಖಿತ ಪರೀಕ್ಷೆ ಅಂಕ ಹಾಗೂ ಗುಂಪು ಚರ್ಚೆ/ಸಂದರ್ಶನ
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ http://andhrabank.in ಸಂಪರ್ಕಿಸಿ.
ಐಟಿಬಿಪಿನಲ್ಲಿ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳು
ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ) ನಲ್ಲಿ 10 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-02-2012.
ಹುದ್ದೆ ಹೆಸರು: ಸಬ್-ಇನ್ಸ್‌ಪೆಕ್ಟರ್ (ಓವರ್‌ಸೀರ್)
ಒಟ್ಟು ಹುದ್ದೆ: 10
ವೇತನ ಶ್ರೇಣಿ: ರೂ.9300-34800
ವಯೋಮಿತಿ: ಕನಿಷ್ಠ 20 ವರ್ಷ. ಗರಿಷ್ಠ 25 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ. ಜೊತೆಗೆ ಡಿಪ್ಲೊಮಾ ಇನ್ ಸಿವಿಲ್ ಎಂಜಿನಿಯರಿಂಗ್
ಅರ್ಜಿ ಶುಲ್ಕ: ರೂ. 50
ವಿಳಾಸ: ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಆ್ಯಂಡ್ ಚೀಫ್ ಎಂಜಿನಿಯರ್, ಡೈರೆಕ್ಟೊರೇಟ್ ಜನರಲ್, ಐಟಿಬಿಪಿ ಪೊಲೀಸ್, ಬ್ಲಾಕ್-2, ಸಿಜಿಒ ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ-110003
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ http://itbp.gov.in ಸಂಪರ್ಕಿಸಿ.
ಕ್ರೀಡಾಪಟುಗಳಿಗೆ ವಿಜಯಾ ಬ್ಯಾಂಕ್‌ನಲ್ಲಿ ಅವಕಾಶ
ವಿಜಯಾ ಬ್ಯಾಂಕ್‌ನಲ್ಲಿ 16 ಹುದ್ದೆಗಳನ್ನು (ಕ್ರೀಡಾಪಟುಗಳಿಗೆ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06-02-2012.
ಹುದ್ದೆ ಹೆಸರು: ಕ್ಲರ್ಕ್ಸ್
ಒಟ್ಟು ಹುದ್ದೆ: 16 (ಕ್ರಿಕೆಟ್-5, ಬಾಸ್ಕೆಟ್‌ಬಾಲ್-5, ಕಬಡ್ಡಿ-6)
ವೇತನ ಶ್ರೇಣಿ: ರೂ. 7200-19300
ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 24 ವರ್ಷ.
ವಿದ್ಯಾಭ್ಯಾಸ: 12ನೆ ತರಗತಿ ಉತ್ತೀರ್ಣ ಅಥವಾ ತತ್ಸಮಾನ ಅಥವಾ ಪದವಿ
ಅರ್ಜಿ ಶುಲ್ಕ: ರೂ. 300
ವಿಳಾಸ: ಪೋಸ್ಟ್ ಬಾಕ್ಸ್ ನಂ. 5136, ಜಿಪಿ ಒ, ಬೆಂಗಳೂರು-560001
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ www.vijayabank.com ಸಂಪರ್ಕಿಸಿ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...