ಸಂಪಾದಕೀಯ

mail-img print-img

ಕೇಸರಿಯ ವಿರುದ್ಧ ಕೇಸರಿ

ಮಂಗಳವಾರ - ಆಗಸ್ಟ್ -31-2010

ಭಯೋತ್ಪಾದನೆಗೆ ಬಣ್ಣವಿದೆಯೇ? ಅವಶ್ಯವಾಗಿ ಇದೆ. ಅದು ರಕ್ತದ ಬಣ್ಣ. ಎಲ್ಲಿ ಭಯೋತ್ಪಾದಕ ಸ್ಫೋಟಗಳು ನಡೆದಿವೆಯೋ ಅಲ್ಲೆಲ್ಲ ಈ ಬಣ್ಣ ಚೆಲ್ಲಿದೆ. ಸ್ಫೋಟವನ್ನು ಲಷ್ಕರೆ ತಯ್ಯಿಬಾ ನಡೆಸಲಿ, ಮಾವೋವಾದಿಗಳು ನಡೆಸಲಿ ಅಥವಾ ‘ದೇಶಪ್ರೇಮಿ’ ಭಯೋತ್ಪಾದನಾ ಸಂಘಟನೆ ಯಾದ ಅಭಿನವ ಭಾರತ, ಸನಾತನಸಂಸ್ಥೆಗಳು ನಡೆಸಲಿ. ಅಲ್ಲಿ ಹರಿದಾಡಿದ ರಕ್ತದ ಬಣ್ಣ ಮಾತ್ರ ಕೆಂಪು.

ಕೇಸರಿ ಬಾವುಟದ ಅಡಿಯಲ್ಲಿ ನಿಂತು, ಸನಾತನ ಸಂಸ್ಥೆ ಮತ್ತು ಅಭಿನವ ಭಾರತದ ಕಾರ್ಯಕರ್ತರು ನಡೆಸಿದ ಸ್ಫೋಟದಲ್ಲಿ ಚೆಲ್ಲಿದುದು ಹಸಿರು ರಕ್ತವಲ್ಲ. ಕೆಂಪು ರಕ್ತವೇ. ಆದುದರಿಂದ ನಮ್ಮ ವಿರೋಧದ ಗುರಿ ಭಯೋತ್ಪಾದನೆಯೇ ಹೊರತು, ಅದು ಪ್ರತಿಪಾದಿಸುವ ಕೇಸರಿ, ಹಸಿರು, ಕೆಂಪು ಬಣ್ಣ ಗಳಾಗಬಾರದು. ದುರದೃಷ್ಟವಶಾತ್ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಭಯೋತ್ಪಾದನೆ ಚರ್ಚೆಗೊಳಗಾಗದೆ ಅದು ಪ್ರತಿಪಾದಿಸುವ ಬಣ್ಣಗಳು ಚರ್ಚೆಯಾಗುತ್ತಿವೆ.

ದೇಶದಲ್ಲಿ ಕೇಸರಿ ಭಯೋತ್ಪಾದನೆ ಆತಂಕಕಾರಿಯಾಗಿ ಬೆಳೆಯುತ್ತಿದೆ ಎಂದು ಗೃಹ ಸಚಿವ ಚಿದಂಬರಂ ಮೊದಲ ಬಾರಿಗೆ ಹೇಳಿಕೆ ನೀಡಿದರು. ಹಾಗೆ ಹೇಳಿಕೆ ನೀಡಿದ ಬೆನ್ನಿಗೇ, ಉಳಿದ ವಿರೋಧ ಪಕ್ಷಗಳು ಅದನ್ನು ತಡೆಯುವ ಮಾರ್ಗಗಳ ಕುರಿತಂತೆ ಚರ್ಚೆ ನಡೆಸಬೇಕಾಗಿತ್ತು.

ಆದರೆ ದುರದೃಷ್ಟವಶಾತ್ ಚರ್ಚೆ ನಡೆಯುತ್ತಿರುವುದು ಆ ನಿಟ್ಟಿನಲ್ಲಲ್ಲ. ಭಯೋತ್ಪಾದನೆಯನ್ನು ತಡೆಯುವುದು ಅವರಾರಿಗೂ ಬೇಕಾಗಿಲ್ಲ. ಬದಲಿಗೆ ಭಯೋತ್ಪಾದನೆಯನ್ನು ‘ಕೇಸರಿ’ ಎಂದು ಕರೆದುದು ಅವರನ್ನು ಸಿಟ್ಟಿಗೆಬ್ಬಿಸಿತು. ‘ಕೇಸರಿ ಭಯೋತ್ಪಾದನೆ’ ಎನ್ನುವ ಮೂಲಕ ಗೃಹ ಸಚಿವರು ಈ ದೇಶದ ಹಿಂದೂಗಳಿಗೆ, ರಾಷ್ಟ್ರಧ್ವಜದಲ್ಲಿರುವ ಕೇಸರಿ ಬಣ್ಣಕ್ಕೆ ಅವಮಾನ ಮಾಡಿದ್ದಾರೆ ಎಂಬಿತ್ಯಾದಿ ಆರೋಪಗಳೊಂದಿಗೆ ಚಿದಂಬರಂ ವಿರುದ್ಧ ವಿರೋಧ ಪಕ್ಷ ಮುಗಿ ಬಿದ್ದಿದೆ.

ಚಿದಂಬರಂ ಪ್ರಸ್ತಾಪಿಸಿದ ಹೊಸ ‘ಭಯೋತ್ಪಾದಕ’ರ ಕುರಿತಂತೆ ಮಾತನಾಡಲು ಸಿದ್ಧರಿಲ್ಲದ ಇವರು, ಆ ಭಯೋತ್ಪಾದನೆ ಪ್ರತಿಪಾದಿಸುವ ಬಣ್ಣದ ಕುರಿತಂತೆ ಚರ್ಚಿಸುವುದಕ್ಕೆ, ಟೀಕಿಸುವುದಕ್ಕಷ್ಟೇ ಆಸಕ್ತರಾಗಿ ದ್ದಾರೆ. ಇದರ ಉದ್ದೇಶ ಸ್ಪಷ್ಟ. ನಿಜವಾದ ಭಯೋತ್ಪಾದಕರನ್ನು ರಕ್ಷಿಸಲು ಇವರು ವಿಷಯಾಂತರ ಮಾಡುತ್ತಿದ್ದಾರೆ. ಅನಗತ್ಯ ವಿಷಯಗಳ ಕುರಿತಂತೆ ಚರ್ಚಿಸಿ, ನಿಜವಾದ ವಿಷಯವನ್ನು ಮೂಲೆಗೆ ತಳ್ಳುತ್ತಿದ್ದಾರೆ.

ಗಾಂಧೀಜಿಯ ಆಶ್ರಮದಲ್ಲಿ ನಡೆದ ಸ್ಫೋಟದಿಂದ ಹಿಡಿದು, ಮಾಲೆಗಾಂವ್‌ವರೆಗಿನ ಸ್ಫೋಟಗಳನ್ನು ನಡೆಸಿದವರು ಯಾರು ಎನ್ನುವುದು ದೇಶಕ್ಕೆ ಸ್ಪಷ್ಟವಾಗಿ ಗೊತ್ತಿದೆ. ಹಲವು ಸಂದರ್ಭದಲ್ಲಿ ಇವರನ್ನು ಹಿಂದೂ ಭಯೋತ್ಪಾದಕರು ಎಂದು ಕರೆದುದಿದೆ. ಆದರೆ ಯಾವ ಕಾರಣಕ್ಕೂ ಇವರು ಹಿಂದೂಗಳಲ್ಲ, ಹಿಂದೂಗಳ ಮುಖವಾಡದಲ್ಲಿ ತಮ್ಮ ಹಿಂಸೆಯನ್ನು ನಡೆಸುತ್ತಾ ಬರುತ್ತಿದ್ದಾರೆ ಮತ್ತು ಆ ಕಳಂಕವನ್ನು ಈ ದೇಶದ ಸಮಸ್ತ ಹಿಂದೂಗಳ ತಲೆಗೆ ಕಟ್ಟಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ‘ಹಿಂದೂ ಭಯೋತ್ಪಾದನೆ’ ಎನ್ನುವದು ಈ ದೇಶದಲ್ಲಿ ಇಲ್ಲ.

ಈ ದೇಶದಲ್ಲಿ ಇದ್ದರೆ ಚಿದಂಬರಂ ಹೇಳಿದಂತೆ ಅದು ‘ಕೇಸರಿ ಭಯೋತ್ಪಾದನೆ’ ಮಾತ್ರ. ಹಿಂದೂ ಎನ್ನುವ ಶಬ್ದವೇ ಈ ದೇಶದ ಬಹುಸಂಸ್ಕೃತಿಯನ್ನು, ಪ್ರಾದೇಶಿಕ ಭಿನ್ನತೆಯನ್ನು ಪ್ರತಿಪಾದಿಸುತ್ತದೆ. ಸಹಸ್ರಾರು ಜಾತಿಗಳು, ಸಹಸ್ರಾರು ಸಂಸ್ಕೃತಿಗಳು ಒಂದಾಗಿ ಹಿಂದೂ ಶಬ್ದ ಹುಟ್ಟಿಕೊಂಡಿದೆ. ವೈವಿಧ್ಯಗಳನ್ನು ಒಪ್ಪಿ ಕೊಳ್ಳುತ್ತಾ ಒಂದಾಗಿರುವುದು ಹಿಂದೂ ಸಂಸ್ಕೃತಿ. ಹಿಂದೂ ಮತ್ತು ಭಯೋತ್ಪಾದನೆ ಒಂದಕ್ಕೊಂದು ಹೊಂದಿಕೆಯಾಗಲಾರದ ಪದಗಳು. ಅವರೆಡು ಒಟ್ಟು ಸೇರಲು ಸಾಧ್ಯವೇ ಇಲ್ಲ.

ಸನಾತನ ಸಂಸ್ಥೆ, ಅಭಿನವಭಾರತ, ಆರೆಸ್ಸೆಸ್‌ನಂತಹ ಸಂಘಟನೆಗಳು ಯಾವತ್ತೂ ಬಹುಸಂಸ್ಕೃತಿಯ ಹಿಂದುತ್ವವನ್ನು ಒಪ್ಪಿಕೊಂಡಿಲ್ಲ. ಹಿಂದೂ ಹೆಸರನ್ನು ನೆಪಕ್ಕಾಗಿಯಷ್ಟೇ ಮುಂದಿಟ್ಟುಕೊಂಡು, ಬ್ರಾಹ್ಮಣ್ಯ ಸಿದ್ಧಾಂತದ ತಳಹದಿಯಲ್ಲಿ, ಕೇಸರಿ ಪತಾಕೆಯ ಅಡಿಯಲ್ಲಿ ಈ ಸಂಘಟನೆಗಳು ಒಂದಾಗಿವೆ. ಕೇಸರಿಗೂ ಹಿಂದುತ್ವಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ.

ಇಲ್ಲಿ ಬಿಲ್ಲವರದು ಹಳದಿ ಬಾವುಟ. ತುಳುವರದು ಕೆಂಪು ಬಾವುಟ. ಹಾಗೆಯೇ ಹತ್ತು ಹಲವು ಬಾವುಟಗಳು ಆಯಾ ಜಾತಿ, ಸಂಸ್ಕೃತಿಯ ಹೆಸರಿನಲ್ಲಿ ಹಾರಾಡುತ್ತಿವೆ. ಹಿಂದುತ್ವಕ್ಕೆ ಯಾವುದೇ ಏಕ ಬಾವುಟವಿಲ್ಲ. ಆದರೆ ಸಂಘಪರಿವಾರವು ಕೇಸರಿ ಬಾವುಟದ ಅಡಿಯಲ್ಲಿ ಒಟ್ಟು ಸೇರಿದೆ. ಈ ಕೇಸರಿ ಬಾವುಟ ಪ್ರತಿಪಾದಿಸುತ್ತಿರುವುದು ಹಿಂದೂ ಸಂಸ್ಕೃತಿಯ ವೈವಿಧ್ಯವನ್ನಲ್ಲ. ಬ್ರಾಹ್ಮಣ್ಯ ಸಂಸ್ಕೃತಿಯನ್ನು ಈ ಬಾವುಟ ಎತ್ತಿ ಹಿಡಿಯುತ್ತಿದೆ.

ವರ್ಣಾಶ್ರಮ ಧರ್ಮವನ್ನು ಪುನಃ ಸ್ಥಾಪಿಸುವ ಉದ್ದೇಶವನ್ನು ಈ ಕೇಸರಿ ಬಾವುಟ ಹೊಂದಿದೆ. ಈ ದೇಶದ ಪ್ರಜಾಸತ್ತೆಯನ್ನು ನಾಶ ಮಾಡಿ, ಮತ್ತೆ ಬ್ರಾಹ್ಮಣ್ಯ ವಾದವನ್ನು ಎತ್ತಿ ನಿಲ್ಲಿಸುವುದು ಅಭಿನವಭಾರತ, ಸನಾತನ ಸಂಸ್ಥೆ, ಆರೆಸ್ಸೆಸ್‌ನಂತಹ ಸಂಘಟನೆಯ ಉದ್ದೇಶ. ದಲಿತರು, ಬಿಲ್ಲವರು, ಮೊಗವೀರರು, ಬಂಟರು ಮತ್ತೆ ವರ್ಣಾಶ್ರಮ ಪ್ರತಿಪಾದಿಸು ವಂತೆ ಕೆಳ ಸ್ಥಾನದಲ್ಲಿರಬೇಕು. ಮೇಲ್ವರ್ಣೀಯರ ಸೇವೆ ಮಾಡುತ್ತಾ ತಮ್ಮ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು.

ಅದಕ್ಕಾಗಿಯೇ ಅವರು, ಪ್ರಜಾಸತ್ತೆಯ ಪರವಾಗಿದ್ದ, ಜಾತ್ಯತೀತತೆಯ ಪರವಾಗಿದ್ದ ಪರಮಶ್ರೇಷ್ಠ ಹಿಂದೂ ಆಗಿದ್ದ, ರಾಮಭಕ್ತನಾಗಿದ್ದ ಗಾಂಧಿಯನ್ನು ಕೊಂದರು. ಆದುರಿಂದಲೇ ನಾವು ಹೊಸದಾಗಿ ತಲೆಯೆತ್ತಿ ರುವ ಈ ಭಯೋತ್ಪಾದಕರನ್ನು ಯಾವಕಾರಣಕ್ಕೂ ಹಿಂದೂ ಭಯೋತ್ಪಾದಕರು ಎಂದು ಕರೆಯದೆ, ಕೇಸರಿ ಭಯೋತ್ಪಾದಕರು ಎಂದು ಕರೆಯಬೇಕು. ‘ಕೇಸರಿ ಉಗ್ರರು’ ಎಂದು ಕರೆದುದರಿಂದ ರಾಷ್ಟ್ರ ಧ್ವಜದಲ್ಲಿರುವ ಕೇಸರಿ ಬಣ್ಣಕ್ಕೆ ಅವಮಾನವಾಗಿದೆ ಎಂದು ಢೋಂಗಿ ದೇಶಪ್ರೇಮಿಗಳು ಗದ್ದಲ ಎಬ್ಬಿಸುತ್ತಿದ್ದಾರೆ.

ಆದರೆ ರಾಷ್ಟ್ರಧ್ವಜದೊಳಗಿರುವ ಕೇಸರಿ ಶೌರ್ಯವನ್ನು ಪ್ರತಿಪಾದಿಸುತ್ತದೆ. ತ್ಯಾಗವನ್ನು ಪ್ರತಿಪಾದಿಸುತ್ತದೆ. ಜಾತ್ಯತೀತತೆಯನ್ನು ಪ್ರತಿಪಾದಿಸುತ್ತದೆ. ಸಂಘಪರಿವಾರದ ಕೇಸರಿ ಪ್ರತಿಪಾದಿಸುತ್ತಿ ರುವುದು ಶೌರ್ಯವನ್ನಲ್ಲ. ಅಮಾಯಕರನ್ನು ಹೇಡಿಗಳಂತೆ ಕದ್ದು ಮುಚ್ಚಿ ಸ್ಫೋಟ ನಡೆಸಿ ಕೊಲ್ಲುವುದು ಹೇಡಿಗಳಿಗೆ ತಕ್ಕುದಾಗಿದೆ. ದೇಶವನ್ನು ಒಡೆಯುವ ಕೆಲಸದಲ್ಲಿ ತಲ್ಲಿನರಾಗಿ ರುವ ಸಂಘಪರಿವಾರದ ಕೇಸರಿ ಪ್ರತಿಪಾದಿಸುತ್ತಿ ರುವುದು ದ್ವೇಷವನ್ನು, ದೇಶದ್ರೋಹವನ್ನು ಮತ್ತು ಬ್ರಾಹ್ಮಣ್ಯವನ್ನು.

ರಾಷ್ಟ್ರಧ್ವಜದ ಕೇಸರಿಗೂ ಸಂಘಪರಿವಾರದ ಕೇಸರಿಗೂ ಯಾವುದೇ ಸಂಬಂಧವಿಲ್ಲದೆ ಇರುವುದರಿಂದ ದೇಶದ ಹೊಸ ಭಯೋತ್ಪಾದಕರನ್ನು ನಾವು ಧಾರಾಳವಾಗಿ ಕೇಸರಿ ಉಗ್ರರು ಎಂದು ಕರೆಯಬಹುದಾಗಿದೆ. ಆದರೆ ಅವರನ್ನು ಯಾವ ಬಣ್ಣದಲ್ಲಿ ಗುರುತಿಸುವುದು ಎನ್ನುವುದಷ್ಟೇ ಮುಖ್ಯ ವಾಗಬಾರದು, ಅವರನ್ನು ಹೇಗೆ ಮಟ್ಟ ಹಾಕುವುದು ಎನ್ನುವುದು ನಮಗೆ ಮುಖ್ಯವಾಗ ಬೇಕಾಗಿದೆ. ಈ ಮೂಲಕ ದೇಶವನ್ನು, ಹಿಂದೂ ಸಂಸ್ಕೃತಿಯನ್ನು ಕಾಪಾಡಬೇಕಾಗಿದೆ. ಚಿದಂಬರಂ ಈ ನಿಟ್ಟಿನಲ್ಲಿ ಧೈರ್ಯದಿಂದ ಹೆಜ್ಜೆಯನ್ನು ಮುಂದಿಡಬೇಕು.

Careers Talk
kharlove
31st August 2010, 1:22 a.m.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಪ್ರಪ್ರಥಮ ಭಾರಿಗೆ ಓರ್ವ ಗೃಹ ಮಂತ್ರಿ ಸತ್ಯ ನುಡಿದಿದ್ದಾರೆ. ಅವರಿಗೆ ಅದನ್ನು ಮಟ್ಟ ಹಾಕಲು ಎಲ್ಲರೂ ಸಹಕರಿಸಬೇಕೇ ಹೊರತು ದೇಶದ್ರೋಹಿಗಳ ಬಣ್ಣ ನೋಡಿ ರಾಷ್ಟ್ರ ದ್ವಜದ ಬಣ್ಣವೆಂದುಕೊಂಡು ಅವರನ್ನು ಹರಸುವುದಲ್ಲ. ಇನ್ನಾದರೂ ಬಿಜೆಪಿ ತನ್ನ ಕಪಟ ದೇಶಪ್ರೇಮ ಬದಿಗೊತ್ತಿ ಭಯೋತ್ಪಾದನೆ ಮುಕ್ತ ಭಾರತವನ್ನು ನಿರ್ಮಿಸುವತ್ತ ಹೆಜ್ಜೆ ಇಡಲಿ.


sunaina
31st August 2010, 8:02 a.m.

ಉತ್ತಮ ಸಂಪಾದಕೀಯ.......


daya sreenivas
31st August 2010, 8:24 a.m.

ಕೇಸರಿ ಉಗ್ರರ ವಿರುದ್ಧದ ಈ ನಿಮ್ಮ ಹೋರಾಟ ನಿರಂತರ ಮುಂದುವರಿಯಲಿ...........


shukur
31st August 2010, 9:21 a.m.

ಕೇಂದ್ರ ಸರಕಾರ ಆರೆಸ್ಸೆಸ್ ಅನ್ನು ನಿಷೇಧಿಸುವ ಧೈರ್ಯ ತೋರಬೇಕು..........


hassanmukha
31st August 2010, 10 a.m.

ನಿಮ್ಮ ಈ ಮಾತು ಎಷ್ಟು ಜನ ಕೆಳ ಸ್ಥಾನದಲ್ಲಿ ಇರುವವರನ್ನು ತಲಪಿರಬಹುದು?


jayashree
31st August 2010, 10:14 a.m.

ಕೇಸರಿ ಭಯೋತ್ಪಾದಕರನ್ನು ಸದೆ ಬಡಿಯುವ ನಿಟ್ಟಿನಲ್ಲಿ ಸಚಿವ ಚಿದಂಬರಂ ದ್ರಢವಾದ ಹೆಜ್ಜೆಯಿಡಬೇಕು.........


zunaid
31st August 2010, 11:36 a.m.

ಉತ್ತಮ ಸಂಪಾದಕೀಯ.....ಅಭಿನಂದನೆಗಳು..........


riyaaz nala
31st August 2010, 3:28 p.m.

ಕೇಸರಿ ಉಗ್ರರ ವಿರುದ್ಧ ಹೋರಾಟ ಮುಂದುವರಿಯಲಿ; ಉತ್ತಮ ಸಂಪಾದಕೀಯ........


anand
31st August 2010, 7:21 p.m.

ಕೇಸರಿ ಭಯೋತ್ಪಾದನೆಯನ್ನು ದೇಶದಿಂದ ಹೋಗಲಾಡಿಸಬೇಕು ಮತ್ತು ಅದನ್ನು ಪ್ರೋತ್ಸಾಹಿಸುವವರನ್ನು ಶಿಕ್ಷಿಸಬೇಕು.


ashrafa
31st August 2010, 7:38 p.m.

ಕೇಸರಿ ಉಗ್ರಾರಾಗಲಿ, ಹಸಿರು ಉಗ್ರಾರಾಗಲಿ ಸದೆಬಡಿಯಲು ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು..........


Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಡವರ ಮಕ್ಕಳಿಗೆ ನಿರಾಕರಿಸಲ್ಪಟ್ಟ ಶಿಕ್ಷಣ

ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...


- ಎಸ್.ಬಾಲನ್,ಹೈಕೋರ್ಟ್ ವಕೀಲರು, ಬೆಂಗಳೂರು.

ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ

ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...


- ಗೋಪಾಲ್ ತ್ರಾಸಿ

ಅಂತರ ಜಾತಿಯ ವಿವಾಹ ಮೀಸಲಾತಿಗೆ ಅಡ್ಡಿಯಾಗದು: ಸರ್ವೋಚ್ಚ ನ್ಯಾಯಾಲಯದ ತೀರ್ಪು

ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...


- ಕೆ. ದೇಜಪ್ಪ

ಆರೆಸ್ಸೆಸ್ ಶಿಸ್ತಿನ ಒಳಗುಟ್ಟು

ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...


- ಸನತ್‌ ಕುಮಾರ ಬೆಳಗಲಿ

ನಿನ್ನನ್ನು ಒಳ್ಳೆಯ ಬ್ಯಾರಿ ಅಂತ ಹೇಗೆ ನಂಬುವುದು?

‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...


- ಚೇಳಯ್ಯ

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ-ಪ್ರಗತಿಪರರು

ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...


- ಡಾ ಜಿ. ಭಾಸ್ಕರ ಮಯ್ಯ

ಮನಸ್ಸಿನ ಅಸ್ವಸ್ಥತೆಗೆ ಮೂಲ ಕಾರಣ ಹುಡುಕಬೇಕು

ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...


- ಜ್ಯೋತಿ ಗುರುಪ್ರಸಾದ್

ದೂರಸಂಪರ್ಕ ನೀತಿ ಬೇಕಾಗಿದೆ

ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...


- ಅರವಿಂದ ರಾಜಗೋಪಾಲ