ಸಂಪಾದಕೀಯ

mail-img print-img

ಕಳಂಕಿತ ಸಚಿವರು ರಾಜೀನಾಮೆ ನೀಡಲಿ

ಶನಿವಾರ - ಸೆಪ್ಟೆಂಬರ್ -04-2010

ರಾಜ್ಯದ ಬಿಜೆಪಿ ಸರಕಾರ ಕೋಮುವಾದಿ ಮಾತ್ರವಲ್ಲ, ಕರ್ನಾಟಕ ಕಂಡ ಅತ್ಯಂತ ಕೆಟ್ಟ ಮತ್ತು ಭ್ರಷ್ಟ ಸರಕಾರವೆಂದು ಪದೇ ಪದೇ ಸಾಬೀತಾಗುತ್ತಲಿದೆ. ಅಕ್ರಮ ಗಣಿಗಾರಿಕೆ ಹಗರಣ, ಬೇಲೇಕೇರಿ ಅದಿರು ನಾಪತ್ತೆ ಹಗರಣ, 8 ಬಾರಿ ಜಾಮೀನು ರಹಿತ ವಾರಂಟ್ ಇದ್ದರೂ ಅಧಿಕಾರದಲ್ಲಿ ವಿಜೃಂಭಿಸುತ್ತಿರುವ ಮಂತ್ರಿಗಳು ಹೀಗೆ ಎಲ್ಲ ಮಾನ-ಮಾರ್ಯಾದೆ, ಸಭ್ಯತೆ ಮತ್ತು ಶಿಷ್ಟಾಚಾರಗಳನ್ನು ಧಿಕ್ಕರಿಸಿ ನಿಂತಿದೆ. ಆದರೂ ಮುಖ್ಯಮಂತ್ರಿಗಳು ಏನೂ ನಡೆದಿಲ್ಲ ವೆಂಬಂತೆ ಪ್ರತಿಪಕ್ಷಗಳ ವಿರುದ್ಧ ಕೆಂಡಕಾರುತ್ತ ತಮ್ಮ ಮಂತ್ರಿಗಳನ್ನು ಸಮರ್ಥಿಸಿ ಕೊಳ್ಳುತ್ತಲಿದ್ದಾರೆ.

ಹಾಸನದ ವೈದ್ಯಕೀಯ ಭೋಧಕೇತರ ಸಿಬ್ಬಂದಿಯ ನೇಮಕಾತಿಯಲ್ಲಿ ನಡೆದ ಭಾರೀ ಪ್ರಮಾಣದ ಅಕ್ರಮ ಈಗ ಬಟ್ಟಬಯಲಾ ಗಿದೆ. ಈ ಹಗರಣ ಈಗ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರ ಗೌಡರನ್ನಲ್ಲದೆ ಅವರ ಸುಪತ್ರ ಸಪ್ತಗಿರಿ ಗೌಡ ಮತ್ತು ಅವರ ಸಿಬ್ಬಂದಿ ಯನ್ನು ಸುತ್ತಿಕೊಂಡಿದೆ. ಇದು ಬಹುಕೋಟಿ ರೂಪಾಯಿ ಹಗರಣವಾಗಿದ್ದು ತನಿಖೆಯಾಗ ಲೇಬೇಕೆಂದು ಜೆಡಿಎಸ್‌ನ ಶಾಸಕಾಂಗದ ಪಕ್ಷದ ನಾಯಕ ಎಚ್.ಡಿ. ರೇವಣ್ಣ ಆಗ್ರಹ ಪಡಿಸಿರುವುದರಲ್ಲಿ ತಪ್ಪೇನೂ ಇಲ್ಲ.

ಆದರೆ ಈ ಗುರುತರ ಆರೋಪದ ವಿರುದ್ಧ ಸಚಿವ ರಾಮಚಂದ್ರ ಗೌಡರು ಕೆರಳಿ ಕೆಂಡವಾಗಿದ್ದಾರೆ. ತನ್ನನ್ನು ಬಲಿಪಶು ಮಾಡುವ ಹುನ್ನಾರ ನಡೆದಿದೆ ಎಂದು ದೂರಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹಗರಣ ಹೊರಹಾಕಿದ ಪ್ರತಿಪಕ್ಷಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಹಗರಣಗಳು ನಡೆದಾಗೆಲ್ಲಾ ಪ್ರತಿಪಕ್ಷಗಳು ಪಂಚೇಂದ್ರಿಯಗಳನ್ನು ಮುಚ್ಚಿಕೊಂಡು ಸುಮ್ಮನಿರಬೇಕೆಂಬುದು ಅವರ ನಿರೀಕ್ಷೆಯಾಗಿ ದೆಯೋ ಏನೋ? ಇಂತಹ ಭಾವೋದ್ವೇಗದ ಮಾತುಗಳಿಂದ ಸತ್ಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ.

ತಾವು ಪರಿಶುದ್ಧರಾಗಿದ್ದೇವೆಂದು ಸಾಬೀತುಪಡಿಸಬೇಕೆ ಹೊರತು ಈ ರೀತಿ ನಾಲಿಗೆಯನ್ನು ಮನ ಬಂದಂತೆ ಹರಿ ಬಿಡುವುದು ಸಭ್ಯತೆಯ ಲಕ್ಷಣವಲ್ಲ. ಸಚಿವರು ತಾನು ನಿರಪರಾಧಿ ಎಂದು ಎಷ್ಟೇ ಹೇಳಿಕೊಂಡರೂ ಕೂಡ ಅವರ ಅಪ್ತಸಹಾಯಕ ಸೇರಿದಂತೆ 6 ಮಂದಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಚಿವರ ಪುತ್ರ ಸಪ್ತಗಿರಿ ವಿರುದ್ಧ ದೂರು ಬಂದಿದ್ದರೂ ಉನ್ನತ ರಾಜಕೀಯ ವಲಯದ ಪ್ರಭಾವದಿಂದಾಗಿ ಪೊಲೀಸರು ಅದನ್ನು ಸ್ವೀಕರಿಸಿಲ್ಲ. ಇನ್ನೊಂದೆಡೆ ಪಡೆದ ಹಣವನ್ನು ರಹಸ್ಯವಾಗಿ ಹಿಂದಿರುಗಿಸುವ ಯತ್ನವೂ ನಡೆದಿದೆಯಂತೆ.

ಇಂತಹ ಸನ್ನಿವೇಶದಲ್ಲಿ ಸಚಿವರು ತಾವೇನು ಮಾಡಬೇಕೆಂಬುದನ್ನು ಮನಃಸಾಕ್ಷಿಯಾಗಿ ತೀರ್ಮಾನಿಸಬೇಕಾಗಿದೆ. ಈ ಹಗರಣದಲ್ಲಿ ಸ್ಟೋರ್ ಕೀಪರ್ ಹುದ್ದೆಗೆ 1.80 ಲಕ್ಷ ರೂ., ರೆಕಾರ್ಡ್ ಕೀಪರ್ ಹುದ್ದೆಗೆ 1.50ಲಕ್ಷ ರೂ., ಪ್ರಯೋಗಾಲಯದ ತಾಂತ್ರಿಕ ಹುದ್ದೆಗೆ 1.50 ಲಕ್ಷ ರೂ., ಡೆಂಟಲ್ ಟೆಕ್ನಿಷಿಯನ್ ಹುದ್ದೆಗೆ 1.25 ಲಕ್ಷ ರೂ., ಪಾರ್ಮಸಿಸ್ಟ್ ಹುದ್ದೆಗೆ 1.50 ಲಕ್ಷ ರೂ., ಡಿ. ಗ್ರೂಪ್ ನೌಕರರ ಹುದ್ದೆಗೆ 1.20 ಲಕ್ಷ ರೂ. ಹೀಗೆ 300 ನೇಮಕಾತಿ ಪ್ರಕರಣದಲ್ಲಿ ಕೋಟ್ಯಂತರ ರೂ. ದೋಚಲಾಗಿದೆ. ಆದರೂ ಸಚಿವರು ತಾನು ಪರಿಶುದ್ಧನೆಂದು ಹೇಳಿಕೊಳ್ಳುತ್ತಲೇ ಇದ್ದಾರೆ. ಈ ಅವ್ಯವಹಾರದಲ್ಲಿ ನೇರವಾಗಿ ಸಿಲುಕಿ ರುವ ಸಚಿವ ರಾಮಚಂದ್ರ ಗೌಡರು ಅಂತಿಂಥವರಲ್ಲ.

ನಿನ್ನೆ ಮೊನ್ನೆ ಬಿಜೆಪಿಗೆ ಬಂದವರಲ್ಲ. ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಬೆಳೆದವರು. ಚಡ್ಡಿ ಧರಿಸಿ ಲಾಠಿ ತಿರುಗಿಸಿಕೊಂಡು ವಿಧಾನಸೌಧದ ಮೆಟ್ಟಲನ್ನೇರಿದವರು. ವ್ಯಕ್ತಿಚಾರಿತ್ರದ ನಿರ್ಮಾಣದ ಬಗ್ಗೆ ಆರೆಸ್ಸೆಸ್‌ನಲ್ಲಿ ತಾವು ಕಲಿತ ಪಾಠವನ್ನು ಭಾಷಣಗಳಲ್ಲಿ ನಿತ್ಯ ಪಠಿಸುತ್ತಿರುವವರು. ಇಂತಹ ವ್ಯಕ್ತಿಯೇ ಬಹುಕೋಟಿ ಹಗರಣದಲ್ಲಿ ಸಿಲುಕಿದ್ದಾರೆ. ಆದರೂ ಯಾವುದೇ ತನಿಖೆಗೆ ಅವರು ಒಪ್ಪಿಕೊಳ್ಳುತ್ತಿಲ್ಲ.

ಈ ಸರಕಾರದ ಪ್ರವಾಸ್ಯೋದ್ಯಮ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಸಂಡೂರು ನ್ಯಾಯಾಲಯ 8 ಬಾರಿ ಜಾಮೀನು ರಹಿತ ವಾರಂಟ್ ಹೊರಡಿಸಿದ್ದರೂ ಅವರು ಮಂತ್ರಿ ಯಾಗಿಯೇ ಓಡಾಡುತ್ತಿದ್ದಾರೆ. ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಸಿಲುಕಿದ ಸಚಿವರನ್ನು ಹೇಗೋ ರಕ್ಷಿಸಿಕೊಳ್ಳಲಾಗಿದೆ. ಈಗ ರಾಮಚಂದ್ರ ಗೌಡರ ಸರದಿ. ಅವರನ್ನು ರಕ್ಷಿಸಿಕೊಳ್ಳಲು ಮುಖ್ಯಮಂತ್ರಿಗಳು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.

ಬಿಜೆಪಿ ಸರಕಾರಕ್ಕೆ ಹಾಗೂ ಈ ಸರಕಾರದ ನಿಯಂತ್ರಣ ಕೇಂದ್ರವಾದ ಆರೆಸೆಸ್ಸ್‌ಗೆ ಪ್ರಾಮಾಣಿಕತೆಯಲ್ಲಿ ನಂಬಿಕೆ ಇದ್ದರೆ ಈ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಸಚಿವ ರಾಮಚಂದ್ರ ಗೌಡರನ್ನು ತಕ್ಷಣ ರಾಜೀನಾಮೆ ಕೊಡಿಸಬೇಕು. ಅವರ ರಾಜೀನಾಮೆ ಕೊಡಿಸದೆ ಅಧಿಕಾರದಲ್ಲಿ ಉಳಿಸಿಕೊಂಡು ಪುಂಡಾಟಿಕೆ ಮಾತು ಗಳನ್ನಾಡುವುದರಲ್ಲಿ ಅರ್ಥವಿಲ್ಲ. ಕಾಂಗ್ರೆಸ್ ಮತ್ತು ಜನತಾದಳಗಳಿಗೆ ಭಿನ್ನವಾದ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿ ಅದಕ್ಕೆ ಉದಾಹರಣೆಯಾಗಬಲ್ಲ ಒಂದಾದರೂ ದಿಟ್ಟ ಕ್ರಮವನ್ನು ಕೈಗೊಳ್ಳಲಿ.

ವೈದ್ಯಕೀಯ ನೇಮಕಾತಿ ಹಗರಣ ಬಯಲಾಗುತ್ತಿದ್ದಂತೆ 300ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳನ್ನು ಬೆದರಿಸಿ ಸುಳ್ಳು ಪ್ರಮಾಣ ಪತ್ರಗಳನ್ನು ಪಡೆಯಲಾಗುತ್ತಿದೆ. ಅದರಲ್ಲಿ ನೇಮಕಾತಿಗಾಗಿ ತಾವು ಯಾರಿಗೂ ಹಣ ನೀಡಿಲ್ಲವೆಂದು ಒತ್ತಾಯಪೂರ್ವಕ ವಾಗಿ ಬರೆಸಿಕೊಳ್ಳಲಾಗಿದೆಯಂತೆ. ಇಂತಹ ಕುತಂತ್ರಗಳಿಂದ ತಮ್ಮ ಸಹೋದ್ಯೋಗಿಯನ್ನು ರಕ್ಷಿಸುವ ದುಸ್ಸಾಹಸಕ್ಕೆ ಮುಖ್ಯಮಂತ್ರಿ ಕೈಹಾಕಬಾರದು.

Careers Talk
Badruddeen H H
4th September 2010, 6:19 p.m.

ಈ ಸರಕಾರ ಇನ್ನೂ ಅಧಿಕಾರದಲ್ಲಿ ಮುಂದುವರಿದರೆ ನಮ್ಮ ರಾಜ್ಯದ ಅವನತಿ ಕಟ್ಟಿಟ್ಟ ಬುತ್ತಿ.


Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಡವರ ಮಕ್ಕಳಿಗೆ ನಿರಾಕರಿಸಲ್ಪಟ್ಟ ಶಿಕ್ಷಣ

ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...


- ಎಸ್.ಬಾಲನ್,ಹೈಕೋರ್ಟ್ ವಕೀಲರು, ಬೆಂಗಳೂರು.

ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ

ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...


- ಗೋಪಾಲ್ ತ್ರಾಸಿ

ಅಂತರ ಜಾತಿಯ ವಿವಾಹ ಮೀಸಲಾತಿಗೆ ಅಡ್ಡಿಯಾಗದು: ಸರ್ವೋಚ್ಚ ನ್ಯಾಯಾಲಯದ ತೀರ್ಪು

ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...


- ಕೆ. ದೇಜಪ್ಪ

ಆರೆಸ್ಸೆಸ್ ಶಿಸ್ತಿನ ಒಳಗುಟ್ಟು

ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...


- ಸನತ್‌ ಕುಮಾರ ಬೆಳಗಲಿ

ನಿನ್ನನ್ನು ಒಳ್ಳೆಯ ಬ್ಯಾರಿ ಅಂತ ಹೇಗೆ ನಂಬುವುದು?

‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...


- ಚೇಳಯ್ಯ

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ-ಪ್ರಗತಿಪರರು

ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...


- ಡಾ ಜಿ. ಭಾಸ್ಕರ ಮಯ್ಯ

ಮನಸ್ಸಿನ ಅಸ್ವಸ್ಥತೆಗೆ ಮೂಲ ಕಾರಣ ಹುಡುಕಬೇಕು

ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...


- ಜ್ಯೋತಿ ಗುರುಪ್ರಸಾದ್

ದೂರಸಂಪರ್ಕ ನೀತಿ ಬೇಕಾಗಿದೆ

ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...


- ಅರವಿಂದ ರಾಜಗೋಪಾಲ