ಸಂಪಾದಕೀಯ

mail-img print-img

ನಕಲಿ ಎನ್‌ಕೌಂಟರ್ ಮೋದಿ ಸರಕಾರಕ್ಕೆ ಮುಖಭಂಗ

ಶನಿವಾರ - ಜನವರಿ -28-2012

ಗುಜರಾತ್‌ನಲ್ಲಿ 2002ರಿಂದ 2006ರವ ರೆಗೆ ನಡೆದ ಎಲ್ಲ ನಕಲಿ ಎನ್‌ಕೌಂಟರ್‌ಗಳ ಕುರಿತು ಸಮಗ್ರ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಪ್ರಾಧಿಕಾರಕ್ಕೆ ಆದೇಶ ನೀಡಿದೆ. ಈ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಸಾವಿಗೀಡಾದ ವ್ಯಕ್ತಿಗಳ ಸಂಪೂರ್ಣ ವಿವರಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ. ಸಂಘಪರಿವಾರದ ಸ್ವಯಂಸೇವಕ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ ರುವ ಗುಜರಾತ್ ನಲ್ಲಿ ಮನುಷ್ಯರ ಜೀವದಷ್ಟು ಅಗ್ಗವಾದುದು ಇನ್ನೊಂದಿಲ್ಲ. ಅಂತಲೇ ತನ್ನನ್ನು ಒಪ್ಪದ ಅಥವಾ ತಾನು ಒಪ್ಪದ ಎಲ್ಲರನ್ನು ಕೋಮು ಹಿಂಸಾಚಾರ ಇಲ್ಲವೇ ನಕಲಿ ಎನ್‌ಕೌಂಟರ್ ನಲ್ಲಿ ನಿರ್ನಾಮ ಮಾಡುವ ಕುಖ್ಯಾತಿ ಮೋದಿಯವರದು.

ವಿವಿಧ ನ್ಯಾಯಾಲಯಗಳು ಅನೇಕ ಬಾರಿ ಛೀಮಾರಿ ಹಾಕಿದರೂ ಅಲ್ಲಿನ ಬಿಜೆಪಿ ಸರಕಾರಕ್ಕೆ ಬುದ್ಧಿ ಬಂದಿಲ್ಲ. ಗುಜರಾತ್‌ನಲ್ಲಿ ನಡೆದಿರುವ ನಕಲಿ ಎನ್‌ಕೌಂಟರ್‌ಗಳ ಸತ್ಯಾಸತ್ಯ ತನಿಖೆಗಾಗಿ ಹಿರಿಯ ಪತ್ರಕರ್ತ ಬಿ.ಜಿ.ವರ್ಗೀಸ್ ಮತ್ತು ಹೆಸರಾಂತ ಗೀತರಚನೆಕಾರ ಜಾವೆದ್ ಅಖ್ತರ್ ಪ್ರತ್ಯೇಕವಾಗಿ ಸಲ್ಲಿಸಿದ ಸಾರ್ವ ಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅಫ್ತಾಬ್ ಆಲಂ ಹಾಗೂ ನ್ಯಾಯಮೂರ್ತಿ ಬಿ.ಕೆ.ಪ್ರಸಾದ್ ರನ್ನೊಳ ಗೊಂಡ ವಿಶೇಷ ಪೀಠ ಪ್ರತಿ ಯೊಂದು ಎನ್‌ಕೌಂಟರ್ ಪ್ರಕರಣದ ಹಿಂದಿರುವ ಸತ್ಯ ಸಂಗತಿಗಳ ಮೇಲೆ ತನಿಖೆಯ ಮೂಲಕ ಬೆಳಕು ಚೆಲ್ಲುವಂತೆ ಸಲಹೆ ನೀಡಿದೆ. ಈ ನಕಲಿ ಎನ್‌ಕೌಂಟರ್ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ಕಾರ್ಯಪಡೆ ಇಲ್ಲವೇ ಬಾಹ್ಯ ಸಂಸ್ಥೆಗಳಿಂದ ಸ್ವತಂತ್ರ ತನಿಖಾ ತಂಡ ರಚಿಸಲು ತಮ್ಮದೇನೂ ಅಭ್ಯಂತವಿಲ್ಲವೆಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಹೇಳಿರುವುದರಿಂದ ದೇಶ ದಲ್ಲಿ ಪ್ರಮುಖ ಮಾನವ ಹಕ್ಕು ಸಂಘಟನೆಗಳನ್ನು ಈ ತನಿಖಾ ಕಾರ್ಯದಲ್ಲಿ ತೊಡಗಿಸುವುದು ಸೂಕ್ತವಾಗಿದೆ. ಗುಜರಾತ್ ನಲ್ಲಿ 2002ರಿಂದ 2006ರ ಕಾಲಾವಧಿ ಯಲ್ಲಿ 22 ನಕಲಿ ಎನ್‌ಕೌಂಟರ್ ಪ್ರಕರಣಗಳು ಸಂಭವಿಸಿವೆ. ಈ ಎಲ್ಲ ಪ್ರಕರಣಗಳನ್ನು ನರೇಂದ್ರ ಮೋದಿ ಸರಕಾರ ವ್ಯವಸ್ಥಿತವಾಗಿ ಮುಚ್ಚಿ ಹಾಕಿದೆ. ಕೆಲ ಪ್ರಕರಣಗಳಲ್ಲಿ ಸತ್ತವರು ಭಯೋತ್ಪಾದಕ ರೆಂದು, ಇಲ್ಲವೇ ಭಯೋತ್ಪಾದನೆಯನ್ನು ಬೆಂಬಲಿಸುವವರೆಂದು ಕತೆ ಕಟ್ಟಲಾಗಿದೆ. ಆದುದರಿಂದ ವಾಸ್ತವವಾಗಿ ನಕಲಿ ಎನ್‌ಕೌಂಟರ್‌ನಲ್ಲಿ ಸಾವಿಗೀಡಾದವರು ಯಾರು? ಅವರ ಹಿನ್ನೆಲೆ ಏನು? ಎಂಬುದನ್ನು ಬಹಿರಂಗಪಡಿಸಲು ಸುಪ್ರೀಂ ಕೋರ್ಟ್ ಹೇಳಿರುವುದು ಸ್ವಾಗತಾರ್ಹ ವಾಗಿದೆ.

ಸೊಹ್ರಾಬುದ್ದೀನ್ ಹಾಗೂ ತುಳಸೀರಾಮ್ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ನ್ಯಾಯಾಲಯಗಳು ಈ ಹಿಂದೆ ತನಿಖೆಗೆ ಅದೇಶ ನೀಡಿದ್ದವು ಮತ್ತು ಮಾಧ್ಯಮಗಳು ಬೆಳಕು ಚೆಲ್ಲಿದ್ದವು. ಆದರೂ ನರೇಂದ್ರ ಮೋದಿ ಸರಕಾರ ಯಾವುದಕ್ಕೂ ಸ್ಪಂದಿಸಲಿಲ್ಲ. ಸತ್ಯ ಸಂಗತಿ ಬಯಲಿಗೆ ಬರುವುದು ಅವರಿಗೆ ಬೇಕಾಗಿರಲಿಲ್ಲ. ಅಂತಲೇ ಪ್ರಕರಣಗಳನ್ನು ಮುಚ್ಚಿಹಾಕುವ ಮಸಲತ್ತು ನಡೆಸುತ್ತಾ ಬಂದರು. ಈ ನಡುವೆ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಭಾವೈಕ್ಯದ ಹರಿಕಾರನಂತೆ ನರೇಂದ್ರ ಮೋದಿ ಹೊಸ ಪ್ರಹಸನ ಆರಂಭಿಸಿದರು. ತನ್ನ ಮೈಯೆಲ್ಲ ಮನುಷ್ಯರ ರಕ್ತದಿಂದ ಮೆತ್ತಿಕೊಂಡಿದ್ದರೂ ಹಾರ ಹಾಕಿಸಿಕೊಳ್ಳುವ ನಾಟಕವನ್ನು ಆಡುತ್ತಿ ದ್ದಾರೆ. ದೇಶ-ವಿದೇಶಗಳ ಕಾರ್ಪೊರೇಟ್ ಕಂಪೆನಿಗಳ ತಿಮಿಂಗಿಲಗಳು ಈ ಮೋದಿಯ ವರನ್ನು ನವಭಾರತದ ಅಭಿವೃದ್ಧಿಯ ಹರಿಕಾರ ಎಂದೆಲ್ಲ ವರ್ಣಿಸುತ್ತಿವೆ. ಇಂತಹ ನರೇಂದ್ರ ಮೋದಿಯವರನ್ನು ದೇಶದ ಭಾವಿ ಪ್ರಧಾನಿಯೆಂದು ಬಿಂಬಿಸಲು ಬಿಜೆಪಿ ಮುಂದಾಗಿದೆ. ಆ ಮೂಲಕ ಹಿಂದುತ್ವದ ಉನ್ಮಾದವನ್ನು ಕೆರಳಿಸಿ ಕೋಮುವಾದದ ಆಧಾರದಲ್ಲಿ ಜನರನ್ನು ವಿಭಜಿಸಿ ಕೇಂದ್ರದಲ್ಲಿ ಅಧಿಕಾರ ಸೂತ್ರವನ್ನು ಹಿಡಿಯುವುದು ಬಿಜೆಪಿಯ ಹುನ್ನಾರ ವಾಗಿದೆ. ಆದರೆ ಅದು ಅಷ್ಟು ಸುಲಭವಲ್ಲ.

ಬಿಜೆಪಿಯು ಏಕಾಂಗಿಯಾಗಿ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ. ಎನ್‌ಡಿಎಯ ಮಿತ್ರ ಪಕ್ಷಗಳನ್ನು ಕಟ್ಟಿಕೊಂಡೇ ಅದು ಮತದಾರರ ಬಳಿ ಹೋಗ ಬೇಕಾಗುತ್ತದೆ. ಆದರೆ ಮಿತ್ರ ಪಕ್ಷಗಳು ನರಹಂತಕ ಮೋದಿಯವರನ್ನು ಒಪ್ಪಿಕೊಳ್ಳುವುದಿಲ್ಲ. ಈ ಕುರಿತು ಸಂಯುಕ್ತ ಜನತಾದಳದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಈಗಾ ಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಕಲಿ ಎನ್‌ಕೌಂಟರ್ ಗಳ ಸಮಗ್ರ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿರು ವುದು ಮಾನವ ಹಕ್ಕುಗಳ ಪರವಾಗಿ ಹೋರಾಡುತ್ತಿರುವ ಶಕ್ತಿಗಳಿಗೆ ಹೊಸ ಬಲ ನೀಡಿದಂತಾಗಿದೆ.

ಗುಜರಾತ್ ಸರಕಾರವು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಹೆಚ್.ಶಾ ನೇತೃತ್ವ ದಲ್ಲಿ ರಚಿಸಿರುವ ಮೇಲ್ವಿಚಾರಣಾ ಪ್ರಾಧಿಕಾರ ವಿಳಂಬ ಮಾಡದೆ ಸಮಗ್ರ ವರದಿಯನ್ನು ನೀಡಬೇಕಾಗುತ್ತದೆ. ಸುಪ್ರಿಂ ಕೋರ್ಟ್ ಈ ಆದೇಶ ಮಾಡದಿರುತ್ತಿದ್ದರೆ ಹಿಂದಿನ ನಕಲಿ ಎನ್ ಕೌಂಟರ್ ಮುಚ್ಚಿ ಹಾಕಲು ಮತ್ತು ಮುಂದೆ ತನ್ನ ಹಿಂದಿನ ಚಾಳಿಯನ್ನು ಮುಂದುವರಿಸಿ ಕೊಂಡು ಹೋಗಲು ಮೋದಿ ಸರಕಾರ ಹಿಂಜರಿಯುತ್ತಿರಲಿಲ್ಲ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್