ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ. ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯಾರ್ಥಿಯೊಬ್ಬನನ್ನು ಶಿಕ್ಷಕಿಯೊಬ್ಬರು ಅಕ್ಷರಶಃ ಕೊಂದೇ ಹಾಕಿದ್ದಾರೆ. ಇದನ್ನು ಆಕಸ್ಮಿಕವೆಂದೋ, ಅಥವಾ ವಿದ್ಯೆ ಕಲಿಸುವಾಗ ಇದೆಲ್ಲ ಒಮ್ಮೆಮ್ಮೆ ಸಂಭವಿಸಿ ಬಿಡುತ್ತದೆ ಎಂದೋ ನಿರ್ಲಕ್ಷಿಸುವಂತಿಲ್ಲ.ಶಿಕ್ಷಣದ ಕುರಿತಂತೆ ನಮ್ಮ ಶಿಕ್ಷಕರಿಗೆ ಯಾವ ರೀತಿಯ ಭಾವನೆಯಿದೆ,ಇನ್ನೂ ನಮ್ಮ ಶಿಕ್ಷಣ ವ್ಯವಸ್ಥೆಯೆನ್ನುವುದು ಎಷ್ಟು ಶತಮಾನ ಕಾಲ ಹಿಂದಿದೆ ಎನ್ನುವುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಹೋಂವರ್ಕ್ ಮಾಡಲಿಲ್ಲ ಎಂಬ ಮಹದಾಪರಾಧಕ್ಕೆ ಆರುವರ್ಷದ ಎಳೆ ಕಂದನನ್ನು ಶಿಕ್ಷಕಿಯೊಬ್ಬರು ಕತ್ತಲ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಅದರ ಆಘಾತದಲ್ಲಿ ಮಗು ಭಯದಿಂದ ಪ್ರಜ್ಞೆ ಕಳೆದು ಕೊಂ ಡಿದೆ. ಸುಮಾರು ಒಂದೂವರೆ ತಿಂಗ ಳು ಆಸ್ಪತ್ರೆಯಲ್ಲಿ ನರಳಿದ ಮಗು ತನ್ನ ಪ್ರಾಣವನ್ನು ಬಿಟ್ಟಿದೆ. ಯಾವ ಶಿಕ್ಷಣ ಒಂದು ಮಗುವಿನ ಬದುಕನ್ನು ಬೆಳಗಿಸ ಬೇಕಾಗಿತ್ತೋ, ಯಾವ ಶಿಕ್ಷಣ ಹೂವಿನ ಮೊಗ್ಗಿ ನಂತಹ ಮನಸ್ಸನ್ನು ಅರಳಿಸಬೇಕಾಗಿತ್ತೋ ಆ ಶಿಕ್ಷಣ ಮಗು ವಿನ ಬದುಕನ್ನು ಗಾಢ ಕತ್ತಲಿಗೆ ತಳ್ಳಿತು. ಮೊಗ್ಗಿನಲ್ಲಿ ಹೂವನ್ನು ಹಿಂಡಿ ಹಾಕಿತು. ಇದೇನು ಅಪರೂಪದ ಘಟನೆಯಲ್ಲ. ಇಂತಹದು ಆಗಾಗ ಘಟಿಸುತ್ತಲೇ ಇರುತ್ತದೆ.
ಥಳಿತದಿಂದ ಕಣ್ಣು ಕಳೆದುಕೊಂಡ ಮಗು, ಶಿಕ್ಷೆಯಿಂದ ಉಸಿರು ಗಟ್ಟಿ ಮೃತನಾದ ವಿದ್ಯಾರ್ಥಿ ಹೀಗೆ ಆಗಾಗ ಮಾಧ್ಯಮ ಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತಲೇ ಇರುತ್ತದೆ. ಶಿಕ್ಷಣ ನೀತಿಯಲ್ಲಿ ಬದಲಾವಣೆ ಮಾಡುತ್ತಲೇ ಬರಲಾಗುತ್ತದೆಯಾದರೂ ಯಾಕೆ ಇಂತಹದು ಪದೇ ಪದೇ ಸಂಭವಿಸುತ್ತದೆ? ಒಂದು ಎಳೆ ಕಂದಮ್ಮನನ್ನು ಕಗ್ಗತ್ತಲ ಕೋಣೆಯೊಳಗೆ ಹಾಕಿ ಕೊಂದು ಹಾಕುವಷ್ಟು ಹೃದಯಹೀನವಾಗಿರುವ ಶಿಕ್ಷಣದಿಂದ ಈ ಸಮಾಜ ಯಾವ ರೀತಿಯಲ್ಲಿ ಮುನ್ನಡೆಯನ್ನು ಪಡೆಯಬಹುದು. ಇಂತಹ ಹೃದಯಹೀನ ಶಿಕ್ಷಣವನ್ನು ಪಡೆದ ಮಕ್ಕಳಿಂದ ನಾವು ಎಂತಹ ಭವಿಷ್ಯವನ್ನು ನಿರೀಕ್ಷಿಸಬಹುದು?
ಈ ಪ್ರಶ್ನೆಗಳಿಗೆ ನಾವು ಉತ್ತರವನ್ನು ಹುಡುಕಲೇ ಬೇಕಾದ ಸಂದರ್ಭ ಬಂದಿದೆ. ಪರೀಕ್ಷೆ ಬಂದಾಗ, ಫಲಿತಾಂಶ ಬಂದಾಗ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳೂ ಹೃದಯಹೀನ ಶಿಕ್ಷಣದ ಫಲಿ ತಾಂಶವೇ ಆಗಿದೆ. ನಿಜಕ್ಕೂ ಶಿಕ್ಷಣ ನೀಡಬೇಕಾದ ವರು ಶಿಕ್ಷಣವನ್ನು ಪಡೆಯಬೇಕಾದ ಅಗತ್ಯತೆ ಯನ್ನು ಇದು ಎತ್ತಿ ಹಿಡಿಯುತ್ತದೆ.ಹೌದು. ಇಂದು ಮೊದಲು ಶಿಕ್ಷಣ ನೀಡ ಬೇಕಾದುದು ಶಿಕ್ಷಕರಿಗೆ ಮತ್ತು ಶಿಕ್ಷಣ ಸಂಸ್ಥೆ ಗಳನ್ನು ನಡೆಸುತ್ತಿರುವ ಆಡಳಿತ ವರ್ಗಕ್ಕೆ. ಶಿಕ್ಷಣ ಉದ್ಯಮವಾಗಿ ಪರಿವರ್ತನೆಗೊಂಡಿದೆ. ಆ ಶಾಲೆಯಲ್ಲಿ ಶೇ. ನೂರರಷ್ಟು ಫಲಿತಾಂಶ ಬರುತ್ತ ದೆಯೋ ಆ ಶಾಲೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ತಮ್ಮ ಮಕ್ಕಳು ಅಂತಹ ಶಾಲೆಗಳಲ್ಲಿ ಕಲಿಯಬೇಕು ಎಂದು ಪಾಲಕರೂ ಅಪೇಕ್ಷೆ ಪಡುತ್ತಾರೆ. ಅಲ್ಲಿ ಹೇಗೆ, ಯಾವ ರೀತಿಯಲ್ಲಿ ನೂರು ಶೇಕಡ ಫಲಿತಾಂಶಗಳನ್ನು ಹೊರತೆಗೆ ಯುತ್ತಾರೆ ಎನ್ನುವುದು ಪಾಲಕರಿಗೂ ಬೇಡವಾಗಿದೆ.
ಮುಖ್ಯವಾಗಿ ತನ್ನ ಮಗು ಉತ್ತಮ ಅಂಕಗಳೊಂದಿಗೆ ಉತ್ತೀರ್ಣವಾಗಬೇಕು. ಯಾವ ಶಾಲೆಗಳು ಹೆಚ್ಚು ಫಲಿತಾಂಶವನ್ನು ನೀಡುತ್ತದೆಯೋ ಅಂತಹ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು. ಅಷ್ಟೇ. ಆಡಳಿತ ಮಂಡಳಿಗಳೂ ಅಷ್ಟೇ. ಶಿಕ್ಷಕರಿಗೆ ಒತ್ತಡ ಹಾಕುತ್ತವೆ.ಕಡ್ಡಾಯವಾಗಿ ನೂರು ಶೇಕಡ ಫಲಿತಾಂಶ ಬರಲೇ ಬೇಕು. ಇಲ್ಲವಾದರೆ ಅಂತಹ ಶಿಕ್ಷಕರನ್ನು ಹೊರಗೆ ಹಾಕಲಾಗುತ್ತದೆ, ಶಿಕ್ಷೆ ನೀಡಲಾಗುತ್ತದೆ ಎಂಬಿತ್ಯಾದಿಯಾಗಿ ಬೆದರಿಸುತ್ತದೆ. ಪರಿಣಾಮವಾಗಿ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ತಮ್ಮ ಪ್ರತಾಪವನ್ನು ತೋರಿಸುತ್ತಾರೆ. ಎಲ್‌ಕೆಜಿಯಿಂದಲೇ ಇದು ಆರಂಭವಾಗುತ್ತದೆ.
ಶಿಕ್ಷಣವೆನ್ನುವುದು ಅಂಕಗಳನ್ನು ಹೆಚ್ಚು ಹೆಚ್ಚು ಪಡೆಯುವುದಲ್ಲ.ಶಾಲೆಗೆ ತೆರಳಿ ಅಂಕಗಳನ್ನು ದುಡಿದು ತರುವುದಕ್ಕೆ ಮಕ್ಕಳನ್ನು ಕಲಿಸುವುದಾಗಿ ದ್ದರೆ, ಅದು ಬಾಲ ಕಾರ್ಮಿಕ ವ್ಯಾಪ್ತಿಯಲ್ಲಿ ಬರುತ್ತದೆ. ಒಬ್ಬ ಕೂಲಿಯಾಳು ಹೊರಗಡೆ ಮೂಟೆ ಹೊತ್ತು ಕೂಲಿ ಸಂಪಾದಿಸಿಕೊಂಡು ಬಂದಂತೆ, ಇಂದು ನಮ್ಮ ಮಕ್ಕಳು ಪುಸ್ತಕದ ಮೂಟೆ ಹೊತ್ತು ಪ್ರತಿ ಸಂಜೆ ಅಂಕಗಳ ಕೂಲಿ ಸಂಪಾದಿಸಿಕೊಂಡು ಬರುತ್ತಿವೆ. ಮನೆಯಲ್ಲಿ ‘‘ಎಷ್ಟು ಅಂಕಗಳನ್ನು ಸಂಪಾದಿಸಿದೆ...ಇನ್ನಷ್ಟು ಸಂಪಾದಿಸು...’’ ಎಂದು ಒತ್ತಡ ಹೇರಲಾಗುತ್ತದೆ. ಇದಕ್ಕೆ ಪೂರಕವಾಗಿ ಮಕ್ಕಳನ್ನು ಅಂಕ ಪಡೆಯಲು ಜೀತದಾಳುವಿನಂತೆ ದುಡಿಸಲಾಗುತ್ತದೆ. ಹೋಮ್‌ವರ್ಕ್ ಮಾಡಿಕೊಂಡು ಬರದ ಮಕ್ಕಳನ್ನು ಬೆತ್ತ, ಬೈಟಕ್, ಓಟ...ಹೀಗೆ ಹಿಂದೆ ನೀಗ್ರೋ ಗುಲಾಮರನ್ನು ಶಿಕ್ಷಿಸಿದಂತೆ ಶಿಕ್ಷಿಸಲಾಗುತ್ತದೆ. ಒಂದಿಷ್ಟು ಜೀವಂತಿಕೆಯನ್ನು ಹೊಂದಿರುವ ಮಕ್ಕಳು ಇಂತಹ ಶಾಲೆಗಳಲ್ಲಿ ಕಲಿತರೆ, ತನ್ನ ಜೀವಂತಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ಬರೇ ಅಂಕಗಳನ್ನು ದುಡಿಯುವ ಯಂತ್ರವಾಗಿ ಬಿಡುತ್ತದೆ.
ಶಿಕ್ಷಣ ಮಕ್ಕಳ ಒಳಗನ್ನು ಅರಳಿಸಬೇಕು.ಅವರ ವ್ಯಕ್ತಿತ್ವವನ್ನು ಅರಳಿಸಬೇಕು. ಅಂಕಗಳಿಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ.ಪುಟಾಣಿ ಮಕ್ಕಳನ್ನು ಶಿಕ್ಷಣದ ಹೆಸರಿನಲ್ಲಿ ಹಿಂಸಿಸುವ ಶಾಲೆಗಳ ಪರವಾನಿಗೆಯನ್ನೇ ಸರಕಾರ ಕಿತ್ತುಕೊಳ್ಳಬೇಕಾಗಿದೆ.ಕೇವಲ ಶಿಕ್ಷಕರ ತಲೆಗೆ ಆರೋಪವನ್ನು ಕಟ್ಟಿ,ಅವರಿಗೆ ಶಿಕ್ಷೆಯನ್ನು ನೀಡಿದರೆ ಪ್ರಕರಣ ಮುಗಿಯುವುದಿಲ್ಲ. ನಿಜವಾದ ಆರೋಪಿಗಳು ಆ ಶಾಲೆಯ ಆಡಳಿತ ಮಂಡಳಿ.ಅವರಿಗೂ ಶಿಕ್ಷೆಯಾಗಬೇಕು. ಆಗ ಮಾತ್ರ, ಇಂತಹ ವಿಷಯಗಳಲ್ಲಿ ಶಾಲೆಗಳು ಜಾಗೃತವಹಿಸುತ್ತದೆ.ಕತ್ತಲ ಕೋಣೆಯಲ್ಲಿ ಪ್ರಜ್ಞಾಶೂನ್ಯವಾಗಿ ಬಿದ್ದಿರುವ ನಮ್ಮ ಶಿಕ್ಷಣವನ್ನು ಹೊರ ತರುವ ಕೆಲಸವನ್ನು ಆದಷ್ಟು ಬೇಗ ಮಾಡಬೇಕಾಗಿದೆ. ಆ ಮೂಲಕ ನಮ್ಮ ಮಕ್ಕಳನ್ನು, ನಮ್ಮ ಭವಿಷ್ಯವನ್ನು ಉಳಿಸಬೇಕಾಗಿದೆ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...