mail-img print-img

ಕಟ್ಟಾ ಮೀಠಾ: ಸಿಹಿಗಿಂತ ಕಹಿಯೇ ಅಧಿಕ

ಶನಿವಾರ - ಆಗಸ್ಟ್ -28-2010

ಕಾಲಾಪಾನಿ, ಕಾಂಜೀವರಂನಂತಹ ಹೃದಯಸ್ಪರ್ಶಿ ಚಿತ್ರಗಳನ್ನು ನೀಡಿದ ಪ್ರಿಯದರ್ಶನ್ ಎನ್ನುವ ಮಾಂತ್ರಿಕ ತನ್ನ ಮಂತ್ರದಂಡವನ್ನು ಕಳೆದು ಕೊಂಡಿದ್ದಾರೆಯೆ? ಸದಭಿರುಚಿಯ ಚಿತ್ರಗಳ ನಿರೀಕ್ಷೆಯಲ್ಲಿರುವ ಪ್ರಿಯದರ್ಶನ್‌ನ ಎಲ್ಲ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ ಇದು. ಬಾಲಿವುಡ್‌ನ ಅವಸರಕ್ಕನುಗುಣವಾಗಿ ರಿಮೇಕ್ ಚಿತ್ರಗಳನ್ನು ಮಾಡಿ ಮಾಡಿ ಎಸೆಯುತ್ತಿದ್ದಾರೆ ಪ್ರಿಯದರ್ಶನ್.

ಸದಾ ತನ್ನ ಒಂದು ಕೈಯನ್ನು ಮಲಯಾಳಂನ ಕಾಮಿಡಿ ಚಿತ್ರಗಳನ್ನು ಕದಿಯುವು ದಕ್ಕಾಗಿಯೇ ಅಡವಿಟ್ಟಿರುವ ಇವರು, ಬಾಲಿವುಡ್ ನಲ್ಲಿ ಗಂಟೆಗೊಂದು ಚಿತ್ರವನ್ನು ಮಾಡಿ ಎಸೆಯಬಲ್ಲ ಕುಖ್ಯಾತಿಯನ್ನು ಪಡೆದಿದ್ದಾರೆ. ಇತ್ತೀಚೆಗಷ್ಟೇ ಖ್ಯಾತ ಇರಾನಿಯನ್ ಚಿತ್ರ ‘ಚಿಲ್ಡ್ರನ್ಸ್ ಆಫ್ ಹೆವೆನ್’ನ್ನು ಹಿಂದಿಯಲ್ಲಿ ಮಾಡಲು ಹೋಗಿ ಪ್ರೇಕ್ಷಕರಿಗೆ ನರಕ ತೋರಿಸಿದ ಹೆಮ್ಮೆ ಇವರದು.

ಇದೀಗ ಕೆಲವೇ ದಿನಗಳಲ್ಲಿ ಮತ್ತೊಂದು ರಿಮೇಕ್ ಚಿತ್ರ ‘ಕಟ್ಟಾ ಮೀಠಾ’ ಮಾಡಿ ಪ್ರೇಕ್ಷಕರಿಗೆ ಬಡಿಸಿದ್ದಾರೆ. ಎಂದಿನಂತೆಯೇ ಮಲಯಾಳಂನ ಹಳೆಯ ಚಿತ್ರವೊಂದರ ಕತೆಯನ್ನು ಬಾಲಿವುಡ್‌ಗೆ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಭಟ್ಟಿ ಇಳಿಸಿದ್ದಾರೆ. ಚಿತ್ರದಲ್ಲಿ ಮೀಠಾಕ್ಕಿಂತ ಜಾಸ್ತಿ ಕಹಿಯೇ ಅಧಿಕ ಇರುವುದರಿಂದ ಪ್ರೇಕ್ಷಕನನ್ನು ಮತ್ತೆ ಪ್ರಿಯದರ್ಶನ್ ನಿರಾಶೆಗೀಡು ಮಾಡುತ್ತಾರೆ.

ನಿರ್ದೇಶಕನಾಗಿ ಪ್ರಿಯದರ್ಶನ್‌ನ ಸಾಮರ್ಥ್ಯದ ಕುರಿತಂತೆ ಯಾರಿಗೂ ಅನುಮಾನವಿಲ್ಲ. ಆದರೆ ಅವರಿಗೆ ತಮಿಳು, ಮಲಯಾಳಂ ಭಾಷೆಯಂತೆ ಹಿಂದಿ ಭಾಷೆ ಒಗ್ಗುತ್ತಿಲ್ಲ. ವಾಸ್ತವಕ್ಕೆ ಹೆಚ್ಚು ಹತ್ತಿರವಿರುವ ಮಲಯಾಳಂ ಚಿತ್ರಗಳಿಗೆ ಬಾಲಿವುಡ್‌ನ ಗ್ಲಾಮರ್‌ಗಳನ್ನು ತುಂಬಿ ಹೊಸದಾಗಿ ಕೊಡುವ ಅವರ ಪ್ರಯತ್ನ ವಿಫಲವಾಗುತ್ತಿರುವುದು ಇದೇ ಕಾರಣಕ್ಕೆ. ಮಲಯಾಳಂ ಚಿತ್ರವನ್ನು ಆಧರಿಸಿ ತೆಗೆದ ಕೆಲವು ಹಿಂದಿ ಚಿತ್ರಗಳು ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿದೆಯಾದರೂ, ಆ ಚಿತ್ರದ ಮೂಲದಲ್ಲಿರುವ ಹಾಸ್ಯವೇ ಅದಕ್ಕೆ ಕಾರಣ. ಆದರೆ ಇತ್ತೀಚೆಗೆ ಹಾಸ್ಯವನ್ನು ನಿರೂಪಿಸುವಲ್ಲ್ಲೂ ಪ್ರಿಯದರ್ಶನ್ ಸೋಲುತ್ತಿದ್ದಾರೆ. ಅದಕ್ಕೆ ಇನ್ನೊಂದು ಉದಾಹರಣೆ ಕಟ್ಟಾ ಮೀಠಾ.

ಚಿತ್ರ ಒಬ್ಬ ಕಾಂಟ್ರಕ್ಟರ್ ಸಚಿನ್ (ಅಕ್ಷಯ್‌ಕುಮಾರ್)ನ ಸುತ್ತ ತಿರುಗುತ್ತದೆ. ಮನೆಯಲ್ಲಿ ಯಾರಿಗೂ ಬೇಡದವನಾದ, ಭ್ರಷ್ಟ ಎಂಬ ಹಣೆಪಟ್ಟಿ ಯನ್ನು ಧರಿಸಿಕೊಂಡ ಈತನ ಒದ್ದಾಟ, ಜಂಜಡಗಳನ್ನು ಹಾಸ್ಯಮಯವಾಗಿ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ ಪ್ರಿಯದರ್ಶನ್. ಆರಂಭದಲ್ಲಿ ಚಿತ್ರ ನಿಧಾನವಾಗಿ ಚಲಿಸುತ್ತದೆ. ಈತನ ಅಣ್ಣಂದಿರ, ಬಾವಂದಿರ ಮೋಸ, ಭ್ರಷ್ಟನಾದರೂ ಈತನಲ್ಲಿರುವ ಒಳ್ಳೆಯತನ ಇವನ್ನೆಲ್ಲ ಚಿತ್ರದ ಆರಂಭ ತೆರೆದಿಡುತ್ತದೆ.

ಇದೇ ಸಂದರ್ಭದಲ್ಲಿ ನಗರ ಪಾಲಿಕೆಗೆ ಹೊಸದಾಗಿ ಆಗಮಿಸುವ ಅಧಿಕಾರಿ(ತೃಷಾ)ಯ ಜೊತೆಗೆ ಕಥಾನಾಯಕನ ಸಂಘರ್ಷ. ಇಲ್ಲೂ ಒಂದು ಉಪಕಥೆೆಯಿದೆ. ಈ ಅಧಿಕಾರಿಣಿ ಕಾಲೇಜು ಕಾಲದಲ್ಲಿ ಸಚಿನ್‌ನ ಪ್ರೇಯಸಿ ಯಾಗಿರುತ್ತಾಳೆ. ಘಟನೆಯೊಂದು ಅವರನ್ನು ಬೇರೆ ಬೇರೆ ಮಾಡುತ್ತದೆ. ಮಧ್ಯಾಂತರದ ಬಳಿಕ, ಜಾನಿಲಿವರ್ ಪ್ರವೇಶದಿಂದ ಚಿತ್ರ ಒಂದಿಷ್ಟು ಖುಷಿಕೊಡುತ್ತದೆ. ಇನ್ನೇನು ಚಿತ್ರ ತನ್ನ ಲವಲವಿಕೆಯಿಂದ ಜೀವ ಪಡೆಯಿತು ಎನ್ನುವಷ್ಟರಲ್ಲಿ ಖಳನಾಯಕರನ್ನು ಕಥಾನಾಯಕ ಸದೆ ಬಡಿಯುವುದರೊಂದಿಗೆ ಮುಕ್ತಾಯವಾಗುತ್ತದೆ.

ಅಕ್ಷಯ್ ಅಭಿನಯ ಪರವಾಗಿಲ್ಲ. ರಾಜ್‌ಪಾಲ್ ಯಾದವ್ ಮತ್ತು ಜಾನಿಲಿವರ್ ಪಾತ್ರಗಳಿಂದ ಚಿತ್ರ ಒಂದಿಷ್ಟು ಸಹ್ಯವಾಗಿದೆ. ಚಿತ್ರವನ್ನು ಸಂಪೂರ್ಣ ಹಾಸ್ಯ ಚಿತ್ರವಾಗಿಸುವ ಅವಕಾಶ ನಿರ್ದೇಶಕರಿಗಿತ್ತು. ಚಿತ್ರಕತೆಯನ್ನು ಇನ್ನೊಂದಿಷ್ಟು ತಿದ್ದಿ ತೀಡಿದ್ದರೆ ಕನಿಷ್ಠ ಒಂದು ಒಳ್ಳೆಯ ಹಾಸ್ಯ ಚಿತ್ರವನ್ನು ಕೊಟ್ಟ ಹೆಗ್ಗಳಿಕೆ ನಿರ್ದೇಶಕರದ್ದಾಗುತ್ತಿತ್ತು. ಆದರೆ ಪ್ರಿಯದರ್ಶನ್ ಅವರ ಅವಸರ ಎದ್ದು ಕಾಣುತ್ತದೆ. ಹೀಗೆ ಚಿತ್ರ ನಿರ್ದೇಶಿಸುತ್ತಾ ಹೋದರೆ, ‘ರಿಮೇಕ್ ರಾಜ’ ಎಂಬ ಕಳಂಕವನ್ನು ಅವರು ಶಾಶ್ವತವಾಗಿ ಹೊರಬೇಕಾಗುತ್ತದೆ. ಪ್ರಿಯದರ್ಶನ್ ತಮ್ಮ ಕದಿಯುವ ಚಟದಿಂದ ಹೊರ ಬರಲಿ. ಅಪರೂಪಕ್ಕೊಂದು ಚಿತ್ರವನ್ನು ಕೊಟ್ಚರೂ ಪರವಾಗಿಲ್ಲ. ಅದರಲ್ಲಿ ಅವರ ಸ್ವಂತಿಕೆಯಿರಲಿ. ಕಾಲಾಪಾನಿ, ಕಾಂಜೀವರಂನಂತಹ ಇನ್ನೊಂದು ಚಿತ್ರಕ್ಕಾಗಿ ಅವರ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎನ್ನುವುದು ಅವರಿಗೆ ನೆನಪಿರಲಿ.

-ಮುಸಾಫಿರ್‌

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್