ಒಂದು ಒಳ್ಳೆಯ ಸದಭಿರುಚಿಯ ಚಿತ್ರವಾಗಲು ಸೂಪರ್‌ಸ್ಟಾರ್‌ಗಳಾಗಲಿ ಅಥವಾ ಖ್ಯಾತ ನಿರ್ದೇಶಕರ ಅಗತ್ಯವಿಲ್ಲವೆಂಬುದಕ್ಕೆ ಸುಧೀಶ್ ಕಾಮತ್ ನಿರ್ದೇಶನದ ‘ಒನ್ ನೈಟ್ ಓನ್ ಮಾರ್ನಿಂಗ್’ ಸಾಕ್ಷಿಯಾಗಿದೆ. ಇನ್ನೂ ವಿಶೇಷವೆಂದರೆ ಇದೊಂದು ಪಕ್ಕಾ ಬ್ಲಾಕ್ ಆಂಡ್ ವೈಟ್ ಸಿನೆಮಾ. ಬಾಕ್ಸ್ ಆಫೀಸಿನ ಹಂಗಿಲ್ಲದೆ ಕಪ್ಪು ಬಿಳುಪಿನಲ್ಲಿ ಚಿತ್ರಿಸಿರುವ ‘ಒನ್ ನೈಟ್ ಒನ್ ಮಾರ್ನಿಂಗ್’ ಒಂದು ಉತ್ತಮ ಪ್ರಾಯೋಗಿಕ ಚಿತ್ರವೆನ್ನಲಡ್ಡಿಯಿಲ್ಲ.ಕುತೂಹಲ ಕೆರಳಿಸುವ ನಿರೂಪಣೆ, ಸಂಭಾಷಣೆಗಳ ಚಮತ್ಕಾರ ಹಾಗೂ ಪ್ರಬುದ್ಧ ನಟನೆಯಿಂದ ಈ ಚಿತ್ರವು ಪ್ರೇಕ್ಷಕರ ಅಂತರಂಗವನ್ನು ನಿಧಾನವಾಗಿ ಆವರಿಸತೊಡಗುತ್ತದೆ. ಹೊಸ ವರ್ಷದ ಮುನ್ನಾ ದಿನದ ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದ ಇಬ್ಬರು ಅಪರಿಚಿತರ ನಡುವೆ ನಡೆಯುವ ಸುದೀರ್ಘ ಸಂಭಾಷಣೆಯೇ ಈ ಚಿತ್ರದ ಕಥಾವಸ್ತು.ಚಿತ್ರದ ನಾಯಕ ಟ್ಯೂರಿಯಾ (ಮನು ನಾರಾಯಣ್) ನ್ಯೂಯಾರ್ಕ್‌ನಲ್ಲಿ ಹೊಸ ವರ್ಷದ ಪಾರ್ಟಿಯೊಂದರಲ್ಲಿ ಪಾಲ್ಗೊಂಡ ಬಳಿಕ ತನ್ನ ಮೂವರು ಸ್ನೇಹಿತರೊಂದಿಗೆ ಫಿಲಡೆಲ್ಫಿಯಾಗೆ ಹಿಂದಿರುಗುತ್ತಿರುತ್ತಾನೆ. ಒಂದಿಷ್ಟು ಮದ್ಯದ ನಶೆ ಕೂಡಾ ಆತನ ತಲೆಗೇರಿದೆ. ಆ ನಟ್ಟಿರುಳಲ್ಲಿ ಆತನಿಗೆ ಪಾರ್ಟಿಯಲ್ಲಿ ಪರಿಚಯವಾಗಿದ್ದ ಚೆಲುವೆ (ಸೀಮಾ ರಹ್ಮಾನ್)ಯೊಬ್ಬಳ ನೆನಪಾಗುತ್ತದೆ. ಆಕೆಯೊಂದಿಗೆ ಮಾತನಾಡಬೇಕೆಂದೆನಿಸಿ ಆಕೆಗೆ ಫೋನಾಯಿಸುತ್ತಾನೆ.
ಆಗ ಇವರಿಬ್ಬರ ನಡುವೆಯೂ ನಿರರ್ಗಳವಾದ ಸಂಭಾಷಣೆ ಶುರುಹಚ್ಚಿಕೊಳ್ಳುತ್ತದೆ. ಮಾತುಕತೆಯಲ್ಲೇ ಇವರಿಬ್ಬರೂ ಪರಸ್ಪರ ನೋವು, ನಲಿವುಗಳು, ಆಸೆ, ಆಕಾಂಕ್ಷೆಗಳನ್ನು ಅರಿತುಕೊಳ್ಳುತ್ತಾರೆ. ಮಾತುಕತೆಯ ನಡುವೆ ಟ್ಯುರಿಯಾ ಏನೋ ಅನ್ನಬಾರದ್ದನ್ನು ಅಂದಾಗ, ಹುಡುಗಿಗೆ ಕಸಿವಿಸಿಯಾಗುತ್ತದೆ. ಆಕೆ ಡಿಸ್‌ಕನೆಕ್ಟ್ ಮಾಡುತ್ತಾಳೆ. ಸ್ವಲ್ಪ ಹೊತ್ತಿನ ಬಳಿಕ ಆಕೆಯೇ ಮತ್ತೆ ಕರೆ ಮಾಡುತ್ತಾಳೆ. ಈಗ ಅವರು ಪೋಲಿ ವಿಚಾರಗಳ ಬದಲಿಗೆ ಜೀವನ ಹಾಗೂ ಪ್ರೀತಿಯ ಬಗ್ಗೆ ಗಂಭೀರವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಹೀಗೆ ಅವರ ಮಾತುಕತೆ ಪ್ರಬುದ್ಧತೆಯೆಡೆಗೆ ಸಾಗುತ್ತಾ ಹೋಗುತ್ತದೆ. ಸಮಯ ಬೆಳಗ್ಗೆ 6:00 ಗಂಟೆಯಾಗುತ್ತದೆ. ಯುವತಿಗೆ ಭಾರತಕ್ಕೆ ತೆರಳುವ ವಿಮಾನವನ್ನು ಹಿಡಿಯಬೇಕಾಗಿದೆ. ಹೀಗೆ ಟುರಿಯಾ ಹಾಗೂ ಯುವತಿ (ಚಿತ್ರದ ಅಂತ್ಯದವರೆಗೂ ಆಕೆ ತನ್ನ ಹೆಸರನ್ನು ಬಿಟ್ಟುಕೊಡುವುದಿಲ್ಲ) ಬರೀ ಒಂದು ರಾತ್ರಿಯಲ್ಲಿ ನಡೆಸುವ ದೂರವಾಣಿ ಸಂಭಾಷಣೆಯು ಅವರ ನಡುವೆ ಅನನ್ಯವಾದ ಮಧುರ ಅನುಬಂಧವನ್ನು ಸೃಷ್ಟಿಸುತ್ತದೆ....
ಓನ್‌ನೈಟ್... ಜನಪ್ರಿಯ ಹಾಲಿವುಡ್‌ನ ಚಿತ್ರ ‘ಬಿಫೋರ್ ಸನ್‌ಶೈನ್’ನನ್ನೇ ತಕ್ಕಮಟ್ಟಿಗೆ ಹೋಲುತ್ತಿದೆಯಾದರೂ, ನಿರ್ದೇಶಕ ಸುಧೇಶ್ ಕಾಮತ್ ಚಿತ್ರದುದ್ದಕ್ಕೂ ತನ್ನತನವನ್ನು ಮೆರೆದಿದ್ದಾರೆ. ಪ್ರತಿಯೊಂದು ಪಾತ್ರವನ್ನೂ ಶ್ರದ್ಧೆಯಿಂದ ಪೋಷಿಸಿದ್ದಾರೆ. ಸಂಭಾಷಣೆಯೇ ಬಂಡವಾಳವಾಗಿರುವ ಈ ಚಿತ್ರವನ್ನು ತುಸು ಬೋರಾಗದಂತೆ ನಿರೂಪಿಸಿದ್ದಾರೆ. ಚಿತ್ರದ ಹೆಚ್ಚಿನ ಭಾಗವು ಒಂದು ಹೊಟೇಲ್ ಕೊಠಡಿ ಹಾಗೂ ಕಾರಿನ ಸುತ್ತಲೇ ಗಿರಕಿ ಹೊಡೆಯುತ್ತಿದೆಯಾದರೂ, ಪ್ರೇಕ್ಷಕರಲ್ಲಿ ಅಂತ್ಯದವರೆಗೂ ಕುತೂಹಲವನ್ನು ಮೂಡಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಆದಾಗ್ಯೂ, ಇಂತಹ ಪ್ರಾಯೋಗಿಕ ಚಿತ್ರಗಳು ಮಾಸ್ ಪ್ರೇಕ್ಷಕರನ್ನು ತಲುಪುವುದು ಕಷ್ಟ.
ಹೊಸ ಪ್ರತಿಭೆಗಳಾದ ಮನು ನಾರಾಯಣ್ ಹಾಗೂ ಸೀಮಾ ರಹ್ಮಾನ್ ಅತ್ಯುತ್ತಮವಾದ ಅಭಿನಯ ನೀಡಿದ್ದಾರೆ. ಟ್ಯುರಿಯಾನ ಮೂವರು ಸ್ನೇಹಿತರಾಗಿ ವಸಂತ್ ಸಂತೋಷಮ್, ರಾಜಾಸೇನ್ ಹಾಗೂ ಅಭಿಷೇಕ್ ಡಿ. ಶಹಾ ಕೂಡಾ ಲವಲವಿಕೆಯಿಂದ ನಟಿಸಿದ್ದಾರೆ.
ಸುಧೇಶ್ ಕಾಮತ್‌ರ ನಿರ್ದೇಶನ ಅತ್ಯುತ್ತಮ. ಚಿತ್ರದ ಹೆಚ್ಚಿನ ಭಾಗಗಳಲ್ಲಿ ಕಥೆಯ ಹಾದಿ ತಪ್ಪದಂತೆ ಎಚ್ಚರವಹಿಸಿದ್ದಾರೆ. ಆದರೆ ಕೊನೆಯ 15 ನಿಮಿಷಗಳಲ್ಲಿ ಅವರ ಹಿಡಿತ ಅದೇಕೋ ಸಡಿಲವಾಗಿರುವಂತೆ ಕಾಣುತ್ತದೆ. ಇದೊಂದು ಕಡಿಮೆ ಬಜೆಟ್‌ನ ಚಿತ್ರವಾದರೂ, ತಾಂತ್ರಿಕವಾಗಿ ಉತ್ತಮವಾಗಿದೆ. ನಿಶ್ಚಲ್ ಕೃಷ್ಣ ವಿಠ್ಠಲಾನಂದನ್ ಅವರ ಛಾಯಾಗ್ರಹಣ ಚಿತ್ರದ ಇನ್ನೊಂದು ಹೈಲೈಟ್.ವೆಂಕಟರಾಮ್ ಅವರ ಸಂಕಲನವೂ ಹರಿತವಾಗಿದೆ.ಒಟ್ಟಿನಲ್ಲಿ ಬಾಕ್ಸ್ ಆಫೀಸಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಒಂದು ಉತ್ತಮ ಪ್ರಾಯೋಗಿಕ ಚಿತ್ರವನ್ನು ನೀಡಿದ ಓನ್ ಮಾರ್ನಿಂಗ್ ತಂಡಕ್ಕೆ ಹ್ಯಾಟ್ಸ್ ಆಫ್ ಎನ್ನಲೇ ಬೇಕು...
ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...
Click here to post your views ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...
ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...
ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...
ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...
‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...
ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...
ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...
ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...