ಲಾಂಗು, ಮಚ್ಚುಗಳನ್ನು ಹಿಡಿದು ಬೋರಾಗಿರುವ ದರ್ಶನ್ ಇದೀಗ ದುಷ್ಟರನ್ನು ಸದೆಬಡಿಯಲು ಮಿಶಿನ್ ಗನ್ ವೊರೆ ಹೊಕ್ಕಿದ್ದಾರೆ. ‘ಚಿಂಗಾರಿ’ ಹೆಸರನ್ನು ಕಂಡು ಇದಾವುದೋ ಪ್ರೀತಿ, ಪ್ರೇಮ, ಹಾಸ್ಯಗಳ ಕಥಾನಕ ಚಿತ್ರವೆಂದರೆ ಮೋಸ ಹೋದೀರಿ. ಇದು ಕೂಡ ದರ್ಶನ್ ಅಭಿಮಾನಿಗಳಿಗಾಗಿಯೇ ಮಾಡಿದ, ಡಿಶುಂ ಡಿಶುಂ ಚಿತ್ರ. ಆದರೆ ಒಂದಿಷ್ಟು ಭಿನ್ನವಾಗಿ ನಿರೂಪಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಲಾಂಗ್ ಬದಲು ಮಿಶಿನ್‌ಗನ್, ಮೆಜೆಸ್ಟಿಕ್ ಬದಲು ಸ್ವಿಝರ್‌ಲ್ಯಾಂಡ್ ಹೀಗೆ ಕೆಲವು ಬದಲಾವಣೆಗಳನ್ನು ಚಿತ್ರದಲ್ಲಿ ಕಾಣಬಹುದು. ಒಟ್ಟಿನಲ್ಲಿ ನಿರ್ದೇಶಕ ಎ. ಹರ್ಷ ಅವರ ಈ ಹಿಂದಿನ ಎರಡು ಚಿತ್ರಗಳಿಗೆ ಹೋಲಿಸಿದರೆ, ಪರವಾಗಿಲ್ಲ ಎಂದು ಚಿಂಗಾರಿಯನ್ನು ಸ್ವೀಕರಿಸ ಬಹುದಾಗಿದೆ. ಇಂಗ್ಲಿಷ್ ಚಿತ್ರ ‘ಟೇಕನ್’ನ ಸಣ್ಣದೊಂದು ಪ್ರಭಾವ ಇದರ ಮೇಲಿದೆ.
ಮಹಿಳೆಯರ ಅಪರಹಣ ಮತ್ತು ಅವರ ವ್ಯಾಪಾರ, ವೇಶ್ಯಾವಾಟಿಕೆ ಇವುಗಳ ಸುತ್ತ ಕತೆ ಕೇಂದ್ರೀಕೃತವಾಗಿದೆ. ಸಿಸಿಬಿ ಅಧಿಕಾರಿ ಪರಶುರಾಮ್ ಪಾತ್ರದಲ್ಲಿ ದರ್ಶನ್ ನಟಿಸಿದ್ದರೆ, ನಾಯಕ ಅಪಹೃತ ಪ್ರೇಯಸಿ ಗೀತಾಳ ಪಾತ್ರದಲ್ಲಿ ದೀಪಿಕಾ ಕಾಮಯ್ಯ ಅವರು ಮಿಂಚಿದ್ದಾರೆ. ಸಣ್ಣದೊಂದು ಎಳೆಯನ್ನು ಮುಂದಿಟ್ಟುಕೊಂಡು ನಿರ್ದೇಶಕ ಹರ್ಷ ವೇಗದಿಂದ ಕತೆಯನ್ನು ನಿರೂಪಿಸುತ್ತಾ ಹೋಗುವುದು, ಫ್ಲಾಶ್‌ಬ್ಯಾಕ್‌ಗಳ ಮೂಲಕ ಅಲ್ಲಲ್ಲಿ ಕತೆಗಳನ್ನು ಹೇಳುವುದು ಚಿತ್ರವನ್ನು ನೋಡುವಂತೆ ಮಾಡುತ್ತದೆ. ಹಾಲಿವುಡ್ ಶೈಲಿಯಲ್ಲಿ ನಿರ್ದೇಶಕರು ಚಿತ್ರವನ್ನು ಮಾಡಲು ಪ್ರಯತ್ನಿಸಿರುವುದು ಇನ್ನೊಂದು ಹೆಗ್ಗಳಿಕೆ. ಬಹುತೇಕ ಚಿತ್ರೀಕರಣ ಸ್ವಿಝರ್‌ಲ್ಯಾಂಡ್‌ನಲ್ಲಿ ನಡೆದಿರುವುದರಿಂದ, ಛಾಯಾಗ್ರಹಣ ಕಣ್ಣಿಗೆ ತಂಪು ನೀಡುತ್ತದೆ.

ಆರಂಭದಲ್ಲಿ ದರ್ಶನ್ ಪೊಲೀಸ್ ಅಧಿಕಾರಿಯೆನ್ನುವುದು ನಾಯಕಿಗೆ ಗೊತ್ತಿರುವುದಿಲ್ಲ. ಜೊತೆಗೆ ಆತನ ಅಣ್ಣನನ್ನು ಕೊಂದ ಆರೋಪಿ ಎಂದು ನಾಯಕನನ್ನು ನಾಯಕಿ ತಪ್ಪು ತಿಳಿದುಕೊಳ್ಳುತ್ತಾಳೆ. ಬಳಿಕ ಭಾರತದಿಂದ ಹೋದ ಆಕೆ ಸ್ವಿಝರ್‌ಲ್ಯಾಂಡ್‌ನಲ್ಲಿ ಇದ್ದಕ್ಕಿದ್ದಂತೆಯೇ ಕಣ್ಮರೆಯಾಗುತ್ತಾಳೆ. ಮಹಿಳೆಯರ ಅಕ್ರಮ ಸಾಗಾಟ ಮತ್ತು ಮಾರಾಟದ ಮಾಫಿಯಾಗಳ ಬೆನ್ನು ಹತ್ತುವ ನಾಯಕ, ಸ್ವಿಝರ್‌ಲ್ಯಾಂಡ್‌ಗೆ ಹಾರುತ್ತಾನೆ. ಅಲ್ಲಿ ದೀಪಿಕಾ(ಭಾವನಾ) ಎನ್ನುವವಳ ಪರಿಚಯವಾಗುತ್ತದೆ. ಉದ್ಯಮಿಯೊಬ್ಬನ ಸಹಕಾರದೊಂದಿಗೆ ಮಹಿಳೆಯ ಹರಾಜಿನ ಕೇಂದ್ರವನ್ನು ತಲುಪುತ್ತಾನೆ. ನಾಯಕಿ ಹರಾಜಾಗುವ ಕೊನೆಯ ಕ್ಷಣದಲ್ಲಿ ನಾಯಕ ಆಕೆಯನ್ನು ಪಾರುಮಾಡುತ್ತಾನೆ.
ಚಿತ್ರಕತೆ ಬಿಗಿಯಾಗಿಲ್ಲ. ದರ್ಶನ್ ಅಭಿಮಾನಿಗಳನ್ನು ತೃಪ್ತಿ ಪಡಿಸುವ ಹಂಗಿಗೂ ನಿರ್ದೇಶಕರು ಒಳಗಾಗಿರುವುದರಿಂದ, ಅಲ್ಲಲ್ಲಿ ಚಿತ್ರ ದುರ್ಬಲವಾಗಿದೆ. ಆದರೂ ಚಿತ್ರ ಕೆಲವು ಕಾರಣಗಳಿಗಾಗಿ ನೋಡುವಂತಿದೆ. ದರ್ಶನ್ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ಅವರಿಗೆ ತಕ್ಕುದಾದ ರೀತಿಯಲ್ಲೇ ಸಂಭಾಷಣೆಗಳನ್ನು ಬರೆಯಲಾಗಿದೆ. ಮಿಶಿನ್‌ಗನ್ ಗುಂಡುಗಳಂತೆ ನೆಗೆಯುವ ಸಂಭಾಷಣೆ ಅವರ ಅಭಿಮಾನಿಗಳಿಗೆ ಖುಷಿ ನೀಡಬಹುದು. ಒಂದು ರೀತಿಯಲ್ಲಿ ಹರ್ಷ ಅವರು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿ ಮಾಡಲು ಬಹಳ ಪ್ರಯತ್ನ ನಡೆಸಿದ್ದಾರೆ. ಭಾಗಶಃ ಯಶಸ್ವಿಯಾಗಿದ್ದಾರೆ. ಟೈಂ ಪಾಸಿಗಾಗಿ ಈ ಚಿತ್ರ ನೋಡಲು ಹೋದವರಿಗೆ ಯಾವುದೇ ನಿರಾಶೆಯಾಗದು. ಕಮರ್ಶಿಯಲ್ ಚಿತ್ರವನ್ನು ನಿರ್ದೇಶಿಸುವ ಹರ್ಷ ಅವರ ಈ ಚಿತ್ರ ಅವರಿಗೆ ಫಲ ನೀಡುವುದರಲ್ಲಿ ಸಂಶಯವಿಲ್ಲ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...