mail-img print-img

ಯಶಸ್ಸಿನ ಉತ್ತುಂಗದಲ್ಲಿ: ಕತರ್ ಏರ್‌ವೇಸ್

ಸೋಮವಾರ - ಆಗಸ್ಟ್ -16-2010

ಮನಾಮ: ಗಲ್ಫ್ ಪ್ರಾಂತ್ಯದಲ್ಲಿ ಅತ್ಯಂತ ವೇಗದ ಬೆಳವಣಿಗೆಯನ್ನು ಕಾಣುತ್ತಿರುವ ವಾಯುಯಾನ ಸಂಸ್ಥೆಗಳಲ್ಲೊಂದಾದ ಕತರ್ ಏರ್‌ವೇಸ್, 501 ಮಿಲಿಯ ಡಾಲರ್ ವೌಲ್ಯದ ದೀರ್ಘ ವ್ಯಾಪ್ತಿಯ ಎರಡು ಬೋಯಿಂಗ್ 777-200 ವಿಮಾನಗಳ ಖರೀದಿಗಾಗಿ ಆರ್ಡರ್ ಸಲ್ಲಿಸಿದೆ. ಇದಕ್ಕಿಂತಲೂ ಮುನ್ನ ಆರ್ಡರ್ ಸಲ್ಲಿಸಲಾದ ಬೋಯಿಂಗ್ 787 ಡ್ರೀಮ್‌ಲೈನರ್ ಮಾದರಿಯ ವಿಮಾನಗಳು 2011ನೆ ಇಸವಿಯ ಪ್ರಥಮ ತ್ರೈಮಾಸಿಕದಲ್ಲಿ ತನ್ನ ಬಳಗಕ್ಕೆ ಸೇರ್ಪಡೆಗೊಳ್ಳಲಿದೆಯೆಂದು ಕತರ್ ಏರ್‌ವೇಸ್ ಪ್ರಕಟಿಸಿದೆ.

‘‘ಮಧ್ಯಪ್ರಾಚ್ಯದಲ್ಲಿ ವಾಯುಯಾನಕ್ಕಾಗಿನ ಬೇಡಿಕೆಯು ಬೆಳೆಯುತ್ತಲೇ ಹೋಗುತ್ತಿದೆ. ಜಾಗತಿಕ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿರುವ ಸೂಚನೆಗಳು ಕಂಡುಬರುತ್ತಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮಾನಯಾನದ ಬೇಡಿಕೆಯು ಹೆಚ್ಚುತ್ತಿದೆ ಎಂದು ಕತರ್ ಏರ್‌ವೇಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಬರ್ ಅಲ್ ಬಕರ್ ತಿಳಿಸಿದ್ದಾರೆ. ಕತರ್ ಏರ್‌ವೇಸ್ ಬಳಿ ಪ್ರಸ್ತುತ 17 ಬೋಯಿಂಗ್ 777 ವಿಮಾನಗಳಿವೆ. ಇವುಗಳಲ್ಲಿ 11 ವಿಸ್ತೃತ ವ್ಯಾಪ್ತಿ, ಆರು ದೀರ್ಘ ವ್ಯಾಪ್ತಿ ಮತ್ತು ಎರಡು ಸಾಗಾಟ ವಿಮಾನಗಳಾಗಿವೆ. ಈಗ ಇನ್ನೂ ಎರಡು ಹೊಸ ವಿಮಾನಗಳನ್ನು ಖರೀದಿಸುವ ಘೋಷಣೆಯೊಂದಿಗೆ ಕತರ್ ಏರ್‌ವೇಸ್ 10 ಬೋಯಿಂಗ್ -777 ವಿಮಾನಗಳಿಗೆ ಆರ್ಡರ್ ನೀಡಿದಂತಾಗಿದೆ.

   
   

ಹೆಚ್ಚುವರಿಯಾಗಿ ಎರಡು ಬೋಯಿಂಗ್ -777 ವಿಮಾನಗಳ ಖರೀದಿಯಿಂದ ನಮ್ಮ ಮಾರುಕಟ್ಟೆಯನ್ನು ವಿಸ್ತರಿಸಲು ಹಾಗೂ ನೂತನ ಅವಕಾಶಗಳನ್ನು ಗುರುತಿಸಲು ಸಾಧ್ಯವಾಗಲಿದೆಯೆಂದು ಅಲ್ ಬಕರ್ ಹೇಳಿದ್ದಾರೆ. ಕತರ್ ಏರ್‌ವೇಸ್‌ನ 777-200 ಬೋಯಿಂಗ್ ವಿಮಾನಗಳ ಮೂರು ಜೋಡಿಯು ದೋಹಾ ಹಾಗೂ ಹೌಸ್ಟನ್ ಮತ್ತು ಮೆಲ್ಬೋರ್ನ್ ಮತ್ತು ಸಾವೊ ಪೌಲೊ, ಬ್ಯೂನಸ್ ಐರಿಸ್ ನಡುವೆ ನಿರಂತರವಾಗಿ ಹಾರಾಡುತ್ತಿವೆ.

ದೋಹಾದಿಂದ ಜಗತ್ತಿನ ಯಾವುದೇ ಪ್ರಮುಖ ನಗರದ ಜೊತೆ ನಿರಂತರವಾಗಿ ಸಂಪರ್ಕಿಸುವ ಹಾಗೂ ವಿಶ್ವದಲ್ಲೇ ಅತ್ಯಂತ

ದೀರ್ಘ ವ್ಯಾಪ್ತಿಯ ಪ್ರಯಾಣವನ್ನು ನಡೆಸುವ ವಾಣಿಜ್ಯ ವಿಮಾನಯಾನ ಸಂಸ್ಥೆಯೆಂಬ ಖ್ಯಾತಿ ಕತಾರ್ ಏರ್‌ವೇಸ್‌ಗಿದೆ. 2007ರಲ್ಲಿ ಮೊದಲ ಬಾರಿಗೆ ಕತರ್ ಏರ್‌ವೇಸ್ ಬೋಯಿಂಗ್ 777 ಪ್ರಯಾಣಿಕ ವಿಮಾನದ ಹಾರಾಟವನ್ನು ಆರಂಭಿಸಿತು. ಕೇವಲ ಎರಡು ತಿಂಗಳ ಹಿಂದೆಯಷ್ಟೇ ಬೋಯಿಂಗ್ 777 ಸರಕು ಸಾಗಾಟ ವಿಮಾನದ ಹಾರಾಟವನ್ನು ಅದು ಪ್ರಾರಂಭಿಸಿತ್ತು.ಕತರ್ ಏರ್‌ವೇಸ್ ಬಳಿ ಪ್ರಸ್ತುತ 17 ಬೋಯಿಂಗ್ -777 ವಿಮಾನಗಳಿವೆ. ಇವುಗಳಲ್ಲಿ 11 ವಿಸ್ತೃತ ವ್ಯಾಪ್ತಿ, ಆರು ದೀರ್ಘ ವ್ಯಾಪ್ತಿ ಮತ್ತು ಎರಡು ಸಾಗಾಟ ವಿಮಾನಗಳಾಗಿವೆ. ಈಗ ಇನ್ನೂ ಎರಡು ಹೊಸ ವಿಮಾನಗಳನ್ನು ಖರೀದಿಸುವ ಘೋಷಣೆಯೊಂದಿಗೆ ಕತರ್ ಏರ್‌ವೇಸ್ 10 ಬೋಯಿಂಗ್- 777 ವಿಮಾನಗಳಿಗೆ ಆರ್ಡರ್ ನೀಡಿದಂತಾಗಿದೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಡವರ ಮಕ್ಕಳಿಗೆ ನಿರಾಕರಿಸಲ್ಪಟ್ಟ ಶಿಕ್ಷಣ

ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...


- ಎಸ್.ಬಾಲನ್,ಹೈಕೋರ್ಟ್ ವಕೀಲರು, ಬೆಂಗಳೂರು.

ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ

ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...


- ಗೋಪಾಲ್ ತ್ರಾಸಿ

ಅಂತರ ಜಾತಿಯ ವಿವಾಹ ಮೀಸಲಾತಿಗೆ ಅಡ್ಡಿಯಾಗದು: ಸರ್ವೋಚ್ಚ ನ್ಯಾಯಾಲಯದ ತೀರ್ಪು

ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...


- ಕೆ. ದೇಜಪ್ಪ

ಆರೆಸ್ಸೆಸ್ ಶಿಸ್ತಿನ ಒಳಗುಟ್ಟು

ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...


- ಸನತ್‌ ಕುಮಾರ ಬೆಳಗಲಿ

ನಿನ್ನನ್ನು ಒಳ್ಳೆಯ ಬ್ಯಾರಿ ಅಂತ ಹೇಗೆ ನಂಬುವುದು?

‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...


- ಚೇಳಯ್ಯ

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ-ಪ್ರಗತಿಪರರು

ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...


- ಡಾ ಜಿ. ಭಾಸ್ಕರ ಮಯ್ಯ

ಮನಸ್ಸಿನ ಅಸ್ವಸ್ಥತೆಗೆ ಮೂಲ ಕಾರಣ ಹುಡುಕಬೇಕು

ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...


- ಜ್ಯೋತಿ ಗುರುಪ್ರಸಾದ್

ದೂರಸಂಪರ್ಕ ನೀತಿ ಬೇಕಾಗಿದೆ

ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...


- ಅರವಿಂದ ರಾಜಗೋಪಾಲ