ದುಬೈ, ಜ.17: ಅರಬ್ ಸಂಯುಕ್ತ ಸಂಸ್ಥಾನದ ಬ್ಯಾರಿ ಸಾಂಸ್ಕೃತಿಕ ವೇದಿಕೆ (ಬಿಸಿಎಫ್) ವತಿಯಿಂದ ವಾರ್ಷಿಕ ಕ್ರೀಡಾ ಕೂಟ 2012 ದುಬೈನ ಶಾರ್ಜಾ ವಾಂಡರರ್ಸ್ ಕ್ಲಬ್‌ನಲ್ಲಿ ಇತ್ತೀಚೆಗೆ ಜರಗಿತು.
ಯುಎಇನ ವಿವಿಧ ಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಬ್ಯಾರಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬೆಳಗಿನ ಹೊತ್ತಲ್ಲಿ ವಾಲಿಬಾಲ್ ಟೂರ್ನಮೆಂಟ್ ಹಾಗೂ ಮಹಿಳೆಯ ರಿಗಾಗಿ ಪಾಕ ಸ್ಪರ್ಧೆಯನ್ನು ಆಯೋಜಿಸ ಲಾಗಿತ್ತು. ಆನಂತರ ವಿವಿಧ ರೀತಿಯ ಕ್ರೀಡಾ ಕೂಟಗಳು ನಡೆದವು.
ಕ್ರೀಡಾ ಕೂಟದಲ್ಲಿ ಯುವಕರಿಂದ ಹಿಡಿದು ಮುದುಕರವರೆಗಿನ ಸ್ಪರ್ಧಾಳು ಗಳು ಅತ್ಯಂತ ಲವಲವಿಕೆಯಿಂದ ಭಾಗವಹಿಸಿದ್ದರು.
ಸುಪ್ರಿಂ ವಾಟರ್ ಪ್ರೂಫಿಂಗ್, ಯುಎಇ ಎಕ್ಸ್‌ಚೇಂಜ್, ಶಮೀಮ್ ಇಂಜಿನಿಯರಿಂಗ್, ತುಫೈಲ್ ಗ್ರೂಫ್, ಮಿಲಾನೋ ಓಪ್ಟಿಕ್ಸ್, ಒನಿಕ್ಸ್ ಅ್ಯಡ್‌ವರ್ಟೈಸಿಂಗ್, ಬಿನ್ ಶಾಕೀರ್ ಎಲೆಕ್ಟ್ರಿಕ್ಸ್ ಆ್ಯಂಡ್ ಬಿಲ್‌ಡಿಂಗ್, ಚಿಲ್ಲಿವಿಲ್ಲಿ, ಅಯಾಸ್ ಈಕ್ವಿಪ್‌ಮೆಂಟ್ ರೆಂಟಲ್, ಎನ್‌ಟಿಡಿಇ, ಡಾ.ಬಿಕೆ.ಯೂಸುಫ್, ಎಂಇ. ಮೂಳೂರು, ರಝಾಕ್ ದೇವ, ಲತೀಫ್ ಮೂಲ್ಕಿ, ಡಾ.ಕೌಪ್ ಮುಹಮ್ಮದ್, ಅಲ್ತಾಫ್ ಮತ್ತು ಬಿಸಿಎಫ್ ಆಡಳಿತ ಸಮಿತಿಯ ಸದಸ್ಯರು ಹಾಗೂ ಇತರ ಸದಸ್ಯರು ಕ್ರೀಡಾ ಕೂಟದ ಪ್ರಾಯೋಜಕರಾಗಿದ್ದರು.
ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ ಯೂಸುಫ್ ಬ್ಯಾರಿ ಜನಾಂಗದ ಅಭಿವೃದ್ಧಿಗೋಸ್ಕರ ದುಡಿದ ಎಲ್ಲಾ ಸದಸ್ಯರು ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಕ್ರೆಡಾ ಕೂಟಗಳು ಪರಸ್ಪರರಲ್ಲಿ ಆತ್ಮೀಯ ವಾತಾವರಣ ನಿರ್ಮಿಸಲು ಹಾಗೂ ಜಗತ್ತಿನಾದ್ಯಂತ ಇರುವ ಪ್ರತಿಭಾನ್ವಿತರ ಗುರುತಿಸುವಿಕೆಗೆ ಸಹಾಯಕ ವಾಗುವುದು ಎಂದರು.
ಡಾ.ಕೌಫ್ ವಿಜೇತರ ಹೆಸರನ್ನು ಪ್ರಕಟಿಸಿದರು. ಎಂ.ಇ ಮೂಳೂರು ಧನ್ಯವಾದ ಸಮರ್ಪಿಸಿದರು.
ಕ್ರೀಡಾ ಕೂಟದ ಕೊನೆಗೆ ಲಾಟರಿ ಎತ್ತುವ ಕಾರ್ಯಕ್ರಮವನ್ನು ಡಾ.ಬಿ.ಕೆ. ಯೂಸುಫ್ ಮತ್ತು ಸಿದ್ದೀಕ್ ಬ್ಯಾರಿ ನೆರವೇರಿಸಿದರು.



ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...