ಇಸ್ಲಾಮಾಬಾದ್, ಜ.27: ಪಾಕಿಸ್ತಾನದಲ್ಲಿ ಪ್ರತಿಯೊಬ್ಬರೂ ಪ್ರಜಾಪ್ರಭುತ್ವವನ್ನು ಬಯಸುತ್ತಾರೆ ಹಾಗೂ ಯಾರೊಬ್ಬರಿಗೂ ಸಂವಿಧಾನವನ್ನು ಉಲ್ಲಂಘಿಸುವ ಇಚ್ಛೆಯಿಲ್ಲ ಎಂದು ಪಾಕ್ ಪ್ರಧಾನಿ ಯೂಸುಫ್ ರಝಾ ಗೀಲಾನಿ ಹೇಳಿದ್ದಾರೆ.
ಸ್ವಿಝರ್‌ಲೆಂಡ್‌ನ ದಾವೊಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಗೀಲಾನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸರಕಾರದ ಯಾವುದೇ ಸಂಸ್ಥೆಗಳ ನಡುವೆ ವಿವಾದಗಳು ನಡೆಯುತ್ತಿಲ್ಲ ಎಂದು ತಿಳಿಸಿದ್ದಾರೆ.
ದಾವೊಸ್‌ಗೆ ಆಗಮಿಸುವ ಮುನ್ನ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇರ್ಝ ಕಯಾನಿ ಹಾಗೂ ಐಎಸ್‌ಐ ಮುಖ್ಯಸ್ಥ ಅಹ್ಮದ್ ಶುಜಾ ಪಾಷಾರೊಂದಿಗೆ ನಡೆದ ಮಾತುಕತೆಯ ಬಗ್ಗೆ ಸುದ್ದಿಗಾರರಿಗೆ ವಿವರ ನೀಡಿದ್ದ ಪ್ರಧಾನಿ, ಅಫ್ಘಾನಿಸ್ತಾನದ ಭದ್ರತಾ ವಿಷಯಗಳಿಗೆ ಸಂಬಂಧಿಸಿಯೂ ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.
ಪಾಕಿಸ್ತಾನದ ಅಬೊತಾಬಾದ್‌ನಲ್ಲಿ ಅಡಗಿದ್ದ ಅಲ್ ಖಾಯಿದ ಅಧಿನಾಯಕ ಉಸಾಮ ಬಿನ್ ಲಾದೆನ್‌ನನ್ನು ಅಮೆರಿಕದ ಸೀಲ್ ಕಮಾಂಡೊ ಪಡೆ 2011ರ ಮೇ ಎರಡರಂದು ಹತ್ಯೆಗೈದ ಬಳಿಕ ರಾಷ್ಟ್ರದಲ್ಲಿ ಸೇನಾ ಕ್ರಾಂತಿ ಸಂಭವಿಸಬಹುದು ಎಂದು ಆತಂಕಗೊಂಡಿದ್ದ ಅಧ್ಯಕ್ಷ ಆಸಿಫ್ ಅಲಿ ಝರ್ದಾರಿ ನೆರವು ಕೋರಿ ಅಮೆರಿಕಕ್ಕೆ ಪತ್ರವೊಂದನ್ನು ಬರೆದಿರುವುದನ್ನು ಪಾಕ್ ಮೂಲದ ಅಮೆರಿಕನ್ ಉದ್ಯಮಿ ಮನ್ಸೂರ್ ಇಜಾಝ್ ಬಹಿರಂಗಪಡಿಸಿದ ಬಳಿಕ ಸರಕಾರ ಹಾಗೂ ಸೇನೆಯ ನಡುವೆ ತೀವ್ರ ಮುಸುಕಿನ ಗುದ್ದಾಟ ಪ್ರಾರಂಭವಾಗಿತ್ತು.
ನಾಗರಿಕ ಸಮಾಜ, ಬೇಹುಗಾರಿಕೆ, ಮಾಧ್ಯಮಗಳು, ಸಂಸದರು ಎಲ್ಲರೂ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವವನ್ನು ಬಯಸುತ್ತಾರೆ ಎಂದು ಗೀಲಾನಿ ನುಡಿದಿದ್ಧಾರೆ. ‘‘ಪ್ರಜಾಪ್ರಭುತ್ವಕ್ಕೆ ಹೊರತಾದ ಇನ್ನಿತರ ಯಾವುದೇ ವಿಚಾರದ ಬಗ್ಗೆ ಯಾರಿಗೂ ಒಲವಿಲ್ಲ. ಪ್ರಜಾಪ್ರಭುತ್ವವು ಬಲಿಷ್ಠವಾಗಿದೆ ಹಾಗೂ ಅಖಂಡವಾಗಿದೆ.’’ ಎಂದವರು ಹೇಳಿದ್ದಾರೆ.
ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...
Click here to post your views ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...
ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...
ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...
ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...
‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...
ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...
ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...
ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...