ಸಾಮಾಜಿಕ ವಿಘಟನೆ ಹಾಗೂ ತಾರತಮ್ಯ ವೆಂಬುದು ಭಾರತದಲ್ಲಿ ತೀರಾ ಸಾಮಾನ್ಯ ಸಂಗತಿ.ಹಾಗೆಯೇ ಈ ಪಿಡುಗು ವಿಶ್ವದ ಯಾವುದೇ ಒಂದು ಭಾಗಕ್ಕೆ ಸೀಮಿತ ವಾಗಿಲ್ಲ. ಯಾವುದೇ ಸಮಾಜದಲ್ಲಿಯೂ ಜನತೆಸಾಮಾಜಿಕವಾಗಿ, ಧಾರ್ಮಿಕವಾಗಿ, ಕೋಮು ನೆಲೆಯಲ್ಲಿ ಮತ್ತು ಆರ್ಥಿಕ ನೆಲೆಗಟ್ಟುಗಳಲ್ಲಿ ವಿಭಜನೆಗೊಂಡಿರುತ್ತಾರೆ. ಕಾರ್ಲ್ ಮಾರ್ಕ್ಸ್
| ಜಾತಿ ಹೆಸರುಗಳನ್ನು ಕೈಬಿಟ್ಟ ಮಾತ್ರಕ್ಕೆ ಜಾತಿವಾದವನ್ನು ಅಳಿಸಬಹುದೆಂದು ಭಾವಿಸುವುದು ಕೂಡಾ ಹುಂಬತನವಾಗಿದೆ. ಜಾತಿ ಹೆಸರುಗಳು, ಜಾತಿವಾದವೆಂಬ ಸಮಸ್ಯೆಯ ಒಂದು ಸಣ್ಣ ಭಾಗವಷ್ಟೇ. |
ಸಮಾಜವನ್ನು ಎರಡು ವರ್ಗಗಳಾಗಿ ವಿಭಜಿಸಿ ದ್ದನು. ಉಳ್ಳವರ ವರ್ಗ (ಶ್ರೀಮಂತರು) ಒಂದಾ ದರೆ ಹಾಗೂ ಶ್ರಮಿಕ (ಕಾರ್ಮಿಕರು/ ದುಡಿ ಯುವ ಸಮುದಾಯ) ವರ್ಗ ಇನ್ನೊಂದು. ಗುಲಾಮಗಿರಿ ವ್ಯವಸ್ಥೆ, ವಂಶಾಡಳಿತ ಮತ್ತು ವರ್ಗೀಯ ವ್ಯವಸ್ಥೆಗಳು, ನಮ್ಮ ದೇಶದ ಜಾತಿ ವ್ಯವಸ್ಥೆಗಿಂತ ಕಡಿಮೆ ವಿಷಕಾರಿಯೇನಲ್ಲ. ಆದರೆ ಜಾತಿ ವ್ಯವಸ್ಥೆಯು, ಮನುಕುಲದ ಇತಿಹಾಸ ದಲ್ಲಿಯೇ ಈಗಲೂ ಪ್ರಚಲಿತದಲ್ಲಿರುವ ಎಲ್ಲ ಬಗೆಯ ಶೋಷಣೆಗಳಲ್ಲಿಯೇ ಅತ್ಯಂತ ವಿಸ್ತಾರ ವಾದುದು ಹಾಗೂ ಬಲಿಷ್ಠವಾದುದು. ಭಾರತದಲ್ಲಿ ವೃತ್ತಿ ಆಧಾರಿತವಾಗಿ ಜಾತಿ ವ್ಯವಸ್ಥೆಯು ರೂಪುಗೊಂಡಿತ್ತು. ಸಮಾಜದ ಸೌಹಾರ್ದಯುತ ಕಾರ್ಯನಿರ್ವಣೆಯೇ ಜಾತಿ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿತ್ತು. ಕಾಲಕ್ರಮೇಣ ಈ ಜಾತಿ ವ್ಯವಸ್ಥೆಯು ಭಯಾನಕ ಪೆಡಂಭೂತವಾಗಿ ಬೆಳೆಯಿತು. ಶೋಷಣೆಯೇ ಅದರ ಅಸ್ತ್ರವಾ ಯಿತು. ಜನತೆಯ ನಡುವೆ ಸಾಮಾಜಿಕ ಅನ್ಯಾಯ ಮತ್ತು ಅಸಮಾನತೆಗೆ ದಾರಿ ಮಾಡಿ ಕೊಟ್ಟಿತು.
ನಾವು ಹುಟ್ಟುವಂತೆಯೇ ಜಾತಿಯೊಂದರ ಸದಸ್ಯತ್ವವನ್ನು ಪಡೆದುಕೊಳ್ಳುತ್ತೇವೆ. ನಾವು ನಮ್ಮ ವಂಶವಾಹಿಗಳನ್ನು ನಮ್ಮ ಹೆತ್ತವರಿಂದ ಮಾತ್ರ ವಲ್ಲ, ನಮ್ಮ ಜಾತಿಯ ಪೂರ್ವಿಕರಿಂದಲೂ ಪಡೆಯುತ್ತೇವೆಂಬ ಅಂಶವು ನಮಗೆಲ್ಲರಿಗೂ ಗೊತ್ತು. ಹೀಗಿರುವಾಗ ನಾವು ಸಮಾಜದ ಮುಖ್ಯವಾಹಿನಿಯಿಂದ ಜಾತಿ ವ್ಯವಸ್ಥೆಯನ್ನು ನಾಶಪಡಿಸಲು ಹೇಗೆ ಸಾಧ್ಯ? ಜಾತಿಪದ್ಧತಿ ಯನ್ನು ಹೊಡೆದೋಡಿಸಲು ಸಾಧ್ಯವೆಂದು ಭಾವಿಸುವುದೇ ಒಂದು ಬಗೆಯ ಬೆಪ್ಪುತನವಾ ಗುತ್ತದೆ.
ಯಾವುದೇ ಒಂದು ಹೆಸರಿಗಿರುವ ಪ್ರಭಾವ ವನ್ನು ಕೀಳಂದಾಜಿಸಲು ಸಾಧ್ಯವಿಲ್ಲ. ಹೆಸರಿ ನಲ್ಲೇನಿದೆಯೆಂದು ಅಂದುಕೊಳ್ಳುವವರು ಹಲವ ರಿದ್ದಾರೆ. ಆದರೆ ಹೆಸರಿನಲ್ಲಿ ಏನೇನಿಲ್ಲ?. ಓರ್ವ ವ್ಯಕ್ತಿಯ ಹೆಸರಿನ ಮೂಲಕವೇ ಆತನ ಅಥವಾ ಆಕೆಯ ಪರಿಚಯವಾಗುತ್ತದೆ. ಹೆಸರುಗಳು ನಮ್ಮ ರಾಷ್ಟ್ರೀಯತೆಯನ್ನು ಪ್ರತಿಫಲಿಸುವುದಲ್ಲದೆ, ನಾವು ಅನುಸರಿಸುವ ಧರ್ಮವನ್ನು ಕೂಡಾ ಸೂಚಿಸುತ್ತವೆ. ನಮ್ಮ ಪೂರ್ವಿಕರು, ಕುಟುಂಬ ಸದಸ್ಯರು, ಖ್ಯಾತನಾಮರು, ಕುಲ, ವೃತ್ತಿಯನ್ನು ಹೆಸರು ತೋರಿಸಿಕೊಡುತ್ತವೆ. ನಾವು ಯಾವ ಪ್ರದೇಶಕ್ಕೆ ಸೇರಿದವರೆಂಬುದನ್ನು ಸಹ ಅದು ಬೆಟ್ಟು ಮಾಡುತ್ತದೆ. ದೊಡ್ಡ ದೊಡ್ಡ ಬುದ್ಧಿಜೀವಿಗಳೆನಿಸಿಕೊಂಡ ವರು ತಮ್ಮ ಹೆಸರಿನ ಜೊತೆ ಜಾತಿಹೆಸರುಗಳನ್ನು ತಗಲಿಸಿಕೊಂಡಿದ್ದರೂ, ಜಾತಿ ವ್ಯವಸ್ಥೆಯನ್ನು ರದ್ದುಪಡಿಸಬೇಕೆಂದು ವಾದಿಸುತ್ತಿರುವುದು ನಿಜ ವಾಗಿಯೂ ಒಂದು ವಿಪರ್ಯಾಸವಾಗಿದೆ.
ಪ್ರಸಿದ್ಧ ಚಿಂತಕರಾದ ಮಣಿ ಅಯ್ಯರ್ ಅಥವಾ ರವಿವರ್ಮಾ ಅಥವಾ ರಾಹುಲ್ ಶಾಸ್ತ್ರಿ ಯಂಥವರು ಜಾತಿರಹಿತ ಸಮಾಜದ ಬಗ್ಗೆ ಉದ್ದುದ್ದ ಬರೆಯುತ್ತಾರೆ ಅಥವಾ ಗಂಟೆಗಟ್ಟಲೆ ಭಾಷಣಗಳನ್ನು ಮಾಡುತ್ತಾರೆ ಮತ್ತು ಇತರರಿಗೆ ಜಾತಿವಾದಿಗಳೆಂಬ ಹಣೆಪಟ್ಟಿಯನ್ನು ಕಟ್ಟುತ್ತಾರೆ. ಅದರೆ ಇವರ್ಯಾರೂ ತಮ್ಮ ಹೆಸರಿನ ಜೊತೆಗಿ ರುವ ಜಾತಿಸೂಚಕ ಉಪನಾಮಗಳನ್ನು ಕೈ ಬಿಟ್ಟಿಲ್ಲ. ತಮ್ಮ ಜಾತಿ ನಾಮಗಳನ್ನು ತಗಲಿಸಿ ಕೊಂಡೇ, ಜಾತಿಪದ್ಧತಿ ಅಳಿಯಬೇಕೆಂದು ಬೊಬ್ಬಿಡುತ್ತಿರುವುದು ವಿಷಾದಕರ.
ಶೈಕ್ಷಣಿಕ ಹಾಗೂ ಉದ್ಯೋಗ ವಲಯಗಳಲ್ಲಿ, ಪರೀಕ್ಷಕರು ಹಾಗೂ ಸಂದರ್ಶಕರು,ಕೇವಲ ಅಭ್ಯರ್ಥಿಗಳ ಜಾತಿ ಸೂಚಕ ಉಪನಾಮಗಳ ಬಗ್ಗೆ ನೋಟಹರಿಸಿ, ತಮ್ಮ ಜಾತಿಯ ಅಭ್ಯರ್ಥಿ ಗಳಿಗೆ ಅನುಕೂಲವಾಗಿ, ತಾವು ದ್ವೇಷಿಸುವ ಜಾತಿಯ ಅಭ್ಯರ್ಥಿಗಳ ವಿರುದ್ಧ ಸೇಡಿನಿಂದ ವರ್ತಿಸಿದಂತಹ ಹಲವು ದೃಷ್ಟಾಂತಗಳು ದೊರೆ ಯುತ್ತವೆ.
ಹೀಗೆ ಈ ಜಾತಿಸೂಚಕ ಉಪನಾಮಗಳು ಸಮಾಜದಲ್ಲಿ ಸಮಾನ ಅವಕಾಶಗಳ ಪರಿ ಕಲ್ಪನೆಗೆ ದೊಡ್ಡ ಸವಾಲನ್ನೇ ಒಡ್ಡಿವೆ. ಜಾತಿ ರಹಿತ ಸಮಾಜದ ಅಗತ್ಯ ನಮಗಿದೆ ಯೆಂಬುದು ನನ್ನ ವಾದವಲ್ಲ. ಆದರೆ ಹೆಸರುಗಳು ಕೇವಲ ಒಂದು ಪ್ರದೇಶ ಅಥವಾ ವಂಶ ಸೂಚಕವಾಗಿದ್ದರೆ ಸಾಕೆಂದು ನನ್ನ ಅಶಯ.
‘‘ನನ್ನ ಮುತ್ತಜ್ಜ ಆನೈ ಗೌಂಡರ್, ನನ್ನ ಅಜ್ಜನ ಹೆಸರು ಸಂಜೀವಯ್ಯ ಗೌಂಡರ್. ಇಲ್ಲಿ ಗೌಂಡರ್ ಎಂಬುದು ಜಾತಿ ಹೆಸರು. ನನ್ನ ತಂದೆಯ ಹೆಸರು ಎಸ್.ರಾಮದಾಸ್, ನನ್ನ ಹೆಸರು ಅನ್ಬುಮಣಿ ರಾಮದಾಸ್. ಇದೊಂದು ಕೇವಲ ವಂಶಾವಳಿಯ ಹೆಸರಾಗಿದೆ. ಜಾತಿ ನಾಮಗಳನ್ನು ನಾಶಪಡಿಸುವ ಸಾಮಾ ಜಿಕ ಕ್ರಾಂತಿಯು ತಮಿಳುನಾಡಿನಲ್ಲಿ ಎರಡು ತಲೆಮಾರುಗಳ ಹಿಂದೆಯೇ ಆರಂಭಗೊಂಡಿತ್ತು. ಮೊದಲಿಯಾರ್, ನಾಡಾರ್, ಗೌಂಡರ್, ತೇವರ್, ಐಯ್ಯರ್, ಪಿಳ್ಳೈ, ವನ್ನಿಯರ್ ಇತ್ಯಾದಿ..ಜಾತಿಸೂಚಕ ಉಪನಾಮಗಳನ್ನು ಕಿತ್ತೆಸೆಯುವ ಚಳವಳಿ ಕಳೆದ 30 ವರ್ಷಗಳಿಂದ ನಡೆಯುತ್ತಿದೆ. ಈ ಮಹಾನ್ ಸಾಮಾಜಿಕ ಪರಿವರ್ತನೆಯನ್ನು ದೇಶದ ಇತರ ಭಾಗಗಳೂ ಕೂಡಾ ಅನುಸರಿಸಬೇಕಾಗಿದೆ.
ಪಾಶ್ಚಾತ್ಯ ದೇಶಗಳಲ್ಲಿ ಹಿಂದೆಲ್ಲ ಆಯಾ ವ್ಯಕ್ತಿಗಳಿಗೆ ಅವರ ದೈಹಿಕ ಲಕ್ಷಣಗಳಿಗೆ ಅಥವಾ ಅವರ ಜನನ ಕಾಲದಲ್ಲಿದ್ದ ಸನ್ನಿವೇಶ ಗಳಿಗೆ ಸಂಬಂಧಿಸಿ ಹೆಸರುಗಳನ್ನಿಡಲಾಗುತ್ತಿತ್ತು. ಅವುಗಳಲ್ಲಿ ಹಲವು ಇಂದಿಗೂ ಉಪನಾಮಗ ಳಾಗಿ ಉಳಿದುಕೊಂಡಿವೆ. ಆನಂತರ ಗುರುತು ಹಿಡಿಯುವುದಕ್ಕಾಗಿ ಕುಟುಂಬ ನಾಮಗಳ ಬಳಕೆ ರೂಢಿಗೆ ಬಂದಿತು (ಉದಾ: ರಾಬರ್ಟ್‌ನ ಮಗನ ಹೆಸರು ರಾಬರ್ಟ್ಸನ್ ಎಂದಾಯಿತು.- ಸನ್ ಆಫ್ ರಾಬರ್ಟ್). ಓರ್ವ ವ್ಯಕ್ತಿಯು ತನ್ನ ಜೀವನೋಪಾಯಕ್ಕಾಗಿ ಅನುಸರಿಸುತ್ತಿದ್ದ ವೃತ್ತಿಯ ಹೆಸರುಗಳೇ ಆತನ ಮುಂದಿನ ತಲೆಮಾರಿನವರಿಗೆ ಉಪನಾಮಗಳಾದವು (ಉದಾ: ಪಾಟರ್, ಬೇಕರ್ ಇತ್ಯಾದಿ).
ಆದರೆ ಬಹುತೇಕ ಯುರೋಪಿಯನ್ ಉಪನಾಮಗಳು, ಭೌಗೋಳಿಕ ಪ್ರದೇಶ, ವೃತ್ತಿ ಅಥವಾ ದೈಹಿಕ ಲಕ್ಷಣಗಳನ್ನು ಆಧರಿಸಿದೆ. ಕುಲ ನಾಮಗಳನ್ನು ಇಟ್ಟುಕೊಳ್ಳುವುದರಲ್ಲಿ ಸ್ಕಾಟ್‌ಲ್ಯಾಂಡ್ ಜನರು ಪ್ರಸಿದ್ಧರು (ಉದಾ: ಮ್ಯಾಕ್‌ಡೊನಾಲ್ಡ್).
ಭಾರತದಲ್ಲಿ ವಿವಿಧ ರಾಜ್ಯಗಳು, ಭಾಷೆಗಳು, ಜಾತಿಗಳು ಇತ್ಯಾದಿಗಳಿಗೆ ಅನುಗುಣವಾಗಿ ನಮ್ಮ ಹೆಸರುಗಳಿವೆ. ಕೇರಳ: ಮೆನನ್, ನಾಯರ್, ನಂಬಿಯಾರ್. ಕರ್ನಾಟಕ: ಗೌಡ,ಶೆಟ್ಟಿ, ಹೆಗ್ಡೆ, ರೈ. ಆಂಧ್ರಪ್ರದೇಶ: ರೆಡ್ಡಿ, ನಾಯ್ಡು,ರಾವ್. ಒರಿಸ್ಸಾ: ಪಟ್ನಾಯಕ್, ಹೋಟಾ,ಪಂಡಾ. ಮಹಾರಾಷ್ಟ್ರ:ಶಿಂಧೆ,ಪವಾರ್,ಚವಾಣ್. ಗುಜರಾತ್: ಪಟೇಲ್, ಶಾ,ದೇಸಾಯಿ. ಪ.ಬಂಗಾಳ:ಚಟರ್ಜಿ, ಮುಖರ್ಜಿ, ಬ್ಯಾನರ್ಜಿ, ಸೇನ್, ದಾಸ್, ರಾಯ್. ಇನ್ನು ಉತ್ತರಭಾರತದ ರಾಜ್ಯಗಳಲ್ಲಿ ಲೆಕ್ಕವಿಲ್ಲದಷ್ಟು ಜಾತಿ ಉಪನಾಮಗಳಿವೆ-ಶರ್ಮಾ,ವರ್ಮಾ, ಭಟ್, ಶಾಸ್ತ್ರಿ, ಚೌಹಾಣ್,ಮಿಶ್ರಾ,ದಯಾಳ್, ಚೌಧುರಿ, ಗುಪ್ತ, ಠಾಕೂರ್, ಸಿನ್ಹಾ,ಸಿಂಗ್, ದತ್ತಾ, ಯಾದವ್, ಪಾಸ್ವಾನ್, ಮೀನಾ. ಇವೆಲ್ಲವೂ ಜಾತಿ, ಉಪಜಾತಿ, ಬುಡಕಟ್ಟು ಮತ್ತು ಪಂಗಡಗಳ ಹೆಸರುಗಳಾಗಿವೆ. ಅಲ್ಪಸಂಖ್ಯಾತ ಸಮುದಾಯಗಳ ಜನತೆ ಕೂಡಾ ತಮ್ಮ ಹೆಸರಿನ ಜೊತೆ ತಮ್ಮ ಪಂಗಡಗಳನ್ನು ಸೂಚಿಸುವ ಉಪನಾಮಗಳನ್ನು ಇಟ್ಟುಕೊಳ್ಳುವುದನ್ನು ಕಾಣಬಹುದು.
ಪಂಡಿತ್ ಜವಾಹರಲಾಲ್ ನೆಹರೂ,ಸರ್ದಾರ್ ವಲ್ಲಭಬಾಯ್ ಪಟೇಲ್, ಮೊರಾರ್ಜಿ ದೇಸಾಯಿಯಂತಹ ಸ್ವಾತಂತ್ರ ಭಾರತದ ಸ್ಥಾಪಕ ನಾಯಕರು ತಮ್ಮ ಜಾತಿ ಅಥವಾ ಸಮುದಾಯದ ಹೆಸರುಗಳನ್ನು ತಮ್ಮ ಉಪನಾಮವಾಗಿ ಇರಿಸಿಕೊಂಡಿದ್ದರು. ಈ ಜಾತಿ ಸೂಚಕ ಹೆಸರುಗಳು ನಿಸ್ಸಂಶಯವಾಗಿಯೂ ಸಾಮಾಜಿಕ ನ್ಯಾಯಕ್ಕೆ ಮತ್ತು ಭಾರತದ ಸರ್ವಾಂಗೀಣ ಬೆಳವಣಿಗೆಗೆ ಅತಿ ದೊಡ್ಡ ತಡೆಗೋಡೆಯಾಗಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಜನರು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿರದ ತಮ್ಮ ವಂಶದ ಅಥವಾ ತಲೆಮಾರಿನ ಹೆಸರುಗಳನ್ನು ಉಪನಾಮವಾಗಿ ಇರಿಸಿಕೊಳ್ಳುವ ಸ್ವಾಗತಾರ್ಹ ಬೆಳವಣಿಗೆ ಕಂಡುಬರುತ್ತಿದೆ.
ಇದೇ ವೇಳೆ ಕೇವಲ ಜಾತಿ ಹೆಸರುಗಳನ್ನು ಕೈಬಿಟ್ಟ ಮಾತ್ರಕ್ಕೆ ಜಾತಿವಾದವನ್ನು ಅಳಿಸಬಹುದೆಂದು ಭಾವಿಸುವುದು ಕೂಡಾ ಹುಂಬತನವಾಗಿದೆ. ಜಾತಿ ಹೆಸರುಗಳು, ಜಾತಿವಾದವೆಂಬ ಸಮಸ್ಯೆಯ ಒಂದು ಸಣ್ಣ ಭಾಗವಷ್ಟೇ. ಈ ನಿಟ್ಟಿನಲ್ಲಿ ಜನರು ತಮ್ಮ ವಂಶದ ಹೆಸರುಗಳನ್ನು ಬಳಸಿಕೊಳ್ಳುವುದರಿಂದ, ಸಮಾಜದಿಂದ ಜಾತೀಯತೆಯನ್ನು ತೊಲಗಿಸುವಲ್ಲಿ ಒಂದು ಸಣ್ಣ ಹೆಜ್ಡೆಯನ್ನಿಟ್ಟಂತಾಗುವುದು.ಸಮಾಜದ ಎಲ್ಲ ವರ್ಗಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಮಾನತೆಯನ್ನು ಹೊಂದಿದಾಗ ಮಾತ್ರವೇ ಸಾಮಾಜಿಕ ನ್ಯಾಯವನ್ನು ಸಾಧಿಸಬಹುದು. ಜನರನ್ನು ಅವರ ವ್ಯಕ್ತಿತ್ವದಿಂದ ಅಳೆಯಬೇಕೇ ಹೊರತು, ಜಾತಿ, ಅರ್ಹತೆ ಅಥವಾ ಮೀಸಲಾತಿಯಿಂದಲ್ಲವೆಂದು ಎಲ್ಲರೂ ವಾದಿಸುತ್ತಾರೆ. ಇದು ಜಾತಿ ಹೆಸರುಗಳ ವಿಷಯಕ್ಕೂ ಅನ್ವಯಿಸುವುದಿಲ್ಲವೇ?. ಭಾರತದ ಖ್ಯಾತ ಬುದ್ಧಿಜೀವಿಗಳ ಹೆಸರುಗಳ ಪಟ್ಟಿಯನ್ನು ತೆರೆದುನೋಡಿದಾಗ, ಜಾತಿ ಉಪನಾಮಗಳು ಅದಕ್ಕೆ ತಗಲಿಕೊಂಡಿರುವುದು ಕಾಣುತ್ತದೆ. ಈ ತಥಾಕಥಿತ ಬುದ್ಧಿಜೀವಿಗಳ ಬೌದ್ಧಿಕ ಬಂಡವಾಳ ಶೂನ್ಯತೆಯನ್ನು ಇದು ಬಯಲಿಗೆಳೆಯುತ್ತದೆ.
ಕರಣ್ ಥಾಪರ್, ಬರ್ಖಾ ದತ್ತ್, ಪ್ರಣಯ್ ರಾಯ್, ರಾಜ್‌ದೀಪ್ ಸರ್ದೆಸಾಯಿ, ಶೇಖರ್ ಗುಪ್ತಾ, ಆರ್ನಬ್ ಗೋಸ್ವಾಮಿ ಮುಂತಾದ ಜಾತಿ ಉಪನಾಮಗಳನ್ನು ತಮ್ಮ ಹೆಸರಿನ ಜೊತೆ ತಗಲಿಸಿಕೊಂಡಿರುವ ಮಾಧ್ಯಮ ಸ್ನೇಹಿತರ ಜೊತೆ ಈ ಬಗ್ಗೆ ಆರೋಗ್ಯಕರ ಸಂವಾದ ನಡೆಯುವ ಅಗತ್ಯವಿದೆ.
ಜಾತಿ ಉಪನಾಮಗಳ ಪಿಡುಗನ್ನು ತೊಲಗಿಸಲು ತಮಿಳುನಾಡಿಗೆ ಸಾಧ್ಯವಾಯಿತಾದರೆ, ಭಾರತದ ಉಳಿದ ಭಾಗಗಳಲ್ಲಿ ಯಾಕೆ ಸಾಧ್ಯವಿಲ್ಲ?.ಸದಾ ಹಿಮಾವೃತವಾದ ಉತ್ತರ ಧ್ರುವ ವೃತ್ತ ಪ್ರದೇಶಗಳಲ್ಲಿ ವಾಸಿಸುವ ಎಸ್ಕಿಮೊ ಜನಾಂಗೀಯರು ಹಿಮಕ್ಕೆ 53 ಬಗೆಯ ಹೆಸರುಗಳನ್ನಿಟ್ಟಿದ್ದಾರೆ.ಯಾಕೆಂದರೆ ಹಿಮ ಅವರ ದೈನಂದಿನ ಬದುಕಿನ ಅತಿ ಮುಖ್ಯ ಭಾಗವಾಗಿದೆ. ಆದರೆ ನಮ್ಮಲ್ಲಿರುವ ಅಸಂಖ್ಯಾತ ಜಾತಿ ಹೆಸರುಗಳಿಂದ ನಮಗೆ ಯಾವ ಪ್ರಯೋಜನವಿದೆ?. ಗುಲಾಬಿ ಹೂವಿಗೆ ಯಾವುದೇ ಹೆಸರಿನ್ನಿಟ್ಟರೂ, ಅದರ ಸೌಂದರ್ಯಕ್ಕೆ,ಸುವಾಸನೆಗೆ ಕೊರತೆ ಯಾಗಲಾರದು, ಹಾಗೆಯೇ ಜಾತಿ ಉಪನಾಮ ಗಳಿಲ್ಲದ್ದರೂ, ವ್ಯಕ್ತಿತ್ವಕ್ಕೆ ಯಾವುದೇ ಕುಂದುಂಟಾಗಲಾರದು.
-ಅನ್ಬುಮಣಿ ರಾಮದಾಸ್
ಕೇಂದ್ರದ ಮಾಜಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ
ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...
Click here to post your views ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...
ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...
ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...
ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...
‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...
ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...
ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...
ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...