ಗೀಲಾನಿ ಪ್ರಧಾನಿ ಪಟ್ಟಕ್ಕೆ ಸಂಚಕಾರ
mail-img print-img

ಗೀಲಾನಿ ಪ್ರಧಾನಿ ಪಟ್ಟಕ್ಕೆ ಸಂಚಕಾರ

- -ರಾ.ನಾ.
ಶುಕ್ರವಾರ - ಜನವರಿ -27-2012

ಪಾಕ್ ಪ್ರಧಾನಿ ಯೂಸ್ ರಝಾ ಗೀಲಾನಿಯ ಕುರ್ಚಿ ಕಂಪಿಸತೊಡಗಿದೆ. 1990ರ ದಶಕದಲ್ಲಿ ಹಾಲಿ ಅಧ್ಯಕ್ಷ ಆಸ್ಿ ಅಲಿ ಝರ್ದಾರಿ ಹಾಗೂ ಆಗ ಪ್ರಧಾನಿಯಾಗಿದ್ದ ಅವರ ಪತ್ನಿ ಬೆನಝೀರ್ ಭುಟ್ಟೋ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು ಪುನಾರಂಭಿಸಬೇಕೆಂಬ ನ್ಯಾಯಾಲಯದ ಆದೇಶವನ್ನು ಕಡೆಗಣಿಸಿದ ತಪ್ಪಿಗಾಗಿ ಅವರು ತಲೆದಂಡ ತೆರಬೇಕಾದ ಸನ್ನಿವೇಶ ಬಂದೊದಗಿದೆ. ಇದರ ಜೊತೆಗೆ ಸರಕಾರ ಹಾಗೂ ಪಾಕ್ ಸೇನೆಯ ನಡುವೆ ಗಂಭೀರ ಒಡಕನ್ನು ಹುಟ್ಟು ಹಾಕಿರುವ ‘ಮೆಮೋಗೇಟ್’ ಹಗರಣವೂ, ಗಿಲಾನಿಯ ಅಕಾರಕ್ಕೆ ಸಂಚಕಾರ ತಂದೊಡ್ಡಿದೆ.ಅದೇನಿದ್ದರೂ ಗೀಲಾನಿಯನ್ನು ಇಷ್ಟಪಡುವ ಜನತೆ ಪಾಕ್‌ನಲ್ಲಿ ಅಪಾರ ಸಂಖ್ಯೆಯಲ್ಲಿದ್ದಾರೆ. ಗೀಲಾನಿ ಓರ್ವ ಅಕಾರದ ದುರಾಸೆಯಿಲ್ಲದ ನೇರನಡೆನುಡಿಯ ಮನುಷ್ಯ, ಪ್ರಾಮಾಣಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲೂ ಆತ ಎತ್ತಿದ ಕೈ ಎಂದೇ ಅವರ ಬೆಂಬಲಿಗರು ಪ್ರತಿಪಾದಿಸುತ್ತಾರೆ. ಗೀಲಾನಿ ಕೂಡಾ ಈಗಾಗಲೇ ರಾಜೀನಾಮೆಯ ಕೊಡುಗೆಯನ್ನು ಮುಂದಿಟ್ಟಿದ್ದಾರೆ.

ಮೂಲತಃ ಕರಾಚಿಯವರಾದ ಗೀಲಾನಿ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪ್ರತಿಷ್ಠಿತ ಕುಟುಂಬವೊಂದಕ್ಕೆ ಸೇರಿದವರು. ಪತ್ರಿಕೋದ್ಯಮ ದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು 1978ರಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷದ ಕೇಂದ್ರೀಯ ಕಾರ್ಯ ಸಮಿತಿಯ ಸದಸ್ಯರಾಗುವ ಮೂಲಕ ಸಕ್ರಿಯ ರಾಜಕಾರಣಕ್ಕಿಳಿದರು.ಬಳಿಕ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಗೆ ನಿಷ್ಠೆಯನ್ನು ಬದಲಾಯಿಸಿದ ಅವರು ರಾಜಕೀಯ ದಲ್ಲಿ ಹಂತಹಂತವಾಗಿ ಮೇಲೇರಿದರು. 1988ರಲ್ಲಿ ಅವರು ಬೆನಝೀರ್ ಸಂಪುಟದಲ್ಲಿ ಪ್ರವೇಶ ಪಡೆದ ಅವರು ಪಿಪಿಪಿ ಪಕ್ಷದ ಪ್ರಮುಖ ನೇತಾರರ ಲ್ಲೊಬ್ಬರಾಗಿ ಗುರುತಿಸಿಕೊಂಡರು.

ಮುಂದಿನ ಎರಡು ವರ್ಷಗಳಲ್ಲಿ ಗೀಲಾನಿ ಬೆನಝೀರ್ ಸರಕಾರದಲ್ಲಿ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಮೊದಲಿಗೆ ಪ್ರವಾಸೋದ್ಯಮ ಸಚಿವರಾಗಿ, ಆಬಳಿಕ ವಸತಿ ಹಾಗೂ ಕಾಮಗಾರಿ ಇಲಾಖೆಯ ಸಚಿವರಾದರು. 1990ರಲ್ಲಿ ಅವರು ಪಾಕ್ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದರು.2001 ಗೀಲಾನಿಯ ಪಾಲಿಗೆ ಕೆಟ್ಟ ವರ್ಷ ವಾಗಿತ್ತು. ಗೀಲಾನಿ ಸಚಿವರಾಗಿದ್ದಾಗ ಅವರು ಕಾನೂನು ಮೀರಿ ನೂರಾರು ಸರಕಾರಿ ಹುದ್ದೆಗಳಲ್ಲಿ ತನ್ನ ಬೆಂಬಲಿಗರನ್ನು ನೇಮಿಸಿದ ಆರೋಪದಲ್ಲಿ ಮುಶ್ರ್ ಸರಕಾರ ಅವರನ್ನು ಬಂಸಿ ಕಾರಾಗೃಹಕ್ಕೆ ತಳ್ಳಿತ್ತು.

ಜನರಲ್ ಪರ್ವೇಝ್ ಮುಶ್ರ್ ಆಡಳಿತದಲ್ಲಿ ಪಿಪಿಪಿಯು ಪ್ರತಿಪಕ್ಷವಾದ್ದರಿಂದ, ಗೀಲಾನಿ ವಿರುದ್ಧ ಹೊರಿಸಲ್ಪಟ್ಟ ಆರೋಪಗಳ ಹಿಂದೆ ರಾಜಕೀಯ ದುರುದ್ದೇಶವಿದೆಯೆಂಬ ಊಹಾಪೋಹಗಳು ಆಗ ಕೇಳಿಬಂದಿದ್ದವು. ಗೀಲಾನಿ 2006ರಲ್ಲಿ ಬಿಡುಗಡೆಗೊಂಡ ಬಳಿಕ ಪಕ್ಷದಲ್ಲಿ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾ ಯಿತು. 2008ರಲ್ಲಿ ಪಾಕ್ ಸಂಸತ್ ಚುನಾವಣೆ ನಡೆದು ಮಿತ್ರಪಕ್ಷಗಳ ಬೆಂಬಲದೊಂದಿಗೆ ಪಿಪಿಪಿ ಅಕಾರಕ್ಕೇರಿದಾಗ ಗೀಲಾನಿ ಪಾಕ್ ಪ್ರಧಾನಿಯಾದರು.ಇತ್ತ ಶಂಕಿತ ತಾಲಿಬಾನ್ ಬಂಡುಕೋರ ರಿಂದಲೂ ಗೀಲಾನಿಗೆ ಜೀವಬೆದರಿಕೆಯಿತ್ತು. 2008ರ ಸೆಪ್ಟೆಂಬರ್‌ನಲ್ಲಿ ಇಸ್ಲಾಮಾಬಾದ್‌ನಲ್ಲಿ ತನ್ನ ಮೇಲೆ ನಡೆದ ಹತ್ಯಾಯತ್ನದಲ್ಲಿ ಗೀಲಾನಿ ಕೂದಲೆಳೆಯ ಅಂತರದಲ್ಲಿ ಪಾರಾದರು.

ಬಿಕ್ಕಟ್ಟುಗಳ ಸರಮಾಲೆ  

2009ರ ಮುಂಬೈ ದಾಳಿಯ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ವರ್ಚಸ್ಸು ಮಂಕಾದಾಗ, ಅದನ್ನು ಸರಿಪಡಿಸಲು ಗೀಲಾನಿ ಯಾವುದೇ ಪ್ರಯತ್ನವನ್ನು ಕೈಗೊಳ್ಳಲಿವೆಯೆಂಬ ಆರೋಪಗಳೂ ಕೇಳಿಬಂದಿದ್ದವು. ಆದಾಗ್ಯೂ ಪ್ರತಿಷ್ಠಿತ ೆರ್ಬ್ಸ್ ಪತ್ರಿಕೆಯು ಗೀಲಾನಿಗೆ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ 38ನೆಯ ಸ್ಥಾನವನ್ನು ನೀಡಿತು. ‘‘ಪಾಕಿಸ್ತಾನದ ಅಣ್ವಸ ಬತ್ತಳಿಕೆಯ ಕೀಲಿಕೈ ಇನ್ನೂ ಗೀಲಾನಿಯ ಬಳಿಯೇ ಇದೆ’’ ಎಂದು ಬಣ್ಣಿಸುವ ಮೂಲಕ ಪತ್ರಿಕೆಯು, ಪಾಕ್ ಆಡಳಿತದಲ್ಲಿ ಈ ಹಿರಿಯ ಮುತ್ಸದ್ಧಿಯು ಸಾಸಿರುವ ಹಿಡಿತವನ್ನು ಎತ್ತಿತೋರಿಸಿತು.
       
ಆದರೆ ಇತ್ತೀಚಿನ ದಿನಗಳಲ್ಲಿ ಪಾಕ್ ಸೇನೆ ಹಾಗೂ ಪ್ರಭಾವಿ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಜೊತೆ ಗೀಲಾನಿ ಸಂಬಂಧ ತೀರಾ ಹಳಸಿದೆ. ಪಾಕ್ ಸೇನೆಯ ಅಕಾರವನ್ನು ಮೊಟಕುಗೊಳಿ ಸುವ ಹಾಗೂ ಸೇನೆಯನ್ನು ಸರಕಾರದ ಅೀನಕ್ಕೆ ತರಲು ತನಗೆ ನೆರವು ನೀಡಬೇಕೆಂದು ಅಮೆರಿಕವನ್ನು ಕೋರಿ,ಅಧ್ಯಕ್ಷ ಆಸ್ಿ ಅಲಿ ಝರ್ದಾರಿ ಪತ್ರವೊಂದನ್ನು ಬರೆದು ಅದನ್ನು ಅಮೆರಿಕದಲ್ಲಿನ ಪಾಕ್ ಉದ್ಯಮಿ ಮನ್ಸೂರ್ ಇಜಾಝ್ ಮೂಲಕ ಶ್ವೇತಭವನಕ್ಕೆ ತಲುಪಿಸಿದ್ದರು. ಮೆಮೋಗೇಟ್ ಹಗರಣವೆಂದೇ ಕುಖ್ಯಾತಿ ಪಡೆದ ಈ ರಹಸ್ಯ ವಿಷಯವನ್ನು ಮನ್ಸೂರ್ ಇಜಾಝ್ ಉದ್ಯಮಿ ಮಾಧ್ಯಮಗಳ ಮೂಲಕ ಬಹಿರಂಗಪಡಿಸಿದ ಬಳಿಕ ಪಾಕ್ ಸೇನೆ ಹಾಗೂ ಸರಕಾರದ ನಡುವಣ ಸಂಬಂಧ ಬಿಗಡಾಯಿಸಿದೆ.

ಇದೇ ಸಂದರ್ಭದಲ್ಲಿ 1990ರ ದಶಕದಲ್ಲಿ ಬೆನಝೀರ್-ಝರ್ದಾರಿ ನಡೆಸಿದ ಭ್ರಷ್ಟಾಚಾರ ಪ್ರಕರಣಗಳ ಮೇಲಿನ ಮೊಕದ್ದಮೆಗಳ ತನಿಖೆಯನ್ನು ಪುನಾರಾರಂಭಿಸಲು ನ್ಯಾಯಾಲಯ ನೀಡಿದ ಆದೇಶವನ್ನು ಗೀಲಾನಿ ಉಲ್ಲಂಸಿರು ವುದು ಅವರ ಪ್ರಧಾನಿ ಪಟ್ಟಕ್ಕೆ ಮುಳ್ಳಾಗಿ ಪರಿಣಮಿಸಿದೆ. ಈ ಪ್ರಕರಣಕ್ಕೆ ಸಂಬಂಸಿ ಕಳೆದ ಗುರುವಾರ ಗೀಲಾನಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದರು. ಆಸಿಫ್‌ ಅಲಿ ಝರ್ದಾರಿ ರಾಷ್ಟ್ರಾಧ್ಯಕ್ಷರಾಗಿರುವುದರಿಂದ ಸಂವಿಧಾನದ ಪ್ರಕಾರ ಅವರನ್ನು ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಎಲ್ಲ ರೀತಿಯ ಮೊಕದ್ದಮೆಗಳಿಂದ ಹೊರತುಪಡಿಸಬೇಕಾಗುತ್ತದೆ ಎಂದು ಗೀಲಾನಿ ಏಳು ಮಂದಿ ನ್ಯಾಯಾಧೀಶರ ಪೀಠದ ಮುಂದೆ ಹೇಳಿಕೆ ನೀಡಿದ್ದಾರೆ. ಗೀಲಾನಿ ಪರ ವಕೀಲರಿಗೆ ಈ ಬಗ್ಗೆ ವಿಸ್ತೃತ ವಿವರಣೆಯನ್ನು ಸಿದ್ಧಪಡಿಸಲು ನ್ಯಾಯಾಲಯ ಎರಡು ವಾರಗಳ ಕಾಲಾವಕಾಶ ನೀಡಿದೆ. ಗೀಲಾನಿ ಸದ್ಯಕ್ಕೆ ತಲೆದಂಡದಿಂದ ಪಾರಾಗಿದ್ದರಾದರೂ, ಕಾನೂನಿನ ತೂಗುಗತ್ತಿ ಅವರ ಮೇಲೆ ಇನ್ನೂ ನೇತಾಡುತ್ತಿದೆ.

ಒಂದೆಡೆ ಮುನಿಸಿಕೊಂಡಿರುವ ಸೇನೆ, ಇನ್ನೊಂದೆಡೆ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿರುವ ಗೀಲಾನಿ ತನ್ನ ಮುಂದಿರುವ ಸವಾಲುಗಳನ್ನು ಜಾಣ್ಮೆಯಿಂದ ನಿಭಾಯಿಸಿ, ಪ್ರಧಾನಿ ಪಟ್ಟವನ್ನು ಉಳಿಸಿಕೊಳ್ಳಲು ಸಲ ರಾಗುವರೋ ಎಂಬುದು ಮುಂದಿನ ಕೆಲವೇ ದಿನಗಳಲ್ಲಿ ನಿರ್ಧಾರವಾಗಲಿದೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್