ಚಂದ್ರಯಾನದ ಶಿಲ್ಪಿಗೆ ಕವಿದಿದೆ ಹಗರಣದ ಗ್ರಹಣ
mail-img print-img

ಚಂದ್ರಯಾನದ ಶಿಲ್ಪಿಗೆ ಕವಿದಿದೆ ಹಗರಣದ ಗ್ರಹಣ

- ರಾ.ನಾ.
ಮಂಗಳವಾರ - ಫೆಬ್ರವರಿ -07-2012

ಕೇವಲ ಎರಡು ವರ್ಷಗಳ ಹಿಂದೆ ಬಾಹ್ಯಾಕಾಶ ವಿಜ್ಞಾನಿ ಜಿ.ಮಾಧವನ್ ನಾಯರ್‌ಗೆ ಭಾರತದ ದ್ವಿತೀಯ ಪರಮೋಚ್ಚ ಪುರಸ್ಕಾರವಾದ ಪದ್ಮವಿಭೂಷಣ ಪ್ರಶಸ್ತಿ ದೊರೆತಾಗ ಅವರಿಗೆ ದೇಶದೆಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು.ಭಾರತದ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದಂತಹ ಯಶಸ್ವಿ ಚಂದ್ರಯಾನ ಯಾತ್ರೆಯ ಹಿಂದಿನ ಶಕ್ತಿಯಾದ ಮಾಧವನ್ ನಾಯರ್‌ರನ್ನು ಸುದ್ದಿ ಮಾಧ್ಯಮಗಳು, ರಾಜಕಾರಣಿಗಳು ಹಾಡಿ ಹೊಗಳಿದ್ದರು.ಇಂದು ಅದೇ ಮಾಧವನ್ ನಾಯರ್ ಭ್ರಷ್ಟಾಚಾರದ ಕಳಂಕ ಹೊತ್ತು ಸರಕಾರದ ಕಪ್ಪುಪಟ್ಟಿಗೆ ಸೇರಿದ್ದಾರೆ. ಯಾವ ಸರಕಾರ ಮಾಧವನ್ ನಾಯರ್‌ಗೆ ಪದ್ಮವಿಭೂಷಣ ನೀಡಿತ್ತೋ ಇಂದು ಅದೇ ಸರಕಾರ ಅವರಿಗೆ ತನ್ನ ಯಾವುದೇ ಹುದ್ದೆಗಳನ್ನು ನೀಡುವುದನ್ನು ಶಾಶ್ವತವಾಗಿ ನಿಷೇಧಿಸಿದೆ.ಕಾರಣವಿಷ್ಟೆ. 2005ರಲ್ಲಿ ಮಾಧವನ್ ನಾಯರ್ ಇಸ್ರೋದ ಅಧ್ಯಕ್ಷರಾಗಿದ್ದಾಗ ಅದರ ವಾಣಿಜ್ಯ ಘಟಕವಾದ ಆ್ಯಂಟ್ರಿಕ್ಸ್ ಎರಡು ಉಪಗ್ರಹಗಳನ್ನು ನಿರ್ಮಿಸಿ, ಅವುಗಳನ್ನು ವಾಣಿಜ್ಯ ಬ್ರಾಂಡ್‌ಬ್ಯಾಂಡ್ ಸೇವೆಗಳನ್ನು ನೀಡುವ ದೇವಸ್ ಸಂಸ್ಥೆಗೆ ಎಸ್-ಬ್ಯಾಂಡ್ ತರಂಗಗುಚ್ಛಗಳ ಪ್ರಸಾರಕ್ಕಾಗಿ ನೀಡುವ ಬಗ್ಗೆ ಒಪ್ಪಂದ ಮಾಡಿಕೊಂಡಿತ್ತು.

ಇದಕ್ಕಾಗಿ ದೇವಸ್ 1000 ಕೋಟಿ ರೂ.ಗಳನ್ನು ಪಾವತಿಸುವಂತೆಯೂ ಆ್ಯಂಟ್ರಿಕ್ಸ್ ಸೂಚಿಸಿತ್ತು. ಆದರೆ ಈ ಒಪ್ಪಂದ ಕಾರ್ಯಗತಗೊಂಡಲ್ಲಿ ಸರಕಾರಕ್ಕೆ 2 ಲಕ್ಷ ಕೋಟಿ ರೂ. ವರೆಗೂ ಭಾರೀ ನಷ್ಟ ಉಂಟಾಗಬಹುದಿತ್ತು. ಮಾಧ್ಯಮಗಳು ಈ ಒಪ್ಪಂದದ ಹಿಂದೆ ಭಾರೀ ದೊಡ್ಡ ಭ್ರಷ್ಟಾಚಾರ ನಡೆದಿರುವುದಾಗಿ ವರದಿಗಳನ್ನು ಪ್ರಕಟಿಸಿದ ಬಳಿಕ ವಿವಾದ ಭುಗಿಲೆದ್ದಿತ್ತು. ಭಾರತದ ಆಧುನಿಕ ಬಾಹ್ಯಾಕಾಶ ಕಾರ್ಯಕ್ರಮದ ಶಿಲ್ಪಿಯೆಂದೇ ಖ್ಯಾತಿ ಪಡೆದ ನಾಯರ್ ತನ್ನ ಮೇಲಿನ ಆರೋಪಗಳನ್ನು ಬಲವಾಗಿ ತಳ್ಳಿಹಾಕಿದ್ದಾರೆ. ಈ ಬಹುಕೋಟಿ ಹಗರಣದಲ್ಲಿ ತನ್ನನ್ನು ಸಿಲುಕಿಸಲು ದೊಡ್ಡ ಸಂಚೊಂದು ನಡೆದಿತ್ತೆಂದು ಅವರು ಆಪಾದಿಸಿದ್ದಾರೆ.

ದೇವಸ್ ಒಪ್ಪಂದಕ್ಕೆ ಸಂಬಂಧಿಸಿ ಇಸ್ರೋದ ಹಾಲಿ ಅಧ್ಯಕ್ಷ ಕೆ.ರಾಧಾಕೃಷ್ಣನ್ ನಾಯರ್ ಇಡೀ ದೇಶವನ್ನೇ ತಪ್ಪುದಾರಿಗೆಳೆಯುತ್ತಿದ್ದಾರೆಂದು ಮಾಧವನ್ ನಾಯರ್ ಕಿಡಿಗಾರುತ್ತಿದ್ದಾರೆ.ಅಂದ ಹಾಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಹಗರಣಗಳ ಸುಳಿಗೆ ಸಿಲುಕಿರುವುದು ಇದೇ ಮೊದಲ ಸಲವಲ್ಲ. 1990ರ ದಶಕದಲ್ಲಿ ಇಸ್ರೋವನ್ನು ಆರು ವರ್ಷಗಳ ಕಾಲ ಇಕ್ಕಟ್ಟಿನಲ್ಲಿ ಸಿಲುಕಿಸಿದ ಕುಖ್ಯಾತ ಗೂಢಚರ್ಯೆ ಹಗರಣದ ಕಳಂಕದಿಂದಾಗಿ ಭಾರತದ ಆರು ಬಾಹ್ಯಾಕಾಶ ವಿಜ್ಞಾನಿಗಳ ವೃತ್ತಿ ಜೀವನ ಸರ್ವನಾಶವಾಗಿತ್ತು.ಇದೀಗ ಆಂತರಿಕ್ಷ್-ದೇವಾಸ್ ವ್ಯವಹಾರ ಒಪ್ಪಂದದಲ್ಲಿ ನಡೆದಿರುವ ಭ್ರಷ್ಟಾಚಾರ ಹಗರಣದ ತನಿಖೆ ನಡೆಸಿರುವ ಪ್ರತ್ಯೂಷ್ ಸಿನ್ಹಾ ನೇತೃತ್ವದ ತನಿಖಾ ಸಮಿತಿಯು ಈ ಬಹುಕೋಟಿ ಹಗರಣದಲ್ಲಿ ಮಾಧವನ್ ನಾಯರ್ ಹಾಗೂ ಇತರ ಮೂವರು ಹಿರಿಯ ವಿಜ್ಞಾನಿಗಳು ತಪ್ಪಿತಸ್ಥರೆಂದು ಘೋಷಿಸಿದೆ.

ಇದರೊಂದಿಗೆ ಭಾರತದ ಬಾಹ್ಯಾಕಾಶ ಸಂಸ್ಥೆಯು ಕೂಡಾ ಭ್ರಷ್ಟಾಚಾರದ ಕಪಿಮುಷ್ಟಿಗೆ ಸಿಲುಕಿರುವುದು ಸಾಬೀತಾಗಿದೆ. ಆದರೆ ತನ್ನನ್ನು ಮೂಲೆಗುಂಪು ಮಾಡಲು ರಾಧಾಕೃಷ್ಣನ್ ಸಂಚು ಹೂಡಿದ್ದಾರೆಂದು ಮಾಧವನ್ ಆರೋಪ. 2009ರ ಕೊನೆಯಲ್ಲಿ ಅಥವಾ 2010ರ ಆರಂಭದಲ್ಲಿ ಬಾಹ್ಯಾಕಾಶ ಇಲಾಖೆಯು ಇಸ್ರೋದ ಅಧ್ಯಕ್ಷರಾದ ರಾಧಾಕೃಷ್ಣನ್ ನಾಯರ್‌ಗೆ ಪತ್ರ ಬರೆದು ಆಂತರಿಕ್ಷ್-ದೇವಾಸ್ ಒಪ್ಪಂದವನ್ನು ರದ್ದುಪಡಿಸುವಂತೆ ಕೋರಿತ್ತು. ಆಗ ರಾಧಾಕೃಷ್ಣನ್ ಮೊದಲಿಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾದರೂ, ಕಡೆಗೆ ಒಪ್ಪಂದದ ಪರವಾಗಿಯೇ ವರ್ತಿಸಿದರು. ಈ ಮಹತ್ವದ ಸಂಗತಿಯನ್ನು ತನಿಖಾ ಸಮಿತಿಯು ಗಮನಕ್ಕೆ ತೆಗೆದುಕೊಂಡಿಲ್ಲವೆಂದು ಮಾಧವನ್ ನಾಯರ್‌ರ ಆರೋಪ.ಇತ್ತ ಕೇಂದ್ರ ಸರಕಾರವೂ ಮಾಧವನ್ ನಾಯರ್ ವಿರುದ್ಧ ತಿರುಗಿಬಿದ್ದಿದೆ.

ಆಂತರಿಕ್ಷ್-ದೇವಾಸ್ ಹಗರಣದ ಬಗ್ಗೆ ತನಿಖಾ ಸಮಿತಿಯ ವರದಿಯು ಏಕಪಕ್ಷೀಯವಾಗಿದೆ ಯೆಂದೂ ನಾಯರ್ ಆರೋಪದಲ್ಲಿ ಹುರುಳಿಲ್ಲವೆಂದೂ ಪ್ರಧಾನಿ ಕಾರ್ಯಾಲಯದ ಸಹಾಯಕ ಸಚಿವ ವಿ. ನಾರಾಯಣ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.‘‘ಚಂದ್ರಯಾನ’’ ಸೇರಿದಂತೆ ಇಸ್ರೋದ 27 ಯಶಸ್ವಿ ಬಾಹ್ಯಾಕಾಶ ನೌಕಾ ಕಾರ್ಯಕ್ರಮಗಳ ಹಿಂದಿರುವ ಮಾಧವನ್ ನಾಯರ್ ಇಂದು ಭ್ರಷ್ಟಾಚಾರದ ದೊಡ್ಡ ಕಳಂಕವನ್ನೇ ಹೊತ್ತು ಕೊಳ್ಳಬೇಕಾಗಿದೆ. ಮಾಧವನ್ ನಾಯರ್ ತನ್ನ ಮೇಲಿನ ಆಪಾದನೆಯನ್ನು ಕೊಡವಿ ಹಾಕಲು ಯಾವ ರೀತಿ ಮುಂದಾಗುವರು ಎಂಬುದನ್ನು ಮುಂಬರುವ ದಿನಗಳಲ್ಲಿ ತೀರ್ಮಾನವಾಗಲಿದೆ.



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್