ಮಂಗಳೂರು, ಸೆ.3: ಕ್ಯಾಂಪ್ಕೊ ಆಡಳಿತಗಾರರು ರೈತ ವಿರೋಧಿಯಾಗಿ ವರ್ತಿಸುತ್ತಿದ್ದು, ಶೇರುದಾರರಿಗೆ ಇದರಿಂದ ತೊಂದರೆಯಾಗಿದೆ. ಆಡಳಿತಗಾರರ ಅನಕೂಲಕ್ಕೆ ತಕ್ಕಂತೆ ಬೈಲಾ ತಿದ್ದುಪಡಿ ಮಾಡಿ ಸಂಸ್ಥೆಯ ಬೆಳವಣಿಗೆಗೆ ಮಾರಕವಾಗುವಂತಹ ಕಾರ್ಯನಿರ್ವ ಹಣೆ ನಡೆಸುತ್ತಿದ್ದಾರೆ. ಅಕ್ರಮಗಳು ನಡೆದಿರುವ ಸಾಧ್ಯತೆ ಇದ್ದು, ಈ ಬಗ್ಗೆ ಕೇಂದ್ರ ಸಹಕಾರಿ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಮಾನಾಥ ರೈ ಆಗ್ರಹಿಸಿದ್ದಾರೆ.
ಸಹಕಾರಿ ರತ್ನ ವಾರಣಾಸಿ ಸುಬ್ರಾಯ ಭಟ್ಟರ ಮೂಲಕ ಸ್ಥಾಪನೆ ಯಾದ ಕ್ಯಾಂಪ್ಕೊ ಕರ್ನಾಟಕ, ಕೇರಳ ರಾಜ್ಯಗಳ ಶೇರುದಾರರನ್ನೊಳಗೊಂಡ ಬೃಹತ್ ಸಹಕಾರಿ ಸಂಸ್ಥೆಯಾಗಿ ಬೆಳೆದಿತ್ತು. ಆದರೆ ಪ್ರಸಕ್ತ ಸಹಕಾರ ಭಾರತಿ ಸಂಘಟನೆಯ
![]() |
ಮೂಲಕ ಬಿಜೆಪಿ ಕ್ಯಾಂಪ್ಕೊ ಸಂಸ್ಥೆಯನ್ನು ಬಳಕೆ ಮಾಡುತ್ತಿದೆ. ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾಗ ಸರಕಾರದ 10 ಕೋಟಿ ಶೇರು ಬಂಡವಾಳ ಹಿಂದಿರುಗಿ ಸಿದೆ. ಐಎಎಸ್ ಅಧಿಕಾರಿಗಳ ಸುಪರ್ದಿ ಯಲ್ಲಿದ್ದ ಕ್ಯಾಂಪ್ಕೊ ಸಂಸ್ಥೆಗೆ ಸಾಮಾನ್ಯ ವ್ಯವಸ್ಥಾಪಕರನ್ನು ನೇಮಿಸಲಾಗಿದೆ. ಇದರಿಂದ ಸಂಸ್ಥೆಯ ಅಭಿವೃದ್ಧಿಗೆ ತೊಡ ಕಾಗಿದೆ. ರಾಜಕೀಯ ರಹಿತವಾಗಿದ್ದ ಸಂಸ್ಥೆಯನ್ನು ಬಿಜೆಪಿಯ ರಾಜಕೀಯ ಬಲವರ್ಧನೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ರೈ ಆರೋಪಿಸಿದರು. ಕಳೆದ 2009ರ ಬೈಲಾ ತಿದ್ದುಪಡಿ ಗಾಗಿ ಕರೆದ ಮಹಾಸಭೆಯಲ್ಲಿ 10 ಸಾವಿರ ರೂ.ಗಿಂತ ಕಡಿಮೆ ಶೇರು ಹೊಂದಿರುವ ಹಾಗೂ ಮೂರು ಮಹಾ ಸಭೆಗಳಿಗೆ ಹಾಜರಾಗದವರಿಗೆ ಚುನಾ ವಣೆಗೆ ಸ್ಪರ್ಧಿಸುವ ಅವಕಾಶವಿಲ್ಲ ಎಂಬ ತಿದ್ದುಪಡಿ ಮಾಡಲಾಗಿದೆ. ಇದರಿಂದ ಬಹಳಷ್ಟು ಸದಸ್ಯರು ಚುನಾವಣೆಗೆ ಸ್ಪರ್ಧಿಸದಂತಾಗಿದೆ.
ಕ್ಯಾಂಪ್ಕೋದ ಒಳಗಿನ ವ್ಯವಹಾರ ಹೊರಗೆ ಗೊತ್ತಾಗದಂತೆ ಎಚ್ಚರ ವಹಿಸಲಾಗುತ್ತಿದೆ. ಸಹಕಾರ ಭಾರತಿಯ ನೇತೃತ್ವದ ಜನತಾ ಬಜಾರ್ ನಷ್ಟಕ್ಕೆ ಈಡಾಗಿತ್ತು. ಈಗ ಕ್ಯಾಂಪ್ಕೋ ಶೇರುದಾರರಿಗೆ ನೀಡುವ ಡಿವಿಡೆಂಡ್ ಕಡಿಮೆಯಾಗಿದೆ. ಕ್ಯಾಂಪ್ಕೋ ಸ್ಥಾಪಕ ವಾರಣಾಸಿ ಸುಬ್ರಾಯ ಭಟ್ಟರ ಆದರ್ಶ ವನ್ನು ಸಹಕಾರ ಭಾರತಿ ಗಾಳಿಗೆ ತೂರಿದೆ. ರಾಮ ಭಟ್ಟರನ್ನು ಬಳಸಿಕೊಂಡ ಬಜೆಪಿ ಈಗ ಅವರನ್ನು ಹೊರ ಹಾಕಿದೆ ಎಂದು ರಮಾನಾಥ ರೈ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಸಹಕಾರಿ ಮುಖಂಡ ವಿಶ್ವನಾಥ ರೈ, ಕಾಂಗ್ರೆಸ್ ನಾಯಕರಾದ ಸದಾಶಿವ ಉಳ್ಳಾಲ್, ಹೇಮನಾಥ ಶೆಟ್ಟಿ, ಟಿ.ಕೆ.ಸುಧೀರ್, ನಝೀರ್ ಬಜಾಲ್, ಭರತೇಶ್ ಅಮೀನ್, ಲತೀಫ್ ಕಂದಕ ಉಪಸ್ಥಿತರಿದ್ದರು.
ಕ್ಯಾಂಪ್ಕೋ ಚುನಾವಣಾ ಕಣದಲ್ಲಿ ಕಾಂಗ್ರೆಸ್
ಕ್ಯಾಂಪ್ಕೊ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸುತ್ತಿಲ್ಲ ಎನ್ನುವುದು ಅಪಪ್ರಚಾರ. ಸೆಪ್ಟಂಬರ್ 5ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಳಂಜ ವಿಶ್ವನಾಥ ರೈ ಸ್ಪರ್ಧಿಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ರಮಾನಾಥ ರೈ ತಿಳಿಸಿದರು. ಕ್ಯಾಂಪ್ಕೊ ಆಡಳಿತ ಮಂಡಳಿಯ ಚುನಾವಣೆಗೆೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ 14 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಂತಿಮ ಎರಡು ಸ್ಥಾನಕ್ಕೆ ಸೆಪ್ಟಂಬರ್ 5ರಂದು ನಡೆಯುವ ಸ್ಪರ್ಧೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹಿರಿಯ ಸಹಕಾರಿ ಮುಖಂಡ ಕಳಂಜ ವಿಶ್ವನಾಥ ರೈ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಕ್ಯಾಂಪ್ಕೋ ಸದಸ್ಯರು ಬೆಂಬಲಿಸಬೇಕಾಗಿ ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ನಾಳೆ ಕ್ಯಾಂಪ್ಕೊ ಚುನಾವಣೆ: ಮೂವರು ಸ್ಪರ್ಧಾ ಕಣದಲ್ಲಿ
ಮಂಗಳೂರು, ಸೆ.3: ಕ್ಯಾಂಪ್ಕೊ ಆಡಳಿತ ಮಂಡಳಿಗೆ ಎ ಮತ್ತು ಬಿ ವರ್ಗ ಮಾರುಕಟ್ಟೆ/ ಸಾಮಾನ್ಯ ಕ್ಷೇತ್ರದಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡುವ ಬಗ್ಗೆ ಮೂವರು ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ ಇಬ್ಬರನ್ನು ಆಯ್ಕೆ ಮಾಡುವ ಬಗ್ಗೆ ಚುನಾವಣೆ ಸೆ.5ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಉರ್ವ ಕೆನರಾ ಹೈಸ್ಕೂಲ್‌ನಲ್ಲಿ ಚುನಾವಣೆ ನಡೆಯಲಿದೆ.
ಸೌತ್ ಕೆನರಾ ಕೇಂದ್ರ ಸಹಕಾರಿ ರಖಂ ಸ್ಟೋರ್ ನಿಯಮಿತದ ಸಂಜೀವ ಮಟಂದೂರು, ದಕ್ಷಿಣ ಕನ್ನಡ ಕೃಷಿಕರ ಸಹಕಾರಿ ಮಾರುಕಟ್ಟೆ ಸಂಘ ನಿಯಮಿತದ ಬಿ. ತಿಮ್ಮಪ್ಪ ಶೆಟ್ಟಿ, ಕಳಂಜ ಬಾಳಿಲ ಸಿ.ಎ. ಬ್ಯಾಂಕ್ ನಿಯಮಿತ ಸಹಕಾರಿ ಸದನದ ಎನ್. ವಿಶ್ವನಾಥ ರೈ ಈ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಮತದಾನದಲ್ಲಿ ಭಾಗವಹಿಸುವ ಸದಸ್ಯ ಮತದಾರರು ಕ್ಯಾಂಪ್ಕೊ ಸಂಸ್ಥೆ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸ ಬೇಕು. ಕ್ಯಾಂಪ್ಕೋ ಸಂಸ್ಥೆಯು ನೀಡಿರುವ ಗುರುತಿನ ಚೀಟಿ ತಾರದವರು ಮತದಾನದ ಹಕ್ಕಿನಿಂದ ವಂಚಿತರಾಗುವರು ಎಂದು ಕ್ಯಾಂಪ್ಕೊ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...
Click here to post your views ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...
ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...
ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...
ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...
‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...
ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...
ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...
ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...