
ಕೋಮು ಹಿಂಸಾಚಾರ ಷಡ್ಯಂತ್ರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
ಬಂಟ್ವಾಳ, ಜ.27: ಉಪ್ಪಿನಂಗಡಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿರುವ ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಪೊಲೀಸರು 10 ದಿನಗಳ ಒಳಗಾಗಿ ಬಂಧಿಸಬೇಕು ಹಾಗೂ ಪೊಲೀಸರ ಬೆಂಗಾವಲು ಪಡೆಯನ್ನು ದುರುಪಯೋಗಪಡಿಸಿ ಕೊಂಡು ಸಮಾಜ ಒಡೆಯುವ ಕೆಲಸ ಮಾಡುತ್ತಿರುವ ಭಟ್‌ರ ಬೆಂಗಾವಲು ಪಡೆಯನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಬಂಟ್ವಾಳ ಶಾಸಕ ಬಿ.ರಮಾನಾಥ ರೈ ಒತ್ತಾಯಿಸಿದ್ದಾರೆ.
| ಹಿಂದೂ ಸಮಾಜವನ್ನು ಭಟ್ಟರು ಗುತ್ತಿಗೆ ತೆಗೆದುಕೊಂಡಿಲ್ಲ: ಭರತ್ ಮುಂಡೋಡಿ ರಮಾನಾಥ ರೈಯಂಥ ಜಾತ್ಯತೀತ ನಾಯಕರಿರುವ ಊರಿಗೆ ನಾನು ಭಾಷಣ ಮಾಡಲು ಬರಬೇಕೆಂದಿಲ್ಲ, ಆದರೆ ಓರ್ವ ಹಿಂದೂವಾಗಿ ಇಲ್ಲಿಗೆ ಬಂದಿದ್ದೇನೆ. ಹಿಂದೂ ಸಮಾಜವನ್ನು ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ಗುತ್ತಿಗೆ ನೀಡಿಲ್ಲ ಎಂಬುದನ್ನು ತಿಳಿಸಲು ನಾನು ಇಲ್ಲಿಗೆ ಬರಬೇಕಾಯಿತು. ಅವರು ವಯಸ್ಸಿನಲ್ಲಿ ಹಿರಿಯರಾದರೂ, ಅವರ ಯೋಗ್ಯತೆ ಅವರನ್ನು ಏಕವಚನದಲ್ಲಿ ಕರೆಯುವಂತೆ ಮಾಡಿದೆ ಎಂದು ಟೀಕಿಸಿದ ಸುಳ್ಯದ ಕಾಂಗ್ರೆಸ್ ಮುಖಂಡ ಭರತ್ ಮುಂಡೋಡಿ, ಸಮಾಜದಲ್ಲಿ ಅಶಾಂತಿ ಉಂಟುಮಾಡುವ ದೇಶದ್ರೋಹಿಗಳ ವಿರುದ್ಧ ಜಾಗೃತರಾಗುವಂತೆ ಕರೆ ನೀಡಿದರು. |
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯುವ ಕಾಂಗ್ರೆಸ್ ವತಿಯಿಂದ ಶುಕ್ರವಾರ ಬಿ.ಸಿ.ರೋಡಿನ ತಾಲೂಕು ಕಚೇರಿ ಮುಂಭಾಗ ದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ದೇಶದ್ರೋಹಿಗಳ ವಿರುದ್ಧದ ಬೃಹತ್ ಪ್ರತಿಭಟನೆ ಯಲ್ಲಿ ಅವರು ಮಾತನಾಡಿದರು.
ಪ್ರಭಾಕರ ಭಟ್ಟರ ಭಾಷಣವನ್ನು ಸಮರ್ಥಿಸಿದ ಜಿಲ್ಲಾ ಉಸ್ತುವಾರಿ ಸಚಿವರನ್ನು ಪ್ರಭಾಕರ ಭಟ್ಟರ ಪಿಎ ಎಂದು ವ್ಯಂಗ್ಯವಾಡಿದ ರೈ, ಒಬ್ಬ ವ್ಯಕ್ತಿಯ ಗುಲಾಮನಾಗಿರುವವ ಸಚಿವ ಸ್ಥಾನದಲ್ಲಿ ಮುಂದು ವರಿಯಲು ಅಸಮರ್ಥನಾಗಿದ್ದು, ಕೂಡಲೆ ಅವರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಮಂಗಳೂರು ಶಾಸಕ ಯು.ಟಿ.ಖಾದರ್ ಮಾತನಾಡಿ, ರಾಜಕೀಯ ದುರುದ್ದೇಶದಿಂದ ಸಾಮಾಜಿಕ ಏಕತೆಗೆ ಭಂಗ ಉಂಟು ಮಾಡುತ್ತಿರುವ ದೇಶ ದ್ರೋಹಿಗಳ ವಿರುದ್ಧ ಪ್ರಜ್ಞಾವಂತರು ಜಾಗೃತರಾಗಿ, ತಕ್ಕ ಪಾಠ ಕಲಿಸಬೇಕಾದ ಕಾಲ ಕೂಡಿ ಬಂದಿದೆ. ಸಂವಿಧಾನದ ವಾಕ್ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳುವ ಮಂದಿ ದೇಶಕ್ಕಾಗಿ ಒಳ್ಳೆಯದನ್ನು ಮಾತನಾಡುವ ಹವ್ಯಾಸವನ್ನು ರೂಢಿಸಿಕೊಳ್ಳಲಿ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬೊಂಡಾಲ ಜಗನ್ನಾಥ ಶೆಟ್ಟಿ ಮಾತನಾಡಿ, ಪ್ರಭಾಕರ ಭಟ್ಟರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಅಭಿನಂದನೆ ಯನ್ನು ಸಲ್ಲಿಸಿದರಲ್ಲದೆ, ತಕ್ಷಣ ಬಂಧನ ಪ್ರಕ್ರಿಯೆ ಯನ್ನೂ ನಡೆಸುವಂತೆ ಒತ್ತಾಯಿಸಿದರು. ಕಾಂಗ್ರೆಸ್ ಮುಖಂಡ ಅಶ್ವನಿಕುಮಾರ್ ರೈ ಮಾತನಾಡಿ, ಧರ್ಮದ ರಕ್ಷಕರೆಂದು ಕರೆಸಿ ಕೊಳ್ಳುವ ಸ್ವಾಮೀಜಿಗಳು ಏಕತೆಯನ್ನು ಮುರಿ ಯುವ ಕೆಲಸ ಮಾಡದೆ, ತಮ್ಮ ನಡೆನುಡಿಯ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಉಪ್ಪಿನಂಗಡಿಯಲ್ಲಿ ನಡೆದಿರುವುದು ಹಿಂದೂ ಸಮಾಜೋತ್ಸವವಲ್ಲ, ಅದು ಭಟ್ಟರ ಸಮಾಜೋತ್ಸವ ಎಂದು ಟೀಕಿಸಿದರು. ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಪ್ರಭಾಕರ ಭಟ್ಟರ ಕಾರಿಗೆ, ಮುಸ್ಲಿಮ್ ದೇಶದ ಪೆಟ್ರೋಲೇ ಬೇಕು ಎಂಬುದನ್ನು ತಿಳಿದುಕೊಳ್ಳಲಿ ಎಂದರು.
ಜಿ.ಪಂ. ಸದಸ್ಯ ಪ್ರಕಾಶ್ ಶೆಟ್ಟಿ ಮಾತನಾಡಿ, ಚುನಾವಣೆ ಬಂದಾಗ ಮಾತ್ರ ಹಿಂದೂಗಳ ಬಗ್ಗೆ ಮಾತನಾಡುವ ಪ್ರಭಾಕರ ಭಟ್ಟರ ಡೋಂಗಿ ಹಿಂದುತ್ವಕ್ಕೆ ಯಾರೂ ಬಲಿಯಾಗಬಾರದು ಎಂದರು. ಮಹಿಳಾ ಕಾಂಗ್ರೆಸ್‌ನ ಮಮತಾಗಟ್ಟಿ ಮಾತನಾಡಿ, ಹಿಂದೂ ಮಹಿಳೆಯರು ಸೇರಿದಂತೆ ಸಮಾಜದ ಎಲ್ಲ ಸಮುದಾಯದ ಮಹಿಳಾ ವರ್ಗಕ್ಕೆ ಅವಮಾನವಾಗುವಂತಹ ರೀತಿಯಲ್ಲಿ ಕಲ್ಲಡ್ಕದ ಗಣ್ಯ ವ್ಯಕ್ತಿ ಮಾತನಾಡಿರುವುದು ಖಂಡನೀಯ ಎಂದರು.
ಜಿ.ಪಂ. ಸದಸ್ಯ ಎಂ.ಎಸ್.ಮುಹಮ್ಮದ್, ಕಾಂಗ್ರೆಸ್‌ನ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡ ವಿಭಾಗದ ಅಧ್ಯಕ್ಷ ಪದ್ಮನಾಭ ನರಿಂಗಾನ, ಮಾಜಿ ಜಿ.ಪಂ. ಸದಸ್ಯ ಶಾಹುಲ್ ಹಮೀದ್ ಮೊದಲಾದವರು ಮಾತನಾಡಿ ಸಾಮಾಜಿಕವಾಗಿ ಶಾಂತಿ ಕಾಯ್ದುಕೊಳ್ಳುವಂತೆ ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ಬಾಸ್ ಅಲಿ, ಮಾಯಿಲಪ್ಪ ಸಾಲ್ಯಾನ್, ಪ್ರಕಾಶ್ಚಂದ್ರ ಆಳ್ವ, ಬಂಟ್ವಾಳ ಯುವ ಕಾಂಗ್ರೆಸ್‌ನ ಅಧ್ಯಕ್ಷ ವಿಶ್ವನಾಥ ಗೌಡ ಮಣಿ, ಪಕ್ಷದ ಪ್ರಮುಖರಾದ ಸುದರ್ಶನ್ ಜೈನ್, ಎ.ಸಿ.ಭಂಡಾರಿ, ಪದ್ಮಶೇಖರ್ ಜೈನ್, ಉಮರ್ ಫಾರೂಕ್, ಸದಾಶಿವ ಬಂಗೇರ, ರೋಶನ್, ಅಬ್ದುರ್ರಝಾಕ್ ಕುಕ್ಕಾಜೆ, ಪುರಸಭಾ ಸದಸ್ಯರಾದ ರಿಯಾಝ್ ಹುಸೈನ್, ಮುಹಮ್ಮದ್ ಶರೀಫ್, ಮುಹಮ್ಮದ್ ನಂದರಬೆಟ್ಟು, ಕಾಂಗ್ರೆಸ್ ಬೆಂಬಲಿತ ತಾ.ಪಂ. ಸದಸ್ಯರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಆರಂಭದಲ್ಲಿ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಬಿ.ಸಿ.ರೋಡ್ ತಾಲೂಕು ಕಚೇರಿಯವರೆಗೆ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಪ್ರತಿಭಟನಾ ಜಾಥಾ ನಡೆಯಿತು.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...