ಯುಎಸ್ ಓಪನ್ ಪಂದ್ಯಾವಳಿ ಆರಂಭವಾಗಿದೆ. ಪ್ರತಿಷ್ಠಿತ ಗ್ರಾಂಡ್‌ಸ್ಲಾಮ್ ಅಮೆರಿಕನ್ ಓಪನ್‌ನಲ್ಲಿ ಈ ಬಾರಿ ಭಾರತೀಯರು ಯಾವ ರೀತಿ ಮಿಂಚಲಿದ್ದಾರೆ ಎಂಬ ಕುತೂಹಲ ಕ್ರೀಡಾ ಪ್ರೇಮಿಗಳದ್ದು. ಈಗಾಗಲೇ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೋಮದೇವ್ ದೇವವರ್ಮನ್ ಪ್ರಥಮ ಸುತ್ತಿನಲ್ಲಿ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.ಈ ಮೂಲಕ ಪುರುಷ ಸಿಂಗಲ್ಸ್‌ನ ಮೇಲಿದ್ದ ಭರವಸೆ ಹುಸಿಯಾಗಿದೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಸಾನಿಯಾ ಮಿರ್ಝಾ ಪ್ರಥಮ ಸುತ್ತಿನಲ್ಲಿ ಭರವಸೆಯ ಆಟವಾಡಿದರೂ ದ್ವಿತೀಯ ಸುತ್ತಿನಲ್ಲಿ ಸೋಲನುಭವಿಸಿ ನಿರ್ಗಮಿಸಿದ್ದಾರೆ.

ಸಾನಿಯಾ ಮಿರ್ಜಾ ಸೋಮದೇವ್ ದೇವರ್ಮನ್ ಮಹೇಶ್ ಭೂಪತಿ ಲಿಯಾಂಡರ್ ಪೇಸ್
ಹಾಗೂ ಡಬಲ್ಸ್ ವಿಭಾಗದಲ್ಲಿ ಲಿಯಾಂಡರ್ ಪೇಸ್‌ರ ಮೇಲೆ ನಿರೀಕ್ಷೆಯಿತ್ತಾದರೂ ನಿರ್ಗಮಿಸಿದ್ದಾರೆ.ಆದರೆ ರೋಹಣ್ ಬೋಪಣ್ಣ ಜೋಡಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದು ಯಾವ ರೀತಿ ತಮ್ಮ ಸಾಮರ್ಥ್ಯವನ್ನು ಮೆರೆಯಲಿದ್ದಾರೆ ಎಂಬುದು ಭಾರತೀಯರ ಕುತೂಹಲ. ಆದರೆ ಪೇಸ್ ಡಬಲ್ಸ್‌ನಲ್ಲಿ ಸೋಲನುಭವಿಸಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದಿಂದ ಸ್ಪರ್ಧಿಸಿದ್ದ ಏಕೈಕ ಆಟಗಾರ್ತಿ ಸಾನಿಯಾ ಮಿರ್ಝಾ. ಸಾನಿಯಾ ಟೂರ್ನಮೆಂಟ್‌ಗೆ ನೇರ ಪ್ರವೇಶ ಪಡೆದುಕೊಂಡ ಆಟಗಾರ್ತಿಯಾಗಿದ್ದಾರೆ. ಕಳೆದ ವರ್ಷಾಂತ್ಯದ ಅರ್ಧ ಋತುವನ್ನು ಗಾಯಾಳುವಾಗಿ ಕಳೆದುಕೊಂಡ ಅವರು, ಟೂರ್ನಮೆಂಟ್ ಆರಂಭಕ್ಕೂ ಮುನ್ನ ಮತ್ತೆ ಗಾಯಾಗೊಂಡಿದ್ದಾರೆ ಎಂಬ ವರದಿಗಳೂ ಬಂದಿದ್ದು ಇದುವೇ ಸೋಲಿಗೆ ಕಾರಣವೆನ್ನಲಾಗಿದೆ.
ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಪಾಲ್ಗೊಳ್ಳಲಿರುವ 23ರ ಹರೆಯದ ಸಾನಿಯಾ, ಮಿಶ್ರ ಡಬಲ್ಸ್ ವಿಭಾಗದಲ್ಲಿ ಹಿಂದೆ ಸರಿಯುವ ಸಾಧ್ಯತೆಗಳಿವೆ. ಜುಲೈನಲ್ಲಿ ನಡೆದ ಲೆಕ್ಸಿಂಗ್ಟನ್ ಟೂರ್ನಮೆಂಟ್ ಗೆಲ್ಲುವ ಮೂಲಕ ಸಾನಿಯಾ ಮತ್ತೆ ಹಳೆಯ ಲಯ ಕಂಡುಕೊಂಡಿದ್ದರು. ಈ ವರ್ಷದ ಮೂರು ಗ್ರಾಂಡ್‌ಸ್ಲಾಮ್ ಕೂಟಗಳಲ್ಲಿ ಸಾನಿಯಾರ ಪ್ರದರ್ಶನ ತೀರಾ ನಿರಾಶಾದಾಯಕವಾಗಿತ್ತು. ಆಸ್ಟ್ರೇಲಿಯನ್ ಮತ್ತು ವಿಂಬಲ್ಡನ್‌ನಲ್ಲಿ ಕೇವಲ ಎರಡನೇ ಸುತ್ತಿಗಷ್ಟೇ ತಲುಪಿದ್ದ ಅವರು, ಫ್ರೆಂಚ್ ಓಪನ್‌ನ ಪ್ರಥಮ ಸುತ್ತಿನಿಂದಲೇ ಹೊರನಡೆದಿದ್ದರು.
ಆದರೆ ಮಿಶ್ರ ಡಬಲ್ಸ್‌ನಲ್ಲಿ ಮೈಲುಗಲ್ಲು ಸ್ಥಾಪಿಸಿದ ಅವರು, ಮಹೇಶ್ ಭೂಪತಿ ಜತೆ ಸೇರಿ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಈ ಮೂಲಕ ಸಾನಿಯಾ ಗ್ರಾಂಡ್‌ಸ್ಲಾಮ್ ಕಿರೀಟ ಗೆದ್ದ ಮೊದಲ ಭಾರತೀಯ ಆಟಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2005ರಲ್ಲಿ ನಾಲ್ಕನೆ ಸುತ್ತಿಗೆ ತಲುಪಿರುವುದೇ ಯುಎಸ್ ಓಪನ್‌ನಲ್ಲಿ ಸಾನಿಯಾ ನೀಡಿದ ಅತೀ ಶ್ರೇಷ್ಠ ಪ್ರದರ್ಶನ. ಡಬಲ್ಸ್ ವಿಭಾಗದಲ್ಲಿ 2007ರಲ್ಲಿ ಕ್ವಾರ್ಟರ್ ಹಂತಕ್ಕೆ ತಲುಪಿದ್ದರು.
ಸೋಮದೇವ್ ಚಾಲೆಂಜ್ ಠುಸ್...
ಪುರುಷರ ಸಿಂಗಲ್ಸ್‌ನಲ್ಲಿ ಪಾಲ್ಗೊಂಡ ಮತ್ತೊಬ್ಬ ಉದಯೋನ್ಮುಖ ಆಟಗಾರ ಸೋಮದೇವ್ ದೇವವರ್ಮನ್. ಅರ್ಹತಾ ಸುತ್ತಿನಲ್ಲಿ ಜಯಗಳಿಸಿ ಪ್ರಧಾನ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡ ಸೋಮ್‌ದೇವ್ ಸೋಲನುಭವಿಸಿ ನಿರಾಸೆಯುಂಟು ಮಾಡಿದ್ದಾರೆ.
ಚೊಚ್ಚಲ ಯುಎಸ್ ಓಪನ್‌ಗಾಗಿ ಸ್ಪರ್ಧಿಸಿದ್ದ ಸೋಮ್‌ದೇವ್ ಜುಲೈನಲ್ಲಿ ಜೀವನಶ್ರೇಷ್ಠ 127 ರ್ಯಾಂಕಿಂಗ್ ಪಡೆದಿದ್ದರು. ಮರಿನ್ ಸಿಲಿಕ್ ಗೆದ್ದಿದ್ದ ಚೆನ್ನೈ ಓಪನ್‌ನಲ್ಲಿ ರನ್ನರ್-ಅಪ್ ಪ್ರಶಸ್ತಿ ಗೆದ್ದು ಗಮನ ಸೆಳೆದವರು ಸೋಮದೇವ್.
ಡಬಲ್ಸ್‌ನಲ್ಲಿ ಭೂಪತಿ, ಪೇಸ್..
ಪುರುಷರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಈ ಬಾರಿಯೂ ತಮ್ಮ ಜತೆಗಾರರೊಂದಿಗೆ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.ಆದರೆ ಇವರಲ್ಲಿ ಪೇಸ್ ಜೋಡಿ ಈಗಾಗಲೇ ಕೂಟದಿಂದ ಹೊರಬಿದ್ದಿದೆ. 2008ರ ಯುಎಸ್ ಓಪನ್‌ನಲ್ಲಿ ಜೆಕ್‌ನ ಲೂಕಾಸ್ ಡೂಹ್ಲಿ ಜತೆ ಸೇರಿಕೊಂಡ ಪೇಸ್ ರನ್ನರ್-ಅಪ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಪ್ರಸಕ್ತ ಡಬಲ್ಸ್ ವಿಭಾಗದ ರ್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿರುವ ಅವರು, ಶ್ರೇಷ್ಠ ಪ್ರದರ್ಶನ ಹೊರಗೆಡಹುವ ವಿಶ್ವಾಸ ಹೊಂದಿದ್ದಾರೆ. 1996ರ ಅಟ್ಲಾಂಟಾ ಒಲಿಂಪಿಕ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಲಿಯಾಂಡರ್, ಡಬಲ್ಸ್‌ನಲ್ಲಿ ಒಟ್ಟು ಮೂರು ಬಾರಿ ಫ್ರೆಂಚ್ ಓಪನ್, ತಲಾ ಒಂದು ಬಾರಿ ವಿಂಬಲ್ಡನ್ ಹಾಗೂ ಅಮೆರಿಕನ್ ಓಪನ್ (2006) ಗೆದ್ದುಕೊಂಡಿದ್ದಾರೆ.
ಮತ್ತೊಬ್ಬ ಡಬಲ್ಸ್ ಆಟಗಾರ ಮಹೇಶ್ ಭೂಪತಿ ಬಹಮಾಸ್‌ನ ಮಾರ್ಕ್ ನೋವ್ಲ್ಸ್ ಜತೆ ಸೇರಿ ಪುರುಷರ ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಸೇರಿ ಒಟ್ಟು 11 ಗ್ರಾಂಡ್ ಸ್ಲಾಮ್ ಗೆದ್ದುಕೊಂಡಿರುವ ಭೂಪತಿ, ಕೊನೆಯದಾಗಿ ಯುಎಸ್ ಡಬಲ್ಸ್ ಪ್ರಶಸ್ತಿಯನ್ನು 2002ರಲ್ಲಿ ಹಾಗೂ ಮಿಶ್ರ ಪ್ರಶಸ್ತಿಯನ್ನು 2005ರಲ್ಲಿ ಗೆದ್ದುಕೊಂಡಿದ್ದರು.
ಸೆಪ್ಟೆಂಬರ್ 12ರವರೆಗೆ ನಡೆಯುವ ಈ ಟೂರ್ನಿಯನ್ನು ಇಡೀ ವಿಶ್ವ ಕಾತರದಿಂದ ಕಾಯುತ್ತಿದ್ದು, ನಂ.1 ಆಟಗಾರ ಹಾಲಿ ಚಾಂಪಿಯನ್ ಸ್ವಿಝರ್‌ಲ್ಯಾಂಡ್‌ನ ರೋಜರ್ ಫೆಡರರ್ ಫೆವರಿಟ್ ಎನಿಸಿಕೊಂಡಿದ್ದಾರೆ. ಅಗ್ರ ಶ್ರೇಯಾಂಕ ಪಡೆದಿದ್ದು, ಬ್ರಿಟನ್‌ನ ಆಂಡಿ ಮುರ್ರೆ, ಸ್ಪೆನ್‌ನ ರಫೆಲ್ ನಡಾಲ್, ಸರ್ಬಿಯಾದ ನೊವಾಕ್ ಜೆಕೊವಿಕ್ ಮತ್ತು ತವರಿನವರೇ ಆದ ಆಯಂಡಿ ರಾಡಿಕ್ ನಂತರದ ಶ್ರೇಯಾಂಕಿತರು.
15 ಬಾರಿ ಗ್ರಾಂಡ್‌ಸ್ಲಾಮ್ ವಿಶ್ವ ದಾಖಲೆ ಹೊಂದಿರುವ ರೋಜರ್, ಕಳೆದ ಬಾರಿ ಫೈನಲ್‌ನಲ್ಲಿ ಮುರ್ರೆಗೆ ಸೋಲುಣಿಸಿ ಯುಎಸ್ ಓಪನ್ ಗೆದ್ದುಕೊಂಡಿದ್ದರು. ಅದೇ ವೇಳೆ ಉತ್ತಮ ಲಯದಲ್ಲಿರುವ ವಿಶ್ವ ನಂ.2 ಆಟಗಾರ ಮುರ್ರೆ ಹಾಗೂ ತವರಿನ ಲಾಭವನ್ನೆತ್ತಿಲಿರುವ ರಾಡಿಕ್ ಕೂಡಾ ಫೆಡರರ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕವನ್ನು ನಂ.1 ಆಟಗಾರ್ತಿ ರಶ್ಯಾದ ದಿನರಾ ಸಫಿನಾ ಪಡೆದುಕೊಂಡರೂ, ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯೆಂದು ಹಾಲಿ ಚಾಂಪಿಯನ್ ಹಾಗೂ ವಿಶ್ವ ನಂ.2 ಆಟಗಾರ್ತಿ ಸೆರೆನಾ ವಿಲಿಯಮ್ಸ್‌ರನ್ನು ಪರಿಗಣಿಸಲಾಗುತ್ತಿದೆ.
11 ಬಾರಿಯ ಗ್ರಾಂಡ್‌ಸ್ಲಾಮ್ ಚಾಂಪಿಯನ್ ಸೆರೆನಾ ಪ್ರಸಕ್ತ ವರ್ಷದಲ್ಲೇ ವಿಂಬಲ್ಡನ್ ಮತ್ತು ಆಸ್ಟ್ರೇಲಿಯನ್ ಓಪನ್ ಗೆದ್ದುಕೊಂಡಿದ್ದಾರೆ. ಸೆರೆನಾ ಸಹೋದರಿ ವೀನಸ್, ರಷ್ಯಾದ ಮರಿಯಾ ಶರಪೋವಾ, ಇಲೆನಾ ಡಿಮೆಂಟಿವಾ ಮತ್ತು ಜೆಲೆನಾ ಜಾಂಕೊವಿಕ್‌ರನ್ನು ಕೂಡಾ ಕಡೆಗಣಿಸುವಂತಿಲ್ಲ. ಸಫಿನಾ ಯಾವುದೇ ಗ್ರಾಂಡ್‌ಸ್ಲಾಮ್ ಗೆದ್ದುಕೊಳ್ಳದೇ ನಂ.1 ಪಟ್ಟವೇರಿರುವ ಬಗ್ಗೆ ಆಗಾಗ ಟೀಕೆಗಳು ಕೇಳಿ ಬರುತ್ತಿದ್ದು, ಈ ಬಾರಿಯಾದರೂ ಅವರ ಕನಸು ನನಸಾಗುವುದೋ ಎಂದು ನೋಡಬೇಕಾಗಿದೆ. ಅಂದ ಹಾಗೆ ಈ ಬಾರಿಯ ಅಮೆರಿಕನ್ ಓಪನ್ ರೋಚಕತೆಯಿಂದ ಕೂಡಿರಲಿದ್ದು, ಅನಿರೀಕ್ಷಿತ ಫಲಿತಾಂಶಗಳು ಹೊರ ಬಂದರೂ ಅಚ್ಚರಿಯಿಲ್ಲ.
ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...
Click here to post your views ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...
ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...
ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...
ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...
‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...
ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...
ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...
ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...