mail-img print-img

ಕಾಮನ್‌ವೆಲ್ತ್ ಗೇಮ್ಸ್/ಏಶಿಯನ್ ಗೇಮ್ಸ್: ಪದಕ ಗೆಲು್ಲವ ಉತ್ಸಾಹದಲ್ಲಿ ಬಾಕ್ಸಿಂಗ್ ಪಟುಗಳು

ಶುಕ್ರವಾರ - ಸೆಪ್ಟೆಂಬರ್ -03-2010

ಹೊಸದಿಲ್ಲಿಯಲ್ಲಿ ಅಕ್ಟೋಬರ್ 3ರಿಂದ 14ರವರೆಗೆ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಒಲಿಂಪಿಕ್ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಮತ್ತು ಹಾಲಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಅಖಿಲ್ ಕುಮಾರ್ ನೇತೃತ್ವದ ಭಾರತೀಯ ಬಾಕ್ಸಿಂಗ್ ತಂಡ ಪ್ರಕಟಗೊಂಡಿದೆ. ಈ ಮೂಲಕ ಕಾಮನ್‌ವೆಲ್ತ್‌ನಲ್ಲಿ ಭಾರತೀಯ ಬಾಕ್ಸಿಂಗ್ ತಂಡ ಹತ್ತು ಪ್ರಬಲ ಸ್ಪರ್ಧಾಳುಗಳ ಮೂಲಕ ಇತರ ದೇಶದ ಆಟಗಾರರಿಗೆ ಪ್ರಬಲ ಹೋರಾಟ ನೀಡುವ ಯೋಚನೆ ಭಾರತೀಯ ಬಾಕ್ಸಿಂಗ್ ಫೇಡರೇಶನ್‌ನದ್ದು. ವಿಜೇಂದರ್ , ಅಖಿಲ್ ಕುಮಾರ್ ಮೇಲೆ ಹೇಗೆ ಭರವಸೆ ಇಡಲಾಗಿದೆಯೋ ಅದೇ ರೀತಿ ಇತರ ಆಟಗಾರರ ಮೇಲೆ ಬಾಕ್ಸಿಂಗ್ ಫೆಡರೇಶನ್ ಭರವಸೆ ಇಟ್ಟಿದೆ. 24 ವರ್ಷದ ವಿಜೇಂದರ್ ಭಾರತದ ಪ್ರಥಮ ಒಲಿಂಪಿಕ್ ಪಟುವಾಗಿದ್ದಾರೆ.

ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ತಂಡದಲ್ಲಿ ಆಯ್ಕೆಗೊಂಡಿರುವ ವಿಜೇಂದರ್, ಚೀನಾದ ಗುವಾಂಗ್‌ಝುವಾದಲ್ಲಿ ನವೆಂಬರ್ 12ರಿಂದ 27ರವರೆಗೆ ನಡೆಯಲಿರುವ ಏಶಿಯನ್ ಗೇಮ್ಸ್‌ಗೆ ಕೂಡಾ ಆಯ್ಕೆಯಾಗಿದ್ದಾರೆ. ನಾನು ಕಳೆದ ವರ್ಷದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದೆ. ಹಾಗೆಯೇ ಕಳೆದ ವರ್ಷದ ಏಶಿಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದೆ. ಆದರೆ ಈ ವರ್ಷದ ಈ ಎರಡು ಪಂದ್ಯಾವಳಿಗಳಲ್ಲಿ ಚಿನ್ನ ಪಡೆಯುವ ಗುರಿ ನನ್ನದು ಎಂದು ವಿಜೇಂದರ್ ಹೇಳಿದ್ದಾರೆ.ಏಶಿಯನ್ ಗೇಮ್ಸ್‌ಗಾಗಿ ದಕ್ಷಿಣ ಏಶಿಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಹಾಗೂ ಹಾಲಿ ರಾಷ್ಟ್ರೀಯ ಚಾಂಪಿಯನ್ ಚೊಟೆ ಲಾಲ್ ಯಾದವ್‌ರ ಸ್ಥಾನಕ್ಕೆ ಆಯ್ಕೆಗೊಂಡಿರುವ 28 ವರ್ಷದ ಅಖಿಲ್ ಕುಮಾರ್ ಮೇಲೆ ಭರವಸೆಯಿದೆ.

ಏಶಿಯನ್ ಗೇಮ್ಸ್‌ನಲ್ಲಿ ಚೋಟೆ ಲಾಲ್, ವಿ.ಸಂತೋಷ್, ಮನೋಜ್‌ಕುಮಾರ್, ವಿಕಾಸ್ ಕೃಷ್ಣನ್ ಮತ್ತು ಜೈ ಭಗವಾನ್ ಉತ್ತಮ ಪ್ರದರ್ಶನ ನೀಡುತ್ತಾರೆಂದು ಭಾವಿಸಲಾಗಿದೆ. ಇವರು ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಹಾಗಾಗಿ ಇವರು ಮುಂದಿನ ಏಶಿಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುತ್ತಾರೆಂಬುದು ಇಂಡಿಯನ್ ಬಾಕ್ಸಿಂಗ್ ಫೆಡರೇಶನ್‌ನ ಅಭಿಮತ. ಕಾಮನ್‌ವೆಲ್ತ್‌ನಲ್ಲಿ ಅಖಿಲ್‌ಗೆ ಪ್ರವೇಶ ಮಾತ್ರ ಸಿಕ್ಕಿದೆ. ಏಶಿಯನ್ ಗೇಮ್ಸ್‌ನಲ್ಲಿ ಇವರು ಪಾಲ್ಗೊಳ್ಳುವುದಿಲ್ಲ. ಆದರೆ ಇವರ ಸ್ಥಾನದಲ್ಲಿ ಚೋಟೆ ಲಾಲ್ ಏಶಿಯನ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆಂದು ಭಾವಿಸಲಾಗಿದೆ. 18ವರ್ಷದ ವಿಕಾಸ್ ವಿಶ್ವ ಯೂತ್ ಚಾಂಪಿಯನ್ ಮತ್ತು ಯೂತ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದವರು. ಏಶಿಯನ್ ಗೇಮ್ಸ್‌ಗೆ ಆಯ್ಕೆಯಾಗಿರುವ ಇವರು ಉತ್ತಮ ಪ್ರದರ್ಶನ ನೀಡುವ ಗುರಿಯಲ್ಲಿದ್ದಾರೆ. ಇನ್ನೂ ಅಮನ್‌ದೀಪ್ ಸಿಂಗ್, ಸುರಂಜಯ್ ಸಿಂಗ್‌ರ ಮೇಲೆ ಕೂಡಾ ಯಶಸ್ವಿ ಪ್ರದರ್ಶನ ನೀಡುವ ನಿರೀಕ್ಷೆಯಿಡಲಾಗಿದ್ದು, ಹೀಗಾಗಿ ಇವರು ತಮ್ಮ ಮೇಲಿನ ಜವಾಬ್ದಾರಿಯನ್ನು ಉತ್ತಮ ನೆಲೆಯಲ್ಲಿ ಈಡೇರಿಸಬೇಕಾಗಿದೆ.

ಒಲಿಂಪಿಕ್ ಕ್ವಾರ್ಟರ್‌ಫೈನಲಿಸ್ಟ್ ಅಖಿಲ್ ಕುಮಾರ್, ಒಂಭತ್ತು ಬಾರಿಯ ರಾಷ್ಟ್ರೀಯ ಚಾಂಪಿಯನ್ ದಿಲ್‌ಬಾಗ್ ಸಿಂಗ್ ತಮ್ಮ ವಿಭಾಗದಲ್ಲಿ ಯಶಸ್ವಿ ಬಾಕ್ಸರ್‌ಗಳೆನಿಸಿಕೊಂಡಿದ್ದಾರೆ. ವಿಜೆಂದರ್, ದಿನೇಶ್ ಕುಮಾರ್, ಮನ್‌ಪ್ರೀತ್‌ಸಿಂಗ್, ಪರಮ್‌ಜೀತ್ ಸಮೋಟಾರ ಮೇಲೆ ಕೂಡಾ ನಿರೀಕ್ಷೆಯಿಡಲಾಗಿದ್ದು, ಪದಕ ಗೆಲ್ಲುವ ವಿಶ್ವಾಸವಿಡಲಾಗಿದೆ.
2010ರ ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಅಮನ್‌ದೀಪ್ ಸಿಂಗ್(49ಕೆಜಿ), ಸುರಂಜಯ್ ಸಿಂಗ್(52ಕೆಜಿ), ಅಖಿಲ್ ಕುಮಾರ್(56ಕೆಜಿ), ಜೈ ಭಗವಾನ್(60 ಕೆಜಿ), ಮನೋಜ್ ಕುಮಾರ್(64ಕೆಜಿ), ದಿಲ್‌ಬಾಗ್‌ಸಿಂಗ್(69ಕೆಜಿ), ವಿಜೇಂದರ್ ಸಿಂಗ್(75ಕೆಜಿ), ದಿನೇಶ್ ಕುಮಾರ್(81ಕೆಜಿ), ಮನ್‌ಪ್ರೀತ್ ಸಿಂಗ್(91ಕೆಜಿ) ಹಾಗೂ ಪರಮ್‌ಜೀತ್ ಸಮೋಟಾ(+91ಕೆಜಿ) ಆಯ್ಕೆಯಾಗಿದ್ದಾರೆ.

2010ರ ಏಶಿಯನ್ ಗೇಮ್ಸ್‌ಗಾಗಿ ಅಮನ್‌ದೀಪ್ ಸಿಂಗ್(49ಕೆಜಿ), ಸುರಂಜಯ್ ಸಿಂಗ್(52ಕೆಜಿ), ಚೋಟೆ ಲಾಲ್ ಯಾದವ್(56ಕೆಜಿ), ವಿಕಾಸ್ ಕೃಷ್ಣನ್(60ಕೆಜಿ), ವಿ.ಸಂತೋಷ್ ಕುಮಾರ್(64ಕೆಜಿ), ದಿಲ್‌ಬಾಗ್ ಸಿಂಗ್(69ಕೆಜಿ), ವಿಜೇಂದರ್ ಸಿಂಗ್(75ಕೆಜಿ), ದಿನೇಶ್ ಕುಮಾರ್(81ಕೆಜಿ), ಮನ್‌ಪ್ರೀತ್ ಸಿಂಗ್(91ಕೆಜಿ) ಮತ್ತು ಪರಮ್‌ಜೀತ್ ಸಮೋಟಾ(+91ಕೆಜಿ) ಆಯ್ಕೆಯಾಗಿದ್ದಾರೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಡವರ ಮಕ್ಕಳಿಗೆ ನಿರಾಕರಿಸಲ್ಪಟ್ಟ ಶಿಕ್ಷಣ

ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...


- ಎಸ್.ಬಾಲನ್,ಹೈಕೋರ್ಟ್ ವಕೀಲರು, ಬೆಂಗಳೂರು.

ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ

ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...


- ಗೋಪಾಲ್ ತ್ರಾಸಿ

ಅಂತರ ಜಾತಿಯ ವಿವಾಹ ಮೀಸಲಾತಿಗೆ ಅಡ್ಡಿಯಾಗದು: ಸರ್ವೋಚ್ಚ ನ್ಯಾಯಾಲಯದ ತೀರ್ಪು

ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...


- ಕೆ. ದೇಜಪ್ಪ

ಆರೆಸ್ಸೆಸ್ ಶಿಸ್ತಿನ ಒಳಗುಟ್ಟು

ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...


- ಸನತ್‌ ಕುಮಾರ ಬೆಳಗಲಿ

ನಿನ್ನನ್ನು ಒಳ್ಳೆಯ ಬ್ಯಾರಿ ಅಂತ ಹೇಗೆ ನಂಬುವುದು?

‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...


- ಚೇಳಯ್ಯ

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ-ಪ್ರಗತಿಪರರು

ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...


- ಡಾ ಜಿ. ಭಾಸ್ಕರ ಮಯ್ಯ

ಮನಸ್ಸಿನ ಅಸ್ವಸ್ಥತೆಗೆ ಮೂಲ ಕಾರಣ ಹುಡುಕಬೇಕು

ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...


- ಜ್ಯೋತಿ ಗುರುಪ್ರಸಾದ್

ದೂರಸಂಪರ್ಕ ನೀತಿ ಬೇಕಾಗಿದೆ

ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...


- ಅರವಿಂದ ರಾಜಗೋಪಾಲ