ಭೈಚುಂಗ್ ಫುಟ್ಬಾಲ್‌ಗೆ ಬೈ ;ನನಸಾಗದ ವಿಶ್ವಕಪ್ ಆಡುವ ಕನಸು...
mail-img print-img

ಭೈಚುಂಗ್ ಫುಟ್ಬಾಲ್‌ಗೆ ಬೈ ;ನನಸಾಗದ ವಿಶ್ವಕಪ್ ಆಡುವ ಕನಸು...

- ಇಬ್ರಾಹಿಂ ಅಡ್ಕಸ್ಥಳ
ಶನಿವಾರ - ಜನವರಿ -21-2012

ಭಾರತದ ಫುಟ್ಬಾಲ್‌ನ ಜಾದುಗಾರ ಭೈಚುಂಗ್ ಭುಟಿಯಾ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳಿದ್ದಾರೆ. ಕಳೆದ ಹದಿನಾರು ವರ್ಷಗಳ ಕಾಲ ದೇಶದ ಫುಟ್ಬಾಲ್‌ಗೆ ಅನನ್ಯ ಕೊಡುಗೆ ನೀಡಿದ್ದ ಸ್ಟಾರ್ ಆಟಗಾರ ಭುಟಿಯಾ ಮಂಗಳವಾರ ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಬೇಯರ್ನ್ ಮ್ಯೂನಿಚ್ ವಿರುದ್ಧದ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಭಾರತ ತಂಡವನ್ನು ಕೊನೆಯ ಬಾರಿ ನಾಯಕನಾಗಿ ಮುನ್ನೆಡೆಸಿದರು.ಭುಟಿಯಾ ತಮಗೆ ಏರ್ಪಡಿಸಲಾದ ವಿದಾಯ ಪಂದ್ಯದಲ್ಲಿ ಗೋಲು ಬಾರಿಸಲಿಲ್ಲ. 90 ನಿಮಿಷಗಳ ಆಟದಲ್ಲಿ 85 ನಿಮಿಷಗಳ ಕಾಲ ಕ್ರೀಡಾಂಗಣದಲ್ಲಿ ಓಡಾಡುತ್ತಾ ಫುಟ್ಬಾಲ್ ಪ್ರೇಮಿಗಳ ಮನ ಗೆದ್ದರು. ಸುಮಾರು 35 ಸಾವಿರ ಮಂದಿ ಭುಟಿಯಾರ ಕೊನೆಯ ಆಟವನ್ನು ನೋಡಿ ಕಣ್ತುಂಬಿಕೊಂಡರು.ಈ ಪಂದ್ಯದಲ್ಲಿ ಭುಟಿಯಾ ನೇತೃತ್ವದ ಭಾರತದ ಫುಟ್ಬಾಲ್ ತಂಡ ಮ್ಯೂನಿಚ್ ವಿರುದ್ಧ 0-4 ಅಂತರದಿಂದ ಸೋಲನ್ನು ಭವಿಸಿತು. ಆದರೆ ಭುಟಿಯಾ ಅಭಿಮಾನಿಗಳು ಸೋಲಿನಲ್ಲೂ ಸಂಭ್ರಮಿಸಿದರು. ಭುಟಿಯಾಗೆ ಪಂದ್ಯದ ಪ್ರಥಮಾರ್ಧ ಮುಗಿಯುವ ಹೊತ್ತಿಗೆ ‘ಆಡಿ ಕ್ಯು 8’ ಕಾರು ಉಡುಗೊರೆಯಾಗಿ ನೀಡಲಾಯಿತು. ಬಹುಷಃ ಭುಟಿಯಾ ಇಂತಹ ವಿದಾಯವನ್ನು ನಿರೀಕ್ಷಿಸಿರಲಿಕ್ಕಿಲ್ಲ.

ನಿರಂತರ ಗಾಯದ ಸಮಸ್ಯೆ ಎದುರಿಸುತ್ತಿದ್ದ ಭುಟಿಯಾ ಕಳೆದ ವರ್ಷದ ಆಗಸ್ಟ್‌ನಲ್ಲಿ ಫುಟ್ಬಾಲ್‌ಗೆ ವಿದಾಯ ಪ್ರಕಟಿಸಿದ್ದರು. 2008ರಲ್ಲೇ ಎಎಫ್‌ಸಿ ಚಾಲೆಂಜ್ ಕಪ್ ನಂತರ ಭುಟಿಯಾ ಫುಟ್ಬಾಲ್‌ನಿಂದ ದೂರ ಸರಿಯುವ ಯೋಚನೆ ಮಾಡಿದ್ದರು. ಆದರೆ ತಂಡ ಏಷ್ಯನ್ ಕಪ್ ಟೂರ್ನಿಗೆ ಆಡಲು ಅರ್ಹತೆ ಪಡೆದ ಕಾರಣ ತನ್ನ ನಿರ್ಧಾರವನ್ನು ಬದಲಿಸಿದ್ದರು. ಗಾಯದ ಸಮಸ್ಯೆಯಿಂದಾಗಿ 2014ರ ವಿಶ್ವಕಪ್ ಫುಟ್ಬಾಲ್‌ನ ಅರ್ಹತಾ ಸುತ್ತಿನ ಪಂದ್ಯಗಳಿಗೆ ಭಾರತ ತಂಡದಲ್ಲಿ ಭುಟಿಯಾ ಸ್ಥಾನ ಪಡೆದಿರಲಿಲ್ಲ. ವಿಶ್ವಕಪ್‌ನಲ್ಲಿ ಆಡುವ ಕನಸು ಕಾಣುತ್ತಿದ್ದ ಭುಟಿಯಾಗೆ ಆ ಅವಕಾಶ ಒಲಿದು ಬರಲಿಲ್ಲ. 1999ರಿಂದ 2011ರ ತನಕ ಭಾರತ ಫುಟ್ಬಾಲ್ ತಂಡದ ಸಾರಥ್ಯ ವಹಿಸಿದ್ದರು.


ತಾನು ಹದಿನಾರು ವರ್ಷಗಳ ಕಾಲ ಭಾರತ ತಂಡದಲ್ಲಿದ್ದರೂ ವಿಶ್ವಕಪ್‌ಗೆ ತಂಡವನ್ನು ಕೊಂಡೊಯ್ಯಲು ಸಾಧ್ಯವಾಗದ ವೇದನೆಯೊಂದಿಗೆ ಭುಟಿಯಾ ವಿದಾಯ ಹೇಳಿದ್ದಾರೆ. ಭುಟಿಯಾ ಒಟ್ಟು 107 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿ 43 ಗೋಲುಗಳನ್ನು ತನ್ನ ಖಾತೆಗೆ ಜಮೆ ಮಾಡಿದ್ದಾರೆ. ಇವರನ್ನು ಹೊರುಪಡಿಸಿದರೆ ಭಾರತದ ಫುಟ್ಬಾಲ್‌ನಲ್ಲಿ ಖ್ಯಾತಿಯನ್ನು ಪಡೆದವರು ಕೇರಳದ ತ್ರಿಶೂರ್‌ನ ವಿಜಯನ್. ಅವರು 1989-2004ರ ತನಕ ಭಾರತದ ರಾಷ್ಟ್ರೀಯ ತಂಡದ ಪರ 79 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು. 40 ಗೋಲುಗಳನ್ನು ತನ್ನ ಖಾತೆಗೆ ಜಮೆ ಮಾಡಿದ್ದರು.

ಫುಟ್ಬಾಲ್‌ಗೆ ಭುಟಿಯಾ ಪ್ರವೇಶ: ಭುಟಿಯಾ 1976ರ ಡಿಸೆಂಬರ್ 15ರಂದು ಸಿಕ್ಕಿಂನ ಟಿಂಕಿಟಮ್‌ನಲ್ಲಿ  ಜನಿಸಿದರು. ತಂದೆಯ ಹೆಸರು ದೋರ್ಜಿ ದೋರ್ಮಾ ಮತ್ತು ತಾಯಿ ಸೋನಮ್ ಥೋಪ್ಡನ್. ಇವರದ್ದು ಕೃಷಿಕ ಕುಟುಂಬ. ಕ್ರೀಡಾ ವಾತಾವರಣ ಅಲ್ಲಿ ಇರದಿದ್ದರೂ, ಭುಟಿಯಾ ಅಣ್ಣ ಸ್ಥಳಿಯ ಫುಟ್ಬಾಲ್ ಆಟಗಾರನಾಗಿ ಪ್ರಸಿದ್ಧಿ ಪಡೆದಿದ್ದರು. ಈ ಕಾರಣದಿಂದಾಗಿ ಚಿಕ್ಕಂದಿನಿಂದಲೆ ಫುಟ್ಬಾಲ್ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡ ಭುಟಿಯಾ ಫುಟ್ಬಾಲ್ ಜತೆಗೆ ಶಾಲಾ ಬಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್ ಮತ್ತು ಅಥ್ಲೇಟಿಕ್ ತಂಡದಲ್ಲಿ ತನ್ನನು ತೊಡಗಿಸಿಕೊಂಡಿದ್ದರು. ಚಿಕ್ಕಪ್ಪ ಕರ್ಮಾ ಭುಟಿಯಾ ನೀಡಿದ ಪ್ರೋತ್ಸಾಹದಿಂದಾಗಿ ಭುಟಿಯಾ ಫುಟ್ಬಾಲ್‌ನಲ್ಲಿ ಮುಂದೆ ಸಂಪೂಣವಾಗಿ ತನ್ನನ್ನು ತೊಡಗಿಸಿಕೊಂಡರು..

ಸಿಕ್ಕಿಂನ ಸ್ಥಳೀಯ ಶಾಲಾ ಫುಟ್ಬಾಲ್ ತಂಡ ಮತ್ತು ಸ್ಥಳೀಯ ಫುಟ್ಬಾಲ್ ಕ್ಲಬ್‌ಗಳಲ್ಲಿ ಆಡುತ್ತಾ ಗಮನ ಸೆಳೆದ ಭುಟಿಯಾ 1992ರಲ್ಲಿ ಸುಬ್ರೋಟೋ ಕಪ್ ಪಂದ್ಯದಲ್ಲಿ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದರು. ಇವರಲ್ಲಿರುವ ಫುಟ್ಬಾಲ್ ಪ್ರತಿಭೆಯನ್ನು ಗುರುತಿಸಿದ ಭಾರತ ಫುಟ್ಬಾಲ್ ತಂಡದ ಮಾಜಿ ಗೋಲ್ ಕೀಪರ್ ಭಾಸ್ಕರ ಗಂಗುಲಿ ಕೋಲ್ಕತಾದ ಫುಟ್ಬಾಲ್ ಕ್ಲಬ್‌ಗೆ ಸೇರಲು ಸಹಾಯ ಮಾಡಿದರು.

ಚೊಚ್ಚಲ ಪ್ರವೇಶ: 1993ರಲ್ಲಿ ತನ್ನ 16ನೆ ವಯಸ್ಸಿನಲ್ಲಿ ಈಸ್ಟ್ ಬೆಂಗಾಲ್ ಸೇರಿದ ಭುಟಿಯಾ, ಎರಡು ವರ್ಷಗಳ ಬಳಿಕ ಜೆಸಿಟಿ ಮಿಲ್ಸ್ ಪಗ್ವಾರಕ್ಕೆ ವರ್ಗಾವಣೆಗೊಂಡರು. ತನ್ನ 19ನೆ ವಯಸ್ಸಿನಲ್ಲಿ ಭಾರತದ ರಾಷ್ಟ್ರೀಯ ಫುಟ್ಬಾಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭುಟಿಯಾ 1995ರ ಮಾರ್ಚ್ 14ರಂದು ನೆಹರು ಕಪ್‌ನಲ್ಲಿ ಉಜ್ಬೇಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಅದೇ ಪಂದ್ಯದಲ್ಲಿ ತನ್ನ ಮೊದಲ ಗೋಲು ದಾಖಲಿಸಿದ್ದರು.
 2007ರಲ್ಲಿ ಎಲ್‌ಜಿ ಕಪ್‌ನಲ್ಲಿ ಭುಟಿಯಾ ನೇತೃತ್ವದ ಭಾರತ ತಂಡ ಕಂಚು ಜಯಿಸಿತ್ತು. ವಿಯಟ್ನಾಂ ವಿರುದ್ಧದ ಪಂದ್ಯದಲ್ಲಿ ಭುಟಿಯಾ ಬಾರಿಸಿದ ಗೋಲು ತಂಡದ ಗೆಲುವಿಗೆ ನೆರವಾಗಿತ್ತು.

ಭುಟಿಯಾ ಅಪ್ರೋ -ಏಶ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡನೆ ಸ್ಥಾನ ದೊರಕಿಸಿಕೊಡಲು ದೊಡ್ಡ ಕೊಡುಗೆ ನೀಡಿದ್ದರು. ಝಿಂಬಾಬ್ವೆ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತ 5-3 ಅಂತರದಲ್ಲಿ ಜಯಿಸಿತ್ತು. ಇದರಲ್ಲಿ ಎರಡು ಗೋಲುಗಳನ್ನು ಭುಟಿಯಾ ದಾಖಲಿಸಿದ್ದರು.2008ರ ಚಾಲೆಂಜ್ ಕಪ್‌ನಲ್ಲಿ ಭುಟಿಯಾ ದಾಖಲಿಸಿದ ಎರಡು ಗೋಲು ತುರ್ಕ್‌ಮೆನಿಸ್ತಾನ್ ವಿರುದ್ಧ 2-1 ಅಂತರ ದಲ್ಲಿ ಜಯಿಸಲು ಭಾರತಕ್ಕೆ ನೆರವಾದರು. ಆ ಮೂಲಕ ಭಾರತ ಸೆಮಿಫೈನಲ್ ಪ್ರವೇಶಿಸಿತು. ಫೈನಲ್‌ನಲ್ಲಿ ತಾಜಿಕಿಸ್ತಾನ್ ವಿರುದ್ಧ 1 ಗೋಲು ಬಾರಿಸಿದ್ದರು.

2007ರಿಂದ 2009ರ ಅವಧಿಯಲ್ಲಿ ಭುಟಿಯಾ ಅಪೂರ್ವ ಯಶಸ್ಸು ಸಾಧಿಸಿದ್ದರು. ಭಾರತ ಈ ಅವಧಿಯಲ್ಲಿ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. 2007 ಮತ್ತು 2009ರಲ್ಲಿ ಭುಟಿಯಾ ನೇತೃತ್ವದ ತಂಡ ನೆಹರು ಕಪ್ ಪ್ರಶಸ್ತಿ ಗೆದ್ದುಕೊಂಡಿತ್ತು. 2008ರಲ್ಲಿ ಎಎಫ್‌ಸಿ ಚಾಲೆಂಜ್ ಕಪ್‌ನ್ನು ಭಾರತ ಜಯಿಸಿತ್ತು.

2009ರ ನೆಹರು ಕಪ್‌ನಲ್ಲಿ ಭುಟಿಯಾ ಕಿರ್ಗಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ 100ನೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ ದಾಖಲೆ ನಿರ್ಮಿಸಿದ್ದರು. ಟೂರ್ನಮೆಂಟ್‌ನ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಭುಟಿಯಾ ಭಾಜನರಾಗಿದ್ದರು.ಭುಟಿಯಾ ಯುರೋಪ್‌ನ ವೃತ್ತಿಪರ ಫುಟ್ಬಾಲ್ ತಂಡ ಬ್ಯುರಿ ಎಫ್‌ಸಿಯಲ್ಲಿ ಆಡಿದ ಭಾರತದ ಪ್ರಥಮ ಆಟಗಾರ. 1999-2002ರ ತನಕ 37 ಪಂದ್ಯಗಳನ್ನು ಆಡಿ 17 ಗೋಲು ಸಂಪಾದಿಸಿದ್ದರು.ಪೆರಾಕ್ ಎಫ್‌ಸಿ ಸೇರಿ 8 ಪಂದ್ಯಗಳಲ್ಲಿ 4 ಗೋಲುಗಳನ್ನು ಜಮೆ ಮಾಡಿದ್ದರು.ಈಸ್ಟ್ ಬೆಂಗಾಲ್, ಮೋಹನ್ ಬೆಗಾನ್, ಸೆಲ್ಗಾಂಕರ್ ಎಂಕೆ ಲ್ಯಾಂಡ್ ತಂಡದಲ್ಲಿ ಆಡಿರುವ ಭುಟಿಯಾ 2011ರಿಂದ ಯುನೈಟೆಡ್ ಸಿಕ್ಕಿಂ ಪರ ಆಡುತ್ತಿದ್ದಾರೆ.
   
1995ರಿಂದ 2011ರ ತನಕ ಭಾರತ ರಾಷ್ಟ್ರೀಯ ತಂಡದಲ್ಲಿ ಆಡಿರುವ ಭುಟಿಯಾ 1995ರಿಂದ 2000ರ ತನಕ 56 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 25 ಗೋಲು ದಾಖಲಿಸಿದ್ದರು. 2001-2011ರ ತನಕ 51 ಪಂದ್ಯಗಳಲ್ಲಿ 18 ಗೋಲು ದಾಖಲಾಗಿದೆ. 1998ರಲ್ಲಿ ಅರ್ಜುನ ಪ್ರಶಸ್ತಿ, 2008ರಲ್ಲಿ ಪದ್ಮಶ್ರೀ, 1995 ಮತ್ತು 2008ರಲ್ಲಿ ಎಐಎಫ್‌ಎಫ್ ವರ್ಷದ ಆಟಗಾರ ಪ್ರಶಸ್ತಿಯನ್ನು ಭುಟಿಯಾ ಪಡೆದಿದ್ದಾರೆ. ಭುಟಿಯಾ ನಿರ್ಗಮನದ ಬಳಿಕ ಇದೀಗ ಸುನಿಲ್ ಚೆಟ್ರಿ ಭಾರತ ತಂಡದಲ್ಲಿ ಭರವಸೆ ಮೂಡಿಸಿದ್ದಾರೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಕಗ್ಗತ್ತಲ ಕೋಣೆಯಲ್ಲಿ ನರಳುತ್ತಿರುವ ಶಿಕ್ಷಣ

ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಭಾರತ-ಅಮೆರಿಕ ದೇಶದ ನೂತನ ವಸಾಹತು

ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...


- ಶ್ರೀ ರಾಮ್, ಬೆಂಗಳೂರು

ಬಿಜೆಪಿಯ ‘ಟೀಮ್ ಬಿ’

ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...


ಜನ ಚಳವಳಿಗೆಲ್ಲ ಹೀಗೇಕಾಗಿವೆ?

ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...


- ಸನತ್‌ ಕುಮಾರ ಬೆಳಗಲಿ

ಮಾನ ಮರ್ಯಾದೆ ಇಲ್ಲದ ಜನರೆಲ್ಲ ಎಲ್ಲಿ ಹೋದರು?

ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...


ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...


- ಜ್ಯೋತಿ ಗುರುಪ್ರಸಾದ್

ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದ ಭಾರತ

ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...


- ರಘೋತ್ತಮ ಹೊ.ಬ.

ಪಠ್ಯಪುಸ್ತಕಗಳ ಕೇಸರೀಕರಣ ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್

ಪಠ್ಯಪುಸ್ತಕಗಳ ಕೇಸರೀಕರಣ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್