
ಕಾಂಗರೂ ಬೇಟೆಗೆ ಆಸ್ಟ್ರೇಲಿಯಕ್ಕೆ ತೆರಳಿರುವ ಟೀಮ್ ಇಂಡಿಯಾ ಟೆಸ್ಟ್‌ನಲ್ಲಿ ಹೀನಾಯ ಸೋಲಿನೊಂದಿಗೆ ಸರಣಿಯನ್ನು ಕಳೆದುಕೊಂಡಿದೆ. ಕೊನೆಯ ಪಂದ್ಯದಲ್ಲಿ ವೈಟ್‌ವಾಶ್ ತಪ್ಪಿಸಲು ಹೋರಾಟ ನಡೆಸುತ್ತಿದ್ದು, ಸ್ಟಾರ್ ಬ್ಯಾಟ್ಸ್‌ಮನ್‌ಗಳ ವೈಲ್ಯ ಮುಂದುವರಿದಿದೆ. ಯುವ ದಾಂಡಿಗ ವಿರಾಟ್ ಕೊಹ್ಲಿ ಚೊಚ್ಚಲ ಶತಕ ಸಿಡಿಸಿದ್ದಾರೆ.ಎಂಟನೆ ಟೆಸ್ಟ್ ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿ ಆಕರ್ಷಕ ಶತಕ (116) ಸಿಡಿಸಿ ಸರಣಿಯಲ್ಲಿ ತಂಡದ ಪರ ಮೊದಲ ಶತಕ ದಾಖಲಿಸಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಶತಕದ ಬರ ಮುಂದುವರಿಯಿತು. ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಮತ್ತು ಕಲಾತ್ಮಕ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಫಾರ್ಮ್ ಕಳೆದುಕೊಂಡಿರುವುದು ಟೀಮ್ ಇಂಡಿಯಾಕ್ಕೆ ದೊಡ್ಡ ಚಿಂತೆಯಾಗಿದೆ.ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ತಂಡಕ್ಕೆ ಈ ಸರಣಿಯಲ್ಲಿ ಮೊದಲ ವಿಕೆಟ್‌ಗೆ ದೊಡ್ಡ ಮೊತ್ತದ ಅಡಿಪಾಯವನ್ನು ಹಾಕಿಕೊಡುವಲ್ಲಿ ಎಡವಿರುವುದು ತಂಡ ಸರಣಿಯುದ್ದಕ್ಕೂ ವೈಫಲ್ಯ ಅನುಭವಿಸಲು ಕಾರಣಗಳಲ್ಲೊಂದಾಗಿದೆ.
ಅಂತಿಮ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ಉಪನಾಯಕ ವೀರೇಂದ್ರ ಸೆಹ್ವಾಗ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಧೋನಿ ಮೂರನೆ ಟೆಸ್ಟ್‌ನಲ್ಲಿ ನಿಧಾನಗತಿಯ ಬೌಲಿಂಗ್ ಕಾರಣಕ್ಕಾಗಿ ನಾಲ್ಕನೆ ಟೆಸ್ಟ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಸೆಹ್ವಾಗ್ ದೊಡ್ಡ ಸಾಧನೆ ಮಾಡಲಿಲ್ಲ. ಅವರ ಬ್ಯಾಟ್‌ನಿಂದಲೂ ಮೊದಲ ಇನಿಂಗ್ಸ್‌ನಲ್ಲಿ ರನ್ ಹೊಳೆ ಹರಿಯಲಿಲ್ಲ. ವಿಕೆಟ್ ಕೀಪರ್ ಜವಾಬ್ದಾರಿಯನ್ನು ಹೊತ್ತುಕೊಂಡ ಪಶ್ಚಿಮ ಬಂಗಾಳದ ವೃದ್ಧಿಮಾನ್ ಸಹಾ ಮಿಂಚಲಿಲ್ಲ. ಆದರೆ ಬ್ಯಾಟಿಂಗ್‌ನಲ್ಲಿ 35 ರನ್ ಗಳಿಸಿದರು. ಕೊಹ್ಲಿ ಅವರನ್ನು ಹೊರತುಪಡಿಸಿದರೆ ಭಾರತದ ಪರ ದಾಖಲಾದ ಎರಡನೆ ಗರಿಷ್ಠ ಸ್ಕೋರ್ ಇದಾಗಿದೆ. ಕೊಹ್ಲಿ ಜತೆ 6ನೆ ವಿಕೆಟ್‌ಗೆ ಮಹತ್ವದ 114 ರನ್‌ಗಳ ಜತೆಯಾಟ ನೀಡಿದ್ದರು. ಆಸ್ಟ್ರೇಲಿಯ ವಿರುದ್ಧದ ಮೊದಲ ಪಂದ್ಯದ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ರೋಹಿತ್ ಶರ್ಮ ಅವರೊಂದಿಗೆ ಸ್ಪರ್ಧೆ ಎದುರಿಸಿ, ಅಂತಿಮವಾಗಿ ಟೆಸ್ಟ್‌ನಲ್ಲಿ ಸ್ಥಾನ ಪಡೆದ ಕೊಹ್ಲಿ ಪ್ರದರ್ಶನ ಪಂದ್ಯದಲ್ಲಿ ಶತಕ(132)ದ ಮೂಲಕ ಗಮನ ಸೆಳೆದಿದ್ದರು.
ಆ ಬಳಿಕ ಮೊದಲ ಟೆಸ್ಟ್‌ನಲ್ಲಿ 11ಮತ್ತು 0, ಎರಡನೆ ಟೆಸ್ಟ್‌ನಲ್ಲಿ 23 ಮತ್ತು 0 ಕಳಪೆ ಪ್ರದರ್ಶನ ನೀಡಿದರು. ಮೂರನೆ ಟೆಸ್ಟ್‌ಗೆ ಅವಕಾಶ ಕಳೆದುಕೊಳ್ಳುವ ಭೀತಿ ಎದುರಿಸಿದ್ದರು. ಆದರೆ ಮೂರನೆ ಟೆಸ್ಟ್‌ನಲ್ಲಿ ಸ್ಥಾನ ಪಡೆದು 44 ಮತ್ತು 75 ರನ್ ದಾಖಲಿಸಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಇದೀಗ ಅಂತಿಮ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ತಂಡದ ಹಿರಿಯ ಅನುಭವಿ ಬ್ಯಾಟ್ಸ್‌ಮನ್‌ಗಳು ಪೀಟರ್ ಸಿಡ್ಲ್ ಮತ್ತು ಬೆನ್ ಹಿಲೆನ್ಹಾಸ್ ದಾಳಿಯನ್ನು ಎದುರಿಸಲಾರದೆ ಕೈ ಸುಟ್ಟುಕೊಂಡಿರುವಾಗ ಕೊಹ್ಲಿ ಇವರ ದಾಳಿಯನ್ನು ಸಮರ್ಥವಾಗಿ ಎದುರಿಸಿ ಟೀಮ್ ಇಂಡಿಯಾದ ಮಾನ ಕಾಪಾಡಲು ಶ್ರಮಿಸಿದ್ದಾರೆ.
23ರ ಹರೆಯದ ದಿಲ್ಲಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭವಿಷ್ಯದ ಭಾರತದ ಬ್ಯಾಟಿಂಗ್ ಹೀರೋ ಆಗಿ ರೂಪುಗೊಳ್ಳುತ್ತಿದ್ದಾರೆ. ಕೊಹ್ಲಿ ಆಸ್ಟ್ರೇಲಿಯ ಸರಣಿಯಲ್ಲಿ ಪ್ರೇಕ್ಷಕರಿಗೆ ಬೆರಳು ತೋರಿಸಿ ವಿವಾದ ಹುಟ್ಟು ಹಾಕಿದ್ದರು. ಈ ತಪ್ಪಿಗಾಗಿ ದಂಡ ತೆತ್ತ ಕೊಹ್ಲಿ ಆರಂಭದಲ್ಲಿ ಪರಿಸರಕ್ಕೆ ಹೊಂದಿಕೊಳ್ಳಲು ಸಮಸ್ಯೆ ಎದುರಿಸಿದ್ದರು. ತಂಡಕ್ಕೆ ಕಠಿಣ ಪರಿಸ್ಥಿತಿಯಲ್ಲಿ ನೆರವಾಗುವ ಸಾಮರ್ಥ್ಯ ಕೊಹ್ಲಿ ಅವರಲ್ಲಿದೆ. ಇದು ಅವರಲ್ಲಿರುವ ಪ್ಲಸ್ ಪಾಯಿಂಟ್. ದಿಲ್ಲಿ, ಇಂಡಿಯಾ ರೆಡ್, ಇಂಡಿಯಾ ಅಂಡರ್19, ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಆಡಿರುವ ಕೊಹ್ಲಿ ಏಕದಿನ ಕ್ರಿಕೆಟ್‌ಗೆ ಹೇಳಿ ಮಾಡಿಸಿದಂತಹ ಓರ್ವ ತಜ್ಞ ಬ್ಯಾಟ್ಸ್‌ಮನ್. ಏಕದಿನ ಕ್ರಿಕೆಟ್‌ನಲ್ಲಿ ಅವರು ಈ ವರೆಗೆ 74 ಪಂದ್ಯಗಳನ್ನು ಆಡಿದ್ದಾರೆ. 2860 ರನ್ ಸಂಗ್ರಹಿಸಿರುವ ಅವರು 8 ಶತಕ ಮತ್ತು 18 ಅರ್ಧಶತಕ ಸಿಡಿಸಿದ್ದಾರೆ.
ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ ದಿಲ್ಲಿ ತಂಡದಲ್ಲಿ ಕೊಹ್ಲಿ ಆಡುತ್ತಿದ್ದಾಗ ಅವರ ತಂದೆ ನಿಧನರಾದರು. ಕೊಹ್ಲಿ ಈ ಹಂತದಲ್ಲಿ ತಂಡವನ್ನು ಬಿಟ್ಟು ತೆರಳಲಿಲ್ಲ. ದು:ಖದ ನಡುವೆಯೂ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದರು. ಇದು ಕೊಹ್ಲಿಯ ದೊಡ್ಡ ಗುಣ.ಕೊಹ್ಲಿ 2008ರಲ್ಲಿ ಇಂಡಿಯಾ ಅಂಡರ್ 19 ತಂಡದ ನಾಯಕರಾಗಿ ಮಲೇಷ್ಯಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ನಂ.4 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ 6 ಪಂದ್ಯದಲ್ಲಿ 235 ರನ್ ದಾಖಲಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ್ದರು.
2009ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಉದಯೋನ್ಮುಖ ಆಟಗಾರರ ಟೂರ್ನಮೆಂಟ್‌ನಲ್ಲಿ ಕೊಹ್ಲಿ ಭಾರತದ ವಿಜಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿ ತಂಡಕ್ಕೆ 17 ರನ್‌ಗಳ ರೋಚಕ ಗೆಲುವು ತಂದುಕೊಟ್ಟಿದ್ದರು. ಈ ಸರಣಿಯಲ್ಲಿ ಕೊಹ್ಲಿ 7 ಪಂದ್ಯಗಳಲ್ಲಿ 2 ಶತಕ ಮತ್ತು 2 ಅರ್ಧಶತಕಗಳಿರುವ 398 ರನ್ ಸಂಗ್ರಹಿಸಿ, ಸರಣಿಯಲ್ಲಿ ಗರಿಷ್ಠ ರನ್ ಸಂಪಾದಿಸಿದ್ದರು. 2008ರ ಐಪಿಎಲ್ ಮೊದಲ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಚೆನ್ನಾಗಿ ಆಡಲಿಲ್ಲ. 13 ಪಂದ್ಯಗಳಲ್ಲಿ 165 ರನ್ ಮತ್ತು 2 ವಿಕೆಟ್ ಪಡೆದಿದ್ದರು.ಆದರೆ ಎರಡನೆ ಆವೃತ್ತಿಯಲ್ಲಿ ಉತ್ತಮ ಫಾರ್ಮ್ ಕಂಡುಕೊಂಡರು. 16 ಪಂದ್ಯಗಳಲ್ಲ್ಲಿ 246 ರನ್, 9 ಕ್ಯಾಚ್ ಮತ್ತು 2 ರನೌಟ್ ಸಾಧನೆ ಮಾಡಿದರು.
3ನೆ ಆವೃತ್ತಿಯಲ್ಲಿ ಅವರ ಆಟದಲ್ಲಿ ಮತ್ತಷ್ಟು ಸುಧಾರಣೆ ಕಂಡು ಬಂತು. 13 ಪಂದ್ಯಗಳಲ್ಲಿ 2 ಅರ್ಧಶತಕ 307 ರನ್ ದಾಖಲಿಸಿದರು. ಇವರ ಈ ಸಾಧನೆಯಿಂದಾಗಿ ನಾಲ್ಕನೆ ಆವೃತ್ತಿಯಲ್ಲಿ ಆರ್‌ಸಿಬಿಯಲ್ಲಿ ಏಕೈಕ ಆಟಗಾರನಾಗಿ ಮರಳಿ ಸ್ಥಾನ ಗಿಟ್ಟಿಸಿಕೊಂಡರು. 19ರ ಹರೆಯದ ತಂಡದಲ್ಲಿ ನೀಡಿದ ಪ್ರದರ್ಶನದ ನೆರವಿನಲ್ಲಿ 2008ರಲ್ಲಿ ಕೊಹ್ಲಿ ಏಕದಿನ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಶ್ರೀಲಂಕಾದಲ್ಲಿ ಐಡಿಯಾ ಕಪ್‌ನ ಪಂದ್ಯದಲ್ಲಿ ತಂಡದಲ್ಲಿ ಸ್ಥಾನ ಪಡೆದ ಕೊಹ್ಲಿ ತನ್ನ ಮೊದಲ ಪಂದ್ಯದಲ್ಲಿ 12 ರನ್ ಗಳಿಸಿದರು. ಆದರೆ ಎರಡನೆ ಪಂದ್ಯದಲ್ಲಿ 37 ರನ್ ಸೇರಿಸಿ ತಂಡದ ಗೆಲುವಿಗೆ ಕಾರಣರಾದರು. ನಾಲ್ಕನೆ ಪಂದ್ಯದಲ್ಲಿ ಅರ್ಧಶತಕ (54)ದಾಖಲಿಸಿ ತಂಡ ಸರಣಿ ಗೆಲುವಿಗೆ ನೆರವಾದರು. ಕೊಹ್ಲಿ 2009ರಲ್ಲಿ ಶ್ರೀಲಂಕಾ ವಿರುದ್ಧ ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ತನ್ನ ಚೊಚ್ಚಲ ಏಕದಿನ ಕ್ರಿಕೆಟ್ ಶತಕ (107)ದಾಖಲಿಸಿದ್ದರು.
2010ರ ಜೂನ್‌ನಲ್ಲಿ ಝಿಂಬಾಬ್ವೆಯಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ತಂಡದ ಉಪನಾಯಕ ಆಗಿದ್ದರು. ಈ ಸರಣಿಯಲ್ಲಿ ಅವರು ಏಕದಿನ ಸರಣಿಯಲ್ಲಿ 1000 ರನ್‌ಗಳ ಮೈಲುಗಲ್ಲನ್ನು ದಾಟಿದರು. 2011ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಕೊಹ್ಲಿ ಬಾಂಗ್ಲಾದಲ್ಲಿ ನಡೆದ ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ ಅಜೇಯ ಶತಕ(100) ಸಿಡಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧ 59 ರನ್, ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ 35 ರನ್ ಬಾರಿಸಿದ್ದರು. ವಿಶ್ವಕಪ್‌ನಲ್ಲಿ ಅವರು 9 ಪಂದ್ಯದಲ್ಲಿ 1 ಶತಕ ಮತ್ತು 1 ಅರ್ಧಶತಕ ಇರುವ 282 ರನ್ ಸಂಪಾದಿಸಿದ್ದರು.
2011ರ ಜೂನ್-ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಕೊಹ್ಲಿ ಟೆಸ್ಟ್ ತಂಡಕ್ಕೆ ಆಯ್ಕೆಯಾದರು.ಆದರೆ ಅವರಿಂದ ಗಮನ ಸೆಳೆಯುವ ಪ್ರದರ್ಶನ ಕಂಡು ಬರಲಿಲ್ಲ. ಬಳಿಕ ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್‌ನಲ್ಲಿ ಅವಕಾಶ ಪಡೆಯಲಿಲ್ಲ. ಆದರೆ ಏಕದಿನ ಸರಣಿಲ್ಲಿ ತಂಡ 3-0 ಅಂತರದಲ್ಲಿ ಸೋತರೂ ಕೊಹ್ಲಿ ವೇಲ್ಸ್‌ನಲ್ಲಿ ಶತಕ (107) ಬಾರಿಸಿದರು. ಸರಣಿಯಲ್ಲಿ 194 ರನ್ ಸಂಪಾದಿಸಿದರು.ಅಕ್ಟೋಬರ್‌ನಲ್ಲಿ ಭಾರತದಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ 1 ಶತಕ (112)ಸಿಡಿಸಿದರು. ಸರಣಿಯನ್ನು 5-0 ಅಂತರದಲ್ಲಿ ಭಾರತ ಗೆಲುವು ಸಾಸುವಲ್ಲಿ ಗಮನಾರ್ಹ ಕೊಡುಗೆ ನೀಡಿದರು. ಸರಣಿಯಲ್ಲಿ ಗರಿಷ್ಠ ರನ್ ಪಡೆದ ದಾಂಡಿಗರ ಪೈಕಿ ಕೊಹ್ಲಿ ಮೊದಲ ಸ್ಥಾನ ಪಡೆದರು.
ಡಿಸೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ಭಾರತಕ್ಕೆ ಪ್ರವಾಸ ಕೈಗೊಂಡಾಗ ಕೊಹ್ಲಿ ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದು ಎರಡು ಅರ್ಧಶತಗಳನ್ನು ದಾಖಲಿಸಿದರು. ಏಕದಿನ ಸರಣಿಯಲ್ಲಿ ಐದು ಪಂದ್ಯಗಳ ಸರಣಿಯಲ್ಲಿ ತಂಡ 4-1 ಗೆಲುವು ಸಾಸಲು ನೆರವಾದರು. 1 ಶತಕ ಇರುವ 243 ರನ್ ಪೇರಿಸಿದ್ದರು.ಒಟ್ಟಿನಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಆಸ್ಟ್ರೇಲಿಯ ನೆಲದಲ್ಲಿ ವೈಲ್ಯ ಅನುಭವಿಸಿರುವಾಗ ಕೊಹ್ಲಿ ಮಿಂಚುವ ಮೂಲಕ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...
Click here to post your views ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...
ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...
ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...
ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...
‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...
ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...
ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...
ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...