ಅಮೆರಿಕದಲ್ಲಿ ವಿವಾಹ ವಿಚ್ಛೇದನಗಳು ಸಂಖ್ಯೆ ಜಾಸ್ತಿ. ಕಾರಣ, ಅಲ್ಲಿನ ಕೌಟುಂಬಿಕ ವ್ಯವಸ್ಥೆಯಲ್ಲಿನ ಏರು-ಪೇರು. ಇದು ಮಕ್ಕಳ ಮೇಲೆ ಅಪಾರ ಪರಿಣಾಮ ಬೀರುತ್ತದೆ ಎಂದು ಅಮೆರಿಕನ್ನರ ಬಗ್ಗೆ ಹೀಗೆಲ್ಲಾ ಮಾತನಾಡಲಾಗು ತ್ತಿತ್ತು. ಆದರೆ ಈಗೀಗ ಭಾರತದಲ್ಲಿಯೇ ಇಂತಹ ಬೆಳವಣಿಗೆ ಕಂಡು ಬಂದಿದೆ.
ಸಂಪ್ರಾದಾಯಬದ್ಧ ದೇಶ ಎಂದು ಕರೆಸಿಕೊಳ್ಳುವ ಭಾರತದಲ್ಲಿ ವಿವಾಹ ವಿಚ್ಛೇದನಗಳ ಸಂಖ್ಯೆ ಗಾಬರಿ ಮೂಡಿಸುವಂತಹ ಪ್ರಮಾಣದಲ್ಲಿ ಏರಿಕೆ ಯಾಗಿದೆ. ‘ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ’ಎಂಬ ರೂಢಿ ಮಾತಿಗೆ ಬದಲಾಗಿ ಗಂಡ ಹೆಂಡಿರ ಜಗಳ ಕೋರ್ಟಿನ ತನಕ ಎಂಬ ಮಾತು ಚಾಲ್ತಿಗೆ ಬರುತ್ತಿದೆ. ಇದು ಇಲ್ಲಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತಿದೆ.
ಮುಖ್ಯವಾಗಿ ಮಕ್ಕಳ ಮೇಲೆ ಇದು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿದೆ. ಇದಲ್ಲದೇ ಕೌಟುಂಬಿಕ ವಿಘಟನೆಗಳಿಂದ ಮದ್ಯವ್ಯಸನಗಳಾಗುವ ವಿಚ್ಛೇದಿತ ದಂಪತಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಸಾಮಾಜಿಕ ಜೀವನದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುವ ಇಂತವರ ಸಂಖ್ಯೆಯೂ ಅಧಿಕವಾಗುತ್ತಿದೆ.
ಶತಶತಮಾನಗಳಿಂದಲೂ ಪುರುಷ ಪ್ರಧಾನ ವ್ಯವಸ್ಥೆಗೆ ಒಗ್ಗಿಕೊಂಡು ಬಂದಿದ್ದ ಮಹಿಳಾ ಸಮುದಾಯದಲ್ಲಿ ತಮ್ಮ ಹಕ್ಕುಗಳ ಅರಿವು ಮೂಡಿದೆ. ತಾವು ಪುರುಷರಿಗೆ ಸರಿ ಸಮಾನರು. ಅವರ ದೌರ್ಜನ್ಯ ಸಹಿಸಬೇಕಾದ ಅಗತ್ಯವಿಲ್ಲ ಎನ್ನುವ ಪ್ರಜ್ಞೆ ಮೂಡಿದೆ. ಪುರುಷನ ದಬ್ಬಾಳಿಕೆಯನ್ನು ಕಿಂಚಿತ್ತೂ ಪ್ರಶ್ನಿಸದೇ ಬಂದಿದ್ದ ಮಹಿಳೆ ಇಂದು ಧ್ವನಿಯೆತ್ತಿ ದ್ದಾಳೆ.
ಇವೆಲ್ಲಾ ಸಮಾಜದ ಚಲನಶೀಲತೆಗೆ ಉದಾಹರಣೆ ಗಳು ಮತ್ತು ಮಹಿಳೆಯರ ದೃಷ್ಟಿಯಿಂದ ಸಕಾರಾತ್ಮಕ ಬೆಳವಣಿಗೆ. ಆದರೆ ಇದನ್ನು ಅರಗಿಸಿಕೊಳ್ಳುವ ಪ್ರೌಢಿಮೆ ಭಾರತೀಯ ಪುರುಷ ಸಮುದಾಯಕ್ಕೆ ಇನ್ನೂ ಬಂದಿಲ್ಲ.
ಪ್ರತಿಯೋರ್ವ ವ್ಯಕ್ತಿಯೂ ವೈಯಕ್ತಿಕ ಘಟಕ. ತನ್ನದಾದ ನಡವಳಿಕೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಿ ಹೊಂದಿರುವುದು ಸಹಜ.ಆದರಿದು ಹೊಂದಾಣಿಕೆಗೆ ಅಡ್ಡಿಯಾಗಬಾರದು. ದಾಂಪತ್ಯವೆಂಬುದು ಪರಸ್ಪರ ಹೊಂದಾಣಿಕೆ. ಇಲ್ಲಿ ಪತಿ ಪತ್ನಿ ಇಬ್ಬರಲ್ಲಿಯೂ ನೂರಕ್ಕೆ ನೂರರಷ್ಟು ಸಮಾನ ಅಂಶಗಳನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ.
ಭಿನ್ನಾಭಿಪ್ರಾಯಗಳು ಬಗೆಹರಿಯದೇ ಇದ್ದರೆ ಅದು ಬೇರೆ ಮಾತು. ಆದರೆ ಸಣ್ಣಪುಟ್ಟ ಅಭಿಪ್ರಾಯ ಭೇದಗಳನ್ನು ದೊಡ್ಡದು ಮಾಡಿಕೊಳ್ಳುವುದು ಸಂಸಾರದ ಸರಿಗಮದಲ್ಲಿ ಅಪಸ್ವರಕ್ಕೆ ನಾಂದಿ.
ಆಪ್ತ ಸಮಾಲೋಚಕರ ಬಳಿಗೆ ಪತಿ ಪತ್ನಿ ದೂರುಗಳ ಹೊರೆಯನ್ನೆ ಹೊತ್ತು ತರುತ್ತಾರೆ. ತನ್ನದೇನೂ ತಪ್ಪಿಲ್ಲ ಎನ್ನುವುದು ಇಬ್ಬರ ವಾದ. ಆದರೆ ಸಾಮಾನ್ಯವಾಗಿ ಇಬ್ಬರಲ್ಲಿಯೂ ಅರಿತುಕೊಳ್ಳುವ ಮನೋಭಾವದ ಕೊರತೆಯಾಗಿದೆ ಎನ್ನುವುದು ಎದ್ದು ಕಾಣುವ ಅಂಶ. ಆದರೆ ಇವರಿಬ್ಬರೂ ಕುಳಿತು ಚರ್ಚಿಸುವ ಗೋಜಿಗೆ ಹೋಗಿರುವುದಿಲ್ಲ. ಸಣ್ಣ ಪುಟ್ಟ ವಿಚಾರಗಳನ್ನೇ ದೊಡ್ಡದು ಮಾಡಿರುತ್ತಾರೆ.
*ನನಗೆ ಎದುರುತ್ತರ ನೀಡುತ್ತಾಳೆ, ವಾದಕ್ಕೆ ನಿಲ್ಲುತ್ತಾಳೆ
*ಮನೆಗೆಲಸ ಸರಿಯಾಗಿ ಮಾಡುವುದಿಲ್ಲ.
*ನನ್ನ ಕುಟುಂಬವನ್ನು ದೂಷಿಸುತ್ತಾಳೆ
*ಮಾತು ಮಾತಿಗೂ ತವರಿಗೆ ಹೋಗುತ್ತೇನೆ ಎನ್ನುತ್ತಾಳೆ.
*ತಾನು ಗಳಿಸಿದ ಹಣವನ್ನೆಲ್ಲಾ ತನ್ನ ತವರು ಮನೆಗೆ ನೀಡುತ್ತಾಳೆ.
*ವಿಪರೀತ ಖರ್ಚು ಮಾಡುತ್ತಾಳೆ.
*ನನ್ನನ್ನು ಹೇಳದೇ ಕೇಳದೆ ಹೊರಗೆ ತಿರುಗಾಡಲು ಹೋಗುತ್ತಾಳೆ.
*ಪದೇ ಪದೇ ನನ್ನ ಬಗ್ಗೆ ಅನುಮಾನಪಡುತ್ತಾಳೆ ಇತ್ಯಾದಿ..
*ಪದೇ ಪದೇ ನನ್ನ ತವರು ಮನೆಯವರನ್ನು ಹೀಯಾಳಿಸುತ್ತಾರೆ.
*ಮದುವೆ ಸಂದರ್ಭದಲ್ಲಿ ಸರಿಯಾಗಿ ನಡೆಸಿಕೊಳ್ಳಲಿಲ್ಲವೆಂದು ಆರೋಪಿಸುತ್ತಾರೆ.
*ನಾನೂ ಹೊರಗೆ ದುಡಿಯಲು ಹೋಗುತ್ತೇನೆ. ಆದರೂ ಮನೆಗೆ ಬಂದು ಕೆಲಸವನ್ನು ಮಾಡಬೇಕು. ಇದರಲ್ಲಿ ಅವರ ಕಿಂಚಿತ್ತೂ ಸಹಕಾರವಿಲ್ಲ.
*ರಜಾ ದಿನಗಳಂದೂ ಜೊತೆಯಲ್ಲಿ ತಿರುಗಾಡಲು ಹೊರಗಡೆ ಕರೆದುಕೊಂಡು ಹೋಗುವುದಿಲ್ಲ.
*ಪ್ರತಿಯೊಂದು ವಿಷಯದಲ್ಲಿಯೂ ನಾನೇ ಸರಿ ಎಂದು ಮೊಂಡು ವಾದ ಮಾಡುತ್ತಾರೆ.
*ಭವಿಷ್ಯತ್ತಿಗಾಗಿ ಹಣವನ್ನು ಕೂಡಿಡುವುದಿಲ್ಲ.
*ನನ್ನ ಮತ್ತು ಮಕ್ಕಳ ಯೋಗಕ್ಷೇಮವನ್ನು ವಿಚಾರಿಸುವುದೇ ಇಲ್ಲ ಇತ್ಯಾದಿ..
ಪರಸ್ಪರರಲ್ಲಿ ಅವರವರ ಆರೋಪಗಳ ಬಗ್ಗೆ ವಿಚಾರಿಸಿದಾಗ :ನಾನು ಹಾಗೆ ಮಾಡುವುದೆ ಇಲ್ಲ ’ಎಂದು ಹೇಳುತ್ತಾರೆ.
ಇಂತಹ ಸಂದರ್ಭದಲ್ಲಿ ಅವರಿಬ್ಬರನ್ನೂ ಜೊತೆಗೆ ಕೂರಿಸಿಕೊಂಡು ಸಮಾಲೋಚನೆಯಲ್ಲಿ ತೊಡಗಿದ್ದಾಗ ಇಬ್ಬರ ನಡುವೆಯೂ ಪರಸ್ಪರ ವಾಗ್ವಾದವೇ ನಡೆದು ಅದು ತಾರಕಕ್ಕೆ ಹೋಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಆಪ್ತ ಸಮಾಲೋಚಕರು ಇಬ್ಬರ ದೂರುಗಳನ್ನು ಪಟ್ಟಿ ಮಾಡಿಕೊಂಡು ಅವುಗಳನ್ನು ಇಬ್ಬರೂ ಪರಸ್ಪರ ನಿವಾರಣೆ ಮಾಡಿಕೊಂಡು ಹೊಂದಾಣಿಕೆಯಿಂದ ಹೋಗಬಹುದಾದ ಸಾಧ್ಯತೆಗಳ ಬಗ್ಗೆ ಮಾತನಾಡುವುದು ಸೂಕ್ತ.
ಇಬ್ಬರೂ ಹೊಂದಾಣಿಕೆಯಿಂದ ಹೋಗುವುದು ಸೂಕ್ತ. ಪರಸ್ಪರ ಆಸೆ ಆಕಾಂಕ್ಷೆಗಳನ್ನು ಗೌರವಿಸುವುದು ಸೂಕ್ತ ಎಂದು ತಿಳಿ ಹೇಳಬೇಕಾಗುತ್ತದೆ. ಇಬ್ಬರಲ್ಲಿಯ ಎದ್ದು ಕಾಣುವ ತಪ್ಪುಗಳನ್ನು ಹೇಳಿ ಅದರ ಬಗ್ಗೆ ಅವರು ತಿದ್ದಿಕೊಳ್ಳುವಂತೆ ಮಾಡುವುದು ಅಗತ್ಯವಾಗಿರುತ್ತದೆ. ದಾಂಪತ್ಯದಲ್ಲಿ ಅನಗತ್ಯವಾದ ಅಹಂ ದಂಪತಿಗಳನ್ನು ಒಂದು ಮಾಡಲು ಅಡ್ಡಿಯಾಗುತ್ತದೆ ಎಂಬ ಅಂಶವನ್ನು ಮನದಟ್ಟು ಮಾಡಬೇಕಾಗುತ್ತದೆ.
ಅವರಿಬ್ಬರೂ ಹೊಂದಾಣಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು. ನಿರ್ದಿಷ್ಟ ಅವಧಿಯ ನಂತರ ಮತ್ತೆ ಬಂದು ಕಾಣಲು ತಿಳಿಸಬೇಕು. ಆ ಸಂದರ್ಭದಲ್ಲಿ ಬಂಆಗ ಅವರಿಬ್ಬರಲ್ಲಿ ಹೊಂದಾಣಿಕೆಯಾಗಿರುವ ಅಂಶ ಎಷ್ಟೆಂದು ತಿಳಿದುಕೊಳ್ಳಬೇಕು. ಕೊರತೆ ಎನ್ನಿಸಿದರೆ ಮತ್ತೆ ಸಲಹೆ ನೀಡಿ ಮತ್ತೆ ಕಾಣಲು ತಿಳಿಸಬೇಕು. ಪದೇ ಪದೇ ದಂಪತಿಗಳು ಆಪ್ತ ಸಮಾಲೋಚನೆಗೆ ಬಂದರೂ ಅವರಿಬ್ಬರಲ್ಲಿ ಹೊಂದಾಣಿಕೆಯ ಕೊರತೆ ತೀವ್ರವಾಗಿದೆ ಎನ್ನಿಸಿದರೆ ಆಗ ವಿಚ್ಛೇದನ ಅನಿವಾರ್ಯವಾಗುತ್ತದೆ.
-ಕುಮಾರ ರೈ
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...