mail-img print-img

ಹೆಣ್ಣಿನ ಮುಂದೆ ಹೊಸ ಸವಾಲುಗಳು!

ಗುರುವಾರ - ಸೆಪ್ಟೆಂಬರ್ -02-2010

‘ತಾಯಂದಿರ ದಿನ ’‘ತಂದೆಯ ದಿನ ’-ಹೀಗೆ ಹತ್ತು ಹಲವಾರು ದಿನಗಳನ್ನು ಹೂ ಗುಚ್ಛಗಳ ವಿನಿಮಯ, ಎಸ್.ಎಮ್.ಎಸ್ ಮುಂತಾದವುಗಳ ಮೂಲಕ ಶುಭಾಶಯ ವಿನಿಮಯ ಮಾಡಿ ಜಗತ್ತಿನಾದ್ಯಂತ ಆಚರಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗೆ ಸಂಭ್ರಮಿಸುವ ಇಂತಹ ದಿನಗಳು ಚಾರಿತ್ರಿಕ ವಾಗಿ ಯಾವುದೇ ಬದಲಾವಣೆಯನ್ನು ವಾಸ್ತವದಲ್ಲಿ ತರಲು ಸಾಧ್ಯವಿಲ್ಲ ಎಂಬುದೂ ಕೂಡ ನಮಗೀಗಾಗಲೇ ತಿಳಿದಿರುವ ವಿಚಾರ.

ಬಡತನದ ರೇಖೆಯ ಕೆಳಗೆ ಬದುಕುವ, ಅಸಂಘಟಿತ ಕ್ಷೇತ್ರದಲ್ಲಿ ದುಡಿಯುವ ಮಹಿಳೆಯರ ಬದುಕಿನಲ್ಲಂತೂ ಇಂತಹ ದಿನಗಳು ಯಾವ ಬದಲಾವಣೆಯನ್ನು ತರದು. ಅವರ ಬದುಕಿನ ಸಂಕೀರ್ಣ ತೆಯು ಇಂತಹ ದಿನಗಳ ಶುಭಾಶಯಗಳ ಒಣ ಮಾತುಗಳಿಂದ ಸರಳೀಕೃತಗೊಳ್ಳುವು ದಂತೂ ಸಾಧ್ಯವಿಲ್ಲದ ಮಾತಾಗಿದೆ.

70 ರ ದಶಕದಲ್ಲಿ ಕೃಷಿಯಲ್ಲಿ ದುಡಿಯುತ್ತಿದ್ದ ಮಹಿಳೆಯರ ಪ್ರಮಾಣ ಅಪಾರ ಪ್ರಮಾಣದಲ್ಲಿದ್ದರೂ ಹೊರ ಜಗತ್ತಿನಲ್ಲಿ ಉದ್ಯೋಗಿಗಳಾಗಿರುವ ಮಹಿಳೆಯರ ಸಂಖ್ಯೆ ಕಡಿಮೆ ಇತ್ತು. ಇಂದು ಖಾಸಗೀಕರಣ ಹಾಗೂ ಜಾಗತೀಕರಣದಿಂದಾಗಿ ಮಹಿಳೆಯರು ಕಾಲಿಡದ ಕ್ಷೇತ್ರಗಳೇ ಇಲ್ಲ.

ಸಂಘಟಿತ ಹಾಗೂ ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲ ಜಾತಿ-ವರ್ಗದ ಮಹಿಳೆಯರಿಗೂ ತಾಯ್ತನ ಎಂಬುದು ಲಿಂಗಾಧಾರಿತ ಸಮಾನತೆಗೆ ಸವಾಲಾಗಿರುವ ವಿಚಾರವಾಗಿದೆ. ಕುಟುಂಬದ ರಚನೆಗಳು ಹೆಣ್ಣಿನ ಶ್ರಮದ ಮೇಲೆಯೇ ಅವಲಂಬಿತವಾಗಿರುವುದಲ್ಲದೇ ಆಕೆಯ ಉದ್ಯೋಗದ ಕ್ಷೇತ್ರದಲ್ಲೂ ರಾಜಿಯಾಗುವಂತೆ ಒತ್ತಡಗಳನ್ನು ಹೇರುತ್ತಿವೆ.

ಕೆಲಸ ಬಿಡುವುದು, ಪಾರ್ಟ್ ಟೈಮ್ ಕೆಲಸ ಮಾಡುವುದು ಹೀಗೆ...

4-5 ವರ್ಷ ಉದ್ಯೋಗವಿಲ್ಲದೇ ಮನೆಯಲ್ಲಿಯೇ ಇರುವುದು ಇಂತಹ ಅನೇಕ ರಾಜಿಗಳನ್ನು ಮಾಡಿಕೊಳ್ಳುತ್ತಾ ಮಹಿಳೆಯ ಶ್ರಮವನ್ನು ಕುಟುಂಬದ ಭದ್ರ ನೆಲೆಗಾಗಿ ಮೀಸಲಾಗಿರಿಸುವುದು ಸಾಮಾನ್ಯವಾಗಿದೆ.

ಕಾರ್ಪೊರೇಟ್ ಕ್ಷೇತ್ರದಲ್ಲಿ ಮಹಿಳೆಯರ ಶ್ರಮ ಅನಿವಾರ್ಯವಾದ ಹಾಗೆ ಪ್ಲೆಕ್ಸಿ ಟೈಮ್, ಪಾರ್ಟ್‌ಟೈಮ್ ಹಾಗೂ ಮನೆಯಿಂದಲೇ ಕೆಲಸ ಮಾಡುವುದು-ಹೀಗೆ ಅನೇಕಾನೇಕ ರೀತಿಯ ಬದಲಾವಣೆಯಿಂದ ಮಹಿಳೆಯರ ಶ್ರಮವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಆದರೂ ಉದ್ಯೋಗ/ಕುಟುಂಬದ ಆಯ್ಕೆಯ ನಡುವಿನ ದ್ವಂದ್ವ ಮಹಿಳೆಯರ ಬದುಕಿನಲ್ಲಿ ಮುಂದುವರಿಯುತ್ತಲೇ ಇದೆ.

ಕಾರ್ಪೊರೇಟ್ ಜಗತ್ತಿನಲ್ಲಿ ಎಲ್ಲವೂ ಚೆನ್ನಾಗಿದೆ ಎಂದೇನೂ ಅಲ್ಲ. ಹೋರಾಟದ ಮಾತಿಗೆ ಇಲ್ಲಿ ಅರ್ಥವೇ ಇಲ್ಲ. ಬೇರೆ-ಬೇರೆ ಕ್ಷೇತ್ರದ ಮಹಿಳೆಯರು ಮನೆಗೆಲಸ ಎಂಬ ಉದ್ಯೋಗದ ಹೊರೆಯನ್ನು ನಿಭಾಯಿಸಿಕೊಂಡು ಅನೇಕ ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಎದುರಿಸಲು ಅವರು ಹೋರಾಟವನ್ನು ಕೂಡಾ ಮಾಡುತ್ತಾರೆ.

ಗಾರ್ಮೆಂಟ್ ಮಹಿಳೆಯರು, ಕೃಷಿಯಲ್ಲಿನ ರೈತ ಮಹಿಳೆಯರು, ನಗರದಲ್ಲಿ ರಸ್ತೆ ಗುಡಿಸುವ ಮಹಿಳೆಯರು ಹೀಗೆ ಅನೇಕ ಸ್ತರದ ಮಹಿಳೆ ಯರು ಒಟ್ಟಾಗಿ ಎಲ್ಲಾ ಜಾತಿ , ವರ್ಗದ ಮಹಿಳೆ ಯರಿಗೂ ಎರಡು ರೀತಿಯ ಹೊರೆಯ ಕೆಲಸದ ಸವಾಲುಗಳು ಎಂದೆಂದಿಗೂ ಎದುರಾಗುತ್ತಲೇ ಇವೆ.

ಹಾಗಿದ್ದರೆ ಇದರೆಲ್ಲರ ಸಮಸ್ಯೆಯನ್ನು ಒಟ್ಟಾಗಿ ಹೋರಾಡುವಲ್ಲಿ , ಹೊಸ ರೀತಿಯ ಹಿಂಸೆ, ಸವಾಲುಗಳನ್ನು ಎದುರಿಸುವಲ್ಲಿ ಮಹಿಳಾ ಚಳವಳಿಯ ದಾರಿ ಏನಾಗಬೇಕಾಗಿದೆ ಎಂಬುದು ಕೂಡಾ ನಮ್ಮ ಮುಂದಿರುವ ತಾರ್ಕಿಕ ಪ್ರಶ್ನೆಯಾಗಿದೆ.

ಇವತ್ತು ಎಲ್ಲಾ ಉದ್ಯೋಗ ರಂಗಗಳಲ್ಲಿ ಮಹಿಳೆಯರು ಪಾಲ್ಗೊಳ್ಳುವುದು ಅನಿವಾರ್ಯವಾದ ಹಾಗೆ, ಕುಟುಂಬದ ಅಳಿವು-ಉಳಿವಿನಲ್ಲೂ ಆಕೆಯ ಆರ್ಥಿಕ ಕೊಡುಗೆ ಅನಿವಾರ್ಯವಾಗಿದೆ. ಆಕೆಯ ಸ್ವಾತಂತ್ರ ಕೆಲವೊಮ್ಮೆ ಆಕೆಗೆ ಹೊರೆಯಾಗುವಷ್ಟು ದುರುಪಯೋಗ ಆಗುವ ರೀತಿಯಲ್ಲಿ ಎಲ್ಲಾ ಸ್ತರದ ಕುಟುಂಬದ ಮಹಿಳೆಯರ ಮೇಲೂ ಕೆಲಸದ ಒತ್ತಡಗಳು ಬೀಳತೊಡಗಿದೆ.

ಇಂತಹ ಸ್ಥಿತಿಯಲ್ಲಿ ಪುರುಷರನ್ನು ಕುಟುಂಬದ ಒಳಗಿನ, ಸ್ತ್ರೀವಾದಿ ಜಗತ್ತಿನ ಆವರಣದೊಳಕ್ಕೆ ಎಳೆಯುವಂತಹ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಪ್ರಯತ್ನಗಳು ನಡೆಯಬೇಕಾಗಿದೆ. ಅದು ಮನೆಯಲ್ಲಿ ತಂದೆಯ ಪಾತ್ರವನ್ನು ಬಲಪಡಿಸು ವುದಾಗಿರಬಹುದು, ಸಮಾನ ಸಂಗಾತಿ ತನವನ್ನು ನಿರೀಕ್ಷಿಸುವುದಾಗಿರಬಹುದು, ಮನೆಯಿಂದ ಕೆಲಸ ಮಾಡುವುದನ್ನು ಬೆಂಬಲಿಸವುದಾಗಿರಬಹುದು ಇಂತಹ ಪ್ರಯತ್ನಗಳು ಇಂದು ನಡೆಯುವ ಅಗತ್ಯವಿದೆ.

ಈ ಕೆಲಸ ವೈಯಕ್ತಿಕ ನೆಲೆಯಲ್ಲಿ ನಡೆದರೆ ಸಾಲದು. ಮುಖ್ಯ ವಾಹಿನಿಯ ಸಂಸ್ಕೃತಿಯ ಪಿತೃಪ್ರಧಾನ ಮೌಲ್ಯದ ಸಾಂಸ್ಕೃತಿಕ ಮೌಲ್ಯಗಳ ಸವಾಲುಗಳನ್ನು ಎದುರಿಸುವಲ್ಲಿ ಚಳವಳಿ, ಸರಕಾರ, ಸಮುದಾಯ ಒಟ್ಟಾಗಿ ಪ್ರಯತ್ನಿಸುವ ತುರ್ತು ನಮ್ಮ ಮುಂದಿದೆ.

-ಮಾನಸ                                                                                                                                  

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್