15 ದಿನಗಳೊಳಗೆ ಇನ್ನೋರ್ವ ಉಪಲೋಕಾಯುಕ್ತರ ನೇಮಕ
ಬೆಂಗಳೂರು, ಸೆ.3: ಅದಿರು ರಫ್ತು ತಡೆಯಲು ಕಟಿಬದ್ಧವಾಗಿರುವ ರಾಜ್ಯ ಬಿಜೆಪಿ ಸರಕಾರಕ್ಕೆ ಕೇಂದ್ರ ಸರಕಾರ ಅಡ್ಡಿಯುಂಟು ಮಾಡುತ್ತಿದ್ದು, ಲಂಚ ಪಡೆದು ಗಣಿಗಾರಿಕೆಗೆ ಪರವಾನಿಗೆ ಯನ್ನು ನೀಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದು, ಬೇರೆ ರಾಜ್ಯಗಳಲ್ಲಿ ಅವ್ಯಾಹತವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ, ಅದರ ಗೋಜಿಗೆ
|
» ಅಕ್ರಮ ಗಣಿಗಾರಿಕೆ ಯಲ್ಲಿ ತೊಡಗಿರುವ ಪ್ರಭಾವಿ ನಾಯಕರನ್ನು ಬೆತ್ತಲೆಗೊಳಿಸದಿದ್ದರೆ ತಾನು ಯಡಿಯೂರಪ್ಪನೇ ಅಲ್ಲ.
|
ಹೋಗದ ಕೇಂದ್ರ ಕೇವಲ ಕರ್ನಾಟಕದ ಮೇಲೆ ಹರಿಹಾಯುತ್ತಿರು ವುದಕ್ಕೆ ಕಿಡಿಗಾರಿದ್ದಾರೆ.
ಕೇಂದ್ರ ಸರಕಾರಕ್ಕೆ ಲಂಚ ಕೊಡದಿ ದ್ದರೆ ಪರವಾನಿಗೆ ಸಿಗುವುದಿಲ್ಲ ಎಂಬು ದಕ್ಕೆ ರಾಜ್ಯದ ಕುದುರೆಮುಖ ಅದಿರು ಕಂಪೆನಿ, ಜಿಂದಾಲ್, ವಿಐಎಸ್‌ಎಲ್ ಮೊದಲಾದ ಸಂಸ್ಥೆಗಳೇ ತಾಜಾ ಉದಾಹರಣೆಗಳಾಗಿವೆ. ಈ ಸಂಸ್ಥೆಗಳು ಲಂಚ ಕೊಟ್ಟಿಲ್ಲ ಎಂಬ ಕಾರಣಕ್ಕೆ ಕೇಂದ್ರ ಪರವಾನಗಿ ನೀಡಿಲ್ಲ ಎಂದು ಯಡಿಯೂರಪ್ಪ ಟೀಕಿಸಿದರು. ಗಣಿಗಾರಿಕೆಯ ಸಂಬಂಧ ಪ್ರತಿಪಕ್ಷ ಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಜೆಪಿ ಸರಕಾರದ ವಿರುದ್ಧ ನಡೆಸಿರುವ ದಾಳಿಗೆ ಶುಕ್ರವಾರ ಪ್ರತಿದಾಳಿ ನಡೆಸಿ ರುವ ಮುಖ್ಯಮಂತ್ರಿ ಯಡಿಯೂರಪ್ಪ, ಅಕ್ರಮ ಗಣಿಗಾರಿಕೆಯನ್ನು ಮುಚ್ಚಿ ಹಾಕಲು ಕೇಂದ್ರದ ಸಚಿವರು ಹಾಗೂ ರಾಜ್ಯದ ಮಾಜಿ ಸಚಿವರು ತನ್ನ ಕೈಕಾಲನ್ನು ಹಿಡಿಯುತ್ತಿದ್ದಾರೆ ಎಂದು ಹೊಸ ಬಾಂಬನ್ನು ಸಿಡಿಸಿದರು.
ಒಂದೆಡೆ ಅಕ್ರಮವನ್ನು ಮುಚ್ಚಿ ಹಾಕಲು ಕೈಕಾಲು ಹಿಡಿಯುತ್ತಿರುವ ಪ್ರತಿಪಕ್ಷಗಳ ಪ್ರಭಾವಿ ನಾಯಕರು, ಇನ್ನೊಂದೆಡೆ ತನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇನ್ನು ತಾನು ಸುಮ್ಮನೆ ಕೂರುವುದಿಲ್ಲ. ಅಕ್ರಮ ಗಣಿಗಾರಿಕೆ ಯಲ್ಲಿ ತೊಡಗಿರುವ ಪ್ರಭಾವಿ ನಾಯಕರನ್ನು ಬೆತ್ತಲೆಗೊಳಿಸದಿದ್ದರೆ ತಾನು ಯಡಿಯೂರಪ್ಪನೇ ಅಲ್ಲ ಎಂದು ಅವರು ಬಹಿರಂಗ ಸವಾಲು ಹಾಕಿದ್ದಾರೆ. ಅಕ್ರಮ ಗಣಿಗಾರಿಕೆಯ ಸಂಬಂಧ ತನ್ನ ಮೇಲೆ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಾಸ್ತವಾಂಶವನ್ನು ಮಾಧ್ಯಮದ ಮುಂದಿಡುವ ಸಲುವಾಗಿ ಶುಕ್ರವಾರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾತ್ರಿ ಒತ್ತಡ, ಬೆಳಗ್ಗೆ ಟೀಕೆ
ಅಕ್ರಮ ಗಣಿಗಾರಿಕೆಯಲ್ಲಿ ತಮ್ಮ ಹಾಗೂ ತಮ್ಮ ಮಕ್ಕಳನ್ನು ರಕ್ಷಿಸಲು ಮುಂದಾಗಿರುವ ಕೇಂದ್ರದ ಸಚಿವರು ಮತ್ತು ರಾಜ್ಯದ ಮಾಜಿ ಸಚಿವರು, ಹಗರಣ ಬಹಿರಂಗವಾಗದಂತೆ ನನ್ನ ಮೇಲೆ ಒತ್ತಡ ತರುತ್ತಿದ್ದಾರೆ. ರಾತ್ರಿ ಒತ್ತಡ ತರುತ್ತಿದ್ದರೆ, ಬೆಳಗ್ಗೆ ಬಹಿರಂಗವಾಗಿ ಸರಕಾರವನ್ನು ಟೀಕಿಸುತ್ತಿದ್ದಾರೆ ಎಂದ ಯಡಿಯೂರಪ್ಪ, ಇನ್ನು ತಾನು ಈ ನಾಯಕರನ್ನು ಸುಮ್ಮನೆಬಿಡುವುದಿಲ್ಲ. ಇವರ ಜನ್ಮವನ್ನು ಜಾಲಾಡುತ್ತೇನೆ ಎಂದು ಎಚ್ಚರಿಸಿದರು.
ಎರಡು ಕಂಪೆನಿಗಳಿಗೆ ಅನುಮತಿ
ತಾನು ಅಧಿಕಾರಕ್ಕೆ ಬಂದನಂತರ ಯಾವುದೇ ಗಣಿಗಾರಿಕೆಗೆ ಅನುಮತಿ ನೀಡಿಲ್ಲ ಎಂದು ಪುನರುಚ್ಚರಿಸಿದ ಯಡಿಯೂರಪ್ಪ, ತನ್ನ ಅಧಿಕಾರಾವಧಿಯಲ್ಲಿ ಮೌಲ್ಯವರ್ಧಿತ ಆದಾಯ ಹೆಚ್ಚಿಸುವ ಉದ್ದೇಶಕ್ಕಾಗಿ ಸರಕಾರಿ ಸ್ವಾಮ್ಯದ ಹಟಿ ್ಟಗೋಲ್ಡ್ ಮೈನ್ ಮತ್ತು ಖಾಸಗಿ ಸ್ವಾಮ್ಯದ ಸುಶೀಲಮ್ಮ ಆ್ಯಂಡ್ ಕಂಪೆನಿ ಎಂಬ ಎರಡು ಸಂಸ್ಥೆಗಳಿಗೆ ಗಣಿಗಾರಿಕೆಯ ಗುತ್ತಿಗೆಗೆ ಅನುಮತಿ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕೈಗಾರಿಕೆಗಳಿಗಾಗಿ ಕೇಂದ್ರಕ್ಕೆ ಶಿಫಾರಸು:
ಹಲವು ವರ್ಷಗಳ ಕಾಲ ರಾಜ್ಯವನ್ನಾಳಿದ ಕಾಂಗ್ರೆಸ್, ಮಾಡಿದ ಪಾಪ ಕೂಸನ್ನು ತನ್ನ ಮೇಲೆ ಕೂರಿಸಲು ಮುಂದಾಗಿದ್ದಾರೆ. ಆದರೆ ತನ್ನ ಅಧಿಕಾರಾವಧಿಯಲ್ಲಿ ಯಾವುದೇ ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದ ಯಡಿಯೂರಪ್ಪ, ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಿದ್ಧ ವಸ್ತುಗಳ ಉತ್ಪಾದನೆಗೆ ಅವಕಾಶವಾಗುವಂತೆ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗಿರುವ ಹಲವು ಕಂಪೆನಿಗಳಿಗೆ ಗಣಿಗಾರಿಕೆ ನಡೆಸಲು ಅನುಮತಿ ಕೋರಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದೇನೆ ಹೊರತು ರಫ್ತು ನಿಷೇಧಕ್ಕೆ ಯಾವುದೇ ಅಕ್ರಮಕ್ಕೆ ಅನುವು ಮಾಡಿಕೊಟ್ಟಿಲ್ಲ ಎಂದರು.
ಅದಿರು ರಫ್ತಿಗೆ ಒತ್ತಡ ಹೇರಲಿ: ಬಿಜೆಪಿ ಸರಕಾರ ರಾಜ್ಯದಲ್ಲಿ ನಡೆಸುತ್ತಿರುವ ಜನಪರವಾದ ಕೆಲಸ ಕಾರ್ಯವನ್ನು ಸಹಿಸಲಾಗದ ಕಾಂಗ್ರೆಸ್-ಜೆಡಿಎಸ್, ಇಲ್ಲಸಲ್ಲದ ಆರೋಪದಲ್ಲಿ ತೊಡಗಿವೆೆ. ಇವರಿಗೆ ನಿಜವಾದ ಕಾಳಜಿ ಇದ್ದರೆ ಅದಿರು ರಫ್ತು ನಿಷೇಧಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದು ಯಡಿಯೂರಪ್ಪ ಸವಾಲು ಹಾಕಿದರು. ಕಾಂಗ್ರೆಸ್ ತನ್ನ ಪಾದಯಾತ್ರೆಯ ಸಂದರ್ಭದಿಂದ ‘ಗಣಿ’ ವಿಷಯದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ. ಅದರೊಂದಿಗೆ ಜೆಡಿಎಸ್ ಕೂಡಾ ಸೇರಿಕೊಂಡಿದೆ. ಇವರಿಗೆ ಮಾಡಲು ಬೇರೆ ಕೆಲಸವಿಲ್ಲ ಎಂದು ಅವರು ಲೇವಡಿ ಮಾಡಿದರು.
ಸುಪ್ರೀಂಕೋರ್ಟಿನವರೆಗೂ ಹೋರಾಟ
ರಾಜ್ಯದಲ್ಲಿ ಅದಿರು ರಫ್ತು ನಿಷೇಧಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್‌ರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಈಗ ಕೇಂದ್ರ ಸರಕಾರ ತಮ್ಮ ನಿಲುವಿನ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದೆ. ಆದರೆ ತಾವು ಇದನ್ನು ಇಲ್ಲಿಗೇ ಬಿಡುವುದಿಲ್ಲ ಎಂದು ಗುಡುಗಿದ ಮುಖ್ಯಮಂತ್ರಿ ಯಡಿಯೂರಪ್ಪ, ಈ ಕುರಿತ ಹೋರಾಟವನ್ನು ಸುಪ್ರೀಂ ಕೋರ್ಟ್‌ನ ವರೆಗೂ ಕೊಂಡೊಯ್ಯುವುದಾಗಿ ಹೇಳಿದರು.
ಗಣಿಗಾರಿಕೆಗೆ ವಿರೋಧವಿಲ್ಲ
ಬಿಜೆಪಿ ಸರಕಾರ ಗಣಿಗಾರಿಕೆಯನ್ನು ವಿರೋಧಿಸುವುದಿಲ್ಲ. ಅದನ್ನು ನಿಷೇಧಿಸಬೇಕು ಎಂಬುದು ಕೂಡಾ ನಮ್ಮ ಪಕ್ಷದ ನಿಲುವಲ್ಲ. ಆದರೆ ಅದಿರು ರಫ್ತಾಗಬಾರದು ಎಂಬುದು ತಮ್ಮ ನಿಲುವು. ರಾಜ್ಯದ ನೈಸರ್ಗಿಕ ಸಂಪತ್ತು ಇಲ್ಲಿಯೇ ಬಳಕೆ ಆಗಬೇಕು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚು ಲಾಭ ಆಗಲಿದೆ ಎಂಬುದು ತಮ್ಮ ಅಭಿಪ್ರಾಯ ಎಂದು ಯಡಿಯೂರಪ್ಪ ತಿಳಿಸಿದರು. ಅಕ್ರಮ ಗಣಿಗಾರಿಕೆಯನ್ನು ಮುಚ್ಚಿಹಾಕಲು ಕೇಂದ್ರದ ಸಚಿವರು ಹಾಗೂ ರಾಜ್ಯದ ಮಾಜಿ ಸಚಿವರು ತನ್ನ ಕೈಕಾಲನ್ನು ಹಿಡಿಯುತ್ತಿದ್ದಾರೆ .
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...