mail-img print-img

ಗುಜರಾತ್ ಹತ್ಯಾಕಾಂಡ: ಸತ್ಯ ಬಹಿರಂಗಕ್ಕೆ ಝಡಾಫಿಯಾ ಸಿದ್ಧ?

ಶನಿವಾರ - ಸೆಪ್ಟೆಂಬರ್ -04-2010

ಅಹ್ಮದಾಬಾದ್, ಸೆ.3: ಗುಜರಾತ್ ದಂಗೆ ಪ್ರಕರಣಗಳ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿರುವ ವಿಶೇಷ ತನಿಖೆ ತಂಡ (ಸಿಟ್) ತನ್ನ ಕೊರಳ ಸುತ್ತ ಕುಣಿಕೆಯನ್ನು ಬಿಗಿಗೊಳಿಸಿರುವುದರಿಂದ ಕಂಗಾಲಾಗಿರುವ ರಾಜ್ಯದ ಮಾಜಿ ಗೃಹ ಸಹಾಯಕ ಸಚಿವ ಗೋರ್ಧನ್ ಝಡಾಫಿಯಾ, ಎಲ್ಲವನ್ನೂ ಬಹಿರಂಗ ಪಡಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಹೀಗಾದಲ್ಲಿ ಅವರ ಹೇಳಿಕೆಯು ಮುಖ್ಯಮಂತ್ರಿ ನರೇಂದ್ರ ಮೋದಿಯವರ ಕೊರಳಿಗೆ ಉರುಳಾಗುವ ಸಂಭವವಿದೆ.

ಝಡಾಫಿಯಾ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಾದ ಎಂ.ಕೆ. ಟಂಡನ್ ಹಾಗೂ ಪಿ.ಬಿ. ಗೊಂಡಿಯಾ ದಂಗೆಯಲ್ಲಿ ವಹಿಸಿರುವ ಪಾತ್ರಗಳ ಕುರಿತು ತನಿಖೆಗಾಗಿ ಸಿಟ್‌ಗೆ ಹೆಚ್ಚಿನ ಸಮಯಾವಕಾಶವನ್ನು ಸುಪ್ರೀಂ ಕೋರ್ಟ್ ಮಂಜೂರು ಮಾಡಿದ ಬಳಿಕ, ಝಡಾಫಿಯಾ ತನಿಖೆ ಸಂಸ್ಥೆಗೆ 10 ಪುಟಗಳ ಪತ್ರವೊಂದನ್ನು ಬರೆದು, ತಾನು ಪ್ರಕರಣಗಳ ಸಾಕ್ಷಿಯಾಗಲು ಬಯಸಿದ್ದೇನೆ. ಆದುದರಿಂದ ವಿಚಾರಣೆಗಾಗಿ ಇನ್ನೊಮ್ಮೆ ಸಮನ್ಸ್ ಕಳುಹಿಸಬೇಕೆಂದು ವಿನಂತಿಸಿದ್ದಾರೆ. ಈಗಾಗಲೇ ಸಿಟ್ ಝಡಾಫಿಯಾರನ್ನು ಮೂರು ಬಾರಿ ಪ್ರಶ್ನಿಸಿದೆ.

ಝಡಾಫಿಯಾ ಮುಖ್ಯಮಂತ್ರಿ ಮೋದಿಯವರ ಮೇಲೆ ಕ್ರಿಮಿನಲ್ ಹೊಣೆಗಾರಿಕೆಯನ್ನು ಹೊರಿಸ ಬಯಸಿರುವುದು ಅವರ ಪತ್ರದಿಂದ ಸ್ಪಷ್ಟವಾಗಿದೆ ಎಂದು ಸಿಟ್‌ನ ಮೂಲಗಳು ತಿಳಿಸಿವೆ.
ಝಡಾಫಿಯಾರನ್ನು ವಿಚಾರಣೆಗೆ ಕರೆಸಿದಲ್ಲಿ, ಗೋಧ್ರಾದಲ್ಲಿ ಸಬರಮತಿ ಎಕ್ಸ್‌ಪ್ರೆಸ್ ದಹನವಾಗಿ 59 ಪ್ರಯಾಣಿಕರು ಅಸು ನೀಗಿದ ಬಳಿಕ 2007ರ ಫೆ.27ರಂದು ಸಂಜೆ ನಡೆದ ವಿವಾದಿತ ಸಭೆಯೊಂದರ ಬಗ್ಗೆ ಅವರು ಬೆಳಕು ಚೆಲ್ಲಬಹುದೆಂದು ಹೇಳಲಾಗಿದೆ. ಈ ಹಿಂದಿನ ವಿಚಾರಣೆಗಳ ವೇಳೆ ಈ ಸಭೆಯ ಬಗ್ಗೆ ತನಗೇನೂ ತಿಳಿದಿಲ್ಲವೆಂದು ಅವರು ಹೇಳಿದ್ದರು. ಮರುದಿನ ಹಿಂಸೆ ಸ್ಫೋಟಗೊಳ್ಳಲು ಕಾರಣವಾದ ಬಂದ್ ಕರೆಗೆ ತನ್ನ ಬೆಂಬಲವಿರಲಿಲ್ಲವೆಂದು ಝಡಾಫಿಯ ಸ್ಪಷ್ಟಪಡಿಸಿದ್ದರು.

ಳೆದ ವರ್ಷ ದಾಖಲಿಸಿದ್ದ ಹೇಳಿಕೆಗಳಲ್ಲಿ ಝಡಾಫಿಯಾ ಮೋದಿಯವರ ವಿರುದ್ಧ ಒಂದು ಶಬ್ದವನ್ನೂ ಹೇಳಿರಲಿಲ್ಲ. ಆದಾಗ್ಯೂ, ಝಡಾಫಿಯಾ ದಂಗೆಯ ಪಿತೂರಿಯ ಭಾಗವಾಗಿದ್ದರೆಂದು ಹಕ್ಕು ಗುಂಪು ಜನ ಸಂಘರ್ಷ ಮೋರ್ಚಾ (ಜೆಎಸ್‌ಎಂ) ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ್ದ ಅವರು, ತಾನು ಜೆಎಸ್‌ಎಂ ಪರ ವಕೀಲ ಮುಕುಲ್ ಸಿನ್ಹಾರನ್ನು ಭೇಟಿಯಾಗಿದ್ದ ವೇಳೆ, ತನಗೆ ಏಕಾಂಗಿಯಾಗಿ ಮೋದಿ ಸರಕಾರವನ್ನು ಉರುಳಿಸುವ ಸಾಧ್ಯತೆಯಿದೆಯೆಂದು ಅವರು ಸಲಹೆ ನೀಡಿದ್ದರೆಂದು ಸಿಟ್‌ಗೆ ತಿಳಿಸಿದ್ದರು. ಆದಾಗ್ಯೂ, ತಾನು ಸರಕಾರದ ಕ್ರಮಗಳನ್ನು ವಿರೋಧಿಸುತ್ತಿದ್ದು, ಪ್ರಜಾಸತ್ತಾತ್ಮಕ ರೀತಿಯಲ್ಲಿ ವಿರೋಧ ಮುಂದುವರಿಸುವುದಾಗಿ ಸಿನ್ಹಾಗೆ ತಿಳಿಸಿದ್ದೆನೆಂದು ಅವರೀಗ ಪ್ರತಿಪಾದಿಸುತ್ತಿದ್ದಾರೆ. ಝಡಾಫಿಯಾ, ಟಂಡನ್ ಹಾಗೂ ಗೊಂಡಿಯಾರ ವಿರುದ್ಧ ತನಗೆ ಸಾಕ್ಷಗಳು ಲಭಿಸಿವೆಯೆಂದು ದಂಗೆಗೆ ಬಲಿಯಾದ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯವರ ಪತ್ನಿ ಝಕಿಯ್ಯಿ ಜಾಫ್ರಿ ಸಲ್ಲಿಸಿದ ದೂರಿನ ಬಗ್ಗೆ ತನ್ನ ತನಿಖೆ ವರದಿಯಲ್ಲಿ ಸಿಟ್ ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ಝಕಿಯ್ಯ, ಪ್ರಕರಣದಲ್ಲಿ ಮೋದಿ, ಝಡಾಫಿಯಾ ಹಾಗೂ ಇತರ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳ ಸಹಿತ ಒಟ್ಟು 63 ಮಂದಿಯ ವಿರುದ್ಧ ದೂರು ಸಲ್ಲಿಸಿದ್ದರು. ಪ್ರಕರಣದ ಆರೋಪಿಯಾಗಿ ಝಡಾಫಿಯಾರ ಹೇಳಿಕೆಗಿಂತ ಸಾಕ್ಷಿಯಾಗಿ ಹೆಚ್ಚಿನ ಮಹತ್ವ ಪಡೆಯುವ ಸಾಧ್ಯತೆಯಿರುವುದರಿಂದ ಅವರು ಸಿಟ್‌ನ ಮುಂದೆ ಹೇಳಿಕೆ ನೀಡಲು ಅವಸರಿಸುತ್ತಿದ್ದಾರೆನ್ನಲಾಗಿದೆ. ನರೋಡಾ ಪ್ರಕರಣದ ಆರೋಪಿಗಳಾದ ಮಾಜಿ ಸಚಿವೆ ಮಾಯಾ ಕೊಡ್ನಾನಿ, ಹಿರಿಯ ವಿಎಚ್‌ಪಿ ನಾಯಕ ಜೈದೀಪ್ ಪಟೇಲ್ ಹಾಗೂ ಬಾಬು ಬಜರಂಗಿಯ ವಿಚಾರಣೆಯನ್ನು ಸಿಟ್ ಈಗಾಗಲೇ ನಡೆಸಿದೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್