mail-img print-img

ಶರಣಾಗುವ ನಕ್ಸಲೀಯರಿಗೆ 2 ಲಕ್ಷ ರೂ. ಸಾಲ ಸೌಲಭ್ಯ: ಪೊಲೀಸ್ ಇಲಾಖೆ

ಶನಿವಾರ - ಸೆಪ್ಟೆಂಬರ್ -04-2010

ಬೆಂಗಳೂರು, ಸೆ. 3: ಶರಣಾಗಲಿಚ್ಛಿಸುವ ನಕ್ಸಲೀಯರ ವೃತ್ತಿಪರ ತರಬೇತಿಗೆ 2 ಸಾವಿರ ರೂ. ಸಹಾಯಧನ, 2 ಲಕ್ಷ ರೂ.ಸಾಲ ಸೌಲಭ್ಯ, ಆಯುಧ- ಸ್ಫೋಟಕಗಳು ಮತ್ತು ಸಂಪರ್ಕ ಸಾಧನಗಳನ್ನು ಒಪ್ಪಿಸಿದರೆ 25 ಸಾವಿರ ರೂ.ನಗದು ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿದೆ. ಈ ಸಂಬಂಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಜಯ್‌ಕುಮಾರ್ ಸಿಂಗ್ ಪ್ರಕಟನೆ ಹೊರಡಿಸಿದ್ದು, ಉಳಿದ ನಕ್ಸಲೀಯರನ್ನು ಹಿಡಿಯಲು ಶರಣಾದವರು ಮಾಹಿತಿ ಒದಗಿಸಿದರೆ ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುವುದು. ಶರಣಾದ ವ್ಯಕ್ತಿಗಳ ವಿರುದ್ಧ ದಾಖಲಾಗಿರುವ ಎಲ್ಲ ಮೊಕದ್ದಮೆಗಳನ್ನು ಹಿಂಪಡೆಯಲಾಗುವುದು.

ಶರಣಾಗುವ ವ್ಯಕಿಗಳು ಕರ್ನಾಟಕ ರಾಜ್ಯಕ್ಕೆ ಸೇರಿದವರಾಗಿರಬೇಕು ಎಂದು ತಿಳಿಸಿದ್ದಾರೆ. 2011ರ ಮೇ ತಿಂಗಳ ವರೆಗೆ ಈ ಅವಕಾಶ ಕಲ್ಪಿಸಲಾಗಿದೆ.  ಮಲೆನಾಡಿನ ಸಮಸ್ಯೆಗಳ ನಿವಾರಣೆ ಮತ್ತು ಶರಣಾಗತಿ ಹಾಗೂ ನಕ್ಸಲೀಯರ ಹಿಂಸಾತ್ಮಕ ಕೃತ್ಯಗಳನ್ನು ಶಸ್ತ್ರದ ಮೂಲಕ ಹತ್ತಿಕ್ಕಲು ನಿರ್ಧಾರ ಕೈಗೊಂಡಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಜಯ್‌ಕುಮಾರ್ ಸಿಂಗ್ ಹೇಳಿದ್ದಾರೆ.

ನಕ್ಸಲೀಯರ ಶರಣಾಗತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಹಾಗೂ ನಾಗರಿಕರ ಸಂಘಟನೆಗಳ ಸದಸ್ಯರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಶಿಫಾರಸು ಮಾಡಿದ ಹೆಸರುಗಳನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಲಾಗುವುದು. ಮುಖ್ಯ ಕಾರ್ಯದರ್ಶಿಗಳು, ಗೃಹ ಇಲಾಖೆಯ ಕಾರ್ಯ ದರ್ಶಿ, ಪೊಲೀಸ್ ಮಹಾ ನಿರ್ದೇಶಕ, ಗುಪ್ತವಾರ್ತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಹಾಗೂ ನಕ್ಸಲ್ ನಿಗ್ರಹದಳದ ಮುಖ್ಯಸ್ಥ ನೇತೃತ್ವದ ಸಮಿತಿ ಶರಣಾಗುವ ನಕ್ಸಲರ ಹೆಸರುಗಳನ್ನು ಅಂತಿಮಗೊಳಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಡವರ ಮಕ್ಕಳಿಗೆ ನಿರಾಕರಿಸಲ್ಪಟ್ಟ ಶಿಕ್ಷಣ

ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...


- ಎಸ್.ಬಾಲನ್,ಹೈಕೋರ್ಟ್ ವಕೀಲರು, ಬೆಂಗಳೂರು.

ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ

ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...


- ಗೋಪಾಲ್ ತ್ರಾಸಿ

ಅಂತರ ಜಾತಿಯ ವಿವಾಹ ಮೀಸಲಾತಿಗೆ ಅಡ್ಡಿಯಾಗದು: ಸರ್ವೋಚ್ಚ ನ್ಯಾಯಾಲಯದ ತೀರ್ಪು

ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...


- ಕೆ. ದೇಜಪ್ಪ

ಆರೆಸ್ಸೆಸ್ ಶಿಸ್ತಿನ ಒಳಗುಟ್ಟು

ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...


- ಸನತ್‌ ಕುಮಾರ ಬೆಳಗಲಿ

ನಿನ್ನನ್ನು ಒಳ್ಳೆಯ ಬ್ಯಾರಿ ಅಂತ ಹೇಗೆ ನಂಬುವುದು?

‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...


- ಚೇಳಯ್ಯ

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ-ಪ್ರಗತಿಪರರು

ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...


- ಡಾ ಜಿ. ಭಾಸ್ಕರ ಮಯ್ಯ

ಮನಸ್ಸಿನ ಅಸ್ವಸ್ಥತೆಗೆ ಮೂಲ ಕಾರಣ ಹುಡುಕಬೇಕು

ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...


- ಜ್ಯೋತಿ ಗುರುಪ್ರಸಾದ್

ದೂರಸಂಪರ್ಕ ನೀತಿ ಬೇಕಾಗಿದೆ

ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...


- ಅರವಿಂದ ರಾಜಗೋಪಾಲ