mail-img print-img

ಒತ್ತೆಯಾಳು ಪೊಲೀಸ್‌ನ ಶವ ಪತ್ತೆ

ಶನಿವಾರ - ಸೆಪ್ಟೆಂಬರ್ -04-2010

ಪಾಟ್ನಾ, ಸೆ.3: ನಕ್ಸಲೀಯರಿಂದ ಅಪಹರಣಕ್ಕೊಳ ಗಾಗಿದ್ದ ಬಿಹಾರದ ಮಿಲಿಟರಿ ಪೊಲೀಸ್ ಹವಿಲ್ದಾರ್ ಲೂಕಸ್ ಟೇಟೆ ಎಂಬವರ ಗುಂಡು ದಾಳಿಗೊಳಗಾದ ಮೃತದೇಹವು ಲಖಿಸರಾಯಿಯಲ್ಲಿ ಪತ್ತೆಯಾಗಿದೆ. ಉಳಿದ ಮೂವರ ಹತ್ಯೆ ನಡೆಸಲು ಮಾವೊವಾದಿಗಳು ವಿಧಿಸಿರುವ ಗಡುವು ಅಂತ್ಯಗೊಂಡಿದ್ದು, ಅವರ ರಕ್ಷಣೆಗಾಗಿ ಭದ್ರತಾ ಪಡೆಗಳು ಶೋಧಕಾರ್ಯವನ್ನು ತೀವ್ರಗೊಳಿಸಿವೆ. ಜಿಲ್ಲೆಯ ಕಾಜ್ರಾ ಪೊಲೀಸ್ ವ್ಯಾಪ್ತಿಯ ಸಿಮ್ರಾತಾರಿ ಶೃಂಗಋಷಿ ಅಣೆಕಟ್ಟಿನ ಬಳಿ ಪತ್ತೆಯಾದ ಮೃತದೇಹವು ಅಪಹೃತ ಪೊಲೀಸ್ ಅಧಿಕಾರಿ ಲೂಕಾಸ್ ಟೇಟೆಯವರದೆಂದು ಗುರುತಿಸಲಾಗಿದೆ. ಬೆಟ್ಟಗಳಿಂದಾವೃತವಾದ ಕಾಡಿನಲ್ಲಿ ರಕ್ತದ ಕಾಲುವೆಯ ನಡುವೆ ಮೃತದೇಹ ಪತ್ತೆಯಾಗಿದೆ ಎಂದು ಲಖಿಸರಾಯಿಯ ಪೊಲೀಸ್ ಅಧೀಕ್ಷಕ ರಂಜಿತ್‌ಕುಮಾರ್ ಮಿಶ್ರಾ ತಿಳಿಸಿದ್ದಾರೆ.


ಹತ ಹವಿಲ್ದಾರ್ ಲೂಕಾಸ್ ಟೇಟೆ ಹಾಗೂ ನಕ್ಸಲರು ಮೃತದೇಹದ ಸಮೀಪ

ಶುಕ್ರವಾರ ಬಿಟ್ಟು ಹೋಗಿದ್ದ ಕರಪತ್ರ.

ಮೃತ ದೇಹದ ಸಮೀಪ ಒಂದು ಕರಪತ್ರವೂ ದೊರೆತಿದೆ. ಅದರಲ್ಲಿ, ತಾವು ಹವಿಲ್ದಾರನನ್ನು ಕೊಂದಿದ್ದೇವೆಂದು ಮಾವೊವಾದಿಗಳು ಪ್ರತಿಪಾದಿಸಿದ್ದಾರೆ. ಬಂದಿಖಾನೆಯಲ್ಲಿರುವ ತಮ್ಮ 8 ಮಂದಿ ಸಹಚರರನ್ನು ರಾಜ್ಯ ಸರಕಾರ ಕೂಡಲೇ ಬಿಡುಗಡೆಗೊಳಿಸದಿದ್ದಲ್ಲಿ ತಾವು ಒತ್ತೆ ಸೆರೆ ಹಿಡಿದಿರುವ ಇತರ ಮೂವರ ಗತಿಯೂ ಇದೇ ರೀತಿಯಾಗುತ್ತದೆ ಎಂದು ದುಷ್ಕರ್ಮಿಗಳು ಬೆದರಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ನಿನ್ನೆ ತಮ್ಮ ಬೇಡಿಕೆ ಈಡೇರಿಕೆಗೆ ವಿಧಿಸಿದ್ದ ಸಂಜೆ 4ರ ಗಡವು ಮುಗಿದೊಡನೆಯೇ ಮಾವೊವಾದಿಗಳ ವಕ್ತಾರನೆಂದು ಹೇಳಿಕೊಂಡ ಅವಿನಾಶ್ ಎಂಬಾತ, ಸಬ್‌ಇನ್ಸ್‌ಪೆಕ್ಟರ್ ಅಭಯಪ್ರಸಾದ್ ಯಾದವ್ ಎಂಬವರ ಹತ್ಯೆ ನಡೆಸಿದ್ದೇವೆಂದು ದೂರವಾಣಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದನು. ಆದರೆ, ಅವರ ಮೃತದೇಹ ಈವರೆಗೆ ಪತ್ತೆಯಾಗಿಲ್ಲ ಹಾಗೂ ಈ ಬಗ್ಗೆ ಅಧಿಕೃತ ದೃಢೀಕರಣವೂ ಹೊರ ಬಿದ್ದಿಲ್ಲ. ಆದಾಗ್ಯೂ, ಅವರ ಹತ್ಯೆಯಾಗಿರುವುದು ಹೌದೆಂದು ನಿನ್ನೆ ಗುಪ್ತಚರ ಅಧಿಕಾರಿಗಳು ದಿಲ್ಲಿಯಲ್ಲಿ ಹೇಳಿದ್ದರು.

ಇದೇ ವೇಳೆ, ಸಿಆರ್‌ಪಿಎಫ್‌ನ ಕೋಬ್ರಾ ಪಡೆ, ಬಿಎಂಪಿ, ಎಸ್‌ಟಿಎಫ್ ಹಾಗೂ ಬಿಹಾರ ಪೊಲೀಸ್‌ನ ಎಸ್‌ಎಪಿ ಪಡೆಗಳು ಲಖಿಸರಾಯಿಯಲ್ಲಿ ರವಿವಾರ ನಡೆದ ಎನ್‌ಕೌಂಟರ್‌ನ ವೇಳೆ ನಕ್ಸಲೀಯರಿಂದ ಅಪಹರಿಸಲ್ಪಟ್ಟಿರುವ ಪೊಲೀಸರ ರಕ್ಷಣೆಗಾಗಿ ಮಾವೊ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆಯೆಂದು ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಪೊಲೀಸ್ ಮಹಾನಿರೀಕ್ಷಕ ಕೆ.ಎಸ್. ದ್ವಿವೇದಿ ತಿಳಿಸಿದ್ದಾರೆ. ಕೋಬ್ರಾ ಯೋಧರನ್ನೊಳಗೊಂಡ ಬಿಎಸ್‌ಎಫ್ ಹೆಲಿಕಾಪ್ಟರ್ ಗಳು ನಕ್ಸಲರ ಬೇಟೆಯಲ್ಲಿ ತೊಡಗಿವೆಯೆಂದು ಅವರು ಹೇಳಿದ್ದಾರೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್