mail-img print-img

ಶರದ್ ಪವಾರ್‌ಗೆ ತಪರಾಕಿ!

ಶುಕ್ರವಾರ - ನವೆಂಬರ್ -25-2011

ಹೊಸದಿಲ್ಲಿ, ನ.24: ಇಲ್ಲಿ ಇಂದು ನಡೆದ ಸಾರ್ವಜನಿಕ ಸಮಾರಂಭವೊಂದರ ಬಳಿಕ ಯುವಕನೊಬ್ಬ ಕೃಷಿ ಸಚಿವ ಶರದ್ ಪವಾರ್‌ರ ಕಪಾಳಕ್ಕೆ ಹೊಡೆದು ಸಂಚಲನ ಸೃಷ್ಟಿಸಿದನು.ಪತ್ರಕರ್ತರು ಮತ್ತು ಅಧಿಕಾರಿಗಳಿದ್ದ ಗುಂಪಿನ ಒಳಗೆ ಸೇರಿಕೊಂಡ ಹರ್ವಿಂದರ್ ಸಿಂಗ್,ಭ್ರಷ್ಟಾಚಾರ ಮತ್ತು ಬೆಲೆಯೇರಿಕೆ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಎಲ್ಲರೂ ನೋಡುತ್ತಿರುವಂತೆಯೇ 71 ವರ್ಷದ ಪವಾರ್‌ರ ಕೆನ್ನೆಗೆ ಒಂದೇಟು ಕೊಟ್ಟನು.ಸಂಸತ್ ಬೀದಿಯ ಸಾರ್ವಜನಿಕ ಸಭಾಂಗಣದಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೃಷಿ ಸಚಿವರು ಹೋಗಿದ್ದರು. ಏಕಾಏಕಿ ನಡೆದ ದಾಳಿಯಿಂದ ಆಘಾತಗೊಂಡ ಪವಾರ್ ಒಂದು ಕ್ಷಣ ಸಮತೋಲನ ಕಳೆದುಕೊಂಡರು. ಆದರೆ, ಕೂಡಲೇ ಹಿಡಿತ ತಂದುಕೊಂಡು ಸಭಾಂಗಣದ ಹೊರಬಾಗಿಲಿನತ್ತ ನಡೆದು ತನಗಾಗಿ ಕಾಯುತ್ತಿದ್ದ ಕಾರನ್ನೇರಿದರು.ಹರ್ವಿಂದರ್ ಸಿಂಗ್ ಅದೇ ಪ್ರದೇಶದಲ್ಲಿ ಟ್ರಾನ್ಸ್‌ಪೋರ್ಟ್ ವ್ಯವಹಾರವನ್ನು ನಡೆಸುತ್ತಿದ್ದಾನೆ. ಇದೇ ವ್ಯಕ್ತಿ ಕಳೆದ ಶನಿವಾರ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೀಡಾದ ಮಾಜಿ ಟೆಲಿಕಾಂ ಸಚಿವ ಸುಖ್‌ರಾಮ್ ಮೇಲೆ ಕೂಡ ಹಲ್ಲೆ ನಡೆಸಿದ್ದ.

‘‘ಅವನು ಭ್ರಷ್ಟ’’ ಎಂದು ಕೂಗುತ್ತಿದ್ದ ಹರ್ವಿಂದರ್ ಸಿಂಗ್‌ನನ್ನು ಖಾಸಗಿ ಭದ್ರತಾ ಸಿಬ್ಬಂದಿ ಹಿಡಿದುಕೊಂಡರು. ಆಗ ಒಬ್ಬ ಅಧಿಕಾರಿ ಹರ್ವಿಂದರ್‌ಗೆ ಕೆಲವು ಏಟುಗಳನ್ನು ನೀಡಿದನು.‘‘ಮಂತ್ರಿಗೆ ಹೊಡೆಯಲು ಯೋಜನೆ ರೂಪಿಸಿಯೇ ನಾನು ಈ ಕಾರ್ಯಕ್ರಮಕ್ಕೆ ಬಂದೆ’’ ಎಂದು ಸಾಹಿತ್ಯ ಸಮಾರಂಭದ ವರದಿ ಮಾಡಲು ತೆರಳಿದ್ದ ಪತ್ರಕರ್ತರಿಗೆ ಹರ್ವಿಂದರ್ ಹೇಳಿದನು.
‘‘ಅವರೆಲ್ಲರೂ ಭ್ರಷ್ಟರು’’ ಎಂದು ಭದ್ರತಾ ಸಿಬ್ಬಂದಿ ಮತ್ತು ಪೊಲೀಸರಿಂದ ಹೊರದಬ್ಬಿಸಿಕೊಂಡ ವೇಳೆ ಆತ ಕೂಗಿದನು. ಇಂದು ಗುರು ತೇಜ್ ಬಹದೂರ್ ಬಲಿದಾನ ದಿನಾಚರಣೆ ಅಲ್ಲದಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು ಎಂದು ಸಣ್ಣ ಕೃಪಾಣವೊಂದನ್ನು ಬೀಸುತ್ತ ಆತ ಹೇಳಿದನು.

ಆದರೆ, ಈ ಘಟನೆಯನ್ನು ತಣ್ಣಗಾಗಿಸಲು ಪವಾರ್ ಪ್ರಯತ್ನಿಸಿದ್ದಾರೆ. ದಾಳಿಕೋರನ ಉದ್ದೇಶ ಏನಾಗಿರಬಹುದು ಎಂಬ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಹೇಳಿದ ಅವರು, ಆ ವಿಷಯವನ್ನು ಪೊಲೀಸರು ನಿಭಾಯಿಸುತ್ತಾರೆ ಎಂದರು.ಘಟನೆಯ ಬಳಿಕ ಪ್ರಧಾನಿ ಮನಮೋಹನ್ ಸಿಂಗ್ ಪವಾರ್ ಜೊತೆ ಮಾತನಾಡಿದರು ಹಾಗೂ ಘಟನೆಯನ್ನು ಖಂಡಿಸಿದರು.ಘಟನೆಯನ್ನು ಕ್ಷುಲ್ಲಕ ಎಂದು ಬಣ್ಣಿಸಿದ ಪವಾರ್, ತಾನು ಇದನ್ನು ದೊಡ್ಡ ವಿಷಯವನ್ನಾಗಿ ಮಾಡುವುದಿಲ್ಲ ಎಂದರು.

ತನ್ನ ಮೇಲೆ ಹಲ್ಲೆ ಮಾಡಿದಾತನ ವಿರುದ್ಧ ಮೊಕದ್ದಮೆ ದಾಖಲಿಸುವಿರೆ ಎಂಬ ಪ್ರಶ್ನೆಗೆ, ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳುವುದು ಪೊಲೀಸರಿಗೆ ಬಿಟ್ಟದ್ದು ಎಂದರು. ಪಕ್ಷಭೇದ ಮರೆತ ರಾಜಕೀಯ ಪಕ್ಷಗಳು ಘಟನೆಯನ್ನು ಖಂಡಿಸಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿವೆ.



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಕಗ್ಗತ್ತಲ ಕೋಣೆಯಲ್ಲಿ ನರಳುತ್ತಿರುವ ಶಿಕ್ಷಣ

ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಭಾರತ-ಅಮೆರಿಕ ದೇಶದ ನೂತನ ವಸಾಹತು

ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...


- ಶ್ರೀ ರಾಮ್, ಬೆಂಗಳೂರು

ಬಿಜೆಪಿಯ ‘ಟೀಮ್ ಬಿ’

ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...


ಜನ ಚಳವಳಿಗೆಲ್ಲ ಹೀಗೇಕಾಗಿವೆ?

ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...


- ಸನತ್‌ ಕುಮಾರ ಬೆಳಗಲಿ

ಮಾನ ಮರ್ಯಾದೆ ಇಲ್ಲದ ಜನರೆಲ್ಲ ಎಲ್ಲಿ ಹೋದರು?

ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...


ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...


- ಜ್ಯೋತಿ ಗುರುಪ್ರಸಾದ್

ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದ ಭಾರತ

ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...


- ರಘೋತ್ತಮ ಹೊ.ಬ.

ಪಠ್ಯಪುಸ್ತಕಗಳ ಕೇಸರೀಕರಣ ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್

ಪಠ್ಯಪುಸ್ತಕಗಳ ಕೇಸರೀಕರಣ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್