ಹೊಸದಿಲ್ಲಿ, ಜ.27: ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದೆಯೆನ್ನಲಾದ ಅಕ್ರಮ ಗಣಿಗಾರಿಕೆಯ ಆರೋಪದ ಕುರಿತು ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಲೋಕಾಯುಕ್ತ ಪೊಲೀಸರಿಗೆ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡುವುದರೊಂದಿಗೆ ವಿದೇಶಾಂಗ ಸಚಿವರು ನಿಟ್ಟುಸಿರು ಬಿಡುವಂತಾಗಿದೆ. ಅವರ ವಿರುದ್ಧದ
ವಿಚಾರಣೆಯು ‘ಅಪಕ್ವ’ ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ. ‘‘ನಾವು ವಿಚಾರಣೆಗೆ ತಡೆಯಾಜ್ಞೆ ನೀಡಲು ಇಚ್ಛಿಸಿದ್ದೇವೆ. ಅದರಿಂದಾಗಿ, ಎಫ್‌ಐಆರ್ ಒಂದರ ಆಧಾರದಲ್ಲಿ ಕರ್ನಾಟಕದ ಲೋಕಾಯುಕ್ತವು ತನಿಖೆಗೆ ನೀಡಿರುವ ಆದೇಶವು ತಡೆ ಹಿಡಿಯಲ್ಪಡುತ್ತದೆ’’ ಎಂದು ನ್ಯಾಯಮೂರ್ತಿಗಳಾದ ಅಲ್ತಮಸ್ ಕಬೀರ್ ಹಾಗೂ ಜ್ಞಾನಸುಧಾ ಮಿಶ್ರಾರಿದ್ದ ಪೀಠವೊಂದು ತೀರ್ಪು ನಿಡಿದೆ.
ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ವಿರೋಧಿಸಿ ಕೃಷ್ಣ ಜ. 20ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಅಲ್ಲಿಸಿದ್ದರು. ಪೂರಕ ವರದಿ ಮಂಡನೆಯಾಗದ ಕಾರಣ ಲೋಕಾಯುಕ್ತದ ಮುಂದಿನ ವಿಚಾರಣೆ ‘ಅಪೂರ್ಣ’ವಾಗಿರುವುದರಿಂದ ಲೋಕಾಯುಕ್ತ ನ್ಯಾಯಾಲಯ ತನಿಖೆಗೆ ನೀಡಿರುವ ಆದೇಶವು ‘ಅಪಕ್ವ’ವಾಗಿದೆಯೆಂದು ನ್ಯಾಯಪೀಠ ವ್ಯಾಖ್ಯಾನಿಸಿದೆ. ಪ್ರಕರಣದ ಸಂಬಂಧ ಕರ್ನಾಟಕ ಸರಕಾರ ಹಾಗೂ ದೂರುದಾರರಿಗೆ ನೋಟಿಸ್ ಜಾರಿಗೊಳಿಸಿ ಮೂರು ವಾರಗಳೊಳಗೆ ಉತ್ತರ ಬಯಸಿದ್ದ ನ್ಯಾಯಪೀಠವು ‘ಸತ್ಯ ಹೊರ ಬರಬೇಕೆಂಬ ಕುತೂಹಲದಲ್ಲಿ ತಾವಿದ್ದೇವೆ’ ಎಂದೂ ಹೇಳಿದೆ.
ಕೃಷ್ಣರ ವಿರುದ್ಧದ ಪ್ರಕರಣಕ್ಕೆ ತಡೆಯಾಜ್ಞೆ ನೀಡಬಾರದೆಂದು ಅರ್ಜಿದಾರ ಟಿ.ಜೆ. ಥೋಮಸ್ ಎಂಬವರ ಪರ ವಕೀಲ ಪ್ರಶಾಂತ್ ಭೂಷಣ್ ವಾದಿಸಿದಾಗ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಚಾರಣೆಗೆ ತಡೆಯಾಜ್ಞೆ ನೀಡಿದಲ್ಲಿ ಲೋಕಾಯುಕ್ತ ನ್ಯಾಯಾಲಯದ ಆದೇಶದಂತೆ ದಾಖಲಿಸಲಾಗಿರುವ ಪ್ರಥಮ ಮಾಹಿತಿ ವರದಿಯ ಕುರಿತ ಇಡೀ ವಿಚಾರಣಾ ಪ್ರಕ್ರಿಯೆಯೇ ‘ನಿಲ್ಲುತ್ತದೆ’ ಎಂದು ಅವರು ವಾದಿಸಿದರು.
ಆದಾಗ್ಯೂ, ಅವರ ವಾದದಿಂದ ಪ್ರಭಾವಿತವಾಗದ ಪೀಠ, ಲೋಕಾಯುಕ್ತದ ತನಿಖೆ ಮುಗಿಯುವುದು ಮೇಲ್ನೋಟಕ್ಕೆ ಅಪೇಕ್ಷಣೀಯವಾಗಿದೆಯೆಂದು ಅಭಿಪ್ರಾಯಿಸಿತು.
‘‘ಮೇಲ್ನೋಟಕ್ಕೆ ಪ್ರಬಲ ಪ್ರಕರಣವಾಗಬೇಕಾದರೆ ಲೋಕಾಯುಕ್ತ ವರದಿಗೆ ಇನ್ನೊಂದು ವರದಿ ಅಥವಾ ಪೂರಕ ವರದಿ ಬೆಂಬಲವಾಗಿರಬೇಕು. ಲೋಕಾಯುಕ್ತದ ವಿಚಾರಣೆ ಪೂರ್ಣಗೊಳ್ಳುವ ಮೊದಲೇ ಪ್ರಕರಣವನ್ನು ನ್ಯಾಯಾಲಯಕ್ಕೆ ತರಲಾಗಿದೆ. ನೀವು ಪರಿಸ್ಥಿತಿಯೊಂದನ್ನು ನಿರ್ಮಿಸಲಾಗದು. ಪರಿಸ್ಥಿತಿಯೊಂದಿಗೆ ನೀವು ಸಾಗಬೇಕು’’ ಎಂದು ಕರ್ನಾಟಕ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡದಂತೆ ಪದೇ ಪದೇ ಒತ್ತಾಯಿಸಿದ ಪ್ರಶಾಂತ್ ಭೂಷಣ್‌ರಿಗೆ ನ್ಯಾಯ ಪೀಠ ಹೇಳಿತು. ಆದಾಗ್ಯೂ, ತಾವು ಮಧ್ಯಾಂತರ ಆದೇಶವನ್ನು ಜಾರಿ ಮಾಡುತ್ತೇವೆ. ಮುಂದೆ ರಾಜ್ಯ ಸರಕಾರ ಹಾಗೂ ದೂರುದಾರರು ಪ್ರತಿ ಅಫಿದಾವಿತ್‌ಗಳನ್ನು ಸಲ್ಲಿಸಿದ ಬಳಿಕ ‘ಎಲ್ಲ ವಿಚಾರವನ್ನು ಪರಿಶೀಲಿಸುತ್ತೇವೆಂದು ನ್ಯಾಯಾಧೀಶರು ತಿಳಿಸಿದರು.
1999ರಿಂದ 2004ರ ವರೆಗೆ ತಾವು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದೆಯೆನ್ನಲಾದ ಅನಧಿಕೃತ ಗಣಿಗಾರಿಕೆಯ ಕುರಿತು ಲೋಕಾಯುಕ್ತ ಪೊಲೀಸರ ತನಿಖೆ ಹಾಗೂ ಆ ಸಂಬಂಧದ ದೂರನ್ನು ರದ್ದು ಪಡಿಸುವಂತೆ ಕೃಷ್ಣ ಸುಪ್ರೀಂ ಕೋರ್ಟ್‌ನ್ನು ಕೋರಿದ್ದರು. ಗಣಿಗಾರಿಕೆಯ ಕುರಿತು ಸಂಪುಟದ ನಿರ್ಧಾರವು 34 ಸಚಿವರ ಸಂಯುಕ್ತ ನಿರ್ಧಾರವಾಗಿದೆ. ಆದುದರಿಂದ ಅದಕ್ಕೆ ಒಬ್ಬನನ್ನೇ ಹೊಣೆ ಮಾಡುವಂತಿಲ್ಲವೆಂದು ಕೃಷ್ಣರ ಪರ ವಕೀಲ ಕೆ.ಕೆ. ವೇಣು ಗೋಪಾಲ್ ವಾದಿಸಿದರು.
ಅದಿರು ಸಮೃದ್ಧ ಪ್ರದೇಶದ ಅರಣ್ಯವನ್ನು ಮೀಸಲು ರಹಿತ ಮಾಡಿದ ವಿಚಾರದಲ್ಲಿ ತನಿಖೆ ಮುಂದುವರಿಸಬೇಕೆಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು.
ಮೀಸಲು ರಹಿತಗೊಳಿಸಿದ 11 ಸಾವಿರ ಚ.ಕಿ.ಮೀ. ಪ್ರದೇಶದಲ್ಲಿ ಗಣಿಗಾರಿಕೆಯ ಮಂಜೂರಾತಿ ಅರ್ಹತೆಯ ಆಧಾರದಲ್ಲಿ ನಡೆದಿಲ್ಲವೆಂದು ಪ್ರಶಾಂತ್ ಭೂಷಣ್ ವಾದಿಸಿದರು. ಆದಾಗ್ಯೂ, ಸರಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್‌ನ ದುರುಪಯೋಗ ಕೃಷ್ಣರಿಂದಾಗಿದೆ ಎಂಬ ಆರೋಪದ ಕುರಿತು ತನಿಖೆಯನ್ನು ಹೈಕೋರ್ಟ್ ‘ಅದರಲ್ಲಿ ಸಂಜ್ಞೇಯ ಅಪರಾಧ ಏನೂ ಇಲ್ಲದಿರುವುರಿಂದ ತನಿಖೆಯ ಅಗತ್ಯವಿಲ್ಲವೆಂದು ಕಾರಣ ನೀಡಿ ರದ್ದುಗೊಳಿಸಿತು.
ಕೃಷ್ಣರ ವಿರುದ್ಧ ಖಾಸಗಿ ದೂರೊಂದನ್ನು ಆಧರಿಸಿ ಲೋಕಾಯುಕ್ತ ನ್ಯಾಯಾಲಯವು ಕಳೆದ ಡಿ. 8ರಂದು ವಿಚಾರಣೆ ಆರಂಭಿಸಿತ್ತು.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...