ಹುಬ್ಬಳ್ಳಿ, ಜ.27: ರಾಜ್ಯ ಬಜೆಟ್ ಮಂಡಿಸುವ ಕುರಿತು ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆದಿರುವ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ, ಮಾ.9ರಂದು ಮುಂಗಡ ಪತ್ರವನ್ನು ತಾನೇ ಮಂಡಿಸುತ್ತೇನೆ, ಅದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದ್ದಾರೆ.
ನಗರದಲ್ಲಿ ನಡೆದ ‘ಹಿಂದೂ ಶಕ್ತಿ ಸಂಗಮ’ದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಬಜೆಟ್‌ನ್ನು ಬೇರೆ ಯಾರೂ ಮಂಡಿ ಸುವುದಿಲ್ಲ. ಅದನ್ನು ತಾನೇ ಮಂಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಬಜೆಟ್ ಮಂಡನೆಯ ಕುರಿತು ಹಲವು ರೀತಿಯ ಊಹಾಪೋಹ ಗಳೆದ್ದಿದ್ದು, ಇಂತಹ ಸಂಶಯ ಬೇಡ. ಬಜೆಟ್ ಮಂಡನೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ಡಿವಿ ಇದೇ ವೇಳೆ ತಿಳಿಸಿದರು.
ಯಾವೆಲ್ಲ ಇಲಾಖೆಗಳಿಗೆ ಒತ್ತು ನೀಡಬೇಕು ಎಂಬ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾ.9ರಂದು ಉತ್ತಮ ಬಜೆಟನ್ನು ಮಂಡಿಸುತ್ತೇನೆ ಎಂದ ಸದಾನಂದ ಗೌಡ, ಈ ತಿಂಗಳ 30ರಂದು ಆರಂಭವಾಗಲಿರುವ ಅಧಿವೇಶನ ದಲ್ಲಿಯೂ ಬಜೆಟ್‌ಗೆ ಸಂಬಂಧಿಸಿ ಚರ್ಚೆ ನಡೆಸಲಾಗುವುದು. ಎಲ್ಲ ರೀತಿ ಯಿಂದಲೂ ಬಜೆಟ್ ಕುರಿತು ಮಾಹಿತಿ ಕಲೆ ಹಾಕಿ ಮಂಡಿಸುತ್ತೇನೆ ಎಂದರು.
ನಗರದಲ್ಲಿಂದಿನಿಂದ ನಡೆಯಲಿರುವ ಹಿಂದೂ ಶಕ್ತಿ ಸಂಗಮದಲ್ಲಿ ಒಬ್ಬ ಆರೆಸ್ಸೆಸ್‌ನ ಸ್ವಯಂ ಸೇವಕನಾಗಿ ಭಾಗವಹಿಸುತ್ತಿದ್ದೇನೆ. ಇಲ್ಲಿ ಸರಕಾರ, ಬಿಜೆಪಿ ನಾಯಕರ ಕುರಿತು ಮಾತನಾಡುವುದಿಲ್ಲ. ಎಲ್ಲವೂ ರಾಷ್ಟ್ರ ಜಾಗೃತಿ, ಯವಜನರನ್ನು ದೇಶ ಕಟ್ಟಲು ಬಳಸುವ ಕುರಿತು ಚರ್ಚಿಸಲಾಗುವುದು ಎಂದರು. ಯಾವೆಲ್ಲ ಇಲಾಖೆಗಳಿಗೆ ಒತ್ತು ನೀಡಬೇಕು ಎಂಬ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾ.9ರಂದು ಉತ್ತಮ ಬಜೆಟನ್ನು ಮಂಡಿಸುತ್ತೇನೆ ಎಂದ ಸದಾನಂದ ಗೌಡ, ಈ ತಿಂಗಳ 30ರಂದು ಆರಂಭವಾಗಲಿರುವ ಅಧಿವೇಶನ ದಲ್ಲಿಯೂ ಬಜೆಟ್‌ಗೆ ಸಂಬಂಧಿಸಿ ಚರ್ಚೆ ನಡೆಸಲಾಗುವುದು. ಎಲ್ಲ ರೀತಿ ಯಿಂದಲೂ ಬಜೆಟ್ ಕುರಿತು ಮಾಹಿತಿ ಕಲೆ ಹಾಕಿ ಮಂಡಿಸುತ್ತೇನೆ ಎಂದರು.
ನಗರದಲ್ಲಿಂದಿನಿಂದ ನಡೆಯಲಿರುವ ಹಿಂದೂ ಶಕ್ತಿ ಸಂಗಮದಲ್ಲಿ ಒಬ್ಬ ಆರೆಸ್ಸೆಸ್‌ನ ಸ್ವಯಂ ಸೇವಕನಾಗಿ ಭಾಗವಹಿಸುತ್ತಿದ್ದೇನೆ. ಇಲ್ಲಿ ಸರಕಾರ, ಬಿಜೆಪಿ ನಾಯಕರ ಕುರಿತು ಮಾತನಾಡುವುದಿಲ್ಲ. ಎಲ್ಲವೂ ರಾಷ್ಟ್ರ ಜಾಗೃತಿ, ಯವಜನರನ್ನು ದೇಶ ಕಟ್ಟಲು ಬಳಸುವ ಕುರಿತು ಚರ್ಚಿಸಲಾಗುವುದು ಎಂದರು.
ಗಣವೇಷದಲ್ಲಿ ಭಾಗವಹಿಸಿದ ಸಿಎಂ: ತಾನು ಆರೆಸ್ಸೆಸ್‌ನ ಕಟ್ಟುನಿಟ್ಟಿನ ಸಿಪಾಯಿ ಎಂದು ಹೇಳಿದ ಮುಖ್ಯಮಂತ್ರಿ ಸದಾನಂದ ಗೌಡ, ತಮ್ಮ ಶ್ವೇತ ವಸ್ತ್ರ ಕಳಚಿ ಗಣವೇಶ ಧರಿಸಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ, ಬಳಿಕ ತಮ್ಮ ಶ್ವೇತ ವಸ್ತ್ರ ಕಳಚಿ, ಖಾಕಿ ಚಡ್ಡಿ, ಬಿಳಿ ಅಂಗಿ, ತಲೆಗೆ ಟೋಪಿ ಹಾಕಿ ಹಿಂದೂ ಶಕ್ತಿ ಸಂಗಮದಲ್ಲಿ ಭಾಗವಹಿಸಿ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದರು. ಹಿಂದೂ ಶಕ್ತಿ ಸಂಗಮವನ್ನು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿದರು. ಈ ವೇಳೆ ಆರೆಸ್ಸೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಯ್ಯೆಜಿ ಜೋಷಿ ಸೇರಿದಂತೆ ಹಲವರು ಹಾಜರಿದ್ದರು.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...