ಇಂಫಾಲ, ಜ.27: ಉಗ್ರಗಾಮಿ ಗಳ ಬಾಂಬ್ ದಾಳಿಯ ನೆರಳಿ ನಲ್ಲಿ ಮಣಿಪುರ ವಿಧಾನ ಸಭೆಗೆ ನಾಳೆ ಮತದಾನ ನಡೆಯಲಿದೆ. ಈ ಮೂಲಕ ಮಿನಿ ಮಹಾ ಚುನಾವಣೆಯೆಂದೇ ವ್ಯಾಖ್ಯಾ ನಿಸಲಾಗಿರುವ ಪಂಚರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಚಾಲನೆ ದೊರೆಯಲಿದೆ. ಕೆಲವು ಪ್ರದೇಶದಲ್ಲಿ ಉಗ್ರಗಾಮಿಗಳು ಚುನಾವಣಾ ಪ್ರಕ್ರಿಯೆಯನ್ನು ಅಸ್ತವ್ಯಸ್ತಗೊಳಿಸಲು ಯತ್ನಿಸಬಹುದೆಂದು ವರದಿಗಳ ನಡುವೆಯೇ 60 ಸದಸ್ಯ ಬಲದ ವಿಧಾನ ಸಭೆಗೆ ಚುನಾವಣೆ ನಡೆಯಲಿರುವ ಈಶಾನ್ಯ ರಾಜ್ಯದ ಭದ್ರತಾ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳು ನಿಕಟ ನಿಗಾ ವಹಿಸಿದ್ದಾರೆ. ಮಣಿಪುರದ 10ನೆ ವಿಧಾನ ಸಭೆ ಪ್ರವೇಶಿಸಲು ಒಟ್ಟು 279 ಮಂದಿ ಕಣಕ್ಕಿಳಿದಿದ್ದಾರೆ.
ರಾಜ್ಯದ ಭದ್ರತಾ ಸಿಬ್ಬಂದಿ ಹಾಜರಾಗದ ಕಡೆಗಳಲ್ಲಿ ಕೇವಲ ಕೇಂದ್ರೀಯ ಭದ್ರತಾ ಸಿಬ್ಬಂದಿಯನ್ನೇ ನಿಯೋಜಿಸಲಾಗುವುದೆಂದು ಅಧಿಕೃತ ಮೂಲಗಳು ಇಂದಿಲ್ಲಿ ತಿಳಿಸಿದೆ. ಆದರೆ, ಅಗತ್ಯವಾದಲ್ಲಿ ರಾಜ್ಯದ ಪೊಲೀಸರು ಮತಗಟ್ಟೆ ವ್ಯವಸ್ಥಾಪನೆಗೆ ಲಭ್ಯರಿರುವರೆಂದೂ ಅವು ಹೇಳಿವೆ. ಪಂಚ ರಾಜ್ಯ ವಿಧಾನ ಸಭೆಗಳ ಚುನಾವಣೆಯು ಮಣಿಪುರದಿಂದ ನಾಳೆ ಆರಂಭಗೊಳ್ಳಲಿದ್ದು, ಪಂಜಾಬ್ ಹಾಗೂ ಉತ್ತರಾಖಂಡ್‌ನಲ್ಲಿ ಜ. 30 ಹಾಗೂ ಗೋವಾದಲ್ಲಿ ಮಾ. 3ಕ್ಕೆ ನಡೆಯಲಿದೆ. ಮಾ. 3ರಂದು 7 ಹಂತಗಳ ಉತ್ತರ ಪ್ರದೇಶ ವಿಧಾನ ಸಭೆಯ ಚುನಾವಣೆ ಕೊನೆಗೊಳ್ಳಲಿದೆ. ಮಣಿಪುರದ ಹೆಚ್ಚಿನ ಮತಗಟ್ಟೆಗಳಿಗೆ ಭದ್ರತಾ ಸಿಬ್ಬಂದಿ ತಲುಪಿದ್ದಾರೆ. ಇಂಫಾಲ ಪೂರ್ವ ಹಾಗೂ ಪಶ್ಚಿಮ ಜಿಲ್ಲೆಗಳಿಗೆ ಇಂದು ರಾತ್ರಿಯೊಳಗೆ ಅವರು ತಲುಪಬಹುದೆಂದು ಮೂಲಗಳು ತಿಳಿಸಿವೆ. ಒಟ್ಟು 2, 367 ಮತಗಟ್ಟೆಗಳಿಗೆ 12, 967 ಭದ್ರತಾ ಸಿಬ್ಬಂದಿಯಿರುತ್ತಾರೆ. ಮುಂಜಾನೆ 7ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ.
ರಾಜ್ಯದ ಒಟ್ಟು 17,40,476 ಅರ್ಹ ಮತದಾರರಲ್ಲಿ 8,82,236 ಮಂದಿ ಮಹಿಳೆಯರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಅಲ್ಲಲ್ಲಿ ಸ್ಫೋಟಗಳು ನಡೆಯುತ್ತಿದ್ದು, ಉಗ್ರರು ಕೆಲವು ಕಡೆಗಳಲ್ಲಿ ಅಭ್ಯರ್ಥಿಗಳ ಮೇಲೆ ದಾಳಿ ನಡೆಸಬಹುದೆಂಬ ವರದಿಗಳು ರಾಜ್ಯದ ರಾಜಧಾನಿಗೆ ಹರಿದು ಬರುತ್ತಿವೆ. ಪಶ್ಚಿಮ ಇಂಫಾಲ ಜಿಲ್ಲೆಯ ಮಾಜಿ ಸರಕಾರಿ ಅಧಿಕಾರಿಯೊಬ್ಬರ ನಿವಾಸಕ್ಕೆ ಇಂದು ಮುಂಜಾನೆಯಷ್ಟೇ ಬಾಂಬ್ ಎಸೆದ ದುಷ್ಕರ್ಮಿಗಳು ಒಬ್ಬನ ಹತ್ಯೆ ನಡೆಸಿದ್ದಾರೆ.
ವೈದ್ಯೆ ವಿಲಾಸಿನಿ ದೇವಿ ಎಂಬವರ ನಿವಾಸದ ಮೇಲೆ ಈ ದಾಳಿ ನಡೆದಿದ್ದು, ಅವರ ಪತಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆಂದು ಮೂಲಗಳು ತಿಳಿಸಿವೆ. ಗಣರಾಜ್ಯೋತ್ಸವದ ದಿನ ಉಗ್ರರ ರಾಜಧಾನಿ ಸಂಕೀರ್ಣದಲ್ಲಿ ಪ್ರಬಲ ಬಾಂಬೊಂದನ್ನು ಸ್ಫೋಟಿಸಿದ್ದರು. ಆದರೆ ಯಾವುದೇ ಸಾವು- ನೋವು ಸಂಭವಿಸಿಲ್ಲ. ಜ. 25ರ ರಾತ್ರಿ ದುಷ್ಕರ್ಮಿಗಳು ಕಕ್ವಾ ಎಂಬಲ್ಲಿ ಎರಡು ಸ್ಫೋಟಗಳನ್ನು ನಡೆಸಿದ್ದರು.
ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...
Click here to post your views ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...
ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...
ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...
ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...
‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...
ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...
ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...
ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...