mail-img print-img

ಜಾಗತಿಕ ತಾಪಮಾನಕ್ಕೆ 35 ವರ್ಷ!

ಸೋಮವಾರ - ಆಗಸ್ಟ್ -30-2010

ಜಾಗತಿಕ ತಾಪಮಾನ ಎಂಬ ಪದವು ಜನ್ಮತಳೆದು ಮುಂದಿನ ವಾರಕ್ಕೆ 35 ವರ್ಷಗಳಾಗುತ್ತವೆ. ಈ 35 ವರ್ಷಗಳ ಅವಧಿಯಲ್ಲಿ ನಮ್ಮ ಭೂಮಿಯಲ್ಲಿ ಜಾಗತಿಕ ತಾಪಮಾನದ ಏರಿಕೆಯು ಒಂದು ಪೆಡಂ ಭೂತವಾಗಿ ಎದ್ದುನಿಂತಿದೆ. ಅಮೆರಿಕದ ಖ್ಯಾತ ಪರಿಸರ ವಿಜ್ಞಾನಿ ವ್ಯಾಲಿ ಬ್ರೂಕರ್ ಎಂಬಾತ ಆಗಸ್ಟ್ 8, 1975ರಲ್ಲಿ ಮಂಡಿ ಸಿದ ‘ಆರ್ ವಿ ಆನ್ ದಿ ಬ್ರಿಂಕ್ ಆಫ್ ಪ್ರೊನೌ ನ್ಸ್‌ಡ್ ಗ್ಲೋಬಲ್ ವಾರ್ಮಿಂಗ್?’ (ನಾವು ಘೋಷಿತ ಜಾಗತಿಕ ತಾಪಮಾನದ ಅಂಚಿನಲ್ಲಿದ್ದೇವೆಯೇ) ಎಂಬ ಶೀರ್ಷಿಕೆಯ ಪ್ರಬಂಧದಲ್ಲಿ ಮೊಟ್ಟ ಮೊದಲ ಬಾರಿಗೆ ‘ಗ್ಲೋಬಲ್ ವಾರ್ಮಿಂಗ್’ (ಜಾಗತಿಕ ತಾಪಮಾನ) ಎಂಬ ಪದವನ್ನು

 ಜಾಗತಿಕ ತಾಪಮಾನದ

ಏರಿಕೆಯ ಬಗ್ಗೆ ನಿಖರ ಭವಿಷ್ಯ ನುಡಿಯುವುದು ಸಾಧ್ಯವಿಲ್ಲವೆಂದು ಹೇಳುವವರು

ಈಗಲೂ ಇದ್ದಾರೆ.

ಆದರೆ ಜಾಗತಿಕ ತಾಪಮಾನದ ದುಷ್ಪರಿಣಾಮವು ಅರಿವಿಗೆ ಬರುವ ಮುನ್ನವೇ ಬ್ರೂಕರ್ ಆ ಬಗ್ಗೆ ಮುನ್ಸೂಚನೆ ನೀಡಿದ್ದ ಎಂಬ ಸತ್ಯವನ್ನು ಈ ಪ್ರಬಂಧದ 35ನೆ ವರ್ಷಾಚರಣೆಯು

ನಮಗೆ ನೆನಪಿಸುತ್ತದೆ.

ಬಳಸಿದ. ಪ್ರಾಯಶಃ ವಿಜ್ಞಾನ ಸಾಹಿತ್ಯ ದಲ್ಲಿ ‘ಜಾಗತಿಕ ತಾಪಮಾನ’ ಪದ ಬಳಕೆ ಇದೇ ಮೊದಲ ಸಲವೆಂದು ತೋರುತ್ತದೆ.

‘‘ಇಂಗಾಲದ ಡೈಆಕ್ಸೈಡ್‌ನಿಂದಾಗಿ ಭೂಮಿಯು ಕಳೆದ 1 ಸಾವಿರ ವರ್ಷಗಳಲ್ಲಿ ಅನುಭವಿಸಿದಂತಹ ತಾಪಮಾನದ ಮಿತಿಯು ಮುಂದಿನ ದಶಕದ ಆರಂಭ ದೊಳಗೆ ಮೀರಿ ಹೋಗಲಿದೆ’’ ಎಂಬ ಸತ್ಯವನ್ನು ಬ್ರೂಕರ್ ಈ ಪ್ರಬಂಧದಲ್ಲಿ ಸರಿಯಾಗಿಯೇ ಊಹಿಸಿದ್ದ. 20ನೆ ಶತಮಾನದಲ್ಲಿ ಇಂಗಾಲದ ಡೈಆಕ್ಸೈಡ್(ಸಿಓ2) ನಿಂದಾಗಿ ಜಾಗತಿಕ ತಾಪಮಾನದಲ್ಲಿ 0.8 ಡಿಗ್ರಿ ಸೆಂಟಿ ಗ್ರೇಡ್ ಹೆಚ್ಚಳವಾಗಲಿದೆ ಎಂದು ಆತ ಭವಿಷ್ಯ ನುಡಿದಿದ್ದ. ಇದರಿಂದಾಗಿ ಜಗತ್ತಿನಾದ್ಯಂತ ಕೃಷಿ ಮತ್ತು ಸಮುದ್ರ ಮಟ್ಟದ ಮೇಲೆ ಉಂಟಾಗಲಿರುವ ಪರಿಣಾಮಗಳ ಬಗ್ಗೆ ಆತ ಕಳವಳ ವ್ಯಕ್ತಪಡಿಸಿದ್ದ.

ಜಾಗತಿಕ ತಾಪಮಾನದ ಏರಿಕೆಯ ಬಗ್ಗೆ ನಿಖರ ಭವಿಷ್ಯ ನುಡಿಯುವುದು ಸಾಧ್ಯವಿಲ್ಲವೆಂದು ಹೇಳುವವರು ಈಗಲೂ ಇದ್ದಾರೆ. ಆದರೆ ಜಾಗತಿಕ ತಾಪಮಾನದ ದುಷ್ಪರಿಣಾಮವು ಅರಿವಿಗೆ ಬರುವ ಮುನ್ನವೇ ಬ್ರೂಕರ್ ಆ ಬಗ್ಗೆ ಮುನ್ಸೂ ಚನೆ ನೀಡಿದ್ದ ಎಂಬ ಸತ್ಯವನ್ನು ಈ ಪ್ರಬಂಧದ 35ನೆ ವರ್ಷಾಚರಣೆಯು ನಮಗೆ ನೆನಪಿಸುತ್ತದೆ. ಆದರೆ 1988ರಲ್ಲಿ ನಾಸಾ ವಿಜ್ಞಾನಿ ಜಿಮ್‌ಹ್ಯಾನ್ಸೆನ್ ಭೂಮಿಯು ತಾಪಮಾನ ಏರಿಕೆಯಿಂದ ಪೀಡಿತವಾಗಿದೆ ಎಂದಾಗ ಇಡೀ ಜಗತ್ತು ಒಮ್ಮೆಗೆ ಎಚ್ಚೆತ್ತುಕೊಂಡಿತು.1975ರಲ್ಲಿಯೇ ಬ್ರೂಕರ್‌ಗೆ ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಚಿಂತಿಸಲು ಹೇಗೆ ಸಾಧ್ಯವಾಯಿತೆಂಬುದು ನಿಜಕ್ಕೂ

ಕುತೂಹಲಕರ. ಭೂತಾಪಮಾನದ ಏರಿಕೆಗೆ ಇಂಗಾಲದ ಡೈಆಕ್ಸೈಡ್‌ನ ಏರಿಕೆಯೇ ಮೂಲ ಕಾರಣ. ಏಕೆಂದರೆ ತಾಪಮಾನ

ಮತ್ತು ಇಂಗಾಲದ ಡೈಆಕ್ಸೆಡ್ ಪ್ರಮಾಣಗಳ ಏರಿಕೆ-ಇಳಿಕೆಗಳಿಗೆ ಪರಸ್ಪರ ಸಂಬಂಧವಿದೆ ಯೆಂದು ಸಾಮಾನ್ಯ ಜನರ ಅನಿಸಿಕೆ. ಆದರೆ ಬ್ರೂಕರ್ ಈ ಭವಿಷ್ಯವನ್ನು ನುಡಿದ ಸಮಯ ದಲ್ಲಿ ಭೂಮಿಯಾದ್ಯಂತ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು. ಆದರೆ ಹಲವು ದಶಕಗಳಿಂದ ಭೂತಾಪಮಾನದಲ್ಲಿ ಇಳಿಕೆಯಾಗಿತ್ತು. ಆದರೆ ಆತ ಈ ಗಂಭೀರ ಸಮಸ್ಯೆಯ ಎದುರಾಗುತ್ತಿರುವುದನ್ನು ಬೇರೆಯೇ ಆದ ರೀತಿಯಲ್ಲಿ ಊಹಿಸಿದ್ದ. ಆತ ಜಾಗತಿಕ ತಾಪಮಾನ ಕುರಿತು ಭವಿಷ್ಯ ನುಡಿಯಲು ಮೂರು ಸರಳ ಸೂತ್ರಗಳನ್ನು ಬಳಸಿಕೊಂಡಿದ್ದು. ವಿಜ್ಞಾನಿಗಳು ಇಂದಿಗೂ ಅವುಗಳನ್ನು ಬಳಸಿ ಕೊಳ್ಳುತ್ತಿದ್ದಾರೆ.

ಹೆಜ್ಜೆ 1: ಇಂಗಾಲದ ಡೈಆಕ್ಸೈಡ್ ವಿಸರ್ಜನಾ ಪ್ರಮಾಣವನ್ನು ಅಂದಾಜಿಸುವುದು.
1975ರಿಂದ ಪೆಟ್ರೋಲ್ ಮತ್ತಿತರ ಪಳೆ ಯುಳಿಕೆ ಜನ್ಯ ತೈಲಗಳ ಬಳಕೆಯಿಂದಾಗಿ ವಾತಾವರಣಕ್ಕೆ ಸೇರುವ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣದಲ್ಲಿ ಪ್ರತಿವರ್ಷವೂ 3ಶೇಕಡ ಹೆಚ್ಚಳವಾಗಲಿರುವುದನ್ನು ಬ್ರೂಕರ್ ಊಹಿಸಿದ್ದ. ಆದರೆ ಬ್ರೂಕರ್ ತನ್ನ ಲೆಕ್ಕಾಚಾರಕ್ಕೆ ಇತರ ಮಾನವಜನ್ಯ ಹಸಿರುಮನೆ ಅನಿಲಗಳು ಅಥವಾ ಧೂಳಿನ ಕಣಗಳ ಬಗ್ಗೆ ಈ ಪ್ರಬಂಧದಲ್ಲಿ ಹೆಚ್ಚಾಗಿ ಚರ್ಚಿಸಿಲ್ಲ.
ಹೆಜ್ಜೆ 2:  ಭವಿಷ್ಯದಲ್ಲಿ ವಾತಾವರಣದಲ್ಲಿ ದಟ್ಟೈಸಲಿರುವ ಇಂಗಾಲದ ಪ್ರಮಾಣವನ್ನು ಅಂದಾಜಿಸುವುದು.
ವಾತಾವರಣಕ್ಕೆ ವಿಸರ್ಜನೆಗೊಂಡ ಇಂಗಾಲದ ಡೈಆಕ್ಸೈ ಡ್‌ನ ನೈಜ ಪ್ರಮಾಣವನ್ನು ಅಂದಾಜಿಸುವ ಜೊತೆಗೆ ವಿಸರ್ಜನೆಯಾದ ಇಂಗಾಲದ ಡೈಆಕ್ಸೈಡ್‌ನ ಎಷ್ಟು ಪ್ರಮಾ ಣವು ವಾಯುವಿನಲ್ಲಿ ಉಳಿದುಕೊಂಡಿರುತ್ತದೆ ಎಂಬುದನ್ನು ಅರಿತುಕೊಳ್ಳುವ ಅಗತ್ಯವಿದೆ.

ಈ ಹಿಂದೆ ವಾತಾವರಣಕ್ಕೆ ಬಿಡುಗಡೆಯಾದ ಇಂಗಾಲದ ಡೈಆಕ್ಸೈಡ್ ಅನಿಲದ ಪ್ರಮಾಣ ಮತ್ತು ವಾಯುವಿನಲ್ಲಿ ಉಳಿದುಕೊಂಡ ಇಂಗಾಲದ ಪ್ರಮಾಣದ ಆಧಾರದಲ್ಲಿ ಬ್ರೂಕೆರ್, ಭವಿಷ್ಯತ್ತಿನಲ್ಲಿ ಜಾಗತಿಕ ತಾಪ ಮಾನವು ಭೂಮಿಗೆ ಒಡ್ಡಲಿರುವ ಅಪಾಯವನ್ನು ಗ್ರಹಿಸಿದ್ದನು.

ಪ್ರತಿ ವರ್ಷವೂ ಪರಿಸರಕ್ಕೆ ಇಂಗಾಲದ ಡೈಆಕ್ಸೈಡ್‌ನ ವಿಸರ್ಜನೆಯ ಪ್ರಮಾಣದಲ್ಲಿ 3 ಶೇಕಡ ಏರಿಕೆಯಾಗುತ್ತದೆ. ಆ ಪೈಕಿ ಶೇಕಡ 50ರಷ್ಟು ಇಂಗಾಲವು ವಾಯುವಿನಲ್ಲಿಯೇ ಸಂಗ್ರಹಗೊಳ್ಳುತ್ತದೆಯೆಂಬುದನ್ನು ಆತ ಆರಿತುಕೊಂಡಿದ್ದ.
1900ರಿಂದ 2010ರ ನಡುವಣ ಅವಧಿಯಲ್ಲಿ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣದಲ್ಲಿ 403 ಪಿಪಿಎಂ (ಪ್ರತಿ ಮಿಲಿಯಕ್ಕೆ ಒಂದು ಭಾಗ)ನಷ್ಟು ಏರಿಕೆಯಾಗಿರುವುದನ್ನು ಆತ ಗಮನಕ್ಕೆ ತೆಗೆದುಕೊಂಡಿದ್ದ.

ಹೆಜ್ಜೆ 3: ಜಾಗತಿಕ ಉಷ್ಣಾಂಶದ ಪರಿಣಾಮಗಳ ಲೆಕ್ಕಾಚಾರ
ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್‌ನ ಹೆಚ್ಚಳದಿಂದ ಭೂ ಉಷ್ಣಾಂಶವು ತೋರಿಸುವ ಪ್ರತಿಕ್ರಿಯೆಯು ಒಂದೇ ರೀತಿಯಾಗಿರಲಾರದು. ವಾಯುವಿನಲ್ಲಿ ಇಂಗಾಲದ ದಟ್ಟಣೆಯಲ್ಲಿ ತಲಾ 10 ಶೇಕಡ ಹೆಚ್ಚಳ ಉಂಟಾದಾಗ ಪರಿಸರದಲ್ಲಿ 0.3 ಡಿಗ್ರಿ ಉಷ್ಣಾಂಶ ಏರಿಕೆಯಾಗುವುದನ್ನು ಬ್ರೂಕೆರ್ ಅಂದಾಜಿಸಿದ್ದನು. ಮನಾಬೆ ಮತ್ತು ವೆದರೆಯ್ಡಾ ಎಂಬಿಬ್ಬರು ವಿಜ್ಞಾನಿಗಳು ಈ ಮೊದಲು ಮಾಡಿದ ಲೆಕ್ಕಾಚಾರಗಳನ್ನು ಆಧರಿಸಿ, ಆತ ಈ ನಿರ್ಧಾರಕ್ಕೆ ಬಂದಿದ್ದನು.

ಇಂಗಾಲದ ಡೈ ಆಕ್ಸೈಡ್‌ನಿಂದಾಗಿ ಜಾಗತಿಕ ತಾಪಮಾನದಲ್ಲಿ ಏರಿಕೆಯಾಗುವ ಕುರಿತು ಮುನ್ಸೂಚನೆ ನೀಡಿದವರಲ್ಲಿ ಬ್ರೂಕೆರ್ ಮೊದಲಿಗನೇನೂ ಅಲ್ಲ. 1965ರಲ್ಲಿ ಅಮೆರಿಕದ ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್‌ಗೆ ತಜ್ಞರ ತಂಡವೊಂದು ಸಲ್ಲಿಸಿದ ವರದಿಯು ಈ ಬಗ್ಗೆ ಎಚ್ಚರಿಕೆಯನ್ನು ನೀಡಿತ್ತು. ‘‘2000ನೆ ಇಸವಿಯ ಹೊತ್ತಿಗೆ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣದಲ್ಲಿ ಶೇಕಡ 25ರಷ್ಟು ಹೆಚ್ಚಳವಾಗಲಿದೆ. ಇದರಿಂದಾಗಿ ವಾತಾವರಣ ದಲ್ಲಿ ಗಣನೀಯವಾದ ಬದಲಾವಣೆಗಳನ್ನು ಉಂಟಾಗಬಹುದಾಗಿ ದೆಯೆಂದು’’ ಎಂದು ವರದಿಯು ಆತಂಕ ವ್ಯಕ್ತಪಡಿಸಿತ್ತು. 1972ರಲ್ಲಿ ಬ್ರೂಕೆರ್‌ನ ಭವಿಷ್ಯವಾಣಿಯನ್ನೇ ಹೋಲುವ ಪ್ರಬಂಧವೊಂದನ್ನು ಖ್ಯಾತ ಪರಿಸರ ವಿಜ್ಞಾನಿ ಜೆ.ಎಸ್.ಸಾವೆರ್, ಪ್ರಸಿದ್ಧ ವಿಜ್ಞಾನ ಪತ್ರಿಕೆ ನೇಚರ್‌ನಲ್ಲಿ ಪ್ರಕಟಿಸಿದ್ದರು.

ಕಳೆದ ಮೂರು ದಶಕಗಳಲ್ಲಿ ಇಂಗಾಲದ ಡೈ ಆಕ್ಸೈಡ್‌ನಿಂದಾಗಿ ಉಂಟಾಗುವ ತಾಪಮಾನ ಏರಿಕೆಯ ದುಷ್ಪರಿಣಾಮವನ್ನು ಕಡಿಮೆ ಗೊಳಿಸಲೋ ಎಂಬಂತೆ ವಾತಾವರಣವು ತನ್ನನ್ನು ತಾನಾಗಿಯೇ ತಂಪಾಗಿಸಿಕೊಳ್ಳುವ ಪ್ರಕ್ರಿಯೆಯನ್ನು ನಡೆಸಿರುವು ದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಆದರೆ ಮುಂದಿನ ದಶಕದಲ್ಲಿ ಇಂಗಾಲದ ಡೈಆಕ್ಸೈಡ್‌ನ ಅತೀವ ಏರಿಕೆಯಿಂದ, ಪರಿಸ್ಥಿತಿ ಕೈಮೀರಿ, ಈ ಪ್ರಾಕೃತಿಕ ಕೂಲಿಂಗ್ ಪ್ರಕ್ರಿಯೆಯು ಯಾವುದೇ ಪ್ರಯೋಜನವಾಗದು. ಹೀಗಾದಲ್ಲಿ ಕಳೆದ ಸಾವಿರ ವರ್ಷಗಳಲ್ಲೇ ಕಾಣದಂತಹ ತಾಪ ಮಾನವನ್ನು ಜಗತ್ತು ಮುಂದಿನ ಶತಮಾನದ ಮೊದಲ ದಶಕವು ಅನುಭವಿಸಲಿದೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಡವರ ಮಕ್ಕಳಿಗೆ ನಿರಾಕರಿಸಲ್ಪಟ್ಟ ಶಿಕ್ಷಣ

ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...


- ಎಸ್.ಬಾಲನ್,ಹೈಕೋರ್ಟ್ ವಕೀಲರು, ಬೆಂಗಳೂರು.

ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ

ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...


- ಗೋಪಾಲ್ ತ್ರಾಸಿ

ಅಂತರ ಜಾತಿಯ ವಿವಾಹ ಮೀಸಲಾತಿಗೆ ಅಡ್ಡಿಯಾಗದು: ಸರ್ವೋಚ್ಚ ನ್ಯಾಯಾಲಯದ ತೀರ್ಪು

ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...


- ಕೆ. ದೇಜಪ್ಪ

ಆರೆಸ್ಸೆಸ್ ಶಿಸ್ತಿನ ಒಳಗುಟ್ಟು

ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...


- ಸನತ್‌ ಕುಮಾರ ಬೆಳಗಲಿ

ನಿನ್ನನ್ನು ಒಳ್ಳೆಯ ಬ್ಯಾರಿ ಅಂತ ಹೇಗೆ ನಂಬುವುದು?

‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...


- ಚೇಳಯ್ಯ

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ-ಪ್ರಗತಿಪರರು

ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...


- ಡಾ ಜಿ. ಭಾಸ್ಕರ ಮಯ್ಯ

ಮನಸ್ಸಿನ ಅಸ್ವಸ್ಥತೆಗೆ ಮೂಲ ಕಾರಣ ಹುಡುಕಬೇಕು

ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...


- ಜ್ಯೋತಿ ಗುರುಪ್ರಸಾದ್

ದೂರಸಂಪರ್ಕ ನೀತಿ ಬೇಕಾಗಿದೆ

ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...


- ಅರವಿಂದ ರಾಜಗೋಪಾಲ