ಒಂದಾನೊಂದು ಊರಿನಲ್ಲಿ ಹೀಗೂ ಒಬ್ಬ ರಾಜನಿದ್ದ!
mail-img print-img

ಒಂದಾನೊಂದು ಊರಿನಲ್ಲಿ ಹೀಗೂ ಒಬ್ಬ ರಾಜನಿದ್ದ!

- ಶಾಹಿನಾ ಕೆ.ಕೆ.
ಮಂಗಳವಾರ - ಜನವರಿ -24-2012

ರಾಜನೆಂದಾಕ್ಷಣ ಭವ್ಯವಾದ ಆರಮನೆ, ಕಾವಲು ಭಟರು, ಕುದುರೆ, ಆನೆಗಳ ದೃಶ್ಯ ನಮ್ಮ ಕಣ್ಣಮುಂದೆ ಬರುತ್ತದೆ. ಆದರೆ ಈ ರಾಜ ಮಾತ್ರ ಅಂತಹ ಯಾವುದೇ ವಿಲಾಸಮಯ ಜೀವನವನ್ನೇನೂ ನಡೆಸುತ್ತಿರಲಿಲ್ಲ. ಬಣ್ಣಬಣ್ಣದ ವರ್ಣಚಿತ್ರಗಳಾಗಲಿ ಅಥವಾ ಸುಂದರ ಶಿಲಾಪ್ರತಿಮೆಗಳಾಗಲಿ ಅತನ ಅರಮನೆಯನ್ನು ಅಲಂಕರಿಸಿರಲಿಲ್ಲ. ಸಂಗೀತ, ನಾಟ್ಯ, ವಂಧಿಮಾಗದರ ಭೋಪರಾಕ್‌ಗಳಿಂದ ಕಳೆಗಟ್ಟುವ ದರ್ಬಾರ್ ಹಾಲ್ ಕೂಡಾ ಇರಲಿಲ್ಲ.ನಾಲ್ಕು ವರ್ಷಗಳ ಹಿಂದೆ ಪಟ್ಟವನ್ನೇರಿದ್ದ ಈ ರಾಜನಿಗೆ ಆಗ 25 ವರ್ಷ ವಯಸ್ಸು. ಆದರೆ ಆತನಿಗೆ ಈ ಅರಸೊತ್ತಿಗೆಯು ಶ್ರೀಮಂತಿಕೆಯನ್ನಾಗಲಿ ಅಥವಾ ಐಶಾರಾಮವನ್ನಾಗಲಿ ತಂದುಕೊಡಲಿಲ್ಲ. ಅದರ ಬದಲಿಗೆ, ಆತನಿಗೆ ಬದುಕುವುದೇ ಕಷ್ಟವಾಗುವಂತೆ ಮಾಡಿತು. ಮೂರು ಹೊತ್ತಿನ ಊಟಕ್ಕೂ ಪರದಾಡಬೇಕಾದ ದುಸ್ಥಿತಿ ಆತನದಾಯಿತು. ಪಟ್ಟದ ರಾಜನೆಂಬ ಕಾರಣದಿಂದಾಗಿ ಹೊಟ್ಟೆಪಾಡಿಗಾಗಿ ಬೇರೆಯವರ ಕೈಕೆಳಗೆ ದುಡಿಯಲೂ ಆಗದಂತಹ ತ್ರಿಶಂಕು ಬಾಳನ್ನು ಆತ ನಡೆಸಬೇಕಾಯಿತು.ದೊರೆಯಾದರೂ ದಟ್ಟದಾರಿದ್ರದಲ್ಲೇ ಜೀವನ ಸಾಗಿಸುತ್ತಾ ಕಳೆದ ವರ್ಷದ ಡಿಸೆಂಬರ್ 28ರಂದು ಕೊನೆಯುಸಿರೆಳೆದ ಕೇರಳದ ಮನ್ನಾನ್ ಬುಡಕಟ್ಟು ರಾಜವಂಶದ 16ನೆ ದೊರೆ ಅರಿಯನ್ ರಾಜಾ ಮನ್ನನ್‌ನ ದುರಂತ ಕಥೆಯಿದು....

***

ಕೇರಳ ರಾಜ್ಯದ 36 ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಮನ್ನಾನ್ ಪಂಗಡವು ಇವತ್ತಿಗೂ ತನ್ನದೇ ಆದ ಸಾಮ್ರಾಜ್ಯದ ವ್ಯವಸ್ಥೆಯನ್ನು ಪಾಲಿಸಿಕೊಂಡು ಬರುತ್ತಿದೆ ಹಾಗೂ ತಮ್ಮದು ಸಾರ್ವಭೌಮ ರಾಜ್ಯವೆಂದು ಪ್ರತಿಪಾದಿಸುತ್ತಿದೆ. ಈ ಪಂಗಡವು ತಮ್ಮ ಸಾಮ್ರಾಜ್ಯದ ಮೂಲ ಇತಿಹಾಸವು 18ನೆ ಶತಮಾನದಷ್ಟು ಪುರಾತನವೆಂದೂ ಹೇಳಿಕೊಳ್ಳುತ್ತಿದೆ.ಮನ್ನಾನ್ ಬುಡಕಟ್ಟು ಅತ್ಯಂತ ಅನನ್ಯವಾದ ಸ್ವಯಮಾಡಳಿತ ವ್ಯವಸ್ಥೆಯನ್ನು ಹೊಂದಿದೆ. ಮನ್ನಾನ್ ಪಂಗಡದ ರಾಜನಿಗೆ ಆಡಳಿತದಲ್ಲಿ ಸಹಕರಿಸಲು ಸಚಿವ ಮಂಡಳಿಯೂ ಇದೆ. ಕೇರಳದಲ್ಲಿರುವ 47 ಮನ್ನಾನ್ ವಸಾಹತುಗಳಿಗೆ ಈ ರಾಜ ಹೇಳಿದ್ದೇ ಕಾನೂನು. ಮಾತೃಮೂಲದಿಂದ ರಾಜನ ಉತ್ತರಾಧಿಕಾರಿಯ ಆಯ್ಕೆಯಾಗುತ್ತದೆ.

16ನೆ ದೊರೆ ಅರಿಯಾನ್ ರಾಜ ಮನ್ನಾನ್, ತನ್ನ ತಾಯಿಯ ಸೋದರ ತೇವನ್ ರಾಜ ಮನ್ನಾನ್‌ನ ನಿಧನದ ಬಳಿಕ ಆತನ ಉತ್ತರಾಧಿಕಾರಿಯಾಗಿ ಪಟ್ಟವೇರಿದ್ದ. ತೇವನ್ ರಾಜಾ ಮನ್ನಾನ್ 1995ರಲ್ಲಿ ಅಧಿಕಾರಕ್ಕೇರಿ, 12 ವರ್ಷಗಳ ಕಾಲ ಆಳಿದ್ದ. ಆತನ ಉತ್ತರಾಧಿಕಾರಿಯಾದ ಅರಿಯಾನ್ ರಾಜ ಮನ್ನಾನ್‌ನ ಪೂರ್ವಾಶ್ರಮದ ಹೆಸರು ರಮೇಶನ್. ಆತ ತನ್ನ ಸೋದರಮಾವ ತೇವನ್ ರಾಜಾ ಮನ್ನಾನ್ 2002ರಲ್ಲಿ ನಿಧನನಾದಾಗ ಕಲ್ಲು ಕೋರೆಯೊಂದರಲ್ಲಿ ದಿನಗೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ತೇವನ್ ರಾಜನ ಸೋದರಳಿಯರಲ್ಲಿ ರಮೇಶನ್ ಎಲ್ಲರಿಗಿಂತಲೂ ದೊಡ್ಡವ.ಹೀಗಾಗಿ ಆತ ಸಂಪ್ರದಾಯದಂತೆ 2007ರಲ್ಲಿ ಮನ್ನಾನ್ ಬುಡಕಟ್ಟಿಗೆ ಹಕ್ಕುಬದ್ಧವಾದ ಅರಸನಾಗಿ ಆಯ್ಕೆಯಾದ.



 

 

ಈ ರಾಜನಿಗೆ ಮೂರು ಹೊತ್ತಿನ ಊಟಕ್ಕೂ ತತ್ವಾರ

ಅರಿಯಾನ್ ರಾಜ ಯಾನೆ ರಮೇಶನ್ ಪಟ್ಟವನ್ನೇರಿದಾಗ ಆತನಿಗೆ 26 ವರ್ಷ ವಯಸ್ಸು. ಆತ ಈ ಗುರುತರವಾದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧನಾಗಿರಲಿಲ್ಲವೆಂದು ಆತನ ಪತ್ನಿ ಶಾಂತಿ ಹೇಳುತ್ತಾರೆ. ಅರಿಯಾನ್ ರಾಜ ವಿನಯಶೀಲ,ಹೃದಯವಂತ.ಆದರೆ ಆತ ತನ್ನ ಪೂರ್ವಾಧಿಕಾರಿಯಾದ ತೇವನ್ ರಾಜಾ ಮನ್ನಾನ್‌ನಷ್ಟು ಕುಶಾಗ್ರಮತಿಯಾಗಿರಲಿಲ್ಲವೆಂದು ಮನ್ನಾನ್ ಪಂಗಡದ ಮುಂದಾಳುಗಳಲ್ಲೊಬ್ಬರಾದ ಮ್ಯಾಥ್ಯೂ ಜಾರ್ಜ್ ಹೇಳುತ್ತಾರೆ. ಮನ್ನಾನ್ ಪಂಗಡದ ಆಡಳಿತ ವ್ಯವಸ್ಥೆಯಾದ ಕಾಂಚಿಯಾರ್ ಪಂಚಾಯತ್‌ನಲ್ಲಿ 12 ವರ್ಷಗಳಿಂದ ಸದಸ್ಯನಾಗಿರುವ ಮ್ಯಾಥ್ಯೂ ಜಾರ್ಜ್, ತೇವನ್ ರಾಜನನ್ನು ತುಂಬಾ ಹತ್ತಿರದಿಂದ ಬಲ್ಲವರು.

ತೇವನ್ ರಾಜ ಆಗಾಗ್ಗೆ ತಾನು ಯಾಕೆ ಅರಸನಾದೆನೋ ಎಂದು ತನ್ನನ್ನೇ ತಾನು ಹಳಿದುಕೊಳ್ಳುತ್ತಿದ್ದರೆಂದು ಜಾರ್ಜ್ ಹೇಳುತ್ತಾರೆ. ಅರಸೊತ್ತಿಗೆಯು ಆತನಿಗೆ ತುಂಬಾ ಹೊರೆಯಾಗಿತ್ತು. ಹೊಟ್ಟೆಪಾಡಿಗಾಗಿ ಬೇರೆಯವರ ಕೈಕೆಳಗೆ ದುಡಿಯಲು ಆತನಿಗೆ ಅರಸೊತ್ತಿಗೆಯ ಪ್ರತಿಷ್ಠೆ ಅಡ್ಡಬಂದಿತ್ತು. ಅದೇನಿದ್ದರೂ ಅರಿಯಾನ್ ರಾಜ ತನ್ನ ಪಂಗಡದ ಕ್ಷೇಮಾಭಿವೃದ್ಧಿಯ ಬಗ್ಗೆ ಅತೀವವಾದ ಕಾಳಜಿಯನ್ನು ಹೊಂದಿದ್ದ.ಬುಡಕಟ್ಟಿನ ನಿಯಮದಂತೆ ಮನ್ನಾನ್ ಸಮುದಾಯದ ಸದಸ್ಯರ ನಡುವೆ ಯಾವುದೇ ವಿವಾದ, ಸಮಸ್ಯೆಗಳಿರಲಿ ರಾಜ ತನ್ನದೇ ಆದ ತೀರ್ಮಾನ ಕೈಗೊಂಡು ಅದನ್ನು ಬಗೆಹರಿಸುತ್ತಿದ್ದ. ಆತನ ತೀರ್ಪನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಮದುವೆಯಿರಲಿ ಅಥವಾ ವಿಚ್ಛೇದನವಿರಲಿ ಏನೇ ವಿವಾದವಿದ್ದರೂ ಅವನ್ನು ತನ್ನ ‘ಸಂಪುಟ’ದ ಮಂತ್ರಿಗಳ ನೆರವನ್ನು ಪಡೆದು ಬಗೆಹರಿಸುತ್ತಿದ್ದ.

ಮನ್ನಾನ್ ಸಮುದಾಯದ ವಿವಿಧ ವಸಾಹತುಗಳ ಮುಖಂಡರನ್ನು (ಕನಿಯರು) ರಾಜ ತನ್ನ ಸಂಪುಟದ ಸಚಿವರನ್ನಾಗಿ ಆಯ್ಕೆ ಮಾಡುತ್ತಾನೆ. ಈ ಕನಿಯರಿಗೆ ಏಳು ಮಂದಿ ಸಹಾಯಕರಿರುತ್ತಾರೆ.ಸಮುದಾಯದೊಳಗಿನ ವಿವಾದಗಳನ್ನು ಬಗೆಹರಿಸುವ ಜೊತೆಗೆ ಈ ಸಚಿವರು, ದೊರೆಗೆ ‘ಬಾಹ್ಯ ವ್ಯವಹಾರ’ಗಳಲ್ಲೂ ನೆರವಾಗುತ್ತಾರೆ. ಉದಾಹರಣೆಗೆ ಆಧುನಿಕ ರಾಜ್ಯಾಡಳಿತ ವ್ಯವಸ್ಥೆಯೊಂದಿಗೆ ಆದಿವಾಸಿಗಳ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಮಾತುಕತೆ ನಡೆಸಲು ಈ ಸಚಿವ ಸಂಪುಟವು ದೊರೆಗೆ ಸಲಹೆ, ಸೂಚನೆಗಳನ್ನು ನೀಡುತ್ತದೆ.ಅರಿಯಾನ್ ರಾಜ ಮನ್ನಾನ್ ಆಗಲಿ ಅಥವಾ ಅವರ ಪೂರ್ವಾಧಿಕಾರಿ ತೇವನ್ ರಾಜಾ ಆಗಲಿ , ಆದಿವಾಸಿಗಳ ಹಕ್ಕುಗಳು, ಬುಡಕಟ್ಟು ಪ್ರದೇಶಗಳಲ್ಲಿ ರಸ್ತೆಗಳು ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ಕುರಿತು ಸಕ್ರಿಯ ಹೋರಾಟ ನಡೆಸಿದ್ದರೆಂದು ಜಾರ್ಜ್ ಹೇಳುತ್ತಾರೆ.

ಈಗ ಜ್ವಲಂತ ಸಮಸ್ಯೆಯಾಗಿರುವ ಮುಲ್ಲಪೆರಿಯಾರ್ ಅಣೆಕಟ್ಟು ಹೋರಾಟದಲ್ಲೂ ಅರಿಯಾನ್ ರಾಜ ಮನ್ನಾನ್ ಪಾಲ್ಗೊಂಡಿದ್ದ.ಹಿಂದಿನ ದೊರೆ ತೇವನ್ ರಾಜ ಮನ್ನಾನ್ ಕೂಡಾ ರಾಜ್ಯ ಸರಕಾರದ ಭೂಸ್ವಾಧೀನದ ವಿರುದ್ಧ ಆದಿವಾಸಿಗಳು ನಡೆಸಿದ ಪ್ರತಿಭಟನೆಯನ್ನು ಮುನ್ನಡೆಸಿದ್ದ. ಆತನ ನೇತೃತ್ವದಲ್ಲಿ ಆದಿವಾಸಿಗಳು 50 ಎಕರೆಯಷ್ಟು ಕಂದಾಯ ಭೂಮಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ತೇವನ್ ರಾಜ, ವಯನಾಡಿನಲ್ಲಿ ಸರಕಾರದಿಂದ ಬುಡಕಟ್ಟು ಜನತೆಯ ಭೂಸ್ವಾಧೀನದ ವಿರುದ್ಧ ಆದಿವಾಸಿ ನಾಯಕಿ ಸಿ.ಕೆ. ಜಾನು ನಡೆಸಿದ ಹೋರಾಟದಿಂದ ಸ್ಫೂರ್ತಿ ಪಡೆದಿದ್ದ. 2002ರಲ್ಲಿ ಆತ ಇಡುಕ್ಕಿ ಜಿಲ್ಲೆಯಲ್ಲಿ ಆದಿವಾಸಿಗಳ ಗುಂಪೊಂದು ಸರಕಾರದ ಕಂದಾಯ ಜಾಗವನ್ನು ಅಕ್ರಮಿಸಿಕೊಂಡು ಚಳವಳಿಗಿಳಿಯಿತು. ತೇವನ್ ರಾಜ ಈ ಹೋರಾಟದ ನೇತೃತ್ವ ವಹಿಸಿದ್ದ. ಕೊನೆಗೆ ಪೊಲೀಸರು ಬಲಪ್ರಯೋಗಿಸಿ ಪ್ರತಿಭಟನಕಾರರನ್ನು ಚದುರಿಸಿದ್ದರು.

ಆದರೆ ಜಗ್ಗದ ಆದಿವಾಸಿಗಳು ತೇವನ್‌ರಾಜನ ನೇತೃತ್ವದಲ್ಲಿ ಒಂದು ತಿಂಗಳವರೆಗೂ ಸತ್ಯಾಗ್ರಹ ನಡೆಸಿದರು. ಕೊನೆಗೂ ಮಣಿದ ರಾಜ್ಯ ಸರಕಾರವು 47 ಕುಟುಂಬಗಳಿಗೆ ಭೂಮಿಯ ಹಕ್ಕನ್ನು ನೀಡಿತ್ತು. ತನ್ನ ಸೋದರಮಾವ ತೇವನ್ ರಾಜ ಮನ್ನಾನ್ ಹಾಕಿಕೊಟ್ಟ ಹಾದಿಯಲ್ಲೇ ಮುನ್ನಡೆಯಲು ಅರಿಯಾನ್ ರಾಜ ಮನ್ನಾನ್ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದ. ಮನ್ನಾನ್ ಪಂಗಡ ಪ್ರಾಬಲ್ಯವಿರುವ ಕೋಯಿಮಲೆಯ ರಸ್ತೆ ಅತ್ಯಂತ ಕಳಪೆಯಾಗಿದ್ದರಿಂದ ವಾಹನ ಸಂಚಾರವೇ ದುಸ್ತರವಾಗಿತ್ತು. ಆ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ವಹಿಸಿ, ಅದನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಅರಿಯಾನ್ ರಾಜ ಚಳವಳಿಯನ್ನು ನಡೆಸಿದ್ದ. ಮನ್ನಾನ್ ತಾಂಡಾಗಳನ್ನು ವಿದ್ಯುದೀಕರಣಗೊಳಿಸುವುದಕ್ಕಾಗಿಯೂ ಆತ ಧರಣಿ ನಡೆಸಿದ್ದ. ಏನೇ ಇರಲಿ ಈ ಚಳವಳಿಗಳು ಕೇರಳದಲ್ಲಿ ಬುಡಕಟ್ಟು ಪಂಗಡಗಳ ಸ್ಥಿತಿಗತಿಗಳ ಬಗ್ಗೆ ಬಾಹ್ಯ ಪ್ರಪಂಚದ ಗಮನಸೆಳೆಯುವುದರಲ್ಲಿ ಯಶಸ್ವಿಯಾದವು.

ಹಾಗೆ ನೋಡಿದರೆ ಅರಿಯಾನ್ ರಾಜನಿಗೆ ಸ್ವಂತದ್ದೆಂದು ಹೇಳಿಕೊಳ್ಳಲು ಒಂದು ತುಂಡು ಜಮೀನು ಕೂಡಾ ಇರಲಿಲ್ಲ. ಆತ ತನ್ನ ಪತ್ನಿಯ ಕುಟುಂಬದ ಜೊತೆ ಮುರಿಂಗಟ್ಟುಪಾಡಿಯಲ್ಲಿ ಉಳಕೊಂಡಿದ್ದ. ಅದು ಮನ್ನಾನ್ ರಾಜವಂಶದ ಪಾರಂಪರಿಕ ಕೇಂದ್ರಸ್ಥಳವಾದ ಕೋಯಿಮಲದಿಂದ 7 ಕಿ.ಮೀ. ದೂರದಲ್ಲಿದೆ. ಕೋಯಿಮಲೆಲ್ಲಿರುವ ರಾಜವಂಶದ ಆರಮನೆಯನ್ನು, ಹಿಂದಿನ ದೊರೆ ತೇವನ್ ರಾಜಾ ಮನ್ನ್ನಾನ್‌ನ ಹೆಂಡತಿ ಹಾಗೂ ಆಕೆಯ ಕುಟುಂಬಿಕರು ಆಕ್ರಮಿಸಿಕೊಂಡಿದ್ದರು. ಹೀಗೆ ದೊರೆ ಅರಿಯಾನ್ ರಾಜಾ ಮನ್ನಾನ್‌ಗೆ ಸಿಗಬೇಕಾದ ಅರಮನೆ ಕೂಡಾ ಕೈತಪ್ಪಿ, ಬೀದಿಗೆ ಬೀಳುವಂತಹ ಪರಿಸ್ಥಿತಿಯುಂಟಾಯಿತು. ಕೊನೆಗೆ ಆತ ತನ್ನ ಹೆಂಡತಿಯ ಹೆಸರಿನಲ್ಲಿದ್ದ ಜಮೀನಿನಲ್ಲಿ ಮನೆಕಟ್ಟಲು ಸರಕಾರದ ನೆರವು ಯಾಚಿಸಿದ. ದುರದೃಷ್ಟವಶಾತ್ ಅದರಲ್ಲಿ ವಾಸಿಸುವ ಸುಯೋಗ ಮಾತ್ರ ಆತನಿಗೆ ದೊರೆಯಲಿಲ್ಲ. ಆ ಮನೆಯ ನಿರ್ಮಾಣ ಕಾರ್ಯ ಇನ್ನೂ ಪೂರ್ತಿಯಾಗದೆ ಅರ್ಧದಲ್ಲೇ ನಿಂತಿದೆ.

ಆದರೆ ಅರಿಯಾನ್ ರಾಜಾ ಮನ್ನ್ನಾನ್‌ನ ನಿಕಟಬಂಧುಗಳ ಪ್ರಕಾರ, ಆತ ಮದ್ಯಪಾನದ ವ್ಯಸನಿಯಾಗಿದ್ದ. ಮದ್ಯಪಾನದ ಚಟವನ್ನು ಬಿಡಿಸಲು ಕಳೆದ ಮೂರು ತಿಂಗಳಿಂದ ಚಿಕಿತ್ಸೆ ಕೂಡಾ ಪಡೆಯುತ್ತಿದ್ದನೆಂಬುದನ್ನು ಪತ್ನಿ ಶಾಂತಿ ಕೂಡಾ ಒಪ್ಪುತ್ತಾಳೆ. ತನ್ನ ಪತಿ ಯಾವ ಕಾಯಿಲೆಯಿಂದ ಬಳಲುತ್ತಿದ್ದನೆಂಬುದೇ ಆಕೆಗೆ ಮೊದಮೊದಲು ತಿಳಿದಿರಲಿಲ್ಲ. ಕೊನೆಗೆ ಅರಿಯಾನ್‌ರಾಜನಿಗೆ ಎದೆನೋವು ಕಾಣಿಸಿಕೊಂಡಾಗ ಬಂಧುಗಳು ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದ ಬಳಿಕವಷ್ಟೇ ಆಕೆಗೆ ತನ್ನ ಪತಿ ಕರುಳಿನ ಉರಿಯೂತದಿಂದ ಬಳಲುತ್ತಿರುವುದು ಗೊತ್ತಾಯಿತು. ಅರಿಯಾನ್ ರಾಜಾ ಮನ್ನಾನ್‌ನ ದೇಹಸ್ಥಿತಿ ತೀರಾ ಹದಗೆಟ್ಟಿರುವುದನ್ನು ಅರಿತ ಸ್ಥಳೀಯ ಆಸ್ಪತ್ರೆಯ ವೈದ್ಯರು, ಆತನನ್ನು ಕೊಟ್ಟಾಯಂ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕೊಂಡೊಯ್ಯುವಂತೆ ತಿಳಿಸಿದರು.ಆದರೆ ವೈದ್ಯರ ಸಲಹೆಗೆ ಬಂಧುಗಳು ಕಿವಿಗೊಡಲಿಲ್ಲ. ಇದಾದ ನಾಲ್ಕು ದಿನಗಳ ಬಳಿಕ ರಾಜಾ ಮನ್ನಾನ್ ಹೃದಯಾಘಾತದಿಂದ ಕೊನೆಯುಸಿರೆಳೆದ. ಮನ್ನಾನ್ ರಾಜವಂಶದ 16ನೆ ದೊರೆಯ ಬದುಕು ಹೀಗೆ ಧಾರುಣ ಅಂತ್ಯ ಕಂಡಿತು.

ಮನ್ನಾನ್ ಬುಡಕಟ್ಟು: ಇವರಿಗೆ ನಿಸರ್ಗವೇ ಉಸಿರು

ಕೇರಳದ ಮನ್ನಾನ್ ಬುಡಕಟ್ಟು ಜನರು ಮೂಲತಃ ಅರಣ್ಯವಾಸಿಗಳು. ಇಡುಕ್ಕಿ ಜಿಲ್ಲೆಯ ಸುಂದರ ಗುಡ್ಡಗಾಡು ಪ್ರದೇಶವಾದ ಕೋಯಿಮಲೆಯಲ್ಲಿ ಇವರು ಅತ್ಯಧಿಕ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇವರು ಕೇರಳದ ತೆಕ್ಕಾಡಿ ದಟ್ಟಾರಣ್ಯ ಪ್ರದೇಶದ ಮೂಲನಿವಾಸಿಗಳು. ಹಬ್ಬಗಳು, ನೃತ್ಯ ಹಾಗೂ ಸಂಗೀತ ಇವರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಪ್ರತಿಯೊಂದು ಹಬ್ಬವನ್ನು ಇವರು ಹಾಡು, ನೃತ್ಯಗಳೊಂದಿಗೆ ಆಚರಿಸುತ್ತಾರೆ. ಸುಗ್ಗಿ ಇವರ ಅತ್ಯಂತ ಪ್ರಧಾನವಾದ ಹಬ್ಬವಾಗಿದೆ. ಸುಗ್ಗಿ ಹಬ್ಬದಂದು ಮನ್ನಾನ್ ಸಮುದಾಯದವರೆಲ್ಲರೂ ನಿರ್ದಿಷ್ಟ ಗ್ರಾಮವೊಂದರಲ್ಲಿ ಒಟ್ಟು ಸೇರುತ್ತಾರೆ. ಮನ್ನಾನ್ ದೊರೆ ಉತ್ಸವದ ನೇತೃತ್ವ ವಹಿಸುತ್ತಾನೆ.ದಿನವಿಡೀ ಹಾಡು,ಕುಣಿತ ಹಾಗೂ ಭೂರಿ ಭೋಜನದೊಂದಿಗೆ ಮನ್ನಾನ್ ಪಂಗಡ ಸುಗ್ಗಿ ಹಬ್ಬವನ್ನಾಚರಿಸುತ್ತದೆ.


ಮನ್ನಾನ್ ಸಮುದಾಯವು ನಿಸರ್ಗದ ಶಕ್ತಿಗಳನ್ನು ಆರಾಧಿಸುತ್ತಾರೆ. ಪೂರ್ವಿಕರನ್ನು ಪೂಜಿಸುವ ಪದ್ಧತಿಯೂ ಅವರಲ್ಲಿದೆ. ಆದಾಗ್ಯೂ ಮನ್ನಾನ್ ಪಂಗಡದವರಲ್ಲಿ ವಿವಿಧ ಧರ್ಮಗಳ ಆಚಾರವಿಚಾರಗಳನ್ನು ಅನುಸರಿಸುವವರೂ ಇದ್ದಾರೆ.ಕಾಡುತ್ಪತ್ತಿ ಸಂಗ್ರಹ ಹಾಗೂ ಬೇಟೆ ಮನ್ನಾನ್ ಬುಡಕಟ್ಟು ಜನರ ಕುಲಕಸುಬಾದರೂ, ಇತ್ತೀಚಿನ ದಶಕಗಳಲ್ಲಿ ಅವರು ಕೃಷಿಕ ವೃತ್ತಿಯಲ್ಲಿ ತೊಡಗಿದ್ದಾರೆ. ಕೆಲವು ಮನ್ನಾನ್ ಜನರು ಈಗಲೂ ಜೇನು ಸಂಗ್ರಹ, ಮೀನುಗಾರಿಕೆ ಹಾಗೂ ಜಾನುವಾರು ಸಾಕಣೆಯನ್ನೇ ಅವಲಂಭಿಸಿದ್ದಾರೆ.ಪ್ರತಿಯೊಂದು ಮನ್ನಾನ್ ತಾಂಡದಲ್ಲಿ ಹತ್ತರಿಂದ ಹದಿನೈದು ಮನೆಗಳಿರುತ್ತವೆ. ಮನ್ನಾನ್ ಪಂಗಡದ ಪ್ರತಿಯೊಬ್ಬ ಸದಸ್ಯನ ಮನೆಯೂ ಬೆಟ್ಟದ ಬುಡದಲ್ಲೇ ಇರುತ್ತದೆ.


 



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್