
ಭಾರತದ ರಸ್ತೆಗಳಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಓರ್ವ ವ್ಯಕ್ತಿ ಅಪಘಾತದಲ್ಲಿ ಸಾಯುತ್ತಾನೆ. ಪ್ರಾಯಶಃ ಈ ಲೇಖನ ವನ್ನು ಓದಿ ಮುಗಿಸುವ ಹೊತ್ತಲ್ಲಿ ಭಾರತದ ಯಾವುದೋ ಒಂದೆಡೆ ಯಾರಾದರೊಬ್ಬರು ಅವಘಡದಲ್ಲಿ ಪ್ರಾಣಕಳೆದು ಕೊಂಡಿರುತ್ತಾರೆ.ಹೌದು ಈ ಅಂಕಿಅಂಶಗಳು ಅಚ್ಚರಿಯೆನಿಸುತ್ತದೆಯಲ್ಲವೇ. ಆದರೆ ಅವು ನೂರಕ್ಕು ನೂರರಷ್ಟು ನಿಜ. ಭಾರತದಲ್ಲಿ ರಸ್ತೆ ದಾಟುವುದೆಂದರೆ ವಿಡಿಯೋ ಗೇಮ್ ಆಡಿದಂತೆ. ಆದರೆ ವಿಡಿಯೋಗೇಮ್‌ನಲ್ಲಿ ಪ್ರಾಣ ಹೋಗುವ ಪ್ರಶ್ನೆ ಇಲ್ಲ.ಆದರೆ ನಮ್ಮ ದೇಶದ ಕೆಲವು ರಸ್ತೆಗಳಲ್ಲಿ ಎಂತಹ ಪರಿಸ್ಥಿತಿಯಿದೆಯೆಂದರೆ ಜನರು ಪ್ರಾಣವನ್ನೇ ಕೈಲಿ ಹಿಡಿದು ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಶೇ.90ರಷ್ಟು ಪಾದಚಾರಿಗಳು ತಾವು ರಸ್ತೆಗಳಲ್ಲಿ ಸುರಕ್ಷಿತರಲ್ಲವೆಂಬ ಭಾವನೆ ಹೊದಿದ್ದಾರೆಂದು ಕೇಂದ್ರೀಯ ರಸ್ತೆ ಸಂಶೋಧನಾ ಸಂಸ್ಥೆಯ ವರದಿಯೊಂದು ತಿಳಿಸಿದೆ.ಹಾಗಾದರೆ ನಮ್ಮ ದೇಶದ ರಸ್ತೆಗಳಲ್ಲಿ ಇಂತಹ ಆತಂಕಕಾರಿ ಪರಿಸ್ಥಿತಿ ಸೃಷ್ಟಿಯಾಗಿರುವುದಕ್ಕೆ ಯಾರನ್ನು ದೂಷಿಸಬೇಕು?. ರಸ್ತೆ ಅವಘಡಗಳಲ್ಲಿ ಮೃತಪಟ್ಟವರು ಅಥವಾ ಗಾಯಗೊಂಡವರಲ್ಲಿ ಶೇ.50ರಷ್ಟು ಮಂದಿ ಪಾದಚಾರಿಗಳಾಗಿರುತ್ತಾರೆಂದು ನಿವೃತ್ತ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ಹೇಳುತ್ತಾರೆ. ‘‘ವಿವಿಧ ರೋಗಗಳಲ್ಲಿ ಸಾವನ್ನಪ್ಪುವವರಿಗಿಂತಲೂ ಅಧಿಕ ಮಂದಿ ರಸ್ತೆ ಅವಘಡಗಳಲ್ಲಿ ಪ್ರಾಣಕಳೆದುಕೊಳ್ಳುತ್ತಾರೆ’’ಎನ್ನುತ್ತಾರೆ.
ಭಾರತದಲ್ಲಿ ಸಂಭವಿಸುವ ಸಾವುಗಳಿಗೆ ರಸ್ತೆ ಅವಘಡಗಳು ಮೂರನೆಯ ಅತಿ ದೊಡ್ಡ ಕಾರಣವಾಗಿದೆ. ನಮ್ಮ ದೇಶದಲ್ಲಿ ಪ್ರತಿ ವರ್ಷವೂ ಸುಮಾರು 2 ಲಕ್ಷ ಮಂದಿ ಮಲೇರಿಯಾಕ್ಕೆ ಬಲಿಯಾಗುತ್ತಿದ್ದರೆ, ರಸ್ತೆ ಅವಘಡದಲ್ಲಿ ಬರೋಬ್ಬರಿ 1.35 ಸಾವಿಗೀಡಾಗುತ್ತಿದ್ದಾರೆ. ಹೀಗೆ ಭೀಕರ ರಸ್ತೆ ಅವಘಡಗಳಿ ಗಂತೂ ಭಾರತವು ವಿಶ್ವಕ್ಕೆ ನಾಯಕನಾಗಿದೆ. ಅದರಲ್ಲೂ ಮದ್ಯ ಸೇವಿಸಿ ವಾಹನ ಚಾಲನೆಯಿಂದಾಗಿಯೇ ಶೇ.70ರಷ್ಟು ರಸ್ತೆ ದುರಂತಗಳು ಸಂಭವಿಸುತ್ತಿವೆಯೆಂಬ ಕಳವಳಕಾರಿ ವಿಚಾರ ವೊಂದು ಕೂಡಾ ಈಗ ಬೆಳಕಿಗೆ ಬಂದಿದೆ.ಇಷ್ಟಕ್ಕೂ ಮದ್ಯ ಸೇವಿಸಿ ವಾಹನ ಚಾಲನೆಯು ಭಾರತದಲ್ಲಿ ವ್ಯಾಪಕವಾಗಿರಲು ಕಾರಣವೇನು? ಹೆಚ್ಚಿನವರ ಅಭಿಪ್ರಾ ಯದ ಪ್ರಕಾರ ಇಲ್ಲಿನ ಸಂಚಾರ ಕಾನೂನುಗಳು ಅತ್ಯಂತ ದುರ್ಬಲವಾಗಿವೆ.
‘‘ಭಾರತದಲ್ಲಿ ಮದ್ಯ ಸೇವಿಸಿ ವಾಹನ ಚಾಲನೆಯ ಪಿಡುಗು ಸರ್ವೇಸಾಮಾನ್ಯವಾಗಿದೆ. ಏಕೆಂದರೆ ಸರಕಾರವಾಗಲಿ ಅಥವಾ ಸಾರ್ವಜನಿಕರಾಗಲಿ ಅದೊಂದು ಗಂಭೀರ ಅಪರಾಧವೆಂದು ಪರಿಗಣಿಸಿಯೇಇಲ್ಲ’’ ಎಂದು 2001ರಲ್ಲಿ ಮದ್ಯಸೇವಿಸಿ ವಾಹನ ಚಾಲನೆ ವಿರೋ ಅಭಿಯಾನ (ಸಿಎಡಿಡಿ)ವನ್ನು ಆರಂಭಿಸಿರುವ ಪ್ರಿನ್ಸ್ ಸಿಂಘಾಲ್ ಹೇಳುತ್ತಾರೆ.ಮದ್ಯ ಸೇವಿಸಿ ವಾಹನ ಚಾಲನೆ ಕುರಿತ ಅಪರಾಧಗಳಿಗೆ ಸಂಬಂಧಪಟ್ಟ 1988ರ ಮೋಟಾರ್‌ವಾಹನ ಕಾಯ್ದೆಯ ಸೆಕ್ಷನ್ 185 ಪ್ರಕಾರ ಪ್ರತಿ 100 ಮಿ.ಲೀ. ರಕ್ತದಲ್ಲಿ ಅಲ್ಕೋ ಹಾಲ್ ಮಟ್ಟವು 30 ಮಿಲಿ ಗ್ರಾಂ (ಅಥವಾ ಎರಡು ಗ್ಲಾಸ್ ನಷ್ಟು ರೆಡ್ ವೈನ್ ಅಥವಾ ಎರಡು ಪಿಂಟ್ ಬೀರ್ ಸೇವಿಸಿ ದ್ದಲ್ಲಿ) ಇರುವ ವ್ಯಕ್ತಿಯು ವಾಹನ ಚಲಾಯಿಸಿದಲ್ಲಿ, ಆತನಿಗೆ ಆರು ತಿಂಗಳ ಜೈಲು ವಾಸ ಅಥವಾ ಹೆಚ್ಚೆಂದರೆ 2 ಸಾವಿರ ರೂ. ದಂಡ ವಿಸಬಹುದಾಗಿದೆ.
ಆದರೆ ಇದು ಜಾಮೀನು ನೀಡಬಹುದಾದ ಅಪರಾಧವೆಂದು ಪರಿಗಣಿಸಲಾಗಿದೆ. ಆದರೆ ಮದ್ಯ ಸೇವಿಸಿ ವಾಹನ ಚಲಾಯಿಸಿದ ವ್ಯಕ್ತಿಗಳು ಜೈಲು ಶಿಕ್ಷೆ ಅನುಭವಿಸಿದ ಪ್ರಕರಣಗಳು ನಮ್ಮ ದೇಶದಲ್ಲಿ ಅತ್ಯಂತ ವಿರಳ. ಇನ್ನು 2 ಸಾವಿರ ರೂ. ದಂಡದ ವಿಚಾರಕ್ಕೆ ಬಂದರೆ ಮದ್ಯ ಪಾನ ವ್ಯಸನಿಗಳಲ್ಲಿ ಒಂದು ವಾರದಲ್ಲಿ ಕುಡಿತಕ್ಕಾಗಿ ಅದರ ಎರಡು ಪಟ್ಟು ಹಣ ಖರ್ಚು ಮಾಡುವವರಿದ್ದಾರೆ.ಇಂತಹ ಹಗುರವಾದ ಸಜೆಗಳಿಂದ ನಮ್ಮ ದೇಶದಲ್ಲಿ ಅವಘಡದ ಪ್ರಮಾಣವನ್ನು ಕಡಿಮೆಗೊಳಿಸ ಬಹುದೆಂಬುದನ್ನು ನಿರೀಕ್ಷಿಸುವುದೇ ಬರೀ ಹಗಲುಗನಸೇ ಸರಿ. ಹೀಗಾಗಿ ಈ ಕಾಯ್ದೆ, ಕಾನೂನುಗಳು ಹಲ್ಲು, ಉಗುರುಗಳಿಲ್ಲದ ಹುಲಿಯಂತೆ ಮಕಾಡೆ ಮಲಗಿವೆ.
ಇದಕ್ಕೂ ಅತ್ಯಂತ ಆತಂಕಕಾರಿಯಾದುದೆಂದರೆ, ಪಾನಮತ್ತ ವಾಹನ ಚಾಲಕನಿಂದಾಗಿ ಸಂಭವಿಸಿದ ಸಾವಿನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಯಾವುದೇ ನಿರ್ದಿಷ್ಟ ಕಾನೂನು ಕೂಡಾ ಇಲ್ಲದಿರುವುದು. ನಿರ್ಲಕ್ಷದ ವಾಹನ ಚಾಲನೆ ಅಥವಾ ಒರಟು ವಾಹನ ಚಾಲನೆಯ ಪ್ರಕರಣಗಳ ಕುರಿತಾದ ಭಾರತೀಯ ದಂಡ ಸಂಹಿತೆಯ 304ಎ ಸೆಕ್ಷನ್ ಕಾಯ್ದೆಯಡಿಯಲ್ಲಿಯೇ ಪಾನಮತ್ತ ಚಾಲಕನಿಂದ ಸಂಭವಿಸಿದ ಸಾವಿನ ಪ್ರಕರಣವನ್ನೂ ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಈ ಅಪರಾಧಕ್ಕೆ ನೀಡಲಾಗುವ ಗರಿಷ್ಠ ಶಿಕ್ಷೆಯೆಂದರೆ ಬರೀ ಎರಡು ವರ್ಷಗಳ ಜೈಲು ವಾಸ ಹಾಗೂ ದಂಡ. ಅಂದ ಹಾಗೆ ಇದು ಕೂಡಾ ಜಾಮೀನು ದೊರಕಬಲ್ಲಂತಹ ಅಪರಾಧ.
ಮುಂಬೈನ ಅಲ್ಲಿಸ್ಟರ್ ಪಿರೇರಾನ ಪ್ರಕರಣವನ್ನೇ ನೋಡಿ. 2006ರಲ್ಲಿ ಆತ ಮದ್ಯದ ನಶೆಯಲ್ಲಿ ಕಾರು ಚಲಾ ಯಿಸಿ ಏಳು ಮಂದಿ ಕಟ್ಟಡ ಕಾರ್ಮಿಕ ರನ್ನು ಡಿಕ್ಕಿ ಹೊಡೆದು ಅವರ ಸಾವಿಗೆ ಕಾರಣ ನಾದ. ಆದರೆ ಆತನಿಗೆ ದೊರೆತ ಶಿಕ್ಷೆಯೆಷ್ಟು ಗೊತ್ತೇ? ಕೇವಲ ಮೂರು ವರ್ಷಗಳ ಜೈಲು ವಾಸ. ದಿಲ್ಲಿಯ ಉದ್ಯಮಿ ಸಂಜಯ್ ನಂದಾ ತನ್ನ ದುಬಾರಿ ಬಿಎಂಡಬ್ಲು ವಾಹನದಡಿಗೆ ಇಬ್ಬರು ಪೊಲೀಸರು ಸೇರಿದಂತೆ ಆರು ಮಂದಿ ಯನ್ನು ಬೀಳಿಸಿ, ಕೊಂದರೂ ಆತ ಕೇವಲ ಎರಡು ವರ್ಷ ಸೆರೆಮನೆ ವಾಸ ಅನುಭವಿಸಿದ.
‘‘ಈ ಕ್ರಿಮಿನಲ್ ಅಪರಾಧದ ಬಗ್ಗೆ ಸರಕಾರದ ಈ ಬೇಜವಾಬ್ದಾರಿಯ ನಿಲುವು ಯಾಕೆಂದು ನನಗೇ ಅರ್ಥವೇ ಆಗುತ್ತಿಲ್ಲ’’ ಎಂದು ನಿವೃತ್ತ ನ್ಯಾಯಮೂರ್ತಿ ರಾಜೀಂದರ್ ಸಾಚಾರ್ ಹೇಳುತ್ತಾರೆ. ಮದ್ಯ ಸೇವಿಸಿ ವಾಹನ ಚಲಾಯಿಸುವ ಯಾರಿಗೂ ಕೂಡಾ ಕಡಿಮೆಯೆಂದರೆ ಏಳು ವರ್ಷಗಳ ಜೈಲು ಶಿಕ್ಷೆ ವಿಸಲೇಬೇಕೆಂದು ಅವರು ಪ್ರತಿಪಾದಿ ಸುತ್ತಾರೆ.ಒರಟು ಹಾಗೂ ನಿರ್ಲಕ್ಷದ ವಾಹನ ಚಾಲನೆಯ ಅಪರಾಧಗಳಿಗೆ ಸಂಬಂಧಪಟ್ಟ 304ಎ ಸೆಕ್ಷನ್ ಜಾರಿಗೊಂಡದ್ದು 1951ರಲ್ಲಿ. ಆಗ ನಮ್ಮ ದೇಶದಲ್ಲಿ ಕಾರು ಮತ್ತಿತರ ವಾಹನ ಗಳು ಕಡಿಮೆ ಸಂಖ್ಯೆಯಲ್ಲಿದ್ದವು. ಕುದುರೆಗಳು, ಎತ್ತಿನ ಗಾಡಿಗಳೇ ಅಕವಾಗಿ ಕಾಣುತ್ತಿದ್ದವು. ಆದರೆ ಈಗಿನ ಪರಿಸ್ಥಿತಿ ಬೇರೆಯೇ ಆಗಿದೆ. ಹೀಗಾಗಿ ಆ ಕಾಯ್ದೆ ಅಪ್ರಸ್ತುತವಾಗಿದೆ ಯೆಂದು ಸಾಚಾರ್ ಹೇಳುತ್ತಾರೆ.
ಮದ್ಯ ಸೇವಿಸಿ ವಾಹನ ಚಾಲನೆಯನ್ನು ಜಾಮೀನು ನೀಡಲಾಗದಂತಹ ಅಪರಾಧವೆಂದು ಪರಿಗಣಿಸಬೇಕೆಂದು ಸಾಚಾರ್ ಆಗ್ರಹಿಸುತ್ತಾರೆ. ಪಾನಮತ್ತರಾಗಿ ಡ್ರೈವಿಂಗ್ ಮಾಡಿದವರನ್ನು ಪೊಲೀಸರು ಹಿಡಿಯುತ್ತಾರೆ. ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ದೊರೆಯುತ್ತದೆ. ಜೈಲಿನಿಂದ ಹೊರಬಂದವರು ಎಲ್ಲ ಸಾಕ್ಷಾಧಾರಗಳನ್ನು ನಾಶಗೊಳಿಸುತ್ತಾರೆ. ಹೀಗಾಗಿ ಪ್ರಕರಣದ ವಿಚಾರಣೆ ಮುನ್ನಡೆಯುವುದೇ ಇಲ್ಲವೆಂದು ಅವರು ವಿಷಾದಿಸುತ್ತಾರೆ.2009ರಲ್ಲಿ ಕಾನೂನು ಆಯೋಗವು ರಸ್ತೆ ಅವಘಡಗಳನ್ನು ಹತ್ತಿಕ್ಕಲು ಕಾನೂನು ಸುಧಾರಣೆ ಎಂಬ ಹೆಸರಿನ ವಿಸ್ತೃತ ವರದಿಯೊಂದನ್ನು ತಯಾರಿಸಿತ್ತು. ಈ ವರದಿಯು ಈಗ ಚಾಲ್ತಿಯಲ್ಲಿರುವ ಮೋಟಾರು ವಾಹನಗಳ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳಲ್ಲಿ ಬದಲಾವಣೆಗಳನ್ನು ಮಾಡುವಂತೆ ಶಿಫಾರಸು ಮಾಡಿತ್ತು.

ನಮ್ಮ ಬಿಗಿಯಾದ ಕಾನೂನುಗಳ ಕೊರತೆಯಿಂದಾಗಿ ಭಾರತೀಯ ರಸ್ತೆಗಳಲ್ಲಿ ಸಂಚರಿಸುವುದೆಂದರೆ ಸಾವಿನೊಡನೆ ಸರಸವಾಡಿ ದಂತಾಗಿದೆ ಎಂದು ಈ ವರದಿ ಟೀಕಿಸಿದೆ. ಮದ್ಯ ಸೇವಿಸಿ ವಾಹನ ಚಾಲನೆಗೆ ಸಂಬಂ ಸಿ ಮೋಟಾರು ವಾಹನ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ಗಳಲ್ಲಿ ವಿಸಲಾಗಿರುವ ಗರಿಷ್ಠ ಶಿಕ್ಷೆಯ ಅವಯನ್ನು ಹೆಚ್ಚಿಸುವಂತೆಯೂ ವರದಿ ಶಿಫಾರಸು ಮಾಡಿದೆ.ಈ ಅಪರಾಧಕ್ಕೆ ಜೈಲು ಶಿಕ್ಷೆಯ ಅವಯನ್ನು ಕನಿಷ್ಠ ಎರಡು ವರ್ಷ ಹಾಗೂ ಗರಿಷ್ಠ ಹತ್ತು ವರ್ಷಗಳಿಗೆ ಹೆಚ್ಚಿಸುವಂತೆ ಸಲಹೆ ನೀಡಿದೆ.
2007ರ ಮೋಟಾರು ವಾಹನ ವಿಧೇ ಯಕ (ತಿದ್ದುಪಡಿ) ಇನ್ನೂ ಕೂಡಾ ಸಂಸತ್‌ನ ಅನುಮೋದನೆ ಪಡೆಯದೆ ನೆನೆಗುದಿಯಲ್ಲಿದೆ. ರಕ್ತದಲ್ಲಿ ಅಲ್ಕೋಹಾಲ್ ಮಟ್ಟವು ಅಕವಿರುವವಾಹನ ಚಾಲಕನು ಅವಘಡವನ್ನು ಎಸಗುವ ಸಾಧ್ಯತೆ ಅಕವೆಂದು ಈ ವರದಿಯೂ ಅಭಿಪ್ರಾಯಿಸಿದೆ.ಪ್ರತಿ 100 ಮಿ.ಲೀ. ರಕ್ತದಲ್ಲಿ 30-60 ಮಿ.ಗ್ರಾಂ. ಅಲ್ಕೋಹಾಲ್ ಅಂಶವಿರುವ ಚಾಲಕನಿಗೆ 2000-3000 ರೂ. ದಂಡ ಹಾಗೂ ಕನಿಷ್ಠ ಜೈಲು ಶಿಕ್ಷೆಯನ್ನು ಹಾಗೂ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಬೇಕೆಂದು ಶಿಫಾರಸು ಮಾಡಿದೆ.ವಿಧೇಯಕದ ಶಿಫಾರಸುಗಳು ಕಾನೂನಾಗಿ ಇನ್ನೂ ಜಾರಿಗೊಂಡಿಲ್ಲ. ಮುಂದೆಯೂ ಜಾರಿಗೊಳ್ಳುವ ಯಾವ ಲಕ್ಷಣಗಳೂ ಕಂಡು ಬರುತ್ತಿಲ್ಲ.
ನಂದಾ ಹಾಗೂ ಪಿರೇರಾರಂತಹವರನ್ನು ಕೊಲೆಗೆ ಸಮಾನವಲ್ಲದ ದಂಡನೀಯವಾದ ನರಹತ್ಯೆ ಕುರಿತಾದ 304 ಐಐ ಸೆಕ್ಷನ್‌ನನ್ವಯ ಮೊಕದ್ದಮೆ ಹೂಡುವ ಪ್ರಯತ್ನಗಳೆಲ್ಲವೂ ವಿಲವಾಗಿವೆ.ಮದ್ಯ ಸೇವಿಸಿ ವಾಹನ ಚಾಲನೆಗೆ ಸಂಬಂಧಪಟ್ಟಂತೆ ಈಗಿರುವ ಕಾನೂನುಗಳ ಬಗ್ಗೆ ಯಾರೂ ಹೆದರುತ್ತಿಲ್ಲ. ಸಂಚಾರ ನಿಯಮಗಳ ಉಲ್ಲಂಘನೆಯ ವಿರುದ್ಧ ಕಠಿಣವಾದ ಕಾನೂನುಗಳು ಜಾರಿಗೊಳ್ಳಬೇಕಾಗಿದೆಯೆಂದು ನಿವೃತ್ತ ನ್ಯಾಯಮೂರ್ತಿ ಎ.ಪಿ.ಶಾ ಅಭಿಪ್ರಾಯಿಸುತ್ತಾರೆ.
ಫ್ರಾನ್ಸ್ ಮಾದರಿ
ಭಾರತವು ಈ ವಿಷಯದಲ್ಲಿ ಖಂಡಿತವಾಗಿಯೂ ಫ್ರಾನ್ಸ್‌ನಿಂದ ಪಾಠ ಕಲಿಯಬೇಕಾಗಿದೆ. ಒಂದು ಕಾಲದಲ್ಲಿ ಸ್ವೇಚ್ಛಾಚಾರದ ಕುಡಿತ ಹಾಗೂ ಡ್ರೈವಿಂಗ್ ನಿಯಮಗಳ ಉಲ್ಲಂಘನೆಗೆ ಮೃದು ಧೋರಣೆ ತಾಳಿದ್ದ ್ರಾನ್ಸ್ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಬಿಗಿಯಾದ ಸಂಚಾರಿ ಕಾನೂನುಗಳನ್ನು ಜಾರಿಗೆ ತಂದಿದೆ. ಅಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಗೆ ಭಾರೀ ಮೊತ್ತದ ದಂಡವನ್ನು ವಿಸಲಾಗುತ್ತದೆ.ಪಾನಮತ್ತರಾಗಿ ಡ್ರೈವಿಂಗ್ ನಡೆಸುವುದನ್ನು ತಡೆಯಲು ನಿಯಮಿತವಾಗಿ ಚಾಲಕರನ್ನು ತಪಾಸಣೆಗೊಳಪಡಿಸಲಾಗುತ್ತದೆ. ಕಾನೂನಿನ ಮಿತಿಯನ್ನು ಮೀರಿದ ಪ್ರಮಾಣದಲ್ಲಿ ಚಾಲಕನು ಮದ್ಯ ಸೇವಿಸಿರುವುದು ಪತ್ತೆಯಾದಲ್ಲಿ ಆತ ಅಥವಾ ಆಕೆಗೆ ಎರಡು ವರ್ಷಗಳ ಜೈಲು ಶಿಕ್ಷೆ, 4500 ಯುರೋ ದಂಡ ವಿಸಲಾಗುತ್ತದೆ.
ಜೊತೆಗೆ ವಾಹನವನ್ನೂ ಮುಟ್ಟುಗೋಲು ಹಾಕಲಾಗುತ್ತದೆ. ಕಾನೂನು ಮಿತಿ ಮೀರಿ ಮದ್ಯ ಸೇವಿಸಿ ಡ್ರೈವಿಂಗ್ ಮಾಡಿ ಯಾರನ್ನಾ ದರೂ ಗಾಯಗೊಳಿಸಿದಲ್ಲಿ ಇಲ್ಲವೇ ಸಾವಿಗೆ ಕಾರಣರಾದಲ್ಲಿ 10 ವರ್ಷ ಜೈಲು, 1.50 ಲಕ್ಷ ಯುರೋ ದಂಡ ವಿಸಲಾಗುತ್ತದೆ. ಜೊತೆಗೆ ಒಂದು ವರ್ಷ ವಾಹನ ಚಾಲನೆಗೆ ನಿಷೇಧ ವಿಸಲಾಗುತ್ತದೆ.ಮದ್ಯಸೇವಿಸಿ ವಾಹನ ಚಾಲನೆ ಮಾಡುವವರ ಬಗ್ಗೆ ಆಗಾಗ್ಗೆ ತಪಾಸಣೆ ನಡೆಸುತ್ತಲೇ ಇದ್ದಲ್ಲಿ ಈ ಪಿಡುಗನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಲು ಸಾಧ್ಯವಿದೆಯೆಂದು ನ್ಯಾಯಮೂರ್ತಿ ಜೆ.ಎಸ್. ವರ್ಮಾ ಬಲವಾಗಿ ನಂಬಿದ್ದಾರೆ.
‘‘ವಿದೇಶಗಳಲ್ಲಿ ಜನತೆ ಯಾಕೆ ಹೆಚ್ಚು ಶಿಸ್ತುಬದ್ಧರಾಗಿ ವರ್ತಿಸು ತ್ತಾರೆ? ಯಾಕೆಂದರೆ ಅಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಚಾಲಕರನ್ನು ತಪಾಸಿಸಲಾಗುತ್ತದೆ. ಅಲ್ಲದೆ ಅಲ್ಲಿ ಕಾನೂನು ಮೀರಿದಲ್ಲಿ ಲೈಸೆನ್ಸ್ ರದ್ದಾಗುವ ಭೀತಿಯೂ ಇದ್ದೇ ಇದೆ. ಆದರೆ ಇಲ್ಲಿ ಹಾಗಲ್ಲ.ವಾಹನ ಚಾಲನೆಗೆ ಲೈಸೆನ್ಸ್ ದೊರೆಯುತ್ತಿದ್ದಂತೆಯೇ ಸಾರಿಗೆ ಕಾನೂನುಗಳ ಉಲ್ಲಂಘನೆಯೂ ಶುರುವಾಗುತ್ತದೆ’’ ಯೆಂದವರು ಹೇಳುತ್ತಾರೆ.
ಮದ್ಯ ಸೇವಿಸಿ ಡ್ರೈವಿಂಗ್ ಪಿಡುಗಿನ ತಡೆಗೆ ಇರುವ ಅತ್ಯುತ್ತಮ ದಾರಿಯೆಂದರೆ, ಕಟ್ಟುನಿಟ್ಟಿನ ಕಾನೂನುಗಳ ಅನುಷ್ಠಾನವೆಂದು ಶಾ ಅವರೂ ಒಪ್ಪುತ್ತಾರೆ. ಅವಘಡಗಳಿಗೆ ಕಾರಣವಾಗುವಂತಹ ವಾಹನ ಚಾಲನೆಗೆ ಲೈಸೆನ್ಸ್ ರದ್ದತಿ/ಅಮಾನತುಗಳಂತಹ ಕಠಿಣವಾದ ನಿಯಮಗಳನ್ನು ಜಾರಿಗೊಳಿಸಬೇಕು ಎನ್ನುತ್ತಾರೆ.ಆದರೆ ಇಲ್ಲೊಂದು ಕಠೋರವಾದ ವಾಸ್ತವವಿದೆ.ಅನೇಕರು ತಮಗೆ ಅರಿವಿದ್ದೂ ಸಂಚಾರ ಕಾಯ್ದೆಗಳನ್ನು ಉಲ್ಲಂಸುತ್ತಾರೆ. ಪಾನಮತ್ತರಾಗಿ ವಾಹನವನ್ನು ಚಲಾಯಿಸುತ್ತಾರೆ. ಏಕೆಂದರೆ ಅವರಿಗೆ ಸಿಕ್ಕಿಬಿದ್ದಲ್ಲಿ ಲಂಚಪಾವತಿಸಿಯೋ ಅಥವಾ 2 ಸಾವಿರ ರೂ. ದಂಡ ಪಾವತಿಸಿಯೋ ಇಲ್ಲ ಪ್ರಭಾವಿ ವ್ಯಕ್ತಿಗಳ ಹೆಸರು ಹೇಳಿ ಕೊಂಡು ಬಚಾವಾಗಬಹುದೆಂಬ ಭಂಡ ಧೈರ್ಯವಿದೆ.ದುರದೃಷ್ಟವಶಾತ್ ಪೌರರಾಗಿ ನಮ್ಮ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡದಿರುವುದರಿಂದಲೇ ಈ ಪಿಡುಗುಗಳು ರಾಜಾರೋಷವಾಗಿ ಮೆರೆಯುತ್ತಿವೆ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...