ಟೀಕೆ ಸಾಕು-ಸಹಕಾರ ಬೇಕು
mail-img print-img

ಟೀಕೆ ಸಾಕು-ಸಹಕಾರ ಬೇಕು

ಶನಿವಾರ - ಸೆಪ್ಟೆಂಬರ್ -04-2010


ಹೊಸದಿಲ್ಲಿ, ಸೆ.3: ಕಾಮನ್ವೆಲ್ತ್ ಕ್ರೀಡಾ ಕೂಟದ ಖರ್ಚುವೆಚ್ಚದ ಕುರಿತಾದ ಪ್ರಶ್ನೆ ಗಳನ್ನು ‘ಹಾಸ್ಯಾಸ್ಪದ’ ಎಂದು ಟೀಕಿಸಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ಜೈಪಾಲ್ ರೆಡ್ಡಿ, ಉತ್ಸವದ ಕಡೆಗೆ ಹಾಗೂ ಈ ಬೃಹತ್ ಕ್ರೀಡಾಕೂಟಕ್ಕಾಗಿ ನಿರ್ಮಿಸಲಾಗಿ ರುವ ‘ಅದ್ಭುತ’ ಕ್ರೀಡಾಂಗಣದಂತಹ ವಿಚಾರಗಳನ್ನು ಎತ್ತಿ ತೋರಿಸುವುದರತ್ತ ಗಮನ ಹರಿಸಲಾಗುವುದೆಂದು ಇಂದು ಹೇಳಿದ್ದಾರೆ.

 ಸಿಡಬ್ಲುಜಿಯ ಸಿದ್ಧತೆಯಲ್ಲಿ ಸ್ವಲ್ಪ ವಿಳಂಬವಾಗಿರುವುದು ನಿಜ. ತಾವು ಮಾಧ್ಯಮ ಹಾಗೂ ಇತರ ಸಾಮಾನ್ಯ ವಿಭಾಗಗಳಿಂದ ರಚನಾತ್ಮಕ ಟೀಕೆಗಳನ್ನು ಸ್ವಾಗತಿಸುತ್ತೇವೆ. ಅದು ಸ್ವಾಗತಾರ್ಹ ಹಾಗೂ ತಾವು ಅಂತಹ ಟೀಕೆಗಳಿಂದ ಪಾಠ ಕಲಿಯುತ್ತೇವೆ ಎಂದು ಕ್ರೀಡೋತ್ಸ ವದ ಮೇಲ್ವಿಚಾರಣೆಗಾಗಿ ರಚಿಸಲಾಗಿರುವ ಸಚಿವ ಮಂಡಳಿಯ ಅಧ್ಯಕ್ಷ ರೆಡ್ಡಿ ನುಡಿದಿದ್ದಾರೆ.
ಇಲ್ಲಿನ ಗುರ್ಗಾಂವ್ ಮೆಟ್ರೊ ಸಂಪರ್ಕ ದಲ್ಲಿ ಕೇಂದ್ರೀಯ ಕಾರ್ಯಾಲಯ- ಕುತುಬ್ ಮಿನಾರ್ ಮಾರ್ಗವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಕಾಮನ್ವೆಲ್ತ್ ಕ್ರೀಡಾಕೂಟದ ಖರ್ಚು ವೆಚ್ಚಗಳ ಬಗ್ಗೆ ಹಾಸ್ಯಾಸ್ಪದ ಮಾತುಕತೆ ನಡೆಯುತ್ತಿದೆ ಎಂದರು.

 ಅವರು ಯಾರದೇ ಹೆಸರನ್ನು ಎತ್ತಿಲ್ಲ ವಾದರೂ, ಅಕ್ಟೋಬರ್ 3ರಿಂದ ನಡೆ ಯುವ ಕ್ರೀಡಾವಳಿಯ ಖರ್ಚು- ವೆಚ್ಚಗಳ ಕುರಿತಾಗಿ ಪ್ರಶ್ನೆಯೆತ್ತಿರುವ ಪಕ್ಷದ ಸಹೋದ್ಯೋಗಿ ಮಣಿಶಂಕರ ಅಯ್ಯರ್ ಹಾಗೂ ಇತರ ಕೆಲವರ ವಿರುದ್ಧ ಈ ಟೀಕೆ ಮಾಡಿದ್ದಾರೆಂಬುದು ಸುಸ್ಪಷ್ಟ.

 ಕ್ರೀಡಾ ಸಂಬಂಧಿ ಯೋಜನೆಗಳಲ್ಲಿ ‘ಭ್ರಷ್ಟಾಚಾರ’ ಎಸಗಿದವರನ್ನು ‘ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ’ ಎಂದು ರೆಡ್ಡಿ ಎಚ್ಚರಿಸಿದರು.ಆದರೆ ನಮ್ಮ ಸಾಮಾನ್ಯ ಮನಃಸ್ಥಿತಿಯನ್ನು ಬದಲಿಸಿ, ಕಾಮನ್ವೆಲ್ತ್ ಕ್ರೀಡೋತ್ಸವ ಆಚರಿಸಲು ಮುಂದಾಗಬೇಕಾದ ಸಮಯ ಬಂದಿದೆ ಎಂದ ಅವರು, ಈಗಾಗಲೇ ನಿರ್ಮಿಸಲಾಗಿರುವ ಅದ್ಭುತ ವಿಶ್ವದರ್ಜೆಯ ಕ್ರೀಡಾಂಗಣದ ವಿಚಾರದ ಮೇಲೆ ಬೆಳಕು ಚೆಲ್ಲುವಂತೆ ಮಾಧ್ಯಮಗಳಿಗೆ ಮನವಿ ಮಾಡಿದರು.

ಸಿಡಬ್ಲುಸಿಯ ಖರ್ಚು ವೆಚ್ಚಗಳ ಬಗ್ಗೆ ತಾನು ಸಂಸತ್ತಿನಲ್ಲಿ ನೀಡಿದ ಹೇಳಿಕೆ ಯನ್ನುಲ್ಲೇಖಿಸಿದ ರೆಡ್ಡಿ, ಕೇಂದ್ರ ಸರಕಾರವು ಕಾಮನ್ವೆಲ್ತ್ ಕ್ರೀಡಾ ಸಂಬಂಧಿ ವಿಷಯಗಳಿ ಗಾಗಿ ರೂ. 11,494 ಕೋಟಿಗಳನ್ನು ವೆಚ್ಚ ಮಾಡಿದೆ ಹಾಗೂ ದಿಲ್ಲಿ ಸರಕಾರವು ಎಲ್ಲ ಮೂಲ ಸೌಲಭ್ಯ ಮತ್ತಿತರ ಯೋಜನೆಗಳಿ ಗಾಗಿ ಒಟ್ಟು ರೂ. 16 ಸಾವಿರ ಕೋಟಿಗಳನ್ನು ಖರ್ಚು ಮಾಡಿದೆ ಎಂದರು.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಡವರ ಮಕ್ಕಳಿಗೆ ನಿರಾಕರಿಸಲ್ಪಟ್ಟ ಶಿಕ್ಷಣ

ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...


- ಎಸ್.ಬಾಲನ್,ಹೈಕೋರ್ಟ್ ವಕೀಲರು, ಬೆಂಗಳೂರು.

ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ

ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...


- ಗೋಪಾಲ್ ತ್ರಾಸಿ

ಅಂತರ ಜಾತಿಯ ವಿವಾಹ ಮೀಸಲಾತಿಗೆ ಅಡ್ಡಿಯಾಗದು: ಸರ್ವೋಚ್ಚ ನ್ಯಾಯಾಲಯದ ತೀರ್ಪು

ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...


- ಕೆ. ದೇಜಪ್ಪ

ಆರೆಸ್ಸೆಸ್ ಶಿಸ್ತಿನ ಒಳಗುಟ್ಟು

ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...


- ಸನತ್‌ ಕುಮಾರ ಬೆಳಗಲಿ

ನಿನ್ನನ್ನು ಒಳ್ಳೆಯ ಬ್ಯಾರಿ ಅಂತ ಹೇಗೆ ನಂಬುವುದು?

‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...


- ಚೇಳಯ್ಯ

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ-ಪ್ರಗತಿಪರರು

ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...


- ಡಾ ಜಿ. ಭಾಸ್ಕರ ಮಯ್ಯ

ಮನಸ್ಸಿನ ಅಸ್ವಸ್ಥತೆಗೆ ಮೂಲ ಕಾರಣ ಹುಡುಕಬೇಕು

ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...


- ಜ್ಯೋತಿ ಗುರುಪ್ರಸಾದ್

ದೂರಸಂಪರ್ಕ ನೀತಿ ಬೇಕಾಗಿದೆ

ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...


- ಅರವಿಂದ ರಾಜಗೋಪಾಲ