ಹೊಸದಿಲ್ಲಿ, ಫೆ. 7: ದೇಶದಲ್ಲಿ ಅಂತರ್ಜಾಲ ಬರಹಗಳ ನಿಯಂತ್ರಣದ ಕುರಿತ ವಿವಾದದ ನಡುವೆಯೇ, ನಿಷೇಧಿತ ಔಷಧಿಗಳ ಆನ್‌ಲೈನ್ ವ್ಯಾಪಾರದ ತಡೆಗೆ ‘ನಿಯಂತ್ರಣ ಹಾಗೂ ಕಾನೂನು’ ಕ್ರಮಗಳನ್ನು ರೂಪಿಸಲು ಉನ್ನತ ಸಮಿತಿಯೊಂದನ್ನು ಸರಕಾರ ಇತ್ತೀಚೆಗೆ ರಚಿಸಿದೆ.
ಆನ್‌ಲೈನ್ ಔಷಧ ವ್ಯಾಪಾರವು ಮಾದಕದ್ರವ್ಯ ಕಳ್ಳ ಸಾಗಾಟಗಾರರು ಬಳಸುತ್ತಿರುವ ಅತ್ಯಂತ ‘ಮಾರಕ ಹಾಗೂ ಜಾಣತನದ ಕಾರ್ಯತಂತ್ರ’ ಎಂದು ಮಾದಕ ದ್ರವ್ಯ ತಡೆ ಪೊಲೀಸರು ವ್ಯಾಖ್ಯಾನಿಸಿದ್ದಾರೆ. ಇಂತಹ ಅಂತರ್ಜಾಲ ಔಷಧಾಲಯಗಳು ಒಡ್ಡಿರುವ ಬೆದರಿಕೆಯನ್ನು ತಡೆಯಲು ಸರಕಾರ ಕೆಲಸ ಮಾಡುತ್ತಿದ್ದು, ಅಂತಹ ವ್ಯಾಪಾರದ ವಿರುದ್ಧ ಕ್ರಮವನ್ನು ಬಲಪಡಿಸಲು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋದ ಅಧೀನದಲ್ಲಿ ಸಮಿತಿಯೊಂದನ್ನು ರಚಿಸಿದೆ.
ಈ ಕಳ್ಳ ವ್ಯವಹಾರದಲ್ಲಿ ಕಪ್ಪು ಹಣ ಹಾಗೂ ಆರ್ಥಿಕ ಅಪರಾಧ ಚಟುವಟಿಕೆಗಳೂ ಒಳಗೊಂಡಿರುತ್ತವೆಂದು ಉನ್ನತ ಮೂಲಗಳು ತಿಳಿಸಿವೆ.
ಕೇಂದ್ರ ವಿತ್ತ ಸಚಿವ ಪ್ರಣವ್ ಮುಖರ್ಜಿ ನಿನ್ನೆ ಅನಾವರಣಗೊಳಿಸಿರುವ ಹೊಸ ಔಷಧ ನೀತಿಯ ಭಾಗ ಈ ಸಮಿತಿಯಾಗಿದೆ. ಇಂಟರ್ನೆಟ್ ಮೂಲಕ ಅಂತಹ ಚಟುವಟಿಕೆ ನಡೆಸುವ ವ್ಯಕ್ತಿಗಳು ಹಾಗೂ ಗುಂಪುಗಳನ್ನು ನಿಯಂತ್ರಿಸಲು ‘ಸೈಬರ್ ಗಸ್ತು ಘಟಕ’ದ ಸ್ಥಾಪನೆಯ ಬಗ್ಗೆಯೂ ಸಮಿತಿ ಪರಿಶೀಲಿಸಲಿದೆ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...