mail-img print-img

♦ ಈಶ್ವರಪ್ಪ-ಯಡಿಯೂರಪ್ಪ ನನ್ನ ದೇವರುಗಳು. ಅವರಿಂದಾಗಿಯೇ ನಾನಿಂದು ಇಷ್ಟು ದೊಡ್ಡ ವ್ಯಕ್ತಿಯಾಗಿದ್ದೇನೆ.

ಸೋಮವಾರ - ಆಗಸ್ಟ್ -30-2010

ಈಶ್ವರಪ್ಪ-ಯಡಿಯೂರಪ್ಪ ನನ್ನ ದೇವರುಗಳು. ಅವರಿಂದಾಗಿಯೇ ನಾನಿಂದು ಇಷ್ಟು ದೊಡ್ಡ ವ್ಯಕ್ತಿಯಾಗಿದ್ದೇನೆ.
                                                     -ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಹಿತಿ ತಂತ್ರಜ್ಞಾನ ಸಚಿವ

ಓಟು ಕೊಟ್ಟು ಗೆಲ್ಲಿಸಿದ ಮತದಾರರು ರಾಕ್ಷಸರೆ?


ನಿತೀಶ್ ಸರಕಾರ ಕಿತ್ತು ಒಗೆಯೋ ತನಕ ನಾನು ನಿದ್ದೆ ಮಾಡಲಾರೆ.
                                                                 -ಲಾಲು ಪ್ರಸಾದ್ ಯಾದವ್, ಮಾಜಿ ರೈಲ್ವೆ ಸಚಿವ
ಅಧಿಕಾರವಿಲ್ಲದೇ ಇರುವಾಗ ನಿದ್ದೆ ಬಾರದೇ ಇರುವುದು ಸಹಜವೇ ಬಿಡಿ.
 
    
 
ಅಫ್ಘಾನಿಸ್ತಾನವು ಪಾಕಿಸ್ತಾನದೊಂದಿಗೆ ಹಾಗೂ ಪಾಕಿಸ್ತಾನವು ಭಾರತದೊಂದಿಗೆ ರಚನಾತ್ಮಕ ಸಂಬಂಧವನ್ನು ಹೊಂದುವುದು ಬಹಳ ಅಗತ್ಯವಾಗಿದೆ.
                                                       -ಪಿ.ಜೆ. ಕ್ರಾಲಿ, ಅಮೆರಿಕಾ ವಿದೇಶಾಂಗ ಇಲಾಖೆ ವಕ್ತಾರ
 ಅದಕ್ಕೆ ನೀವು ಅವಕಾಶ ನೀಡುವುದು ಅದಕ್ಕಿಂತಲೂ ಅಗತ್ಯವಾದುದು.

     
ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರಕ್ಕೆ ತಡೆಯೊಡ್ಡುವ ಶಕ್ತಿಗಳ ವಿರುದ್ಧ ಬೀದಿಗಿಳಿಯುವುದು ಅನಿವಾರ್ಯ.
                                                                        -ಡಾ.ವಿ.ಎಸ್. ಆಚಾರ್ಯ, ಗೃಹ ಸಚಿವ
 ಹೀಗೆ ಮಾತನಾಡುತ್ತಿದ್ದರೆ ಈ ನಾಡಿನ ರೈತರೇ ನಿಮ್ಮನ್ನು ವಿಧಾನಸೌಧದಿಂದ ಬೀದಿಗಿಳಿಸುತ್ತಾರೆ.

 


ಕೇವಲ ಅಧಿಕಾರ ಗಳಿಸುವುದೇ ಬಿಜೆಪಿಯ ಗುರಿಯಲ್ಲ.
                                                                         -ನಳಿನ್ ಕುಮಾರ್ ಕಟೀಲ್, ಸಂಸದ

ಹಣ ಮಾಡುವುದೂ ಬಿಜೆಪಿಯ ಗುರಿಯಲ್ಲೊಂದು ಎನ್ನುವುದನ್ನು ಬಳ್ಳಾರಿ ಸಾರಿ ಸಾರಿ ಹೇಳುತ್ತಿದೆಯಲ್ಲ.

 


ರೆಡ್ಡಿ ಸಚಿವರು ತಮಗೆ ದೇವರೇನೂ ಅಲ್ಲ.
                                                                              -ರೇಣುಕಾಚಾರ್ಯ, ಅಬಕಾರಿ ಸಚಿವ
ರಾಜಕೀಯದಲ್ಲಿ ದೇವರು ದೆವ್ವದ ರೂಪ ತಾಳಲು ಹೆಚ್ಚು ಹೊತ್ತು ಬೇಕಾಗಿಲ್ಲ.


ಯಾರೂ ವಯಸ್ಸಿನಿಂದ ದೊಡ್ಡವರಾಗುವುದಿಲ್ಲ, ಕೃತಿಯಿಂದ ದೊಡ್ಡವರಾಗುತ್ತಾರೆ.
                                                      -ನಾಡೋಜ ಪಾಟೀಲ ಪುಟ್ಟಪ್ಪ, ಹಿರಿಯ ಪತ್ರಕರ್ತ
ಆದರೆ ಯಾವುದೇ ಕೃತಿ ಭೈರಪ್ಪನನ್ನು ಯಾಕೆ ದೊಡ್ಡವರನ್ನಾಗಿಸಿಲ್ಲ?
  

    
ನಕಲಿ ಹಾಗೂ ಕಳ್ಳಭಟ್ಟಿ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ.
                                                                      -ರೇಣುಕಾಚಾರ್ಯ, ಅಬಕಾರಿ ಸಚಿವ

ಅಸಲಿ ಸಾರಾಯಿ ಕುಡಿದು, ನಕಲಿ ಸಾರಾಯಿಯನ್ನು ತಡೆಯಿರಿ ಎನ್ನುತ್ತಿದ್ದೀರಾ?

 



ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಈಗಲೂ ನಾನೇ ಒಡೆಯ.
                                  -ಸುರೇಶ್ ಕಲ್ಮಾಡಿ, ಕಾಮನ್‌ವೆಲ್ತ್ ಕ್ರೀಡಾಕೂಟ ಸಂಘಟನಾ ಸಮಿತಿ ಅಧ್ಯಕ್ಷ
ಅಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಕೂಡ.
 
    
ಪಾಕಿಸ್ತಾನದಲ್ಲಿ ಸೇನಾ ಕ್ಷಿಪ್ರಕ್ರಾಂತಿ ಪ್ರಯತ್ನ ್ಕೆ ಸೇನೆ ಕೈ ಹಾಕುವಷ್ಟು ಪರಿಸ್ಥಿತಿ ಹದಗೆಟ್ಟಿಲ್ಲ.
                                                                   -ಆಸಿಫ್ ಅಲಿ ಝರ್ದಾರಿ, ಪಾಕ್ ಅಧ್ಯಕ್ಷ
ಇಷ್ಟೆಲ್ಲ ಪ್ರಯತ್ನಿಸಿದರೂ, ಪರಿಸ್ಥಿತಿ ಹದಗೆಟ್ಟಿಲ್ಲ ಎಂದು ಅಚ್ಚರಿಯೆ?

 

ಹಳದಿ ಪತಾಕೆಗೆ ಯಾರಾದರೂ ಅವಮಾನ ಮಾಡಿದಲ್ಲಿ ಇಡೀ ಬಿಲ್ಲವ ಸಮಾಜ ಸಹಿಸುವುದಿಲ್ಲ.
                                                            -ಜನಾರ್ದನ ಪೂಜಾರಿ, ಕೇಂದ್ರ ಮಾಜಿ ಸಚಿವ
 ಕಳೆದ ಚುನಾವಣೆಯಲ್ಲಿ ಬಿಲ್ಲವರು ಸಹಿಸದೇ ಇರುವಂತಹ ಅವಮಾನ ಅದೇನು ಮಾಡಿದ್ದಿರಿ?


     
ಇತ್ತೀಚಿನ ಕೆಲವು ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿರುವ ‘ಕೇಸರಿ ಭಯೋತ್ಪಾದಕರು’ ಸೇರಿದಂತೆ ಎಲ್ಲ ರೀತಿಯ ಭಯೋತ್ಪಾದಕ ಸಂಘಟನೆಗಳ ಬಗ್ಗೆ ರಾಜ್ಯಗಳ ಪೊಲೀಸರು ಕಟ್ಟುನಿಟ್ಟಿನ ನಿಗಾ ಇಡಬೇಕು.
                                                                           -ಪಿ.ಚಿದಂಬರಂ, ಕೇಂದ್ರ ಗೃಹ ಸಚಿವ
ಕೊನೆಗೂ ಕಣ್ಣನ್ನು ಕವಿದ ಕೇಸರಿ ಬದಿಗೆ ಸರಿಯಿತೆ ಗೃಹ ಸಚಿವರೆ?


     
ವ್ಯಕ್ತಿ ಬದುಕಿದ್ದಾಗ ಮಾಡಿದ ಒಳ್ಳೆಯ ಕೆಲಸಗಳಿಂದ ಸಮಾಜ ಆತನನ್ನು ನಿರಂತರವಾಗಿ ನೆನಪಿಸುತ್ತದೆ.
                                                        -ಕುಂಬ್ಳೆ ಸುಂದರ ರಾವ್, ಯಕ್ಷಗಾನ ಅಕಾಡಮಿ ಅಧ್ಯಕ್ಷ
ಸುರತ್ಕಲ್ ಗಲಭೆಯಲ್ಲಿ ನೀವು ಮಾಡಿದ ಒಳ್ಳೆಯ ಕೆಲಸಗಳನ್ನು ಸಂತ್ರಸ್ತರು ಈಗಲೂ ಕಣ್ಣೀರು ಸುರಿಸುತ್ತಾ ನೆನಪಿಸಿಕೊಳ್ಳುತ್ತಾರೆ.



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್