*ನನ್ನ ತಂದೆ ಹಾಕಿ ಕೊಟ್ಟ ಮಾರ್ಗದಲ್ಲೇ ರಾಜಕೀಯದಲ್ಲಿ ನಡೆಯುತ್ತೇನೆ.
=ಜಾಗರೂಕರಾಗಿರಿ. ಆ ದಾರಿಯಲ್ಲಿ ಮುಂದೆ ಅಸಂಖ್ಯ ಅಪಾಯಕಾರಿ ತಿರುವುಗಳಿವೆ.
*ನಾನು ಯಾವುದೇ ವಿಷಯವನ್ನು ಕೈಗೆತ್ತಿಕೊಳ್ಳುವ ಮುನ್ನ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡುವವನಾಗಿದ್ದೇನೆ.
=ಕಾಂಗ್ರೆಸ್ ಜೊತೆ ಅಧಿಕಾರವನ್ನು ಪ್ರತ್ಯಕ್ಷ ಕಂಡರೂ ಮತ್ತೆ ಬಿಜೆಪಿ ಜೊತೆ ಅದನ್ನು ಪ್ರಮಾಣಿಸಿ ನೋಡಿದ ಭವ್ಯ ಪರಂಪರೆ ನಿಮ್ಮದಲ್ಲವೇ?
*ರಾಜ್ಯದ ಬಿಜೆಪಿ ಸರಕಾರ ಹುಚ್ಚರ ಸಂತೆ.
=ಆ ಹುಚ್ಚಿಗೆ ಹಿಂದೊಮ್ಮೆ ಮಾಡಿದ ಸಹವಾಸ ದೋಷವೇ ಕಾರಣ ಎಂದು ತಜ್ಞ ವೈದ್ಯರು ವರದಿ ಕೊಟ್ಟಿದ್ದಾರಂತೆ.
*ಅಷ್ಟಮಠಗಳೊಳಗಿನ ಗೊಂದಲಗಳ ಬಗ್ಗೆ ಸಾರ್ವಜನಿಕ ಚರ್ಚೆ ಒಳ್ಳೆಯದಲ್ಲ.
=ಇಂತಹ ಅನಿಷ್ಟಗಳನ್ನು ದಾರಿಗೆ ತರುವುದು ಬೇಡವೆಂಬ ಸದುದ್ದೇಶವೇ?
*ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನನ್ನ ವಿಶ್ವಾಸ ಪಾತ್ರ ಸ್ನೇಹಿತ.
=ನೀವು ಹೀಗೆಲ್ಲ ಅವರನ್ನು ತಮಾಶೆ ಮಾಡುವುದು ನಿಮ್ಮ ಘನತೆಗೆ ತಕ್ಕುದಾದುದಲ್ಲ.
*ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿ
=ಮತ್ತೆ ಮತ್ತೆ ಕನ್ನಡಿಗರನ್ನು ಕೆಣಕಿದರೆ ಹುಶಾರ್!
*ವಿವಾದಿತ ನೇತ್ರಾವತಿ ನದಿ ತಿರುವು ಯೋಜನೆ ಜಾರಿಗೆ ರಾಜ್ಯ ಸರಕಾರ ಬದ್ಧ.
=ನಿಮ್ಮ ನಾಲಗೆ ತಿರುಗುವ ವೇಗದ ಬಗ್ಗೆಯೇ ಈಗ ಜನರಿಗೆ ಹೆಚ್ಚು ಭಯ!
*ಬಿಜೆಪಿ ಶೇ. 70ರಷ್ಟು ಶುದ್ಧವಾಗಿದ್ದರೆ, ಉಳಿದ ಪಕ್ಷಗಳ ಶುದ್ಧತೆ ಪ್ರಮಾಣ ಶೇ.20ಮಾತ್ರ.
=ನೀವು ಬಳಸುವ ಸೋಪೇ ನಿಜವಾದ ಸೋಪು! ಉಳಿದವೆಲ್ಲ ಬರೀ ಓಳು.
*ಸಮೃದ್ಧ ರಾಷ್ಟ್ರ ನಿರ್ಮಾಣ ಮತ್ತು ಅಭಿವೃದ್ಧಿ ದಿಸೆಯಲ್ಲಿ ಜಾತ್ಯತೀತ ನಿಲುವು ಮತ್ತು ನೆಲದ ಪ್ರೀತಿ ಮುಖ್ಯ.
=ಸಮೃದ್ಧ ಸ್ವಕುಟುಂಬ ನಿರ್ಮಾಣ ಮಾಡಿ ಸುಸ್ತಾದವರ ಸಂಧ್ಯಾರಾಗವಿದು.
*ನಾನು ಸೇನೆಯಲ್ಲಿದ್ದುದರಿಂದ ಸೇನೆಯನ್ನು ಯಾವಾಗಲೂ ಬೆಂಬಲಿಸುತ್ತೇನೆ.
=ನಿಮ್ಮದು ಕಪಿಸೇನೆ ಎಂಬ ಅಭಿಪ್ರಾಯಕ್ಕೆ ಪಾಕಿಸ್ತಾನದ ಜನರ ಭಾರೀ ಸಹಮತದ ಬೆಂಬಲವಿದೆಯಂತೆ.
*ಇನ್ನೊಂದು ಸಲ ಮುಖ್ಯಮಂತ್ರಿ ಆಗಲ್ಲ ಅನ್ನೋಕೆ ನಾನೇನು ಸನ್ಯಾಸಿಯಲ್ಲ.
=ಸದಾನಂದ ಗೌಡರು ನೀವು ಯಡಿಯೂರಪ್ಪನೇ ಅಲ್ಲ ಎಂದು ಹೇಳುತ್ತಿದ್ದಾರಲ್ಲ...
*ಪ್ರಸ್ತುತ ರಾಜಕೀಯ ಸ್ಥಿತಿಯನ್ನು ಗಮನಿಸಿದರೆ ಯಾವುದು ನಿಸ್ವಾರ್ಥ ಸೇವೆ, ಯಾವುದು ಮೋಸ ಎಂಬುದೇ ತಿಳಿಯುವುದಿಲ್ಲ.
=ಇನ್ನೂ ಒಂದೆರಡು ಪಕ್ಷ ಬದಲಾಯಿಸಿದರೆ ತಿಳಿಯಬಹುದೇನೋ? ಪ್ರಯತ್ನ ಬಿಡಬಾರದು ನೋಡಿ.
*ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡವರು ಮಾನವರಲ್ಲ.
=ಅಂತಹವರಿಗೆ ಯಡಿಯೂರಪ್ಪ ಎಂದು ನಾಮಕರಣ ಮಾಡಿದರೆ ಹೇಗೆ?
*ಬಿಜೆಪಿ ಸರಕಾರ ಕೇವಲ ಮಠಮಾನ್ಯಗಳಿಗೆ ಮೀಸಲಾಗಿಲ್ಲ.
=ಮಾನ್ಯ ಮಠಗಳಿಗೆ ಮಾತ್ರ ಮೀಸಲು ಎಂದು ತಿದ್ದಿಕೊಳ್ಳೋಣ ಬಿಡಿ.
*ದೇವೇಗೌಡರು ನನಗೆ ಮಾದರಿ.
=ನೀವು ಹೇಳುವ ಸುಳ್ಳಿಗೆ ದೇವೇಗೌಡರೇ ಬೆಚ್ಚಿ ಬೀಳಬಹುದುರೀ...
*ನಮಗೆ ಚಾರಿತ್ರ ಹಾಗೂ ಮನೋಸ್ಥೈರ್ಯವನ್ನು ವೃದ್ಧಿಸುವಂತಹ ಶಿಕ್ಷಣ ಬೇಕು.
=ನಿಮಗೆ ಶಿಕ್ಷಣದ ಅಗತ್ಯವಿದೆ ಎಂಬ ಬಗ್ಗೆ ಯಾರಿಗೂ ಸಂಶಯವಿಲ್ಲ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...