mail-img print-img

*ಜಗತ್ತಿನಲ್ಲಿ ಅನೇಕ ಸಮಸ್ಯೆಗಳು ಧರ್ಮದ ತಿಳುವಳಿಕೆಯ ಅಭಾವದಿಂದ ಉಂಟಾಗಿದೆ.

- ಪಿ.ಎ.ರೈ
ಸೋಮವಾರ - ಫೆಬ್ರವರಿ -06-2012


-ಮೋಹನ್ ಭಾಗವತ್, ಅರೆಸ್ಸೆಸ್ ಸರಸಂಚಾಲಕ

= ಭಾರತದಲ್ಲಿ ನೀವು ಸೃಷ್ಟಿಸುತ್ತಿರುವ ಸಮಸ್ಯೆಗಳ ಹಿಂದೆ ಅಧಿಕಾರದ ಅಭಾವ ಕಾರಣವೆ?   


*ಗ್ರಾಮ ಸಭೆಗಳು ರಾಜಕೀಯ ಕಾರಣದಿಂದ ತನ್ನ ಗಾಂಭೀರ್ಯತೆ ಕಳೆದುಕೊಳ್ಳುತ್ತಿದೆ.

-ವಿ. ಸೋಮಣ್ಣ, ವಸತಿ ಸಚಿವ

=ವಿಧಾನಸಭೆ ರಾಜಕೀಯದಿಂದ ಗಬ್ಬೆದ್ದು ಹೋಗಿದೆಯಲ್ಲ, ಅದಕ್ಕೆ ಏನಂತೀರಿ?   


*ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣಿಗಳ ನೇಮಕಾತಿ ಇಲ್ಲ.

-ಡಾ.ವಿ.ಎಸ್.ಆಚಾರ್ಯ, ಸಚಿವ

=ಸ್ವಾಮೀಜಿಗಳೇ ರಾಜಕಾರಣಿಗಳ ಪಾತ್ರ ನಿರ್ವಹಿಸುತ್ತಿರುವಾಗ ರಾಜಕಾರಣಿಗಳ ನೇಮಕಾತಿಯ ಅಗತ್ಯವೇನಿದೆ?   


*ರಾಜ್ಯದ ಎಲ್ಲ ರಸ್ತೆಗಳಲ್ಲಿ 15 ದಿನಗಳಲ್ಲಿ ಗುಂಡಿಗಳನ್ನು ಮುಚ್ಚಲಾಗುತ್ತದೆ.

-ಸಿ.ಎಂ.ಉದಾಸಿ, ಸಚಿವ

=ಮುಚ್ಚುವ ಮೊದಲು ಅದರೊಳಗೆ ನಮ್ಮ ರಾಜಕಾರಣಿಗಳನ್ನು ಹಾಕಿದ್ದರೆ ಉಪಕಾರವಾಗುತ್ತಿತ್ತು. 


*ಜನಾರ್ದನ ರೆಡ್ಡಿಯವರ ಬಿಡುಗಡೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಹೊಸ ಪಕ್ಷದ ರಚನೆ ಕೂಡ ತುಸು ವಿಳಂಬವಾಗಿದೆ.

-ಶ್ರೀರಾಮುಲು, ಶಾಸಕ

=ಅವರ ಬಿಡುಗಡೆಗೆ ಕಾಯದೆ, ನೀವೇ ಜೈಲು ಸೇರಿ ಅಲ್ಲೇ ಏಕೆ ಒಟ್ಟಾಗಿ ಪಕ್ಷ ರಚಿಸಬಾರದು?  


*ದಲಿತ ಹೆಣ್ಣುಮಗಳ ಯಶಸ್ಸನ್ನು ಸಹಿಸಲು ಎದುರಾಳಿಗಳಿಗೆ ಆಗುತ್ತಿಲ್ಲ.

-ಮಾಯಾವತಿ, ಉ.ಪ್ರ.ಮುಖ್ಯಮಂತ್ರಿ

=ಭ್ರಷ್ಟಾಚಾರದಲ್ಲಿ ಈ ಪರಿಯ ಯಶಸ್ಸು ಸಾಧಿಸಿದರೆ, ಮೇಲ್ವರ್ಣೀಯರಿಗೆ ಹೊಟ್ಟೆಕಿಚ್ಚಾಗುವುದಿಲ್ಲವೆ?   


*ಧರ್ಮ ಅರಿತು ಬಾಳಿದರೆ ಸಮಾಜದಲ್ಲಿ ಶಾಂತಿ ನೆಮ್ಮದಿಯಿಂದ ಬದುಕು ಸಾಧ್ಯ.

 

-ನಳಿನ್ ಕುಮಾರ್ ಕಟೀಲು, ಶಾಸಕ

=ಬಾಳಬಾರದು ಎಂದು ನಿಮಗೆ ಯಾರಾದರೂ ಕಟ್ಟಪ್ಪಣೆ ಮಾಡಿದ್ದಾರೆಯೆ?  


*ಯಡಿಯೂರಪ್ಪ ರಾಜ್ಯ ಆಳಿದ ಮುಖ್ಯಮಂತ್ರಿಗಳಲ್ಲಿಯೇ ಅಗ್ರಗಣ್ಯರು.

-ಕೆ.ಎಚ್.ಮುನಿಯಪ್ಪ, ಕೇಂದ್ರ ಸಚಿವ

=ಆ ಗಣ್ಯರನ್ನು ತಮ್ಮ ಪಕ್ಷ ಸ್ವಾಗತಿಸುವುದಕ್ಕೆ ಹೊರಟಿದೆಯೆ?   


*ಕಾಂಗ್ರೆಸ್ ಸಾಗರವಿದ್ದಂತೆ. ಒಳ ಹರಿವು ಜಾಸ್ತಿ.

-ಡಾ.ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ

=ಭಾರೀ ತಿಮಿಂಗಿಲಗಳು, ಶಾರ್ಕ್‌ಗಳೂ ಜಾಸ್ತಿ.   


*ಭ್ರಷ್ಟಾಚಾರ ಆರೋಪ ಸಾಬೀತಾದರೆ ನಾನು ಬಹಿರಂಗವಾಗಿ ನೇಣಿಗೆ ಶರಣಾಗಲು ಸಿದ್ಧ.

-ಎಚ್.ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

=ಸಾಬೀತಾಗದೇ ಇದ್ದರೆ ಗುಟ್ಟಾಗಿ ನೇಣಿಗೆ ಶರಣಾಗಲು ಸಿದ್ಧವೆ?   


*ಸ್ಪೀಕರ್ ಬೋಪಯ್ಯರ ಪರಮಾಧಿಕಾರವನ್ನು ಯಾರೂ ಪ್ರಶ್ನಿಸುವಂತಿಲ್ಲ.

-ವಿ. ಸೋಮಣ್ಣ, ವಸತಿ ಸಚಿವ

=ಯಡಿಯೂರಪ್ಪ ಅವರನ್ನು ಹೊರತು ಪಡಿಸಿ, ಎಂದು ಹೇಳುವುದನ್ನು ಮರೆತು ಬಿಟ್ಟರಲ್ಲ?  


*ರಾಜ್ಯದ ಕರಾವಳಿಯಲ್ಲಿ ಕಡಲ ಕೊರೆತ ತಡೆಯುವ ಶಾಶ್ವತ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

-ಕೃಷ್ಣ ಪಾಲೆಮಾರ್, ದ.ಕಜಿಲ್ಲಾ ಉಸ್ತುವಾರಿ ಸಚಿವ

=ರಾಜಕಾರಣಿಗಳ ಬಾಯಿಗೆ ಮಣ್ಣು ತುರುಕುವ ಮೂಲಕ ಕಾಮಗಾರಿ ಆರಂಭವಾಗಲಿ. ಕೊರೆತ ನಿಲ್ಲಲಿ.  


*ಮಡೆಸ್ನಾನ ತಡೆಯಲು ಎಲ್ಲರ ಸಹಕಾರ ಅಗತ್ಯ.

  -ಡಾ.ವಿ.ಎಸ್.ಆಚಾರ್ಯ, ಸಚಿವ

=ಮೊದಲು ನಿಮ್ಮ ಸಹಕಾರ.  


*ಹಿಂದುಳಿದವರ ಕಣ್ಣೀರು ಒರೆಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆ.
 

-ಡಿ.ವಿ.ಸದಾನಂದ ಗೌಡ,ಮುಖ್ಯಮಂತ್ರಿ

=ಕಣ್ಣೀರು ಸುರಿಸದಂತೆ ಮಾಡಿದರೆ ಒರೆಸುವ ಕೆಲಸ ಉಳಿಯುತ್ತದಲ್ಲ.




Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್